ಬೇಲೂರು: ನನಗೆ ಪ್ರಶಸ್ತಿಗಳು ಬರುತ್ತಿವೆ. ಇದುವರೆಗೆ ಅನೇಕ ಪ್ರಶಸ್ತಿಗಳು ಬಂದಿವೆ. ಆದರೆ ಇದಾವುದು ನನ್ನ ಹೊಟ್ಟೆ ಯನ್ನು ತುಂಬಿಸುವುದಿಲ್ಲ. ನನಗೀಗ ಬೇಕಿ ರುವುದು ಸರ್ಕಾರದಿಂದ ನೆರವು.
ಹೀಗೆಂದವರು ವೃಕ್ಷಮಾತೆ, ಪರಿಸರ ಪ್ರೇಮಿ, ನಾಡೋಜ ಪ್ರಶಸ್ತಿ ಪುರಸ್ಕøತೆ ಸಾಲು ಮರದ ತಿಮ್ಮಕ್ಕ ಅವರು. ಕೇಂದ್ರ ಸರಕಾರ ಕೊಡಮಾಡುವ ಪದ್ಮಶ್ರೀ ಪ್ರಶಸ್ತಿ ಲಭಿಸಿರು ವುದಕ್ಕೆ ಸುದ್ದಿಗಾರರೊಂದಿಗೆ ತಮ್ಮ ಮನ ದಾಳದ ಅಭಿಪ್ರಾಯವನ್ನು ಹಂಚಿಕೊಂಡ ಅವರು, ಮಕ್ಕಳಿಲ್ಲದ ನಾನು ಮದುವೆ ಯಾಗಿ 25 ವರ್ಷದ ನಂತರ ಮರಗಿಡ ಗಳೇ ನಮ್ಮ ಮಕ್ಕಳು ಎಂಬಂತೆ ನಾನು ಮತ್ತು ನನ್ನ ಯಜಮಾನರು ಗಿಡ ನೆಟ್ಟು ಬೆಳೆಸಿ ಉಳಿಸಿದೆವು. ಆದರೆ ಇಂದು ರಾಜ್ಯ ಸರ್ಕಾರ ನನಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡುತ್ತಿಲ್ಲ. ಆಗಿಂದಾಗ್ಗೆ ಆರೋಗ್ಯ ಕೆಡು ತ್ತಿದೆ. ಬೆಂಗಳೂರಿನಲ್ಲಿ ತಮಿಳುನಾಡಿಗೆ ಹೋಗುವ ರಸ್ತೆಯಲ್ಲಿ ವಾಸ ಮಾಡಲಾಗ ದಂತ ಮನೆ ನೀಡಿದ್ದಾರೆ. ಅದನ್ನು ಸರ್ಕಾರಕ್ಕೆ ವಾಪಸ್ ನೀಡಿದ್ದೇನೆ. ಜೀವನ ನಡೆಸಲು ತಿಂಗಳಿಗೆ ಒಂದಿಷ್ಟು ಹಣ ನೀಡಿ ಎಂದರೆ ಎಲ್ಲರಂತೆ ವೃದ್ಧಾಪ್ಯವೇತನ ನೀಡುತ್ತಿದ್ದರು. ಇದೀಗ ಅದನ್ನೂ ಬೇಡವೆಂದು ವಾಪಸ್ ಬಿಟ್ಟಿದ್ದೇನೆ. ರಾಮನಗರ ಜಿಲ್ಲೆಯ ನನ್ನ ತವರೂರು ಹುಲಿಕಲ್ ಗ್ರಾಮದಲ್ಲಿ ನನ್ನ ಹೆಸರಿನಲ್ಲಿ ಹೆರಿಗೆ ಆಸ್ಪತ್ರೆಯೊಂದನ್ನು ಕಟ್ಟಿ ಸುವಂತೆ ಬಹಳ ವರ್ಷದಿಂದಲೂ ಕೇಳು ತ್ತಿದ್ದರೂ ಗಮನ ನೀಡಿಲ್ಲ.
ಸಂಘ ಸಂಸ್ಥೆಯವರು ಅಲ್ಲಿ ಇಲ್ಲಿ ಕಾರ್ಯ ಕ್ರಮಗಳಿಗೆ ನನ್ನನ್ನು ಕರೆಸಿಕೊಂಡು ನೀಡುವ ಒಂದಿಷ್ಟು ಸಹಾಯವೇ ನನಗೆ ನೆರ ವಾಗಿದೆ. ಜನ ಮಾತ್ರ ಸರ್ಕಾರ ತಿಮ್ಮಕ್ಕನಿಗೆ ಏನೇನೋ ಕೊಟ್ಟಿದೆ, ಹಣ ನೀಡಿದೆ ಎಂದು ಹೇಳುತ್ತಿದ್ದಾರೆ. ಇದೆಲ್ಲಾ ಸುಳ್ಳು. ಬೇಕಾದರೆ ಸರ್ಕಾರದಲ್ಲಿ ಕೇಳಿ ತಿಳಿದು ಕೊಳ್ಳಲಿ ಎಂದು ಸಾಲು ಮರದ ತಿಮ್ಮಕ್ಕ ನೋವು ವ್ಯಕ್ತಪಡಿಸಿದರು.
ಪದ್ಮಶ್ರೀ ಪ್ರಶಸ್ತಿ ಬಂದಿರುವುದಕ್ಕೆ ಪ್ರತಿ ಕ್ರಿಯಿಸಿದ ಸಾಲುಮರದ ತಿಮ್ಮಕ್ಕ ಅವರ ಪುತ್ರ ಬಳ್ಳೂರು ಉಮೇಶ್, ಹೆಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ನ್ಯಾಷ ನಲ್ ಸಿಟಿಜನ್ ಪ್ರಶಸ್ತಿಯನ್ನು 1995 ರಲ್ಲಿ ನೀಡಿದ್ದರು. ನಂತರ ಅನೇಕ ಪ್ರಶಸ್ತಿ, ಪುರಸ್ಕಾರ ಗಳು ಸಂದಿವೆಯಾದರೂ ಜನರು ತಿಳಿದು ಕೊಂಡಿರುವಂತೆ ಸಾಲುಮರದ ತಿಮ್ಮಕ್ಕ ನವರಿಗೆ ಸರಕಾರದಿಂದ ಶಾಶ್ವತವಾದ ಆರ್ಥಿಕ ನೆರವು ದೊರೆತಿಲ್ಲ ಎಂದರು.