ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಪೋಷಕರ ಕರ್ತವ್ಯ  ಶಾಸಕ ಡಾ.ಎ.ಟಿ.ರಾಮಸ್ವಾಮಿ ಅಭಿಮತ
ಹಾಸನ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಪೋಷಕರ ಕರ್ತವ್ಯ ಶಾಸಕ ಡಾ.ಎ.ಟಿ.ರಾಮಸ್ವಾಮಿ ಅಭಿಮತ

January 24, 2019

ರಾಮನಾಥಪುರ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದು ಶಿಕ್ಷಕರ ಜೊತೆಗೆ ಪೋಷಕರ ಕರ್ತವ್ಯ ವಾಗಿದೆ. ಪೋಷಕರು ತಮ್ಮ ಮಕ್ಕಳಲ್ಲಿ ಶಿಸ್ತು, ಸನ್ನಡತೆ, ಸಹನೆ ಮುಂತಾದ ಗುಣಗಳನ್ನು ಬೆಳೆಸುವುದು ಅಗತ್ಯವಾಗಿದೆ ಎಂದು ಶಾಸಕ ಡಾ.ಎ.ಟಿ.ರಾಮಸ್ವಾಮಿ ಕಿವಿಮಾತು ಹೇಳಿದರು.

ಇಲ್ಲಿಯ ಬಸವೇಶ್ವರ ವೃತ್ತದಲ್ಲಿರುವ ಶ್ರೀ ವೆಂಕಟೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶಾರದ ಪೂಜೆ ಮತ್ತು 24ನೇ ವರ್ಷದ ಶಾಲಾ ವಾರ್ಷಿ ಕೋತ್ಸವ ಕಾರ್ಯಕ್ರಮದಲ್ಲಿ ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳಿಗೆ ಶ್ರದ್ಧಾಂ ಜಲಿ ಸಲ್ಲಿಸಿದ ನಂತರ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಸಿದ್ಧಗಂಗಾ ಶ್ರೀಗಳು ಅನ್ನದಾಸೋಹ, ಜ್ಞಾನ ದಾಸೋಹದ ಸಂಕಲ್ಪ ಮಾಡಿ ಲಕ್ಷಾಂತರ ಬಡಮಕ್ಕಳ ಬಾಳು ಬೆಳಗಿದ ದಿವ್ಯ ಚೇತನ. ಅವರು ಹುಣ್ಣಿಮೆಯ ಬೆಳಕಿನಲ್ಲಿ ಲೀನ ವಾಗಿದ್ದಾರೆ. ಧಾರ್ಮಿಕ, ಶೈಕ್ಷಣಿಕ, ಸಾಮಾ ಜಿಕ ಕ್ಷೇತ್ರಗಳಲ್ಲಿ ಶ್ರೀಗಳು ನೀಡಿದ ಕೊಡುಗೆ ಅಪಾರವಾಗಿದೆ. ಯಾವ ಸರ್ಕಾರಗಳೂ ಮಾಡದ ಸಾಧನೆಯನ್ನು ಸ್ವಾಮೀಜಿ ನಿಸ್ವಾರ್ಥ ಸೇವೆಯಿಂದ ಮಾಡಿ ಜನರ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.

ನಿಮ್ಮ ಜೀವನದಲ್ಲಿ ಉತ್ಸಾಹವಿಲ್ಲದಿದ್ದರೆ ವ್ಯರ್ಥ. ಬದುಕಿನಲ್ಲಿ ಏನನ್ನಾದರೂ ಸಾಧಿಸ ಬೇಕಾದರೆ ಛಲ ಮತ್ತು ಗುರಿ ಇರಬೇಕು. ಗುರು-ಹಿರಿಯರ ಪರಂಪರೆಯ ಆದರ್ಶ ಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹಸ ನಾದ ಬದುಕನ್ನು ಸಾಗಿಸಬೇಕು. ಸ್ಪರ್ಧಾ ತ್ಮಕ ಯುಗದಲ್ಲಿ ಅಂಕಕ್ಕೆ ಮಹತ್ವವಿದ್ದು ಜೀವ ನದ ರೇಖೆಯನ್ನೇ ಬದಲಾ ಯಿಸುತ್ತಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಶಿಕ್ಷಕರಷ್ಟೇ ಅಲ್ಲದೇ ಪೋಷಕ ವರ್ಗದ ಪಾತ್ರವೂ ಇರುತ್ತದೆ. ಇಲ್ಲಿಯ ಕಾಲೇಜಿನಲ್ಲಿ ಉತ್ತಮ ಗುಣಾತ್ಮಕ ಬೋಧನೆ ನೀಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆ ಕಾರ್ಯ ದರ್ಶಿ ಎಂ.ಅರ್.ತಿಮ್ಮರಾಜ್ ಪ್ರಾಸ್ತಾವಿಕ ವಾಗಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಪ್ರತಿ ವರ್ಷ ಉತ್ತಮ ಕ್ರೀಡಾಪಟುಗಳನ್ನು ಸನ್ಮಾನಿಸುತ್ತಿದ್ದೇವೆ ಎಂದ ಅವರು, ಗ್ರಾಮೀಣ ಪ್ರದೇಶದಿಂದ ಬರುತ್ತಿರುವ ಬಡತನ ಅಭಾವ ಇನ್ನಿತರೆ ಯಾವುದೇ ಕಾರಣದಿಂದಲೂ ವಿದ್ಯಾರ್ಥಿಗಳು ವಿದ್ಯಾ ಭ್ಯಾಸದಿಂದ ವಂಚಿತರಾಗಬಾರದು. ಆದ್ದ ರಿಂದ ನಾವು ನಮ್ಮ ಸಂಸ್ಥೆಯಿಂದ ಆದಷ್ಟು ಸಹಕರಿಸುತ್ತೇವೆ ಎಂದರು.

ಕಾಲೇಜು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅರ್.ಎಂ.ಸಾದಿಕ್ ಅಧ್ಯಕ್ಷತೆ ವಹಿಸಿ ಮಾತ ನಾಡಿ, ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಕ್ರೀಡಾ ಚಟುವಟಿಕೆ ಹಾಗೂ ಸೇವಾ ಮನೋಭಾವ, ಶಿಸ್ತು, ಸಂಯಮ ಹಾಗೂ ನಾಯಕತ್ವದ ಗುಣ ಗಳನ್ನು ಮೈಗೂಡಿಸಿಕೊಂಡರೆ ಮುಂದೆ ಬರಲು ಸಹಕಾರಿಯಾಗುತ್ತದೆ ಎಂದರು.
ಸಾಹಿತಿ ಕುಶಾಲನಗರ ಕಮಲ ಕರಿ ಯಪ್ಪ, ನಿವೃತ್ತ ಶಿಕ್ಷಣಾಧಿಕಾರಿ ಮಲ್ಲಪ್ಪ, ಉದ್ಯಮಿ ಚನ್ನೇಗೌಡ, ತಾಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಎ.ಅರ್. ಸುಬ್ಬರಾವ್ ಮುಂತಾದವರು ಉಪಸ್ಥಿತರಿ ದ್ದರು. ಕಾಲೇಜು ಪ್ರಾಂಶುಪಾಲ ಲಕ್ಷ್ಮಣ ಸ್ವಾಗ ತಿಸಿ, ಮುಖ್ಯ ಶಿಕ್ಷಕ ಶ್ರೀಧರ್ ವಂದಿಸಿದರು.

Translate »