ಗುದ್ದಲಿ ಪೂಜೆ ದಿನವೇ ಮುಕ್ತಾಯಗೊಂಡ ರಸ್ತೆ ಕಾಮಗಾರಿ
ಹಾಸನ

ಗುದ್ದಲಿ ಪೂಜೆ ದಿನವೇ ಮುಕ್ತಾಯಗೊಂಡ ರಸ್ತೆ ಕಾಮಗಾರಿ

January 29, 2019

ರಾಮನಾಥಪುರ: ಇಲ್ಲಿಯ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಪಟ್ಟಾಭಿರಾಮ ದೇವ ಸ್ಥಾನದ ಸುತ್ತದ ರಸ್ತೆ, ಶ್ರೀ ಸುಬ್ರಹ್ಮಣ್ಯ ದೇವ ಸ್ಥಾನದ ಎದುರು ರಸ್ತೆ, ಮತ್ತು ಕಾವೇರಿ ನದಿಗೆ ಹೋಗುವ ರಸ್ತೆಯೂ 30-54ರ ಟ್ಯಾಸ್ಕ್ ಪೋರ್ಸ್ ಯೋಜನೆಯಡಿ 5 ಲಕ್ಷ ರೂ ವೆಚ್ಚದಲ್ಲಿ ಡಾಂಬ ರೀಕರಣ ಗುದ್ದಲಿಪೂಜೆ ದಿನವೇ ಕಾಮಗಾರಿ ಮುಗಿದಿದೆ.

ಬಹಳ ವರ್ಷಗಳಿಂದ ಈ ರಸ್ತೆಯಲ್ಲಿ ಶ್ರೀ ಪಟ್ಟಾಭಿರಾಮಸ್ವಾಮಿ ರಥೋತ್ಸವವನ್ನು ಎಳೆ ಯಲು ಬಹಳ ವರ್ಷಗಳಿಂದ ಹರಸಾಹಸ ಪಡ ಬೇಕಾಗಿತ್ತು. ಇಂದು ಡಾಂಬರೀಕರಣಕ್ಕೆ ಚಾಲನೆ ನೀಡಿ ಅಂದೇ ಕಾಮಗಾರಿ ಮುಗಿಸಿಕೊಟ್ಟ ಗುತ್ತಿಗೆ ದಾರ ಶಿವಮೂರ್ತಿ, ಕ್ಷೇತ್ರದ ಶಾಸಕ ಡಾ.ಎ.ಟಿ. ರಾಮಸ್ವಾಮಿ ಮತ್ತು ಜಿ.ಪಂ. ಇಂಜಿನಿಯರ್ ಕೆ.ಎಂ. ರಾಜೇಂದ್ರ ಅವರಿಗೆ ಗ್ರಾಮದ ನಿವೃತ್ತ ಪ್ರಾಂಶುಪಾಲ ಅರ್.ಎಸ್. ತಿರುಮಲಚಾರ್ ಮುಂತಾದವರು ಅಭಿನಂದನೆ ಸಲ್ಲಿಸಿದರು.

ಇಲ್ಲಿಯ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ರಾಮೇಶ್ವರಸ್ವಾಮಿ ದೇವಸ್ಥಾನ ಹಾಗೂ ಶ್ರೀ ಲಕ್ಷ್ಮೇಶ್ವರಸ್ವಾಮಿ ದೇವಸ್ಥಾನದ ಮಧ್ಯೆ ಹಾದು ಹೋಗಿರುವ ಕಾವೇರಿ ನದಿಯ ಎರಡು ದೇವ ಸ್ಥಾನಗಳ ನಡುವೆ ಸಂಪರ್ಕ ಬೆಸೆದು ಭಕ್ತರ ಪೂಜೆಗೆ ಅನುವು ಕಲ್ಪಿಸುವುದು. ಕಾವೇರಿ ದಂಡೆಗೆ ಸಿಮೇಂಟ್ ಮೇಟಿಂಗ್, ವಹ್ನಿಪುಕ್ಷರಣಿ ಜಾಗ ದಲ್ಲಿ ಶಿಥಿಲ ಮೆಟ್ಟಿಲುಗಳ ವ್ಯವಸ್ಥೆ ಮುಂತಾದ ಗ್ರಾಮದ ಅಭಿವೃದ್ದಿಯ ಬಗ್ಗೆ ನಿವೃತ್ತ ಪ್ರಾಂಶು ಪಾಲ ಅರ್.ಎಸ್. ತಿರುಮಲಚಾರ್ ಅವರು ಶಾಸಕ ಡಾ. ಎ.ಟಿ. ರಾಮಸ್ವಾಮಿ ಅವರಲ್ಲಿ ಮನವಿ ಮಾಡಿದರು.

ರಾಮನಾಥಪುರದಲ್ಲಿರುವ ಪುರಾಣ ಪ್ರಸಿದ್ಧ ಇತಿಹಾಸವಿರುವ ಶ್ರೀ ರಾಮೇಶ್ವರಸ್ವಾಮಿ ಮತ್ತು ಲಕ್ಷಣೇಶ್ವರಸ್ವಾಮಿ ದೇವಸ್ಥಾನದ ಮಧ್ಯೆ ತೂಗು ಸೇತುವೆ ನಿರ್ಮಾಣದ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು, ದೇವಸ್ಥಾನಕ್ಕೆ ಬರುವ ರಸ್ತೆ, ದೇವಸ್ಥಾನದ ಸುತ್ತ ಕಾಂಪೌಂಡ್, ದೇವಸ್ಥಾನದ ಉತ್ತರದ ಭಾಗದ ಕಾವೇರಿಯ ಭಾಗಕ್ಕೆ ಸೋಪಾನ ಕಟ್ಟೆ ಮತ್ತು ದೇವಸ್ಥಾನದ ಅಭಿವೃದ್ಧಿಗೆ ಹೆಚ್ಚಿನ ರೀತಿ ಅನುದಾನದ ವ್ಯವಸ್ಥೆ ಮಾಡಿಸಿಕೊಡಲಾಗು ವುದು. ನದಿ ದಂಡೆಯ ಶ್ರೀ ರಾಮೇಶ್ವರಸ್ವಾಮಿ ದೇವಸ್ಥಾನ ಪಕ್ಕದ ಅವರಣದಲ್ಲಿ 25 ಲಕ್ಷ ರೂ ಮತ್ತು ಶ್ರೀ ಸುಬ್ರಮಣ್ಯ ದೇವಸ್ಥಾನದ ಪಕ್ಕ ಆವರಣ ದಲ್ಲಿ 25 ಲಕ್ಷ ರೂ ಶೌಚಾಲಯಕ್ಕೆ ಮಂಜೂ ರಾಗಿದೆ ಹಾಗೂ ಶ್ರೀ ರಾಮೇಶ್ವರಸ್ವಾಮಿ ದೇವ ಸ್ಥಾನದ ಹತ್ತಿರವಿರುವ ಪರಿಶಿಷ್ಟ ಜಾತಿ ಇರುವ ಜನಾಂಗದ ರಸ್ತೆಗೆ 25 ಲಕ್ಷ ರೂ ಮಂಜೂರಾ ಗಿದೆ. ಇನ್ನೂ ಒಂದು ವಾರದಲ್ಲಿ ಇವೆಲ್ಲವನ್ನು ಕಾಮ ಗಾರಿಗೆ ಚಾಲನೆ ನೀಡಲಾಗುವುದು ಎಂದರು.

Translate »