ಆಲೂರಿನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ
ಹಾಸನ

ಆಲೂರಿನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ

January 29, 2019

ಆಲೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಪ್ರಾಮುಖ್ಯತೆ ಅಗ್ರಗಣ್ಯವಾದದ್ದು. ಅದನ್ನು ಸೂಕ್ತ ರೀತಿ ಯಲ್ಲಿ ಚಲಾಯಿಸಬೇಕೆಂದು ಆಲೂರು ತಾಲೂಕು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಕೊಟ್ರೇಶ್ ಎಸ್.ಉಪ್ಪಾರ್ ಅಭಿಪ್ರಾಯಪಟ್ಟರು.

ಆಲೂರು ತಾಲೂಕು ಟಿ.ಗುಡ್ಡೇನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಸ್ಥಳೀಯ ಸಂಸ್ಥೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತ ನಾಡಿದ ಅವರು, 1950 ಜನವರಿ 25 ರಂದು ಭಾರತದಲ್ಲಿ ಜಾರಿಗೆ ಬಂದ ಚುನಾವಣಾ ಆಯೋಗದ ದಿನವನ್ನು 2011ರಿಂದ ಈಚೆಗೆ ಪ್ರತಿಯೊಬ್ಬ ಭಾರತೀಯ ಮತ ದಾರನಿಗೆ ಜಾಗೃತಿ ಮೂಡಿಸುವ ಸಲು ವಾಗಿ ರಾಷ್ಟ್ರೀಯ ಮತದಾರರ ದಿನಾ ಚರಣೆಯನ್ನು ಆಚರಿಸಲಾಗುತ್ತದೆ. ಅದ ರಲ್ಲೂ ನಮ್ಮ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ ಯಲ್ಲಿರುವ 18 ರಿಂದ 25 ವಯೋ ಮಾನದ ರೋವರ್ಸ್ ಅಂಡ್ ರೇಂಜರ್ಸ್ ಗಳಿಗೆ ತಮ್ಮ ಮತದಾನದ ಅಗತ್ಯತೆ ಹಾಗೂ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸು ವುದು ಬಹಳ ಸೂಕ್ತವಾಗಿದೆ. ಏಕೆಂದರೆ ನಮ್ಮ ದೇಶದಲ್ಲಿ ಯುವಮತದಾರರು ಅತ್ಯ ಧಿಕವಾಗಿದ್ದು, ನಿಷ್ಕಲ್ಮಶ ಹಾಗೂ ಪ್ರಾಂ ಜಲ ಮನೋಭಾವನೆಯಿಂದ ಯಾವುದೇ ಆಮಿಷಕ್ಕೆ ಒಳಗಾಗದೆ ಮತ ಚಲಾವಣೆ ಮಾಡಿಸಿದರೆ ಭವಿಷ್ಯದಲ್ಲಿ ಉತ್ತಮ ನಾಯಕರನ್ನು ನಾವುಗಳು ಪಡೆಯ ಬಹುದಾಗಿದೆ ಎಂದರು.

ಟಿ.ಗುಡ್ಡೇನಹಳ್ಳಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸ್ಕೌಟ್ ಮಾಸ್ಟರ್ ಎಚ್. ಡಿ.ಕುಮಾರ್ ಮಾತನಾಡಿ, ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ ರಾಷ್ಟ್ರಾಭಿಮಾನ, ಶಿಸ್ತು, ಸಂಯಮ, ಸಹಾಕಾರ ಮನೋಭಾವನೆ ಯನ್ನು ಮೂಡಿಸುವ ಸಂಸ್ಥೆಯಾಗಿದೆ. ಅವುಗಳ ಜೊತೆಜೊತೆಗೆ ಸಾಮಾಜಿಕ ಕಾರ್ಯಗಳನ್ನೂ ಸಹ ಮಾಡುತ್ತಾ ಬರು ತ್ತಿದೆ. ಮತದಾನದ ಪ್ರಾಮುಖ್ಯತೆಯ ಬಗ್ಗೆ ಬಹುಮುಖ್ಯವಾಗಿ ಪೆÇೀಷಕರುಗಳಿಗೆ ಅರಿವು ಮೂಡಿಸಬೇಕಿದೆ. ಅದನ್ನು ಇಲ್ಲಿ ಆಗಮಿಸಿರುವ ಮಕ್ಕಳು ನಿಮ್ಮ ಮನೆಗಳಿಗೆ ತಲುಪಿಸಬೇಕಿದೆ. ಚುನಾವಣಾ ಸಮಯ ದಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೇ ಒಳ್ಳೆಯ ಸನ್ನಡತೆಯ ವ್ಯಕ್ತಿಯನ್ನು ಆರಿಸಿ ದರೆ ಅವರಿಂದ ಉತ್ತಮ ಕಾರ್ಯಗಳನ್ನು ನಿರೀಕ್ಷೆ ಮಾಡಬಹುದು ಎಂದರು.
ತಾಲೂಕು ಸ್ಥಳೀಯ ಸಂಸ್ಥೆಯ ಕೋಶಾ ಧ್ಯಕ್ಷರಾದ ಬಿ.ಎಸ್.ಹಿಮ ಮಾತನಾಡಿ, 18 ವರ್ಷಕ್ಕಿಂತ ಎಲ್ಲಾ ಭಾರತೀಯ ಪ್ರಜೆ ಗಳಿಗೂ ನಮ್ಮ ದೇಶದಲ್ಲಿ ಮತದಾನ ಮಾಡುವ ಹಕ್ಕಿದೆ. ಮತವನ್ನು ಮಾರಿ ಕೊಂಡು ಪ್ರಜಾಪ್ರಭುತ್ವವನ್ನು ಹಾಳು ಮಾಡಿಕೊಳ್ಳುವ ಕಾಲಘಟ್ಟದಲ್ಲಿ ನಾವಿ ದ್ದೇವೆ. ಇದಾಗಬಾರದು ಒಂದು ಸದೃಢ ಸರ್ಕಾರ ರಚನೆಯಾಗಬೇಕೆಂದರೆ ಸದೃಢ ನಾಯಕರನ್ನು ನಾವುಗಳು ಆರಿಸಿ ಕಳು ಹಿಸಬೇಕಾಗುತ್ತದೆ ಎಂದರು.

ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಚಂದ್ರಮ್ಮ ಚಾಲನೆ ನೀಡಿ ಮಾತನಾಡಿ, ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಮತ ಚಲಾ ಯಿಸಬೇಕೆಂದು. ಮತದಾನದ ಮಹತ್ವ ವನ್ನು ತಿಳಿಸಿ ಶುಭಕೋರಿದರು.
ಎಸ್‍ಡಿಎಂಸಿ ಅಧ್ಯಕ್ಷ ಗಿರೀಶ್ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾಟೆ ಹೊಳೆ ಶಾಲೆಯ ಗೈಡ್ ಕ್ಯಾಪ್ಟನ್ ಮಹೇ ರಾಬಾನು, ಜೋಸೆಫ್ ನಗರ ಶಾಲೆಯ ಗೈಡ್ ಕ್ಯಾಪ್ಟನ್ ಅಶ್ವಿನಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣತೂರಿನ ಸ್ಕೌಟ್ಸ್ ಮಕ್ಕಳು, ಜೋಸೆಫ್ ನಗರ ಶಾಲೆಯ ಗೈಡ್ ಮಕ್ಕಳು, ಟಿ.ಗುಡ್ಡೇನಹಳ್ಳಿ ಶಾಲೆಯ ಶಿಕ್ಷಕರಾದ ಶ್ಯಾಮಲಾ, ಶಶಿಕಲಾ ಹಾಗೂ ಎಸ್.ಡಿ.ಎಂ.ಸಿ.ಸದಸ್ಯರು, ಗ್ರಾಮಸ್ತರು, ವಿದ್ಯಾರ್ಥಿಗಳು ಹಾಜರಿದ್ದರು.

Translate »