ಯುವ ಜನಾಂಗ ಮಾದಕ ವಸ್ತುಗಳ ದಾಸರಾಗುತ್ತಿರುವುದು ದೇಶಕ್ಕೆ ಮಾರಕ ನ್ಯಾಯಾಧೀಶರಾದ ಶಶಿಧರ್ ಎಂ.ಗೌಡ
ಹಾಸನ

ಯುವ ಜನಾಂಗ ಮಾದಕ ವಸ್ತುಗಳ ದಾಸರಾಗುತ್ತಿರುವುದು ದೇಶಕ್ಕೆ ಮಾರಕ ನ್ಯಾಯಾಧೀಶರಾದ ಶಶಿಧರ್ ಎಂ.ಗೌಡ

January 29, 2019

ಬೇಲೂರು: ಪ್ರಸ್ತುತ ಯುವ ಜನಾಂಗ ಮಾದಕ ವಸ್ತುಗಳಿಗೆ ದಾಸರಾಗುತ್ತಿರುವುದು ದೇಶಕ್ಕೆ ಮಾರಕ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಶಶಿಧರ್‍ಎಂ.ಗೌಡ ವಿಷಾದ ವ್ಯಕ್ತಪಡಿಸಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ ಹಾಗೂ ಹೊಯ್ಸಳ ಸಂಯುಕ್ತ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯ ದಲ್ಲಿ ಹಮ್ಮಿಕೊಂಡಿದ್ದ ಮಾದಕ ವ್ಯಸನಿಗಳ ಮುಕ್ತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಶೈಕ್ಷಣಿಕ ಕ್ರಾಂತಿ ನಡೆಯುತ್ತಿದೆ. ಅದರೆ ವಿದ್ಯಾರ್ಥಿಗಳು ಹಲವಾರು ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದು ಇದು ದೇಶದ ಪ್ರಗತಿಗೆ ಮಾರಕ ಎಂದರು.

ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಅದ್ಯತೆ ನೀಡ ಬೇಕು ಅದರೆ ಇತ್ತೀಚಿನ ದಿಗಳಲ್ಲಿ ಮಾನಸಿಕ ಖಿನ್ನತೆಗೆ ಒಳಾಗಾಗಿ ಹಲವರು ಚಟಗಳಿಗೆ ಬಲಿ ಯಾಗುತ್ತಿದ್ದು ನಗರ ಮತ್ತು ಗ್ರಾಮೀಣ ಪ್ರದೇಶದ ಯುವಕ ಯುವತಿಯರು ಸಂತೋಷಕ್ಕಾಗಿ ಡ್ರಗ್ಸ್ ಹಾಗೂ ಇನ್ನಿತರೆ ವ್ಯಸನಕ್ಕೆ ಬಲಿಯಾಗುತ್ತಿರು ವುದು ದುರದೃಷ್ಟಕರ ಎಂದರು.

ವಿದ್ಯಾರ್ಥಿಗಳು ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಕಾನೂನು ಬಾಹಿರ ಕೆಲಸಗಳನ್ನು ಮಾಡಲು ಮುಂದಾಗಬಾರದು. ವಿದ್ಯಾರ್ಥಿ ಜೀವನದಲ್ಲಿ ಒಳ್ಳೆ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗುವಂತೆ ತಿಳಿಸಿದರು.

ಸಿವಿಲ್ ನ್ಯಾಯಾಧೀಶ ಸಿ.ನಾಗೇಶ್ ಮಾತನಾಡಿ, ಯುವ ಜನತೆ ದೇಶದ ಆಸ್ತಿ ಇವರನ್ನು
ಸರಿ ದಾರಿಗೆ ತರುವುದು ಎಲ್ಲರ ಕರ್ತವ್ಯ ಮಾದಕ ವಸ್ತುಗಳ ಬಗ್ಗೆ ಅರಿವು ಮೂಡಿಸುವುದು ಬಹು ಮುಖ್ಯವಾ ಗಿದ್ದು ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಜೀವನ ವನ್ನು ಹಾಳು ಮಾಡಿಕೊಳ್ಳದೆ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿ ಎಂದರು.

ಸರ್ಕಾರಿ ಆಸ್ಪತ್ರೆ ಆಯುಷ್ ವೈಧ್ಯೆ ಅನುಪಮ ಶೆಟ್ಟಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ಗಳು ಮೊಬೈಲ್ ಬಳಕೆ ಹಾಗೂ ಮಾದಕ ವಸ್ತುಗಳಿಗೆ ಮಾರುಹೋಗಿ ಖಿನ್ನತೆಗೆ ಒಳಗಾ ಗುವ ಸ್ಥಿತಿ ನಿರ್ಮಾಣವಾಗಿದ್ದು ತಮ್ಮಲ್ಲಿರುವ ಆತ್ಮ ಸ್ಥೈರ್ಯವನ್ನು ಕಳೆದುಕೊಳ್ಳವಂತಾಗಿದೆ ಎಂದರು.

ಧೂಮಪಾನದಿಂದ ಮನುಷ್ಯ ಜೀವನವೇ ಹಾಳಾಗಲಿದೆ. ಸಿಗರೇಟ್‍ನಿಂದ ವಿಷ ಅನಿಲ ಉತ್ಪತ್ತಿ ಯಾಗಿ ಕ್ಯಾನ್ಸರ್ ಬಂದು ವ್ಯಕ್ತಿ ಸಾವನ್ನಪ್ಪುವ ಸ್ಥಿತಿ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳು ಶಿಕ್ಷಣ ಕಲಿ ಯುವಾಗ ಯಾವುದೇ ದುಶ್ಚಟಕ್ಕೆ ಬಲಿಯಾಗದೆ ಉತ್ತಮ ವ್ಯಕ್ತಿಯಾಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಧರ್ಮೇಗೌಡ, ವಕೀಲರ ಸಂಘದ ಅಧ್ಯಕ್ಷ ರತೀಶ್, ಕಾರ್ಯ ದರ್ಶಿ ಸಿದ್ದೇಗೌಡ ಇತರರು ಇದ್ದರು.

Translate »