ರಾಜ್ಯ ಸರ್ಕಾರಿ ನೌಕರರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುವ ಕಾನೂನು ಜಾರಿಯಾಗಲಿ ಕಸಾಪ ಜಿಲ್ಲಾಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ
ಹಾಸನ

ರಾಜ್ಯ ಸರ್ಕಾರಿ ನೌಕರರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುವ ಕಾನೂನು ಜಾರಿಯಾಗಲಿ ಕಸಾಪ ಜಿಲ್ಲಾಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ

January 29, 2019

ಹಾಸನ: ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುವ ಕಾನೂನನ್ನು ಜಾರಿಗೆ ತರ ಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಯಕರಹಳ್ಳಿ ಮಂಜೇ ಗೌಡ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್ ಭವನದಲ್ಲಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಕಸಾಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತಾ ಶ್ರಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾ ಗಿದ್ದ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ಹಾಗೂ ಬಣ್ಣ ಬೆಳಕು ಚಿತ್ರಕಲಾ ಪ್ರದ ರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ರಾಜ್ಯದಲ್ಲಿ ಸರಕಾರಿ ಶಾಲೆಗಳ ಸ್ಥಿತಿ ಯಾವ ರೀತಿ ಇದೆ ಎಂದರೆ ಹಿಂದಿನ ಕಾಲದಲ್ಲಿ ನಾವು ಕುಳಿತ ಬೆಂಚುಗಳಲ್ಲೇ ಇಂದು ಕೂಡ ಮಕ್ಕಳು ಕೂರುತ್ತಿದ್ದಾರೆ. ಅಪ್ಪನ ಕಾಲದ ಕಟ್ಟಡ ಎಲ್ಲಾ ನಮ್ಮಪ್ಪನ ಕಾಲದ್ದೆ ಇದ್ದು, ಎಲ್ಲವು ಸುಧಾರಣೆ ಆಗ ಬೇಕು ಎಂದು ಸಲಹೆ ನೀಡಿದರು.

ಇಂದು ಕನ್ನಡ ಭಾಷೆ ಬೆಂಗಳೂರಿನಲ್ಲಿ ಶೇಕಡ 23ಕ್ಕೆ ಇಳಿದಿದೆ. ಇಂಗ್ಲಿಷ್ ಮಾಧ್ಯಮ ಜಾರಿಗೆ ತಂದರೆ ಕನ್ನಡ ಭಾಷೆಯನ್ನು ಹುಡುಕುವ ಪರಿಸ್ಥಿತಿ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಖಾಸಗಿ ಶಾಲೆ ಗಳನ್ನು ಉಳಿಸುವ ನಿಟ್ಟಿನಲ್ಲಿ ಮಂತ್ರಿಗಳು, ಶಾಸಕರು ಧ್ವನಿ ಎತ್ತುತ್ತಿಲ್ಲ. ಇದರಿಂದಲೇ ಸರಕಾರಿ ಶಾಲೆಗಳು ಮುಚ್ಚುವ ಸ್ಥಿತಿ ಬಂದಿದೆ ಎಂದರು.
ನಾಡಿನ ಸಾಹಿತ್ಯ ಪರಿಷತ್ತು ಮತ್ತು ಸಾಹಿತಿಗಳು ಯಾವ ಕಾರಣಕ್ಕೂ ಇಂಗ್ಲೀಷ್ ಮಾಧ್ಯಮ ಶಿಕ್ಷಣ ತರಲು ಅವಕಾಶ ಕೊಡುವುದಿಲ್ಲ. ನೆಲದ ಸಂಸ್ಕøತಿಯನ್ನು ಕನ್ನಡ ಭಾಷೆಯಿಂದ ಮಾತ್ರ ತಿಳಿದು ಕೊಳ್ಳಲು ಸಾಧ್ಯ. ಬೇಕಾದರೆ ಎಲ್.ಕೆ.ಜಿ. ಮತ್ತು ಯು.ಕೆ.ಜಿಯಿಂದ ಒಂದು ಭಾಷೆ ಯಾಗಿ ಇಂಗ್ಲಿಷ್ ಕಲಿಸಲಿ ಎಂದು ಸಲಹೆ ನೀಡಿದರು.

ನಾನು ಜಿಲ್ಲಾ ಕಸಾಪ ಅಧ್ಯಕ್ಷನಾದ ಮೇಲೆ ಇಲ್ಲಿ ಕಲಾವಿದರು ನಾಟಕ ಪ್ರದ ರ್ಶನ ಮಾಡಲು ಉಚಿತವಾಗಿ ನೀಡಿ ದ್ದೇನೆ. ಬೆಳಿಗ್ಗೆ 5 ಗಂಟೆಗೆ ಬಾಗಿಲು ತೆಗೆದು ರಾತ್ರಿ 10 ಗಂಟೆಯವರೆಗೂ ವಿವಿಧ ಚಟು ವಟಿಕೆ ನಡೆಯಲು ಅವಕಾಶ ಕಲ್ಪಿಸಿದ್ದೇನೆ. ಬೆಳಿಗ್ಗೆ ಯೋಗಭ್ಯಾಸಕ್ಕೆ ನೀಡಿದ್ದು, ನಾನು ಕೂಡ ಪಾಲ್ಗೊಳ್ಳುತ್ತಿರುವುದಾಗಿ ಹೇಳಿ ದರು. ಕಸಾಪ ಮುಂದೆ 3 ಲಕ್ಷ ವೆಚ್ಚದಲ್ಲಿ ಹೊಯ್ಸಳ ಲಾಂಛನ ಹಾಕಲಾಗುತ್ತಿದೆ. ಸಾಹಿತ್ಯ ಪರಿಷತ್ತಿಗೆ ಒಂದು ರೂಪ ಕೊಟ್ಟಿ ದ್ದೇನೆ. ಏನಾದರೂ ನನ್ನ ಅಧ್ಯಕ್ಷಾವಧಿ ವಿಸ್ತ ರಣೆಯಾದರೇ ಭವನವನ್ನು ಉನ್ನತ ಮಟ್ಟಕ್ಕೆ ನಿರ್ಮಿಸಿಸುವ ಗುರಿ ಇದೆ ಎಂದರು.

ಹಾಸನದಲ್ಲಿ ಉಪವಿಭಾಗಾಧಿಕಾರಿ, ಡಿಡಿಪಿಐ ಹಾಗೂ ತಾಲೂಕು ಶಿಕ್ಷಣಾ ಧಿಕಾರಿಗಳು ಸರಳ ಅಧಿಕಾರಿಗಳು ಆಗಿದ್ದು, ಯಾವ ಕೊರತೆ ಇಲ್ಲದಂತೆ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು. ನಾಡಿನ ಹೆಚ್ಚು ಜನರು ಸಾಹಿತ್ಯ ಸಮ್ಮೇಳನದ ಸದು ಪಯೋಗ ಪಡೆದುಕೊಳ್ಳದಿರುವುದು ನೋವಿನ ಸಂಗತಿ. ಫೆ.26, 27 ಹಾಗೂ 28 ರಂದು ಮೂರು ದಿನಗಳ ಕಾಲ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದ್ದು, ಹೆಚ್ಚಿನ ಮಟ್ಟದಲ್ಲಿ ಶಿಕ್ಷಕರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಕ್ಕಳು ಚಿತ್ರ ಬಿಡಿಸಿದ ಕಲೆಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಪ್ರತಿಭಾನ್ವಿತ ಮಕ್ಕಳಿಗೆ ಗೌರವಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್. ಕೇಶ ವೇಶ್, ಚಿತ್ರಕಲೆ ಆಯುಕ್ತ ಕಛೇರಿ ಸಹಾ ಯಕ ನಿರ್ದೇಶಕ ಮಹಾಂತೇಶ ಕಂಠಿ, ಉಪನಿರ್ದೇಶಕರ ಕಛೇರಿ ಶಿಕ್ಷಣಾಧಿಕಾರಿ ಎನ್.ಜೆ. ಸೋಮನಾಥ, ಕ್ಷೇತ್ರ ಶಿಕ್ಷಣಾಧಿ ಕಾರಿ ಡಿ.ಕೃಷ್ಣ, ನಿರ್ಮಲಾ ಚಿತ್ರಕಲಾ ಮಹಾ ವಿದ್ಯಾಲಯ ಪ್ರಾಂಶುಪಾಲ ಆರ್.ಸಿ. ಕಾರದಕಟ್ಟಿ, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ವೈ.ಬಿ. ರವಿ ಇತರರು ಪಾಲ್ಗೊಂಡಿದ್ದರು. ಚಿತ್ರಕಲಾ ಶಿಕ್ಷಕ ಎನ್. ರಾಣಿ ಪ್ರಾರ್ಥಿಸಿದರು. ಸನಂತೆ ಗೌಡ ನಿರೂಪಿಸಿದರು. ಹಿರಿಯ ಚಿತ್ರ ಕಲಾ ವಿದ ಎಸ್.ವೈ.ಪ್ರಭಾಕರ್ ಸ್ವಾಗತಿಸಿದರು.

Translate »