ಹನೂರು ಪಪಂ ಬಜೆಟ್ ಪೂರ್ವಭಾವಿ ಸಭೆ
ಚಾಮರಾಜನಗರ

ಹನೂರು ಪಪಂ ಬಜೆಟ್ ಪೂರ್ವಭಾವಿ ಸಭೆ

January 29, 2019

ಹನೂರು: ಪಟ್ಟಣ ಪಂಚಾಯಿತಿ ಯಲ್ಲಿ 2019-2020ನೇ ಸಾಲಿನ ಆಯ ವ್ಯಯ ಮಂಡನೆಗೆ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರಿಂದ ಸಲಹೆ ಸೂಚನೆ ಪಡೆ ಯಲು ಪೂರ್ವಭಾವಿ ಸಭೆಯನ್ನು ಪ.ಪಂ ಅಧ್ಯಕ್ಷೆ ಮಮತಾ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು. ಸಭೆಯಲ್ಲಿ ಮಡಿವಾಳ ಸಮುದಾಯದ ಕುಮಾರ್ ಮಾತನಾಡಿ, ನಮ್ಮ ಜನಾಂಗಕ್ಕೆ ಸೇರಿರುವ ಸ್ಮಶಾನಕ್ಕೆ ಸುತ್ತು ಗೋಡೆ ಹಾಗೂ ಬೋರ್‍ವೇಲ್ ಕೊರೆಸಿ ಕೊಡುವಂತೆ ಮನವಿ ಮಾಡಿದರು, ಪಟ್ಟಣದ 8 ನೇ ವಾರ್ಡಿನ ನಿವಾಸಿ ರಾಜಪ್ಪ ಸಾರ್ವಜನಿಕರ ಪರವಾಗಿ ಮಾತ ನಾಡಿ, ಪಟ್ಟಣದಲ್ಲಿ ವಾಸಿಸುವ ಸಾರ್ವಜ ನಿಕರಿಗೆ ಅಧಿಕಾರಿಗಳು ಆಂದೋಲನ ಮಾದರಿಯಲ್ಲಿ ಸಾರ್ವಜನಿಕರ ಆಸ್ತಿ ಮನೆಗಳಿಗೆ ಖಾತೆ ಮಾಡುವುದು, ನೀರಿನ ಕಂದಾಯ ವಸೂಲಾತಿ ಮುಂತಾದ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಪಟ್ಟಣ ಪಂಚಾಯಿತಿಗೂ ಆದಾಯ ಬರು ತ್ತದೆ ಹಾಗೂ ಇದರಿಂದ ಸಾರ್ವಜನಿಕರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.

ನಂತರ ಮುಖ್ಯಾಧಿಕಾರಿ ಎಸ್.ಡಿ ಮೋಹನ್ ಕೃಷ್ಣ ಮಾತನಾಡಿ, ಈ ಸಾಲಿ ನಲ್ಲಿ 3.56 ಲಕ್ಷ ಆದಾಯ ನಿರೀಕ್ಷಿಸಲಾ ಗಿದ್ದು, ಅದರಲ್ಲಿ 3.25 ಲಕ್ಷ ಬಜೆಟ್ ಮಾಡಲು ಕ್ರಮಕೈಗೊಳ್ಳಲಾಗಿದೆ, ಸ್ಮಶಾನ ಗಳಿಗೆ ಸುತ್ತಗೋಡೆ ಕಾಮಗಾರಿಗೆ ಕ್ರಿಯ ಯೋಜನೆ ಪಟ್ಟಿ ತಯಾರಿಸಲಾಗುವುದು, ಒಟ್ಟಾರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡಿಗಳಿಗೂ ಮೂಲಭೂತ ಸೌಲಭ್ಯಗಳನ್ನು ನೀಡುವ ಸದುದ್ದೇಶ ದಿಂದ ಮೊದಲ ಆದ್ಯತೆ ಕುಡಿಯುವ ನೀರಿನ ಸರಬರಾಜು, ಹಾಗೂ ಸ್ವಚ್ಚತೆಗೆ ಬಡಾವಣೆಗಳಲ್ಲಿ ಸುಸಜ್ಜಿತವಾದ ಚರಂಡಿ ಮತ್ತು ಹಳ್ಳ ದಿಣ್ಣೆಗಳಿಂದ ಕೊಡಿರುವ ರಸ್ತೆಗಳಿಗೆ ಕ್ರಿಯಾ ಯೋಜನೆ ಸಿದ್ದಪಡಿಸಲಾಗುವುದು ಎಂದು ಸಭೆ ಯಲ್ಲಿ ಮಾಹಿತಿ ನೀಡಿದರು.

ಅಂಬೇಡ್ಕರ್ ಸಂಘದ ಅಧ್ಯಕ್ಷ ಕಿರಣ್ ಮಾತನಾಡಿ, ಪಟ್ಟಣದಲ್ಲಿ ನಡೆಯುತ್ತಿರುವ ಸಿ.ಸಿ.ರಸ್ತೆ ಮತ್ತು ಚರಂಡಿ ಕಾಮಗಾರಿಗಳು ಕಳಪೆ ಕಾಮಗಾರಿಗಳಾಗಿದ್ದು, ಗುಣಮಟ್ಟ ದಿಂದ ಮಾಡುತ್ತಿಲ್ಲ ಗುತ್ತಿಗೆದಾರರಿಗೆ ಉತ್ತಮ ಗುಣಮಟ್ಟದ ಕಾಮಗಾರಿ ಮಾಡುವಂತೆ ಸೂಚನೆ ನೀಡಿ ಎಂದು ತಿಳಿಸಿದರು

ಸಭೆಯಲ್ಲಿ ಪ.ಪಂ ಅಧ್ಯಕ್ಷ ಮಮತ, ಉಪಾಧ್ಯಕ್ಷ ಬಸವರಾಜು, ಸದಸ್ಯರು ಗಳಾದ ರಮೇಶ್‍ನಾಯ್ಡು, ವೆಂಕಟೇಶ್, ನಾಮನಿರ್ದೇಶಕರಾದ ನಾಗಣ್ಣ, ಜಯ ಪ್ರಕಾಶ್‍ಗುಪ್ತ, ಅಧಿಕಾರಿಗಳಾದ ಸಂಘ ಟನಾ ಕಾರ್ಯದರ್ಶಿ ಭೈರಪ್ಪ, ಆರೋಗ್ಯಾ ದಿಕಾರಿ ರಾಘವೇಂದ್ರ, ಸಿಬ್ಬಂದಿಗಳಾದ, ಮಹೇಶ್, ಮನಿಯ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Translate »