ಪಿಎಸಿಸಿ ಸಂಘದ ನೌಕರರ ಪ್ರತಿಭಟನೆ
ಚಾಮರಾಜನಗರ

ಪಿಎಸಿಸಿ ಸಂಘದ ನೌಕರರ ಪ್ರತಿಭಟನೆ

January 29, 2019

ಚಾಮರಾಜನಗರ: ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ವರ್ಗದ ನೌಕರರಿಗೆ ಸೇವಾ ಭದ್ರತೆ, ವೇತನ ಶ್ರೇಣಿ, ಪಿಂಚಣಿ ಮತ್ತು ಇತರೆ ಸೌಲಭ್ಯಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿ ರುವ ನೌಕರರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ರಾಜ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ-ಬ್ಯಾಂಕ್‍ಗಳ ಕ್ಷೇಮಾಭಿವೃದ್ಧಿ ಮಹಾಮಂಡಳಿಯ ಆಶ್ರಯದಲ್ಲಿ ಇಲ್ಲಿನ ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ನೌಕರರು ಜಮಾಯಿಸಿದರು. ನಂತರ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಭಿತ್ತಿಪತ್ರಗಳನ್ನು ಪ್ರದರ್ಶಿಸುತ್ತಾ ಮೆರವಣಿಗೆ ಆರಂಭಿಸಿದರು. ಭುವನೇಶ್ವರಿ ವೃತ್ತ, ಬಿ. ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತಲುಪಿದರು. ಅಲ್ಲಿ ಧರಣಿ ನಡೆಸಿದ ನಂತರ ಜಿಲ್ಲಾಡಳಿತದ ಮೂಲಕ ಸರ್ಕಾರದ ಮುಖ್ಯಕಾರ್ಯದರ್ಶಿ ಗಳಿಗೆ ಮನವಿ ಸಲ್ಲಿಸಿದರು.

ಸಂಘದ ನೌಕರರಿಗೆ ಸಂಘ ಪ್ರಾರಂಭ ವಾಗಿ 115 ವರ್ಷ ಕಳೆದಿದ್ದರೂ ಯಾವುದೇ ರೀತಿಯ ಸೇವಾ ಭದ್ರತೆ, ವೇತನ ಶ್ರೇಣಿ, ಪಿಂಚಣಿ ಮತ್ತು ಇತರೆ ಸೌಲಭ್ಯಗಳನ್ನು ಯಾವುದೇ ಸರ್ಕಾರಗಳು ಜಾರಿಗೊಳಿಸಿಲ್ಲ. ಇದರಿಂದ ತಮಗೆ ತೊಂದರೆ ಆಗಿವೆ ಎಂದು ಪ್ರತಿಭಟನಾ ಕಾರರು ದೂರಿದರು.

ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರ ಸಂಘಗಳ ಮೂಲಕ ನೌಕರರು ರೈತರ ಆರ್ಥಿಕ ಅಭಿವೃದ್ಧಿಗೆ ವ್ಯವಸಾಯ ಉಪ ಕರಣ, ರಾಸಾಯನಿಕ ಗೊಬ್ಬರ, ಬಿತ್ತನೆಬೀಜ, ಬೆಳೆ ವಿಮೆ, ಸರ್ಕಾರದ ಸಹಾಯಧನ, ಪಡಿತರ ವಿತರಣೆ ಮತ್ತು ಸಾಲಮನ್ನಾ ದಂತಹ ಕೆಲಸಗಳನ್ನು ಹಗಲು ರಾತ್ರಿಯನ್ನದೇ ದುಡಿಯುತ್ತಿದ್ದಾರೆ. ಇದಕ್ಕೆ ತಕ್ಕಂತೆ ನೌಕರರಿಗೆ ಸೌಲಭ್ಯಗಳನ್ನು ನೀಡದಿರುವುದರಿಂದ ಜೀವನ ನಡೆಸಲು ವಂಚಿತರಾಗಿದ್ದಾರೆ. ಆದ್ದರಿಂದ ತಮಗೆ ಸೌಲಭ್ಯಗಳನ್ನು ಜಾರಿಗೊಳಿಸಬೇಕು. ಇಲ್ಲದಿದ್ದರೆ ಬರಲಿರುವ ಫೆಬ್ರವರಿ ತಿಂಗಳ ಅಂತ್ಯದಲ್ಲಿ ಸಂಘಗಳು ಕೆಲಸ ಕಾರ್ಯ ಗಳನ್ನು ಸ್ಥಗಿತಗೊಳಿಸಿ ಬೆಂಗಳೂರಿ ನಲ್ಲಿ ಸಂಘಟನೆ ಮೂಲಕ ಮುಷ್ಕರ ನಡೆಸ ಲಾಗುವುದು ಎಂದು ಎಚ್ಚರಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷ ಸೋಮಣ್ಣ, ಮಹದೇವಪ್ಪ, ನಾಗೇಂದ್ರಸ್ವಾಮಿ, ಬಸವ ರಾಜು, ಜೋಷಿ, ಮಹದೇವ, ಜೀವಿಶ್, ಶಿವಸ್ವಾಮಿ, ಜಯಶಂಕರಸ್ವಾಮಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »