ಅರಸೀಕೆರೆ: ಮತದಾನದ ಮಹತ್ವ, ಜೀವ ಜಲದ ಸಂರಕ್ಷಣೆ, ಪರಿಸರ ಸ್ವಚ್ಛತೆ ಮತ್ತು ಅರಣ್ಯ ನಾಶದಿಂದಾ ಗುತ್ತಿರುವ ವಿನಾಶಗಳ ಮಾಹಿತಿಯೊಂದಿಗೆ ಚಿತ್ರದುರ್ಗ ಜಿಲ್ಲೆಯ ಸ್ಕೌಟ್ಸ್ ಅಂಡ್ ಗೈಡ್ಸ್‍ನ ಏಕಲವ್ಯ ಓಪನ್ ಟ್ರೂಪ್‍ನ ಸದಸ್ಯರ ತಂಡವು ನಗರಕ್ಕೆ ಆಗಮಿಸಿ ರೈಲ್ವೆ ನಿಲ್ದಾಣ ದಲ್ಲಿ ಜಾಗೃತಿ ಮೂಡಿಸಿತು. ಹಾಸನ ಜಿಲ್ಲಾ ಪ್ರವಾಸ ಕೈಗೊಂಡಿ ರುವ ತಂಡವು ನಗರದ ರೈಲ್ವೆ ನಿಲ್ದಾಣ ಆವರಣದ ಸ್ವಚ್ಛ ಮಾಡುವ ಮೂಲಕ ಪರಿಸರ ಸ್ವಚ್ಛತೆ ಕುರಿತು ಸಾರ್ವಜನಿಕರು ಹಾಗೂ ಪ್ರಯಾಣಿಕರ ಗಮನ ಸೆಳೆದರು. ಮತದಾನ ಪ್ರಾಮುಖ್ಯತೆ, ಜಲಸಂರಕ್ಷಣೆ,…
ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷರ ದಿನಾಚರಣೆ
January 19, 2019ಹಾಸನ: ನಗರದ ಬಿ.ಎಂ.ರಸ್ತೆ, ಹುಡಾ ಕಚೇರಿ ಎದುರು ಕುವೆಂಪುನಗರದಲ್ಲಿರುವ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿ ಕೊಳ್ಳಲಾಗಿದ್ದ ಸಂಸ್ಥೆ ಮಾಜಿ ಅಧ್ಯಕ್ಷರ ಮಾಸಾಚರಣೆಯಲ್ಲಿ ಮಾಜಿ ಅಧ್ಯಕ್ಷರುಗಳನ್ನು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸುವ ಮೂಲಕ ಗೌರವ ಸಮರ್ಪಣೆಯನ್ನು ಮಾಡಿದರು. ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷರ ಮಾಸಾಚರಣೆಯಲ್ಲಿ ಬಿ.ವಿ. ಹೆಗಡೆ, ಎಸ್.ಕೆ.ಸತ್ಯನಾರಾಯಣ್, ಡಾ.ಜಯಣ್ಣ, ಡಾ.ಗಂಗಾಧರ್, ಕೆ.ಆರ್.ಮಲ್ಲೇಶಗೌಡ, ಹೆಚ್.ಆರ್.ಪ್ರಕಾಶ್, ಸಂಜೀವ್‍ಹೆಗ್ಡೆ, ಅಣ್ಣೇಗೌಡ, ಜಯರಾಂ ಶೆಟ್ಟಿ, ಪ್ರಕಾಶ್ ಯಾಜಿ, ನಟೇಶ್‍ಕುಮಾರ್, ಅಶೋಕ್, ಹೆಚ್.ಎಸ್.ಆನಂದ್, ಕೆ.ಜೆ.ನಾಗರಾಜು, ಅನಂತರಾಜು, ಬಿ.ಸೋಮೇಶ್, ಬಿ.ಕೆ.ಶಾಮರಾಜ್ ಸೇರಿದಂತೆ ಲಯನ್ಸ್ ಸಂಸ್ಥೆಯ…
ಬೇಲೂರಲ್ಲಿ ಕಸ ವಿಲೇವಾರಿ ವಾಹನಗಳಿಗೆ ಚಾಲನೆ
January 19, 2019ಬೇಲೂರು: ವಿಶ್ವಪ್ರಸಿದ್ಧ ಬೇಲೂರು ಪಟ್ಟಣದ ಕಸ ವಿಲೇವಾರಿಯನ್ನು ವೈಜ್ಞಾ ನಿಕ ರೀತಿಯಲ್ಲಿ ಮಾಡ ಬೇಕು ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು. ಪಟ್ಟಣ ಹರ್ಡೀಂಕರ್ ರಸ್ತೆಯಲ್ಲಿ ಪುರ ಸಭೆಯಿಂದ ನೂತನವಾಗಿ ಕಸ ವಿಲೇ ವಾರಿಯ ಆಟೋ ವಾಹನಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಪ್ರತಿ ಮನೆ-ಮನೆಯ ಲ್ಲಿನ ಕಸವನ್ನು ವೈಜ್ಞಾನಿಕವಾಗಿ ಹಸಿ ಮತ್ತು ಒಣ ಕಸವನ್ನಾಗಿ ಬೇರ್ಪಡಿಸಿ, ಕಸ ವಿಲೇವಾರಿ ವಾಹನಗಳಿಗೆ ನೀಡುವ ಕರ್ತವ್ಯವನ್ನು ಸಾರ್ವಜನಿಕರು ಮಾಡ ಬೇಕು. ಕಸ ವಿಲೇವಾರಿ ಕೇವಲ ಪುರ…
ಗಣರಾಜ್ಯೋತ್ಸವದಲ್ಲಿ ಆಕರ್ಷಕ ಪಥ ಸಂಚಲನಕ್ಕೆ ಎಸ್ಪಿ ಸೂಚನೆ
January 19, 2019ಹಾಸನ: ಗಣರಾಜ್ಯೋತ್ಸವ ದಲ್ಲಿ ಆಕರ್ಷಕ ಪಥ ಸಂಚಲನ ಆಯೋ ಜಿಸಬೇಕು, ಅತ್ಯುತ್ತಮ ಶಾಲಾ ತಂಡ ಗಳನ್ನು ಮಾತ್ರ ಪಥ ಸಂಚಲನಕ್ಕೆ ಆಯ್ಕೆ ಮಾಡಬೇಕು. ಸಾಂಸ್ಕøತಿಕ ಕಾರ್ಯ ಕ್ರಮಗಳು ದಿನದ ಮಹತ್ವ ಬಿಂಬಿಸುವಂತಿ ರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಎ.ಎನ್.ಪ್ರಕಾಶ್ ಗೌಡ ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿಂದು ನಡೆದ ಗಣರಾಜ್ಯೋ ತ್ಸವ ಪಥ ಸಂಚಲನ ಕುರಿತು ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ಪಥ ಸಂಚಲನಕ್ಕೆ ತಂಡ ಗಳ ಆಯ್ಕೆ…
ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಹೆಚ್.ಡಿ. ರೇವಣ್ಣ ಚಾಲನೆ
January 19, 2019ಹಾಸನ: ನಗರದ ಜಿಲ್ಲಾ ಕ್ರೀಡಾಂ ಗಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾ ಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಂಯುಕ್ತಾ ಶ್ರಯದಲ್ಲಿ ಏರ್ಪಡಿಸಲಾಗಿದ್ದ 2018-19ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಎರಡು ದಿನಗಳ ಕ್ರೀಡಾ ಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆ ಕಾರ್ಯ ಕ್ರಮದಲ್ಲಿ ಬಲೂನುಗಳನ್ನು ಗಾಳಿಯಲ್ಲಿ ಹಾರಿ ಬಿಡುವ ಮೂಲಕ ಲೋಕೋಪ ಯೋಗಿ ಸಚಿವ ಹೆಚ್.ಡಿ. ರೇವಣ್ಣ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು. ನಂತರ…
ಸಿದ್ದಗಂಗಾ ಶ್ರೀಗಳ ಆರೋಗ್ಯ ಚೇತರಿಕೆಗೆ ಪ್ರಾರ್ಥನೆ
January 19, 2019ಹಾಸನ: ನಗರದ ತಣ್ಣೀರುಹಳ್ಳ ಮಠದ ಆವರಣದಲ್ಲಿ ಪೂಜ್ಯ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಸಾಮ್ವೀಜಿ ಅವರಿಗೆ ಆರೋಗ್ಯ ಚೇತರಿಕೆ ಆಗಲಿ ಬೇಗ ಗುಣ ಮುಖರಾಗಲಿ ಎಂದು ಮಠದ ವತಿಯಿಂದ ಭಕ್ತರು, ವಿದ್ಯಾರ್ಥಿಗಳು ಪೂಜೆ ಸಲ್ಲಿಸುವ ಮೂಲಕ ಪ್ರಾರ್ಥಿಸಿದರು ಇದೇ ಸಂದರ್ಭದಲ್ಲಿ ಮಾತನಾಡಿದ ಹಾಸನ ಜಿಲ್ಲಾ ಅಖಿಲ ಭಾರತ ವೀರಶ್ವವ ಮಹಾ ಸಭೆಯ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಕಟ್ಟಾಯ ಶಿವಕುಮಾರ್, ಪೂಜ್ಯ ಶಿವಕುಮಾರ ಸಾಮ್ವೀಜಿಗಳು ತ್ರಿವಿಧ ದಾಸೋಹಿಗಳು, ಧಾರ್ಮಿಕ ಚಿಂತಕರು ಅದ ಇವರು ತಮ್ಮ 111ನೇ…
ಒಕ್ಕಲಿಗರ ಮಹಿಳಾ ಸಂಘದಿಂದ ಸಂಕ್ರಾಂತಿ ಸಂಭ್ರಮ
January 19, 2019ಬೇಲೂರು: ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಮುಂದೆ ಬರಬೇಕೆಂಬ ಉದ್ದೇಶದಿಂದ ಒಕ್ಕಲಿಗರ ಮಹಿಳಾ ಸಂಘದ ಮೂಲಕ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಆಯೋಜಿ ಸಲಾಗುತ್ತಿದೆ ಎಂದು ಒಕ್ಕಲಿಗ ಮಹಿಳಾ ಸಂಘದ ಅಧ್ಯಕ್ಷೆ ವೈ.ಆರ್.ಭಾರತೀಗೌಡ ಹೇಳಿದರು. ತಾಲೂಕು ಒಕ್ಕಲಿಗರ ಮಹಿಳಾ ಸಂಘ ದಿಂದ ಸಂಕ್ರಾಂತಿ ಹಬ್ಬದ ಅಂಗವಾಗಿ ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪ ದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವರ್ಷದ ಮೊದಲ ಹಬ್ಬ ಸಂಕ್ರಾಂತಿ, ಈ ಹಬ್ಬವನ್ನು ಎಳ್ಳು ಬೆಲ್ಲ ತಿಂದು ಆಚರಿಸು ವುದಲ್ಲದೆ, ರೈತರು ತಮ್ಮ…
ಅರಸೀಕೆರೆ ಬಸ್ ನಿಲ್ದಾಣದಲ್ಲಿ ಹೆಚ್ಚುತ್ತಿರುವ ಪಿಕ್‍ಪಾಕೆಟ್ ಸಿಸಿ ಕ್ಯಾಮರಾ ಅಳವಡಿಕೆಗೆ ಸಾರ್ವಜನಿಕರ ಆಗ್ರಹ
January 19, 2019ಅರಸೀಕೆರೆ: ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಕಿಸೆ ಕಳ್ಳತನ ಮತ್ತು ವಾಹನ ಕಳ್ಳತನ ಗಳು ಹೆಚ್ಚಾಗುತ್ತಿದ್ದು, ಪ್ರಕರಣ ಪತ್ತೆಹಚ್ಚಲು ನಿಲ್ದಾಣ ದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಪೊಲೀಸ್ ಚೌಕಿ ಸ್ಥಾಪಿಸಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. ನಗರದ ಕೇಂದ್ರ ಭಾಗದಲ್ಲಿರುವ ಈ ಬಸ್ ನಿಲ್ದಾಣವು ರೈಲ್ವೆ ನಿಲ್ದಾಣ ಸೇರಿದಂತೆ ವಿವಿಧ ಪ್ರದೇಶಗಳಿಗೆ ಬಹಳಷ್ಟು ಹತ್ತಿರವಾಗಿದ್ದು ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಈ ನಿಲ್ದಾಣಕ್ಕೆ ಬಂದು ಹೋಗುತ್ತಿದ್ದಾರೆ.ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಈ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ಕಿಸೆಗಳ್ಳತನ ಮತ್ತು…
ಕನ್ನಡ ಬಳಕೆ ಇಲ್ಲದ ಬ್ಯಾಂಕ್‍ನಲ್ಲಿ ಖಾತೆ ಬೇಡ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಸಿದ್ದರಾಮಯ್ಯ
January 17, 2019ಹಾಸನ: ಯಾವ ಬ್ಯಾಂಕುಗಳಲ್ಲಿ ಕನ್ನಡ ಬಳಕೆ ಇರುವುದಿಲ್ಲವೋ ಅಂತಹ ಬ್ಯಾಂಕಿನಿಂದ ಖಾತೆ ನಿಷೇಧಿಸಿ, ಕನ್ನಡ ಬಳಕೆ ಮಾಡುವ ಬ್ಯಾಂಕುಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ತಕ್ಕ ಪಾಠ ಕಲಿಸಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಮನವಿ ಮಾಡಿದರು. ನಗರದ ಹಿಮ್ಸ್ ನಿರ್ದೇಶಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾವ ಬ್ಯಾಂಕಿನಲ್ಲಿ ಕನ್ನಡದಲ್ಲಿ ವ್ಯವಹಾರ ಮಾಡದೆ ಗ್ರಾಹಕರಿಗೆ ಸ್ಪಂದಿಸುವುದಿಲ್ಲವೋ ಅಂತಹ ಬ್ಯಾಂಕಿನ ಖಾತೆಯನ್ನು ನಿಷೇಧಿಸಿ, ಕನ್ನಡ ವ್ಯವಹಾ ರದ ಬ್ಯಾಂಕುಗಳಲ್ಲಿ ಗ್ರಾಹಕರು ವ್ಯವಹಾರ ಮಾಡುವ ಮೂಲಕ ಕನ್ನಡಕ್ಕೆ…
ಇದೇ ರೀತಿ ಬಿಜೆಪಿ ರಾಜಕೀಯ ಮಾಡಿದರೇ ಚುನಾವಣೆಯಲ್ಲಿ ಜನತೆಯಿಂದ ತಕ್ಕ ಪಾಠ ಸಚಿವ ಹೆಚ್.ಡಿ. ರೇವಣ್ಣ ಎಚ್ಚರಿಕೆ
January 17, 2019ಹಾಸನ: ಇಂತಹ ರಾಜಕೀಯವನ್ನು ಬಿಜೆಪಿ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಎಚ್ಚರಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ, ‘ಆಪರೇಷನ್ ಕಮಲ’ ಮಾಡಿಲ್ಲ ಎಂದು ಹೇಳುತ್ತಿರುವ ಮಾಜಿ ಸಿಎಂ ಯಡಿಯೂರಪ್ಪ ಎಲ್ಲಾ ಶಾಸಕರನ್ನು ಯಾಕೆ ಕರ್ಕೊಂಡು ಹೋದರು? ಎಲ್ಲರನ್ನೂ ರೂಂನಲ್ಲಿರಿ ಸಿಕೊಂಡು ಮಜಾ ಮಾಡೋಕಾ ಶಾಸಕರಿರೋದು? ಬಿಜೆಪಿ ಅವರಿಗೆ ಮಾನ ಮರ್ಯಾದೆ ಇದ್ದರೆ ಮೊದಲು ರಾಜ್ಯದಲ್ಲಿ ತಲೆದೋರಿರುವ ಬರದ ಬಗ್ಗೆ ಚಿಂತನೆ ಮಾಡಲಿ ಎಂದು…