ಹಾಸನ: ನಗರದ ತಣ್ಣೀರುಹಳ್ಳ ಮಠದ ಆವರಣದಲ್ಲಿ ಪೂಜ್ಯ ಡಾ|| ಶ್ರೀ ಶ್ರೀ ಶ್ರೀ ಶಿವಕುಮಾರ ಸಾಮ್ವೀಜಿ ಅವರಿಗೆ ಆರೋಗ್ಯ ಚೇತರಿಕೆ ಆಗಲಿ ಬೇಗ ಗುಣ ಮುಖರಾಗಲಿ ಎಂದು ಮಠದ ವತಿಯಿಂದ ಭಕ್ತರು, ವಿದ್ಯಾರ್ಥಿಗಳು ಪೂಜೆ ಸಲ್ಲಿಸುವ ಮೂಲಕ ಪ್ರಾರ್ಥಿಸಿದರು
ಇದೇ ಸಂದರ್ಭದಲ್ಲಿ ಮಾತನಾಡಿದ ಹಾಸನ ಜಿಲ್ಲಾ ಅಖಿಲ ಭಾರತ ವೀರಶ್ವವ ಮಹಾ ಸಭೆಯ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಕಟ್ಟಾಯ ಶಿವಕುಮಾರ್, ಪೂಜ್ಯ ಶಿವಕುಮಾರ ಸಾಮ್ವೀಜಿಗಳು ತ್ರಿವಿಧ ದಾಸೋಹಿಗಳು, ಧಾರ್ಮಿಕ ಚಿಂತಕರು ಅದ ಇವರು ತಮ್ಮ 111ನೇ ವಯಸ್ಸಿನಲ್ಲಿಯೂ ಶಿವ ಪೂಜೆ, ವಿದ್ಯಾರ್ಥಿಗಳೊಂದಿಗೆ ಒಡನಾಟ ಭಕ್ತರಿಗೆ ದರ್ಶನ ನೀಡುವುದು ತಮ್ಮ ದೈನಂದಿನ ಕಾರ್ಯ ಚಟುವಟಿಕೆ ಯಲ್ಲಿ ಲವಲವಿಕೆಯಿಂದ ಇದ್ದರು. ಇವರಿಗೆ ಆರೋಗ್ಯ ಸರಿಯಿಲ್ಲದೆ ಇರುವುದರಿಂದ ಬೇಗ ಗುಣಮುಖರಾಗಲೆಂದು ಇಂದು ತಣ್ಣೀರುಹಳ್ಳ ಮಠದ ಆವರಣದಲ್ಲಿ ಪೂಜಾ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದರು.
ಪೂಜ್ಯ ಸಾಮ್ವೀಜಿಯವರಿಗೆ ಹಾಸನ ಜಿಲ್ಲೆಯ ಭಕ್ತರೊಡನೆ ಅಭಿನಭಾವ ಸಂಬಂಧವಿದೆ. ಅವರ ಹೆಸರಿನಲ್ಲಿ ಸಕಲೇಶ ಪುರದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಭವನ,
ಬೇಲೂರಿನಲ್ಲಿ ಶ್ರೀ ಶಿವಕಮಾರ ಸ್ವಾಮೀಜಿ ಕಲ್ಯಾಣ ಮಂಟಪ, ಹೊಳೇ ನರಸೀಪುರದಲ್ಲಿ ಬಸವ ಭವನ ಒಳಗೊಂಡಂತೆ ಸ್ವಾಮೀಜಿ ಟ್ರಸ್ಟ್ ಮೂಲಕ ನಡೆಸ ಲಾಗುತ್ತಿದೆ. ಹಾಸನದ ತಣ್ಣೀರುಹಳ್ಳ ಮಠದ ಸ್ವಾಮೀಜಿಗಳಾಗಿದ್ದ ಲಿಂಗೈಕ್ಯ ಶಿವಲಿಂಗ ಸ್ವಾಮೀಜಿಯವರು ಹಾಗೂ ಇಮ್ಮಡಿ ಶಿವಲಿಂಗ ಸ್ವಾಮೀಜಿಗಳು ಸಿದ್ದಗಂಗಾ ಮಠದಲ್ಲಿ ವ್ಯಾಸಂಗ ಮಾಡಿ ತಣ್ಣೀರುಹಳ್ಳ ಮಠಕ್ಕೆ ಸ್ವಾಮೀಜಿಗಳಾಗಿ ನೇಮಕಗೊಂಡಿ ದ್ದರು ಎಂದರು. ಸಿದ್ಧಗಂಗಾ ಶ್ರೀ ದೇವರಿಗೆ ಸಮಾನವಾಗಿರುವ ಅವರಿಗೆ ಭಾರತ ರತ್ನ ನೀಡ ಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.
ಈಸಂದರ್ಭದಲ್ಲಿ ತಣ್ಣೀರುಹಳ್ಳ ಮಠದ ಶ್ರೀ ಸಿದ್ದೇಶ್ವರ ಐಟಿಎ ಕಾಲೇಜು ಪ್ರಾಂಶು ಪಾಲ ಇಂದುಶೇಖರ್, ಮ್ಯಾನೇಜರ್ ಶಂಕರ್, ಸೋಮಣ್ಣ, ಗಂಗಾಧರ್, ಹಾಗೂ ವಿದ್ಯಾರ್ಥಿಗಳು, ಕಾಲೇಜಿನ ಉಪನ್ಯಾಸಕರು ಭಾಗವಹಿಸಿದ್ದರು.