ಒಕ್ಕಲಿಗರ ಮಹಿಳಾ ಸಂಘದಿಂದ ಸಂಕ್ರಾಂತಿ ಸಂಭ್ರಮ
ಹಾಸನ

ಒಕ್ಕಲಿಗರ ಮಹಿಳಾ ಸಂಘದಿಂದ ಸಂಕ್ರಾಂತಿ ಸಂಭ್ರಮ

January 19, 2019

ಬೇಲೂರು: ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ಮುಂದೆ ಬರಬೇಕೆಂಬ ಉದ್ದೇಶದಿಂದ ಒಕ್ಕಲಿಗರ ಮಹಿಳಾ ಸಂಘದ ಮೂಲಕ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಆಯೋಜಿ ಸಲಾಗುತ್ತಿದೆ ಎಂದು ಒಕ್ಕಲಿಗ ಮಹಿಳಾ ಸಂಘದ ಅಧ್ಯಕ್ಷೆ ವೈ.ಆರ್.ಭಾರತೀಗೌಡ ಹೇಳಿದರು.

ತಾಲೂಕು ಒಕ್ಕಲಿಗರ ಮಹಿಳಾ ಸಂಘ ದಿಂದ ಸಂಕ್ರಾಂತಿ ಹಬ್ಬದ ಅಂಗವಾಗಿ ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪ ದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವರ್ಷದ ಮೊದಲ ಹಬ್ಬ ಸಂಕ್ರಾಂತಿ, ಈ ಹಬ್ಬವನ್ನು ಎಳ್ಳು ಬೆಲ್ಲ ತಿಂದು ಆಚರಿಸು ವುದಲ್ಲದೆ, ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಹೊಸ ಬೆಳೆಗಳನ್ನೆಲ್ಲಾ ಕೊಯ್ಲು ಮಾಡಿ ಸಂಭ್ರಮಿಸುವ ದಿನವಾಗಿದೆ. ಹಾಗೂ ನಮ್ಮ ಒಕ್ಕಲಿಗರ ಮಹಿಳಾ ಸಂಘ ಪ್ರಾರಂಭವಾಗಿ ನಾಲ್ಕು ತಿಂಗಳು ಕಳೆದಿದ್ದು, ಸಂಕ್ರಾಂತಿ ಹಬ್ಬದ ಅಂಗವಾಗಿ ನಮ್ಮ ಸಂಘದ ಮಹಿಳೆಯರಿಗಾಗಿ ಹಲವಾರು ಸಾಂಸ್ಕøತಿಕ ಚಟುವಟಿಕೆಗಳೊಂದಿಗೆ ವಿವಿಧ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಹಿಳೆಯರನ್ನು ಸಂಘಕ್ಕೆ ಸೇರ್ಪಡೆ ಗೊಳಿಸಿ ಹಾಲವಾರು ಸಮಾಜಮುಖಿ ಕಾರ್ಯಕ್ರಮ ಹಾಗೂ ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಹಾಗೂ ಪ್ರತಿ ತಿಂಗಳು 2ನೇ ಶನಿವಾರದಂದು ಬೇಲೂರಿನಲ್ಲಿ ಒಕ್ಕಲಿಗರ ಮಹಿಳಾ ಸಂಘದ ಸಭೆ ಕರೆಯಲಾಗುವುದು. ಈ ಸಭೆಗೆ ಖಡ್ಡಾಯವಾಗಿ ಸಂಘದ ಸದಸ್ಯರು ಭಾಗವಹಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ವಿಜೇತ ರಾದವರಿಗೆ ಬಹುಮಾನಗಳನ್ನು ವಿತರಿಸ ಲಾಯಿತು. ಕಾರ್ಯಕ್ರಮದಲ್ಲಿ ಕಾರ್ಯ ದರ್ಶಿ ಲಕ್ಷ್ಮಿಚಂದ್ರೇಗೌಡ, ಸಹ ಕಾರ್ಯ ದರ್ಶಿ ಉಷಾಮಂಜೇಗೌಡ, ಖಜಾಂಚಿ ಶ್ರೀದೇವಿ ಮೊಗಪ್ಪಗೌಡ, ಭಾಗ್ಯ ಹಾಗೂ ಸಂಘದ ಮುದ್ದಮ್ಮ, ರೇಖಾ ಬಿಂದುಸಾರ, ಲೀಲಾರಮೇಶ್ ಸೇರಿದಂತೆ ಸಂಘದ ನಿರ್ದೇಶಕರುಗಳಿದ್ದರು.

Translate »