ಅರಸೀಕೆರೆ ಬಸ್ ನಿಲ್ದಾಣದಲ್ಲಿ ಹೆಚ್ಚುತ್ತಿರುವ ಪಿಕ್‍ಪಾಕೆಟ್ ಸಿಸಿ ಕ್ಯಾಮರಾ ಅಳವಡಿಕೆಗೆ ಸಾರ್ವಜನಿಕರ ಆಗ್ರಹ
ಹಾಸನ

ಅರಸೀಕೆರೆ ಬಸ್ ನಿಲ್ದಾಣದಲ್ಲಿ ಹೆಚ್ಚುತ್ತಿರುವ ಪಿಕ್‍ಪಾಕೆಟ್ ಸಿಸಿ ಕ್ಯಾಮರಾ ಅಳವಡಿಕೆಗೆ ಸಾರ್ವಜನಿಕರ ಆಗ್ರಹ

January 19, 2019

ಅರಸೀಕೆರೆ: ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಕಿಸೆ ಕಳ್ಳತನ ಮತ್ತು ವಾಹನ ಕಳ್ಳತನ ಗಳು ಹೆಚ್ಚಾಗುತ್ತಿದ್ದು, ಪ್ರಕರಣ ಪತ್ತೆಹಚ್ಚಲು ನಿಲ್ದಾಣ ದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಪೊಲೀಸ್ ಚೌಕಿ ಸ್ಥಾಪಿಸಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ನಗರದ ಕೇಂದ್ರ ಭಾಗದಲ್ಲಿರುವ ಈ ಬಸ್ ನಿಲ್ದಾಣವು ರೈಲ್ವೆ ನಿಲ್ದಾಣ ಸೇರಿದಂತೆ ವಿವಿಧ ಪ್ರದೇಶಗಳಿಗೆ ಬಹಳಷ್ಟು ಹತ್ತಿರವಾಗಿದ್ದು ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಈ ನಿಲ್ದಾಣಕ್ಕೆ ಬಂದು ಹೋಗುತ್ತಿದ್ದಾರೆ.ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಈ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ಕಿಸೆಗಳ್ಳತನ ಮತ್ತು ವಾಹನಗಳ ಕಳ್ಳತನ ಹೆಚ್ಚಾಗುತ್ತಿದ್ದು, ಪ್ರಯಾಣಿಕರು ತಾವು ಪ್ರಯಾಣಿ ಸುವ ಊರುಗಳಿಗೆ ಬಸ್ ಹತ್ತುವ ಆತುರದಲ್ಲಿ ಕಿಸೆಗಳ್ಳತನಗಳ ಬಗ್ಗೆ ಹೆಚ್ಚಾಗಿ ಗಮನ ಹರಿಸುವುದಿಲ್ಲ ಹಾಗೂ ಈ ಬಸ್ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿ ನೇಮಕ ಇಲ್ಲದಿರುವುದರಿಂದ ಪದೇ ಪದೇ ಪಿಕ್ ಪ್ಯಾಕೆಟ್‍ಗಳು ನಡೆಯುತ್ತಿದೆ.

ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಪೊಲೀಸ್ ಇಲಾಖೆ ಪತ್ರ ರವಾನಿಸಿ ನಿಲ್ದಾಣದಲ್ಲಿ ಆಯಾ ಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ದಲ್ಲಿ ಪ್ರಕರಣಗಳ ಪತ್ತೆ ಹೆಚ್ಚುವಲ್ಲಿ ಸಹಕಾರಿಯಾಗು ತ್ತದೆ ಎಂದು ಹಲವಾರು ಬಾರಿ ಮನವಿ ಮಾಡಿ ದ್ದರೂ ಯಾವುದೇ ಪರಿಣಾಮ ಬೀರಿರುವುದಿಲ್ಲ ಎಂದು ಹೇಳಲಾಗುತ್ತಿದೆ. ಈ ನಿಲ್ದಾಣದಲ್ಲಿ ನಿರಂತರ ವಾಗಿ ಸರಕಳ್ಳತನ, ಕಿಸೆಗಳ್ಳತನ, ವಾಹನಗಳ ಕಳ್ಳತನಗಳು ಮತ್ತು ಪುಂಡು ಪೋಕರಿಗಳ ಅಟ್ಟಹಾಸಗಳು ನಿರಂತರ ವಾಗಿ ನಡೆಯುತ್ತಿದ್ದರೂ ಚಿಕ್ಕಮಗಳೂರು ವಿಭಾಗೀಯ ಅಧಿಕಾರಿಗಳು ಮತ್ತು ಸ್ಥಳೀಯ ಡಿಪೋ ವ್ಯವಸ್ಥಾಪ ಕರು ಸೇರಿದಂತೆ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿ ಸುವ ಅಧಿಕಾರಿಗಳು ಸಮಸ್ಯೆ ನಮ್ಮದಲ್ಲವೆನೋ ಎಂದು ಸದಾ ನಿರ್ಲಕ್ಷ್ಯವನ್ನು ವಹಿಸುತ್ತಿದ್ದಾರೆ.

ಕೂಡಲೇ ಪೊಲೀಸ್ ಇಲಾಖೆ ಗುಡ್ ಮಾರ್ನಿಂಗ್ ಹೆಸರಿನಲ್ಲಿ ಮಾಡುತ್ತಿರುವ ಬೀಟ್ ಸೇವೆಯನ್ನು ಚುರುಕುಗೊಳಿಸುವುದರೊಂದಿಗೆ, ಈ ನಿಲ್ದಾಣದಲ್ಲಿ ಪ್ರಯಾಣಿಕರ ರಕ್ಷಣೆ ಬಗ್ಗೆ ಸಿಸಿ ಕ್ಯಾಮೆರಾಗಳನ್ನು ಆಳವಡಿಸಿ ನಿಲ್ದಾಣದಲ್ಲಿ ಆಗುತ್ತಿರುವ ವಿವಿಧ ಕಳ್ಳತನಗಳನ್ನು ನಿಯಂತ್ರಣ ಮಾಡಬೇಕೆಂದು ಪ್ರಯಾಣಿಕರ ಒತ್ತಾಯವಾಗಿದೆ.

Translate »