ರೈಲ್ವೆ ನಿಲ್ದಾಣದಲ್ಲಿ ಮತದಾನ, ಪರಿಸರ ಜಾಗೃತಿ
ಹಾಸನ

ರೈಲ್ವೆ ನಿಲ್ದಾಣದಲ್ಲಿ ಮತದಾನ, ಪರಿಸರ ಜಾಗೃತಿ

January 19, 2019

ಅರಸೀಕೆರೆ: ಮತದಾನದ ಮಹತ್ವ, ಜೀವ ಜಲದ ಸಂರಕ್ಷಣೆ, ಪರಿಸರ ಸ್ವಚ್ಛತೆ ಮತ್ತು ಅರಣ್ಯ ನಾಶದಿಂದಾ ಗುತ್ತಿರುವ ವಿನಾಶಗಳ ಮಾಹಿತಿಯೊಂದಿಗೆ ಚಿತ್ರದುರ್ಗ ಜಿಲ್ಲೆಯ ಸ್ಕೌಟ್ಸ್ ಅಂಡ್ ಗೈಡ್ಸ್‍ನ ಏಕಲವ್ಯ ಓಪನ್ ಟ್ರೂಪ್‍ನ ಸದಸ್ಯರ ತಂಡವು ನಗರಕ್ಕೆ ಆಗಮಿಸಿ ರೈಲ್ವೆ ನಿಲ್ದಾಣ ದಲ್ಲಿ ಜಾಗೃತಿ ಮೂಡಿಸಿತು.

ಹಾಸನ ಜಿಲ್ಲಾ ಪ್ರವಾಸ ಕೈಗೊಂಡಿ ರುವ ತಂಡವು ನಗರದ ರೈಲ್ವೆ ನಿಲ್ದಾಣ ಆವರಣದ ಸ್ವಚ್ಛ ಮಾಡುವ ಮೂಲಕ ಪರಿಸರ ಸ್ವಚ್ಛತೆ ಕುರಿತು ಸಾರ್ವಜನಿಕರು ಹಾಗೂ ಪ್ರಯಾಣಿಕರ ಗಮನ ಸೆಳೆದರು. ಮತದಾನ ಪ್ರಾಮುಖ್ಯತೆ, ಜಲಸಂರಕ್ಷಣೆ, ಪರಿಸರ, ಅರಣ್ಯ ಸಂಪತ್ತು ನಾಶ ಈ ಕುರಿತು ಮನುಷ್ಯನ ಮೇಲೆ ಬೀರುವ ಪರಿಣಾಮಗಳನ್ನು ಬಿಂಬಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಹಿರಿಯ ಕ್ರೀಡಾಪಟು ಹೆಚ್.ಟಿ.ಮಹದೇವ್ ಮಾತ ನಾಡಿ, ಮನುಷ್ಯ ತನ್ನ ಕುಟುಂಬದ ರಕ್ಷಣೆಗೆ ಎಷ್ಟು ಮಹತ್ವ ನೀಡುತ್ತಾನೋ ಅಷ್ಟೇ ಮಹತ್ವವನ್ನು ತನ್ನ ಪರಿಸರದ ಸಂರಕ್ಷಣೆಗೆ ಹಾಗೂ ಪ್ರಕೃತಿ ವರದಾನ ವಾಗಿ ನೀಡಿರುವ ಸಂಪತ್ತುಗಳ ರಕ್ಷಣೆಗೂ ಮಹತ್ವ ನೀಡಿದಾಗ ಮಾತ್ರ ಭೂಮಿಯ ಮೇಲೆ ಇನ್ನೂ ಸಾವಿರಾರು ವರ್ಷ ಮನುಷ್ಯ ನೆಮ್ಮದಿಯಿಂದ ಬದುಕಲು ಸಾಧ್ಯವಾಗು ತ್ತದೆ. ಇದನ್ನು ಮರೆತರೆ ಇನ್ನು ಹತ್ತಾರು ವರ್ಷಗಳಲ್ಲೇ ಪ್ರಕೃತಿ ಮನುಷ್ಯನಿಗೆ ಪಾಠ ಕಲಿಸುವುದರಲ್ಲಿ ಸಂದೇಹವಿಲ್ಲ. ಪ್ರಕೃತಿಯ ವಿರುದ್ಧವಾಗಿ ಸವಾರಿ ಮಾಡುತ್ತಿರುವ ನಾವುಗಳು ಎಚ್ಚೆತ್ತು ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರ ಉಳಿಸಬೇಕಾದ್ದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಜನಜಾಗೃತಿ ಅಭಿಯಾನದಲ್ಲಿ ಪಾಲ್ಗೊಂ ಡಿರುವ ಸ್ಕೌಟ್ಸ್ ಅಂಡ್ ಗೈಡ್ಸ್‍ನ ಪುನೀತ್ ಮತ್ತು ಮನು ಮಾತನಾಡಿ, ಸಮಾಜ ನಮಗೇನು ನೀಡಿದೆ ಎಂಬುದನ್ನು ಬಿಟ್ಟು ನಾವು ಸಮಾಜಕ್ಕೆ ಏನು ನೀಡಿz್ದÉೀವೆ ಎಂಬುದು ಮುಖ್ಯವಾಗುತ್ತದೆ. ಭೂಮಿಯ ಮೇಲೆ ನೆಮ್ಮದಿಯಿಂದ ಬದುಕಲು ಪ್ರಕೃತಿ ಎಲ್ಲವನ್ನು ನೀಡಿದೆ. ಆದರೆ ಪ್ರಕೃತಿ ನೀಡಿ ರುವುದೆಲ್ಲಾ ನನ್ನೊಬ್ಬನಿಗೆ ಎಂಬ ಭ್ರಮೆ ಯಲ್ಲಿ ಮುಳುಗಿರುವ ಮನುಷ್ಯ ಅಗತ್ಯ ಕ್ಕಿಂತ ಹೆಚ್ಚಾಗಿ ಅರಣ್ಯ ನಾಶ, ಜೀವ-ಜಲದ ವ್ಯಯ ಮಾಡುತ್ತಾ ಪರಿಸರದ ಸ್ವಚ್ಛತೆಗೆ ತಾತ್ಸಾರದ ಮನೋಭಾವ ಹೊಂದಿದ್ದಾನೆ. ದೇಶದ ಜವಾಬ್ದಾರಿಯುತ ನಾಗರಿಕರಾದ ನಾವುಗಳು ಕನಿಷ್ಟ ಮತದಾನದ ಮಹತ್ವ ವನ್ನು ಅರಿಯದೆ ಇರುವುದು ನಾಗರಿಕ ಸಮಾಜದ ಬೆಳವಣಿಗೆಗೆ ಕಳಂಕವಾಗಿದೆ. ಜಾಗೃತಿ ಮೂಡಿಸುವ ಈ ನಿಟ್ಟಿನಲ್ಲಿ ನಮ್ಮ ತಂಡ ಹಾಸನ ಜಿಲ್ಲೆಯಲ್ಲಿ ಪ್ರವಾಸ ಕೈಗೊಂ ಡಿದ್ದು, ನಮಗೆ ಸಹಕಾರ ನೀಡುತ್ತಿರುವ ಸಂಘ-ಸಂಸ್ಥೆಗೆ ಹಾಗೂ ಜನಪ್ರತಿನಿಧಿ ಗಳಿಗೆ ಅಭಿನಂದಿಸುವುದಾಗಿ ಹೇಳಿದರು.

ಜಾಗೃತಿ ಅಭಿಯಾನ ತಂಡಕ್ಕೆ ಸ್ಥಳೀಯ ಸ್ಕೌಟ್ಸ್ ಅಂಡ್ ಗೈಡ್ಸ್, ರೋಟರಿ ಸಂಸ್ಥೆ ಸೇರಿದಂತೆ ಕೆಲ ಸಂಘ-ಸಂಸ್ಥೆಗಳು ಸಹ ಕಾರವನ್ನು ನೀಡಿದವು. ಈ ಸಂದರ್ಭದಲ್ಲಿ ತಾಲೂಕು ರೋಟರಿ ಸಂಸ್ಥೆಯ ಅಧ್ಯಕ್ಷ ಸುರೇಶ್, ಮಾಜಿ ಅಧ್ಯಕ್ಷ ಬಿ.ಕೆ. ಯೋಗೀ ಶಾಚಾರ್, ಕಾರ್ಯದರ್ಶಿ ನವೀನ್, ತಾಲೂಕು ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

Translate »