ಅರಸೀಕೆರೆಯಲ್ಲಿ ಬಾಲಗಂಗಾಧರನಾಥ ಶ್ರೀಗಳ ಜಯಂತ್ಯೋತ್ಸವ
ಹಾಸನ

ಅರಸೀಕೆರೆಯಲ್ಲಿ ಬಾಲಗಂಗಾಧರನಾಥ ಶ್ರೀಗಳ ಜಯಂತ್ಯೋತ್ಸವ

January 19, 2019

ಅರಸೀಕೆರೆ: ಡಾ.ಬಾಲಗಂಗಾಧರ ನಾಥ ಸ್ವಾಮೀಜಿಯವರ 74ನೇ ವರ್ಷದ ಜಯಂತ್ಯೋತ್ಸವವನ್ನು ತಾಲೂಕು ಭಕ್ತವೃಂದ, ಒಕ್ಕಲಿಗರ ಸಂಘ, ಆದಿಚುಂಚನಗಿರಿ ಶಾಲಾ ಮತ್ತು ಕಾಲೇಜು ಆಡಳಿತ ಮಂಡಳಿ ಹಾಗೂ ಭೈರವ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಶ್ರದ್ಧಾ ಭಕ್ತಿಯಿಂದ ನಗರದಲ್ಲಿ ಶುಕ್ರವಾರ ಆಚರಿಸಲಾಯಿತು.

ನಗರದ ಪ್ರವಾಸಿ ಮಂದಿರದ ಆವರಣದಿಂದ ಆಯೋಜಿಸಿದ್ದ ಬಾಲಗಂಗಾಧರನಾಥ ಶ್ರೀಗಳ ಅಲಂಕಾರಿತ ಪ್ರತಿಮೆಯ ಉತ್ಸವಕ್ಕೆ ಹಾಸನ ಆದಿ ಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ ಹಾಗೂ ಆದಿಹಳ್ಳಿ ಆದಿ ಚುಂಚನಗಿರಿ ಶಾಖಾ ಮಠದ ಶಿವಪುತ್ರನಾಥ ಸ್ವಾಮೀಜಿ ಪುಷ್ಪಾ ರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಉತ್ಸವದಲ್ಲಿ ಜ್ಯೋತಿ ಹಿಡಿದು ಪಾಲ್ಗೊಂಡ ಆದಿಚುಂಚನಗಿರಿ ಶಾಲಾ ಕಾಲೇಜಿನ ವಿದ್ಯಾರ್ಥಿ ಗಳು ಗಮನ ಸೆಳೆದರೆ ವಿದ್ಯಾರ್ಥಿನಿಯರು ಪೂರ್ಣ ಕುಂಭದೊಂದಿಗೆ ಉತ್ಸವದಲ್ಲಿ ಸಾಗಿದ್ದು ಉತ್ಸವದ ಕಳೆಯನ್ನು ಇಮ್ಮಡಿಗೊಳಿಸಿತು. ಇದರ ಜೊತೆಗೆ ಮಂಗಳವಾದ್ಯ ಸಮೇತ ಗಾರುಡಿ ಗೊಂಬೆ ಮತ್ತಿತರ ಜಾನಪದ ಕಲಾ ತಂಡಗಳ ಕಲಾವಿದರು ನೀಡಿದ ಕಲಾ ಪ್ರದರ್ಶನ ನೋಡು ಗರ ಗಮನ ಸೆಳೆಯಿತು. ಉತ್ಸವವು ಪ್ರವಾಸಿ ಮಂದಿರದಿಂದ ಹೊರಟು ರಾಷ್ಟ್ರೀಯ ಹೆದ್ದಾರಿ 206 ಬಿ.ಹೆಚ್.ರಸ್ತೆ ಮಾರ್ಗವಾಗಿ ಶ್ರೀನಿವಾಸ ನಗರ ಬಡಾವಣೆಯಲ್ಲಿರುವ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜು ಆವರಣ ತಲುಪಿತು.

ನಂತರ ಕಾಲೇಜು ಆವರಣದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆದಿಚುಂಚನಗಿರಿ ಹಾಸನ ಸಂಸ್ಥಾನ ಮಠದ ಶಂಭುನಾಥ ಸ್ವಾಮೀಜಿ ಮಾತನಾಡಿ, ಈ ನಾಡು ಕಂಡ ಋಷಿಮುನಿಗಳ ಪರಂಪರೆಯಲ್ಲಿ ಪರಮ ಪೂಜ್ಯ ಯುಗಯೋಗಿ ಬಾಲಗಂಗಾಧರನಾಥ ಶ್ರೀಗಳು ತಮ್ಮದೇ ಆದ ವಿಶಿಷ್ಟ ಸಂಕಲ್ಪದೊಂದಿಗೆ ಸಮಾಜಕ್ಕೆ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದರೊಂದಿಗೆ ಆರೋಗ್ಯ, ಪರಿಸರ, ಧಾರ್ಮಿಕ ಹಾಗೂ ಸಾಮಾ ಜಿಕ ಕ್ಷೇತ್ರಗಳಿಗೆ ಹೆಚ್ಚಿನ ಮಹತ್ವದೊಂದಿಗೆ ಕೊಡುಗೆಯನ್ನು ನೀಡಿದ್ದಾರೆ. ಸ್ವಾಮೀಜಿಯವರ ಕಾರ್ಯಗಳು ಸೂರ್ಯ ಚಂದ್ರನಿರುವವರೆಗೂ ಶಾಶ್ವತವಾಗಿದ್ದು, ಚುಂಚನಗಿರಿ ಶ್ರೀಗಳನ್ನು ಯುಗ ಪುರುಷರೆಂದು ಒಕ್ಕಲಿಗ ಸಮಾಜ ಮಾತ್ರವಲ್ಲ ಪ್ರತಿಯೊಂದು ಸಮಾಜವು ಕರೆಯುವ ಮೂಲಕ ಗೌರವ ಸಮರ್ಪಿಸಿರುವುದು ಇತಿಹಾಸದ ಪುಟ ವನ್ನು ಸೇರಿದೆ. ಈ ಇತಿಹಾಸವೇ ಮುಂದಿನ ಯುವ ಪೀಳಿಗೆಗೆ ದಾರಿ ದೀಪವಾಗಲಿದೆ. ಸ್ವಾಮೀಜಿಯವರ ಆಪ್ತರು ಮತ್ತು ಮಾರ್ಗದರ್ಶ ಕರೂ ಆಗಿ ನಡೆದಾಡುವ ದೇವರೆಂದೇ ಭಕ್ತರ ಬಾಯಲ್ಲಿ ನಲಿದಾಡುತ್ತಿರುವ ಸಿದ್ದಗಂಗಾ ಶ್ರೀಗಳು ಅನಾರೋಗ್ಯಕ್ಕೆ ತುತ್ತಾಗಿದ್ದು, ಅವರ ಆರೋಗ್ಯ ಚೇತರಿಕೆ ಕಾಣಲಿ, ಅವರ ಮಾರ್ಗದರ್ಶನ ಸಮಾಜಕ್ಕೆ ಇನ್ನಷ್ಟು ವರ್ಷಗಳ ಕಾಲ ದೊರೆ ಯುವಂತಾಗಲಿ ಎಂದು ನಾವೆಲ್ಲಾ ಭಗವಂತ ನನ್ನು ಪ್ರಾರ್ಥಿಸೋಣ ಎಂದು ಹೇಳಿದರು.

ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳು ಒಂದು ದೊಡ್ಡ ಆಲದ ಮರವಿದ್ದಂತೆ. ಅವರ ನೆರವಿನಿಂದ ನೂರಾರು ಸಣ್ಣಪುಟ್ಟ ಸಮಾಜದ ಮಠ ಮಂದಿರ ಗಳು ನಿರ್ಮಾಣಗೊಳ್ಳಲು ಸಾಧ್ಯವಾಯಿತಲ್ಲದೇ, ಧಾರ್ಮಿಕ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕ್ಷೇತ್ರ ಗಳ ರಾಯಭಾರಿಯಂತೆ ಸೇವಾ ಕಾರ್ಯ ಮಾಡಿ ಯುಗ ಪುರುಷರಾಗಿದ್ದಾರೆ ಎಂದರು.

ವೇದಿಕೆಯಲ್ಲಿ ಆದಿಹಳ್ಳಿ ಶಾಖಾ ಮಠದ ಶಿವಪುತ್ರನಾಥ ಸ್ವಾಮೀಜಿ, ಸಂಸ್ಕøತ ವಿದ್ವಾನ್ ರಾಮಚಂದ್ರ ಮೇತ್ರಿ, ಗುರುನಾಥ ಮಹಾರಾಜ ಸ್ವಾಮೀಜಿ, ಮತ್ತಿತರರು ಉಪಸ್ಥಿತರಿದ್ದರು. ಉತ್ಸವ ದಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆರ್.ಅನಂತ್‍ಕುಮಾರ್, ನಗರಾಧ್ಯಕ್ಷ ಎ.ಎಸ್. ರಂಗರಾಜು ಪೀಠಾಭಿಮಾನಿಗಳಾದ ಜಿಪಂ ಮಾಜಿ ಅಧ್ಯಕ್ಷೆ ಜ್ಯೋತಿ ಗಂಗಾಧರ್, ನಗರಸಭೆ ಪೌರಾಯುಕ್ತ ಪರಮೇಶ್ವರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಬಿಜೆಪಿ ನಗರಾಧ್ಯಕ್ಷ ಜಿ.ಎನ್.ಮನೋಜ್‍ಕುಮಾರ್, ಗೀಜಿಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಧರ್ಮೇಶ್, ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಜಗದೀಶ್, ಜಿಲ್ಲಾ ಕರವೇ ಉಪಾಧ್ಯಕ್ಷ ತುಳಸಿ, ತಾಲೂಕು ಅಧ್ಯಕ್ಷ ಹೇಮಂತ್ ಕುಮಾರ್, ನಗರಾಧ್ಯಕ್ಷ ಕಿರಣ್ ಕುಮಾರ್, ನಗರಸಭೆ ಸದಸ್ಯರಾದ ಜಿ.ಟಿ. ಗಣೇಶ್, ಮೇಲಗಿರಿಯಪ್ಪ, ಸುಜಾತ ರಮೇಶ್, ಕಾಂಗ್ರೆಸ್ ಮುಖಂಡ ಬಿ.ಈ.ನಿರಂಜನ್, ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಲಿಂಗರಾಜು, ಮುಖ್ಯ ಶಿಕ್ಷಕಿ ಜ್ಞಾನೇಶ್ವರಿ ಸೇರಿದಂತೆ ನಾನಾ ರಾಜ ಕೀಯ ಪಕ್ಷಗಳ ಮುಖಂಡರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Translate »