ಖ್ಯಾತ ಸಂಗೀತಗಾರ ಡಾ.ರಾ.ಸತ್ಯನಾರಾಯಣರಿಗೆ ‘ಕಲಾ ಶಾಸ್ತ್ರೋತ್ತುಂಗ’ ಪ್ರಶಸ್ತಿ ಪ್ರದಾನ
ಮೈಸೂರು

ಖ್ಯಾತ ಸಂಗೀತಗಾರ ಡಾ.ರಾ.ಸತ್ಯನಾರಾಯಣರಿಗೆ ‘ಕಲಾ ಶಾಸ್ತ್ರೋತ್ತುಂಗ’ ಪ್ರಶಸ್ತಿ ಪ್ರದಾನ

January 19, 2019

ಮೈಸೂರು: ಮೈಸೂರಿನ ಜಗನ್ಮೋಹನ ಅರ ಮನೆಯಲ್ಲಿ ಕಲಾಸಂದೇಶ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ‘ಕಲಾಭಿವರ್ಧನ-2019’ ಸಂಗೀತ ಕಾರ್ಯಕ್ರಮದಲ್ಲಿ ಪ್ರಖ್ಯಾತ ಸಂಗೀತ ಹಾಗೂ ನೃತ್ಯ ಶಾಸ್ತ್ರಜ್ಞ ಪದ್ಮಶ್ರೀ ಪುರಸ್ಕøತ ಡಾ.ರಾ.ಸತ್ಯನಾರಾ ಯಣ ಅವರಿಗೆ ‘ಕಲಾ ಶಾಸ್ತ್ರೋತ್ತುಂಗ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವಾರಾಣಾಸಿಯ ಇಂದಿರಾಗಾಂಧಿ ರಾಷ್ಟ್ರೀಯ ಸಾಂಸ್ಕøತಿಕ ಸಂಸ್ಥೆ ನಿರ್ದೇಶಕ ಡಾ.ವಿಜಯ ಶಂಕರ್ ಶುಕ್ಲ ಮಾತನಾಡಿ, ಕಳೆದ 21 ವರ್ಷಗಳಿಂದ ಡಾ.ರಾ.ಸತ್ಯನಾರಾಯಣ ಅವರ ಶಿಷ್ಯನಾಗಿದ್ದೇನೆ. ಇಡೀ ಭಾರತವನ್ನೆ ಸುತ್ತಿದ್ದೇನೆ. ಆದರೆ, ಭರತನಾಟ್ಯ ಶಾಸ್ತ್ರವನ್ನು ಬರೆದ ಭರತ, ದತ್ತಿಲಾ ಹಾಗೂ ಪಂಡರೀಕಾ ವಿಠಲರ ಅಭಿಪ್ರಾಯವನ್ನು ಸರಿಯಾಗಿ ಹೇಳುವಂತಹ ವ್ಯಕ್ತಿ ದೇಶದಲ್ಲಿ ಇವ ರೊಬ್ಬರೇ ಎಂದು ಗುಣಗಾನ ಮಾಡಿದರು.

ಶ್ರೀ ವಿದ್ಯೆಯಲ್ಲಿ ಅತ್ಯುನ್ನತಿ ಪಡೆದು, ಸಾವಿರಾರು ಶಿಷ್ಯರನ್ನು ಹೊಂದಿ ರುವ ಡಾ.ರಾ.ಸತ್ಯನಾರಾಯಣ ಅವರಂತೆ ಈ ದೇಶದಲ್ಲಿ ಮತ್ತೊಬ್ಬರಿಲ್ಲ. ಇಂತಹವರಿಗೆ ಪ್ರಶಸ್ತಿ ಪ್ರಧಾನ ನೀಡುವ ವೇಳೆ ಹಲವಾರು ವಿದ್ವಾಂಸ ರೊಂದಿಗೆ ಭಾಗವಹಿಸಿರುವುದೇ ನನ್ನ ಸೌಭಾಗ್ಯ. ಅವರು, ನಮಗೆ ಮಾರ್ಗ ದರ್ಶಕರಾಗಿ ಇನ್ನೂ ಹಲವಾರು ಗ್ರಂಥಗಳನ್ನು ರಚನೆ ಮಾಡಬೇಕು. ಆದ್ದರಿಂದ ನಮ್ಮೊಡನೆ ದೀರ್ಘಕಾಲ ಅವರಿರಲಿ ಎಂದು ಹಾರೈಸಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತ ನಾಡಿ, ಕಲಾಸಂದೇಶ ಪ್ರತಿಷ್ಠಾನದ ಅರ್ಥಪೂರ್ಣ ಪ್ರಾರಂಭವಾಗಿದೆ. ನಾಡಿನ ಹೆಸರಾಂತ ವಿದ್ವಾಂಸ ಡಾ.ರಾ.ಸತ್ಯನಾರಾಯಣ ಅವರು, ತಮ್ಮ ಇಡೀ ಬದುಕನ್ನು ಭಾರತೀಯ ಶಾಸ್ತ್ರ ಪರಂಪರೆಗೆ ಮಿಸಲಿಟ್ಟಿದ್ದರು. ಇಂದು ಅವರನ್ನು ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಅವರ ಅಪೂರ್ವ ಸಾಧನೆಯನ್ನು ಸಹೃದಯರು ಓದಿ ಅರ್ಥ ಮಾಡಿಕೊಳ್ಳುವುದು ಕಷ್ಟ. ಸರಳ, ಸಜ್ಜನಿಕೆಯ ಪ್ರತೀಕವಾಗಿರುವ ಡಾ.ರಾ.ಸತ್ಯನಾರಾಯಣ ಎಲ್ಲರಿಗೂ ಮಾದರಿಯಾಗಿದ್ದಾರೆ. ರಾಷ್ಟ್ರಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆದರೆ, ಅವರ ಸಾಧನೆ ಪ್ರಶಸ್ತಿಗಳಿಗೂ ಮೀರಿದೆ. ಅವರು, ಬಯಸದೆ ಇಷ್ಟೊಂದು ಪ್ರಶಸ್ತಿಗಳು ಬಂದಿವೆ ಎಂದು ಪ್ರಶಂಸಿಸಿದರು.

ಮನುಷ್ಯನಿಗೆ ಕಲೆ, ಸಾಹಿತ್ಯ ಅತ್ಯಂತ ಅಗತ್ಯವಾಗಿದ್ದು, ಮನಸ್ಸಿನ ದುಃಖ-ದುಮ್ಮಾನಗಳನ್ನು ಮರೆಸಲು ಸಂಗೀತ ಸಹಕಾರಿಯಾಗಿದೆ. ಮನುಷ್ಯ ದಿನನಿತ್ಯ ತನ್ನ ದುಃಖಗಳನ್ನು ಮರೆತು ಸಂತೋಷವನ್ನು ಪಡೆದು ಕೊಳ್ಳಬೇಕು. ಭಾರತೀಯ ಕಲೆ, ಸಂಸ್ಕøತಿ ಬೇರೆ ಎಲ್ಲಾ ದೇಶಗಳಿಗಿಂತ ವಿಭಿನ್ನ ಹಾಗೂ ವಿಶೇಷವಾಗಿದೆ. ವಿದೇಶಿ ಸಂಸ್ಕøತಿ ಮನರಂಜನೆಗೆ ಮಾತ್ರ. ಆದರೆ, ಈ ದೇಶದ ಸಂಸ್ಕøತಿ ಆತ್ಮ ಸಂತೃಪ್ತಿಯನ್ನು ನೀಡುತ್ತದೆ ಎಂದರು.

ನಂತರ ಭರತನಾಟ್ಯ ವಿದ್ವಾಂಸೆ ಡಾ.ವಸುಂಧರಾ ದೊರೆಸ್ವಾಮಿ ಅಮೋಘ ಭರತನಾಟ್ಯ ಪ್ರದರ್ಶನ ನೀಡಿದರೆ, ಕರ್ನಾಟಕ ಸಂಗೀತ ವಿದ್ವಾಂಸ ಡಾ.ರಾ.ಸ.ನಂದಕುಮಾರ್ ತಮ್ಮ ಗಾಯನದಿಂದ ಎಲ್ಲರನ್ನು ರಂಜಿಸಿದರು. ಪಿಟೀಲು ವಿದ್ವಾಂಸರಾದÀ ಹೆಚ್.ಕೆ.ನರ ಸಿಂಹಮೂರ್ತಿ, ಎ.ಪಿ.ಶ್ರೀನಿ ವಾಸ್, ಭರತ ನಾಟ್ಯ ವಿದ್ವಾಂಸರಾದ ಡಾ.ಶೀಲಾ ಶ್ರೀಧರ್, ರಾಮ ಮೂರ್ತಿ ರಾವ್, ಡಾ.ಕೃಪಾ ಫಡ್ಕೆ, ಡಾ.ರಾಧಿಕಾ ನಂದಕುಮಾರ್, ಕೊಳಲು ವಿದ್ವಾಂಸ ಕೆ.ಪಿ.ಉಪಾ ಧ್ಯಾಯ, ಮೃದಂಗ ವಿದ್ವಾಂಸ ಜೆ.ಎಸ್.ರಾಮಾನುಜಂ, ಸಂಗೀತ ಶಾಸ್ತ್ರಜ್ಞೆ ರೋಹಿಣಿ ಸುಬ್ಬರತ್ನಂ, ವೀಣಾ ವಿದ್ವಾಂಸ ಆರ್.ಕೆ.ಪದ್ಮನಾಭ, ಕರ್ನಾಟಕ ಸಂಗೀತ ವಿದ್ವಾಂಸೆ ರಾಜಲಕ್ಷ್ಮಿ ಶ್ರೀಧರ್, ಕಲಾ ಸಂದೇಶ ಪ್ರತಿಷ್ಠಾನದ ಸಂಸ್ಥಾಪಕ ಕೆ.ಸಂದೇಶ್ ಭಾರ್ಗವ್ ಉಪಸ್ಥಿತರಿದ್ದರು.

Translate »