ಡಾ.ಎಸ್.ಎಲ್.ಭೈರಪ್ಪರ ಜನಪ್ರಿಯತೆ ಸಹಿಸದೇ ವಿಚ್ಛಿದ್ರಕಾರಕ ಶಕ್ತಿಗಳು `ಆವರಣ’ ವಿರೋಧಿಸಿದವು
ಮೈಸೂರು

ಡಾ.ಎಸ್.ಎಲ್.ಭೈರಪ್ಪರ ಜನಪ್ರಿಯತೆ ಸಹಿಸದೇ ವಿಚ್ಛಿದ್ರಕಾರಕ ಶಕ್ತಿಗಳು `ಆವರಣ’ ವಿರೋಧಿಸಿದವು

January 19, 2019

ಮೈಸೂರು: ಡಾ.ಎಸ್.ಎಲ್. ಭೈರಪ್ಪನವರ ಜನಪ್ರಿಯತೆ ಸಹಿಸದೇ ಅವರ `ಆವರಣ’ ಕಾದಂಬರಿ ಬಗ್ಗೆ ವಿಚ್ಛಿದ್ರಶಕ್ತಿ ಗಳು ಕರ್ನಾಟಕದಲ್ಲಿ ವಿರೋಧ ವ್ಯಕ್ತಪಡಿ ಸಿದವು. ಅಲ್ಲದೆ, ಕರ್ನಾಟಕದ ಬುದ್ಧಿಜೀವಿ ಗಳು ಇಲ್ಲಿಯವರೆಗೆ ಮಲೆಯಾಳಂ ಭಾಷೆಗೆ ಭೈರಪ್ಪ ಅವರ ಸಾಹಿತ್ಯ ಅನುವಾದ ಆಗ ದಂತೆ ನೋಡಿಕೊಂಡಿದ್ದರು ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ ಆದ ಭಾಷಾ ತಜ್ಞ ಡಾ.ಪ್ರಧಾನ ಗುರುದತ್ ವಿಷಾದ ವ್ಯಕ್ತಪಡಿಸಿದರು.

ಮೈಸೂರಿನ ಕಲಾಮಂದಿದಲ್ಲಿ ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿರುವ ಎರಡು ದಿನಗಳ ಡಾ.ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಡಾ.ಎಸ್. ಎಲ್.ಭೈರಪ್ಪ ಅವರೊಂದಿಗಿನ ಸಂದರ್ಶದ ಕೃತಿ `ಚಿಂತನ-ಮಂಥನ’ ಬಿಡುಗಡೆ ಗೊಳಿಸಿ ಅವರು ಮಾತನಾಡಿದರು.

`ಆವರಣ’ ಕಾದಂಬರಿಯು ಭೈರಪ್ಪರ ಅಧ್ಯಯನ ಆಳದ ಬಗ್ಗೆ ಓದುಗನಿಗೆ ಅರಿ ವಾಗುವಂತೆ ಮಾಡುತ್ತದೆ. ಈ ಕೃತಿ ಬಹಿ ಷ್ಕøತಗೊಳ್ಳಬಹುದು ಎಂಬ ಕಾರಣಕ್ಕೆ 132 ಗ್ರಂಥಗಳ ಗ್ರಂಥಸೂಚಿಗಳನ್ನು ಕೃತಿಯಲ್ಲಿ ಭೈರಪ್ಪ ಉಲ್ಲೇಖಿಸಿದ್ದರು. ಅಷ್ಟೂ ಪುಸ್ತಕ ಗಳನ್ನು ಅವರು ಅಧ್ಯಯನ ಮಾಡಿದ್ದರು. ಈ ಕೃತಿಯು ದೇಶದ ಬೇರೆ ಬೇರೆ ಭಾಷೆಗಳಿಗೆ ಭಾಷಾಂತರಗೊಂಡಿತು. ದೇಶದ ಎಲ್ಲಿಯೂ ಕೃತಿ ಬಗ್ಗೆ ವಿರೋಧ ವ್ಯಕ್ತವಾಗಲಿಲ್ಲ. ಆದರೆ ಕರ್ನಾಟಕದ ವಿಚ್ಛಿದ್ರಶಕ್ತಿಗಳು ಮಾತ್ರ ಭೈರಪ್ಪರ ಜನಪ್ರಿಯತೆ ಸಹಿಸದೇ ವಿರೋಧ ವ್ಯಕ್ತಪಡಿಸಿದವು ಎಂದು ಕಿಡಿಕಾರಿದರು.

ಹಿಂದಿನಿಂದಲೂ ಭಾರತದ ಎಲ್ಲಾ ಭಾಷೆಗ ಳಿಗೆ ಭೈರಪ್ಪರ ಸಾಹಿತ್ಯ ಭಾಷಾಂತರ ಗೊಳ್ಳುತ್ತಿದ್ದರೂ ಮಲೆಯಾಳಂ ಭಾಷೆಯಲ್ಲಿ ಮಾತ್ರ ಅಸ್ಪøಶ್ಯವಾಗಿ ಕಾಣಲಾಗಿತ್ತು. ಆದರೆ ಇತ್ತೀಚೆಗೆ ಭೈರಪ್ಪರ ಕಾದಂಬರಿಗಳು ಮಲೆ ಯಾಳಂ ಭಾಷೆಗೆ ಭಾಷಾಂತರಗೊಂಡಿವೆ. ಕೆಲ ದಿನಗಳ ಹಿಂದೆಯಷ್ಟೇ ಭೈರಪ್ಪನವರು ಮತ್ತು ನಾನು ಕೇರಳಕ್ಕೆ ಪ್ರವಾಸಕ್ಕೆ ಹೋಗಿ ದ್ದೆವು. ಈ ವೇಳೆ ಅಲ್ಲಿನ ಹಲವು ಲೇಖಕ ರನ್ನು ಭೇಟಿ ಮಾಡಿದ್ದೆವು. ಇಷ್ಟು ದಿನಗಳ ಕಾಲ ಭೈರಪ್ಪರ ಸಾಹಿತ್ಯ ಮಲೆಯಾಳಂಗೆ ಅನುವಾದಗೊಳ್ಳದೇ ಇರಲು ಕರ್ನಾಟಕದ ಬುದ್ಧಿಜೀವಿಗಳು ಕಾರಣ ಎಂಬುದನ್ನು ಅಲ್ಲಿನ ಲೇಖಕರು ಬಿಚ್ಚಿಟ್ಟರು ಎಂದು ವಿವರಿಸಿದರು.

ಕರ್ನಾಟಕದ ಬುದ್ಧಿಜೀವಿಗಳು ಅಲ್ಲಿನ ಲೇಖಕರಿಗೆ ಭೈರಪ್ಪರ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡಿದ್ದರು. ಭೈರಪ್ಪ ಬಲ ಪಂಥೀಯ ಬರಹಗಾರರು, ಹಿಂದೂತ್ವ ಪ್ರತಿಪಾದಕರು. ಹೀಗಾಗಿ ಅವರ ಕೃತಿಗ ಳನ್ನು ಅನುವಾದ ಮಾಡಬಾರದೆಂದು ಕುತಂತ್ರ ಮಾಡಿದ್ದರು. ಇದೀಗ ಭೈರಪ್ಪರ ಅನೇಕ ಸಾಹಿತ್ಯ ಕೃತಿಗಳು ಮಲೆಯಾಳಂಗೆ ಅನುವಾದಗೊಂಡಿದ್ದು, ಇದರಿಂದ ಸಾಕಷ್ಟು ಬದಲಾವಣೆಯೂ ಆಗಿದೆ ಎಂಬುದನ್ನು ಅಲ್ಲಿನ ಲೇಖಕರೇ ತಿಳಿಸಿದರು ಎಂದರು.

ಪಂಚಮುಖಿ ವ್ಯಕ್ತಿತ್ವ: ಬೈರಪ್ಪನವರ ಕುರಿತ ಚಿಂತನ-ಮಂಥನ’ ಕೃತಿಯಲ್ಲಿ ಅವರ ಪಂಚಮುಖಿ ವ್ಯಕ್ತಿತ್ವ ಅನಾವರಣಗೊಂಡಿದೆ. ಅವರ ವ್ಯಾಪಕ ಅಧ್ಯಯನಶೀಲತೆ, ಆಳವಾದ ಸಂಶೋಧನೆ, ಗಹನವಾದ ಚಿಂತನೆ, ಪೂರ್ವಾ ಗ್ರಹ ಮುಕ್ತ ವಿಶ್ಲೇಷಣೆ ಹಾಗೂ ಐತಿಹಾಸಿಕ ಆಸಕ್ತಿ ಗುಣಗಳು ಕೃತಿಯಲ್ಲಿ ಮೂಡಿವೆ. ವಿಡಿಯೋ ರೂಪದಲ್ಲಿ ತಂದಿರುವ ಸಂದರ್ಶಗಳನ್ನುಚಿಂತನ-ಮಂಥನ’ ಕೃತಿ ವಿಧದಲ್ಲೂ ಹೊರತರಲಾಗಿದೆ. ಇಲ್ಲಿ 16 ಮಂದಿ ಭೈರಪ್ಪರನ್ನು ಸಂದರ್ಶನ ಮಾಡಿದ್ದು, ಸಂದರ್ಶಕರ ಗಂಭೀರವಾದ ಪ್ರಶ್ನೆಗಳಿಗೆ ಭೈರಪ್ಪನವರು ಸುದೀರ್ಘ ಉತ್ತರವನ್ನೇ ನೀಡಿದ್ದಾರೆ. ನ್ಯಾಯಾಂಗದ ದೋಷಪೂರ್ಣ ನಡಾವಳಿ ಬಗ್ಗೆಯೂ ಭೈರಪ್ಪ ಟೀಕೆ ಮಾಡಿದ್ದಾರೆ ಎಂದು ಡಾ. ಪ್ರಧಾನ ಗುರುದತ್ ತಿಳಿಸಿದರು.

ತಮ್ಮನ್ನು ಹಿಂದೂತ್ವ ವಾದಿ ಎನ್ನುವವರಿಗೆ ಭೈರಪ್ಪ ತಕ್ಕ ಪ್ರತ್ಯುತ್ತರವನ್ನು ನೀಡಿದ್ದಾರೆ. ಅವರಲ್ಲಿರುವ ಸತ್ವದಿಂದ ಇದು ಸಾಧ್ಯವಾಗಿದೆ. ಜೊತೆಗೆ ಬ್ರಿಟಿಷರಂತೆ ನಕಾರಾತ್ಮಕ ಚಿಂತನೆ ಯಲ್ಲಿ ಆಲೋಚಿಸುವ ವಿವೇಕಕ್ಕೆ ಏನನ್ನ ಬೇಕು? ಎಂದು ಅಲಕ್ಷ್ಯ ಮಾಡಿರುವ ಭೈರಪ್ಪ, ಸಾಹಿತ್ಯ ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಯೋಜನೆಗಳು ಉತ್ತಮವಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುತ್ತಿರುವುದರ ಬಗ್ಗೆ ಹಾಗೂ ಅಯೋಧ್ಯ ವಿವಾದ ಮುಂದಕ್ಕೆ ಹೋಗುತ್ತಿರುವುದರ ಹಿನ್ನೆಲೆ ಏನು? ಎಂಬ ಬಗ್ಗೆಯೂ ಚಿಂತನ-ಮಂಥನ ಪುಸ್ತಕದಲ್ಲಿ ಉತ್ತರ ಕೊಟ್ಟಿದ್ದಾರೆ ಎಂದು ವಿವರಿಸಿದರು.

ವಿದ್ವಾಂಸ ಶತಾವಧಾನಿ ಡಾ.ಆರ್. ಗಣೇಶ್ ಮಾತನಾಡಿ, ಭೈರಪ್ಪನವರ ಸಾಹಿತ್ಯ ಪ್ರವೇಶ ಮಾಡುತ್ತಿದ್ದಂತೆ ಅವರೊಬ್ಬ ಭುವನದ ಭಾಗ್ಯ ಎಂಬುದು ವೇದ್ಯವಾಗುತ್ತದೆ. ಅವರ `ಸಾಕ್ಷಿ’ ಕಾದಂಬರಿಯಲ್ಲಿ ಸಹಾನು ಭೂತಿ ಮಹತ್ವ ಸಾರಲಾಗಿದೆ. ವಸ್ತು, ಭಾವ ಮತ್ತು ಜೀವ ನೋಡುವ ಪ್ರಜ್ಞೆ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಮನುಷ್ಯನಲ್ಲಿ ಸಾಕ್ಷಿ ಎನ್ನುವ ಪ್ರಜ್ಞೆ ಬೆಳೆಯದಿದ್ದರೆ ಯಾವುದೇ ಪ್ರಯೋಜನ ವಿಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ. ಯಂತ್ರಗಳೇ ನಮ್ಮ ಹೆಮ್ಮೆ ಎಂದುಕೊಂಡರೆ ನಮ್ಮ ಸಾಕ್ಷಿ ಪ್ರಜ್ಞೆ ನಾಶವಾಗುತ್ತದೆ ಎಂಬುದನ್ನು ಮನ ಮುಟ್ಟುವಂತೆ ಚಿತ್ರಿಸಿದ್ದಾರೆ. ಕಲೆಯನ್ನು ಆಸ್ವಾದಿ ಸುವವರಿಗೆ ಕಲೆಯ ಹಿಂದಿರುವ ಶಾಸ್ತ್ರೀಯ ಹಿನ್ನೆಲೆಯಲ್ಲಿ ಗೊತ್ತಿರಲಿ ಅಥವಾ ಗೊತ್ತಿಲ್ಲವಾಗಲಿ ಎಲ್ಲರಿಗೂ ಆ ಕಲೆ ರಸಾನುಭವ ನೀಡುತ್ತದೆ. ಅದೇ ರೀತಿ ಭೈರಪ್ಪನವರ ಸಾಹಿತ್ಯ ಓದುವ ಎಲ್ಲ ರಿಗೂ ರಸದ ಅನುಭವ ನೀಡುತ್ತದೆ ಎಂದರು.

ಭೈರಪ್ಪ ಕಾದಂಬರಿಗಳೇ ಸಂದೇಶ
ಮೈಸೂರು: ಡಾ.ಎಸ್.ಎಲ್.ಭೈರಪ್ಪ ಅವರ ಸಾಹಿತ್ಯ ಕೃಷಿಯಲ್ಲಿ ಸಾಹಿತ್ಯಾತ್ಮಕ, ಕಾಲ್ಪನಿಕ ಹಾಗೂ ಸಂಶೋಧನೆ ಆಧರಿಸಿರುವುದನ್ನು ಕಾಣಬಹುದು ಎಂದು ಪುಣೆ ಮೂಲದ ಲೇಖಕಿ ಶೆಫಾಲಿ ವೈದ್ಯ ಅಭಿಪ್ರಾಯಪಟ್ಟರು.

ಭೈರಪ್ಪ ಅವರಂತೆ ಮತ್ತೊಬ್ಬ ಸಂವಾದಕ ಕಂಡುಬರುವುದಿಲ್ಲ. ಅವರು ಸಮ ಕಾಲೀನ ಸಮಸ್ಯೆಗಳಿಗೆ ಪ್ರತಿಕ್ರಿಯೆ ನೀಡುತ್ತಾರೆ. ಅವರ ಸಾರ್ಥ’ ಮತ್ತುಆವರಣ’ ನನ್ನ ಮೆಚ್ಚಿನ ಕೃತಿಗಳು. ‘ಸಾರ್ಥ’ ಕಾದಂಬರಿ ಒಂದು ಉತ್ತಮ ಸಂದೇಶ ನೀಡುವ ಕೃತಿಯಾಗಿದೆ. ಭೌತಿಕ ಹಾಗೂ ಅಧ್ಯಾತ್ಮಿಕ ಪಯಣ ಕುರಿತಂತೆ ಹೇಳುವ ಸಾರ್ಥ’ ಆಂತರಿಕ ಹಾಗೂ ಬಾಹ್ಯ ಪ್ರಯಾಣವನ್ನೂ ಅನಾವರಣಗೊಳಿಸುತ್ತದೆ ಎಂದು ನುಡಿದರು.ಸಾರ್ಥ’ ಕಾದಂಬರಿಯಲ್ಲಿ ಬರುವ 8ನೇ ಶತಮಾನದ ನಾಗಭಟ್ಟ ಒಂದು ಕಡೆ ನೆಲೆ ನಿಲ್ಲುವುದಿಲ್ಲ. ಆತನ ಜೀವನವೇ ಒಂದು ಪ್ರಯಾಣ. ವಿವೇಚನೆಯ ಹುಡುಕಾಟ. ಹೀಗೆಯೇ ಇಂದಿಗೂ ನಾಗಭಟ್ಟನಂತೆ ವಿವೇಚನೆ ಹುಡುಕಾಡುವ ಹೊಸ ತಲೆಮಾರನ್ನು ಕಾಣಬಹುದು.
ಸಾಹಿತ್ಯ ರಸಾನುಭವ ಉಂಟು ಮಾಡಬೇಕು. ಅದನ್ನು ಸಾರ್ಥ ಮಾಡುತ್ತದೆ. ಸಾರ್ಥ ಕಾದಂಬರಿ ಓದಿದ ಮೇಲೆ ಅಂದಿನ ದಿನಗಳಲ್ಲಿ ಭಾರತ ಹೇಗಿತ್ತು ಎಂಬುದನ್ನು ನೋಡುತ್ತೇವೆ ಎಂದು ತಿಳಿಸಿದರು.

Translate »