ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷರ ದಿನಾಚರಣೆ
ಹಾಸನ

ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷರ ದಿನಾಚರಣೆ

January 19, 2019

ಹಾಸನ: ನಗರದ ಬಿ.ಎಂ.ರಸ್ತೆ, ಹುಡಾ ಕಚೇರಿ ಎದುರು ಕುವೆಂಪುನಗರದಲ್ಲಿರುವ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿ ಕೊಳ್ಳಲಾಗಿದ್ದ ಸಂಸ್ಥೆ ಮಾಜಿ ಅಧ್ಯಕ್ಷರ ಮಾಸಾಚರಣೆಯಲ್ಲಿ ಮಾಜಿ ಅಧ್ಯಕ್ಷರುಗಳನ್ನು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸುವ ಮೂಲಕ ಗೌರವ ಸಮರ್ಪಣೆಯನ್ನು ಮಾಡಿದರು.

ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷರ ಮಾಸಾಚರಣೆಯಲ್ಲಿ ಬಿ.ವಿ. ಹೆಗಡೆ, ಎಸ್.ಕೆ.ಸತ್ಯನಾರಾಯಣ್, ಡಾ.ಜಯಣ್ಣ, ಡಾ.ಗಂಗಾಧರ್, ಕೆ.ಆರ್.ಮಲ್ಲೇಶಗೌಡ, ಹೆಚ್.ಆರ್.ಪ್ರಕಾಶ್, ಸಂಜೀವ್‍ಹೆಗ್ಡೆ, ಅಣ್ಣೇಗೌಡ, ಜಯರಾಂ ಶೆಟ್ಟಿ, ಪ್ರಕಾಶ್ ಯಾಜಿ, ನಟೇಶ್‍ಕುಮಾರ್, ಅಶೋಕ್, ಹೆಚ್.ಎಸ್.ಆನಂದ್, ಕೆ.ಜೆ.ನಾಗರಾಜು, ಅನಂತರಾಜು, ಬಿ.ಸೋಮೇಶ್, ಬಿ.ಕೆ.ಶಾಮರಾಜ್ ಸೇರಿದಂತೆ ಲಯನ್ಸ್ ಸಂಸ್ಥೆಯ ಇತರೆ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು.

ನಂತರ ಮಾಜಿ ಅಧ್ಯಕ್ಷರುಗಳು ತಮ್ಮ ಅನುಭವದ ಮಾತನ್ನು ಹಂಚಿಕೊಂಡರು. ಲಯನ್ಸ್ ಎಂದರೆ ಇದು ಸೇವೆ ಮಾಡಲು ಇರುವ ಅತ್ಯುತ್ತಮ ಸಂಸ್ಥೆ. ಎಲ್ಲರೂ ಒಟ್ಟಿಗೆ ಸೇರಿ ಸಮಾಜ ಕಟ್ಟುವ ಕೆಲಸ ವನ್ನು ಮಾಡಬೇಕು ಎಂದು ಹೇಳಿದರು. ಉತ್ತಮ ಕೆಲಸ ಮಾಡುವ ಈ ಸಂಸ್ಥೆಯು ಇನ್ನು ಸಾವಿರಾರು ವರ್ಷ ಇರಬೇಕು ಎಂದು ನೆರೆದಿದ್ದ ಯುವ ಸದಸ್ಯರಿಗೆ ಸಲಹೆ ನೀಡಿದರು. ಮನುಷ್ಯನಾಗಿ ಜನ್ಮ ತಾಳಿರುವ ನಮಗೆ ಸಾಧನೆ ಬೇಕು. ಸಾಧನೆ ಇಲ್ಲವಾದರೆ ಜೀವ ನವೇ ವ್ಯರ್ಥ. ಜೀವನ ಎಂದರೆ ಅದು ಸೇವೆ ಆಗಬೇಕೇ ಹೊರತು, ಸ್ವಾರ್ಥವಾಗಬಾರದು ಎಂದು ಕಿವಿಮಾತು ಹೇಳಿದರು. ಲಯನ್ಸ್ ಸಂಸ್ಥೆಯಲ್ಲಿ ಪ್ರೀತಿ ಇರಬೇಕು. ಎಲ್ಲಾ ಸಹಕಾರ ನೀಡಿದರೆ ನಾವು ಸಾಧನೆ ಮಾಡಲು ಸಾಧ್ಯ ಎಂದು ಸಲಹೆ ಕೊಟ್ಟರು. ಮಾಜಿ ಅಧ್ಯಕ್ಷರು ಮಾಡಿದ ಕೆಲಸಗಳು ಇಂದಿನ ಯುವ ಅಧ್ಯಕ್ಷರಿಗೆ ಮಾದರಿ. ಪ್ರತಿ ಅಧ್ಯಕ್ಷರು ತಮ್ಮ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಇಂದಿನ ಅಧ್ಯಕ್ಷರಿಗೆ ಮಾಜಿ ಅಧ್ಯಕ್ಷರುಗಳು ಶಕ್ತಿ ತುಂಬುವ ಕೆಲಸ ಮಾಡ ಬೇಕು ಎಂದು ಕರೆ ನೀಡಿದರು. ಇಂದು ಹಾಸನ ಲಯನ್ಸ್ ಸಂಸ್ಥೆಯು 44ನೇ ವಸಂತಕ್ಕೆ ಕಾಲಿಟ್ಟಿದೆ. ಮುಂದೆ ಇದು ಸೇವಾ ಕಾರ್ಯ ದಲ್ಲಿ ಹೆಮ್ಮರವಾಗಿ ಬೆಳೆಯಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕ ರಾಗಿ ಕರ್ತವ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದ ಲಯನ್ ಕೇರ್ ಮಲ್ಲೇಶಗೌಡರನ್ನು ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಲಯನ್ಸ್ ಸೇವಾ ಸಂಸ್ಥೆ (ಕ್ಲಬ್) ಅಧ್ಯಕ್ಷ ಶಿವಸ್ವಾಮಿ, ಖಜಾಂಚಿ ನಾಗೇಶ್, ವಲಯ ಅಧ್ಯಕ್ಷ ಬಿ.ಸೋಮೇಶ್, ಆನಂದ್, ಪ್ರಾಂತೀಯ ಅಧ್ಯಕ್ಷೆ ಲಯನೆಸ್ ಮಾಲತಿ ಹೆÀಗ್ಡೆ, ಮಾಜಿ ಗವರ್ನರ್ ಡಿ.ವಿ.ಹೆಗಡೆ, ಮಾಜಿ ಶಾಸಕ ಬಿ.ವಿ.ಕರೀಗೌಡ ಇತರರಿದ್ದರು.

Translate »