ಬೇಲೂರಲ್ಲಿ ಕಸ ವಿಲೇವಾರಿ ವಾಹನಗಳಿಗೆ ಚಾಲನೆ
ಹಾಸನ

ಬೇಲೂರಲ್ಲಿ ಕಸ ವಿಲೇವಾರಿ ವಾಹನಗಳಿಗೆ ಚಾಲನೆ

January 19, 2019

ಬೇಲೂರು: ವಿಶ್ವಪ್ರಸಿದ್ಧ ಬೇಲೂರು ಪಟ್ಟಣದ ಕಸ ವಿಲೇವಾರಿಯನ್ನು ವೈಜ್ಞಾ ನಿಕ ರೀತಿಯಲ್ಲಿ ಮಾಡ ಬೇಕು ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.

ಪಟ್ಟಣ ಹರ್ಡೀಂಕರ್ ರಸ್ತೆಯಲ್ಲಿ ಪುರ ಸಭೆಯಿಂದ ನೂತನವಾಗಿ ಕಸ ವಿಲೇ ವಾರಿಯ ಆಟೋ ವಾಹನಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಪ್ರತಿ ಮನೆ-ಮನೆಯ ಲ್ಲಿನ ಕಸವನ್ನು ವೈಜ್ಞಾನಿಕವಾಗಿ ಹಸಿ ಮತ್ತು ಒಣ ಕಸವನ್ನಾಗಿ ಬೇರ್ಪಡಿಸಿ, ಕಸ ವಿಲೇವಾರಿ ವಾಹನಗಳಿಗೆ ನೀಡುವ ಕರ್ತವ್ಯವನ್ನು ಸಾರ್ವಜನಿಕರು ಮಾಡ ಬೇಕು. ಕಸ ವಿಲೇವಾರಿ ಕೇವಲ ಪುರ ಸಭೆಯ ಕರ್ತವ್ಯವೆಂದು ಮೂಗುಮುರಿ ಯುವ ಕೆಲಸ ಮಾಡಬಾರದು. ಸರ್ವರು ಸಹಕಾರ ನೀಡಿದರೆ ಮಾತ್ರ ಪಟ್ಟಣದ ಅಂದ-ಚೆಂದ ಹೆಚ್ಚಿಸಲು ಸಾಧ್ಯವೆಂದರು.

ಬೇಲೂರು ಪಟ್ಟಣ 23 ವಾರ್ಡ್‍ಗಳಿಂದ ಪ್ರತಿ ನಿತ್ಯ ಬರುವ ಕಸವನ್ನು ಈಗಾಗಲೇ ಹತ್ತಿರದ ಪ್ರಸಾದಹಳ್ಳಿ ಬಳಿ ಘನ ತ್ಯಾಜ್ಯ ಘಟಕಕ್ಕೆ ಹಾಕುತ್ತಿದ್ದು, ಮುಂದಿನ ದಿನದಲ್ಲಿ ಅಯಾ ವಾರ್ಡ್‍ಗಳಲ್ಲಿ ಸಂಗ್ರಹಿ ಸುವ ಕಸವನ್ನು ಅದೇ ವಾರ್ಡ್‍ಗಳಲ್ಲಿ ವಿಲೇ ವಾರಿ ಮಾಡುವ ಆಧುನಿಕ ತಂತ್ರಜ್ಞಾನಕ್ಕೆ ನಮ್ಮ ಸರ್ಕಾರ ಮುಂದಾಗಿದೆ. ಸ್ವಚ್ಛ ಭಾರತ್ ಮಿಷನ್ ಕೇವಲ ವೇದಿಕೆಗೆ ಸೀಮಿತವಾಗದೇ ಕಾರ್ಯಗತವಾಗಲಿ ಎಂದು ಹೇಳಿದರು.

ಮುಖ್ಯಾಧಿಕಾರಿ ಪ್ರಿಯಾಂಕ ಮಾತ ನಾಡಿ, ವಿಶ್ವದ ಭೂಪಟದಲ್ಲಿ ತನ್ನದೆ ಯಾದ ಸ್ಥಾನ ಪಡೆದಿರುವ ಬೇಲೂರು ಪಟ್ಟಣದ ಸಮಗ್ರ ಸ್ವಚ್ಛತೆಗಾಗಿ ನೂತನ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಪದ್ಧತಿ ಯಿಂದ ಕಸ ವಿಲೇವಾರಿ ಮಾಡುವ ಹಿನ್ನೆಲೆಯಲ್ಲಿ ಪ್ರತಿ ಮನೆ-ಮನೆಗೆ ಎರಡು ಕಸ ಸಂಗ್ರಹಿಸುವ ಡಬ್ಬಿಗಳನ್ನು ನೀಡಲಾಗಿದೆ. ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡಬೇಕು ಎಂದು ಮನವಿ ಮಾಡಿದರು.

ಪುರಸಭಾ ಅಧ್ಯಕ್ಷೆ ಡಿ.ಆರ್.ಭಾರತಿ ಮಾತನಾಡಿ, ಕಸ ಸಂಗ್ರಹಿಸುವ ಡಬ್ಬಿ ಗಳನ್ನು ಆಯಾ ಅಂಗಡಿಗಳಿಗೆ ನೀಡಿದರೂ, ಕೆಲ ವರ್ತಕರು ರಸ್ತೆಗೆ ಕಸವನ್ನು ಚೆಲ್ಲು ತ್ತಾರೆ. ಇದರಿಂದ ಪೌರಕಾರ್ಮಿಕರು ಬಾಚ ಬೇಕಾದ ಹೀನ ಸ್ಥಿತಿ ನಿರ್ಮಾಣ ವಾಗಿದೆ. ರಸ್ತೆಗೆ ಕಸ ಹಾಕಿದವರಿಗೆ ದಂಡ ವಿಧಿ ಸಲು ಪುರಸಭೆ ಕಠಿಣ ಕ್ರಮ ಕೈಗೊಂದ್ದು, ಪ್ಲಾಸ್ಟಿಕ್ ನಿಷೇಧವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ರಾದ ಶ್ರೀನಿಧಿ, ಬಿ.ಗಿರೀಶ್. ಜುಬೇರ್, ರವಿ ಅಣ್ಣೇಗೌಡ, ಎಪಿಎಂಸಿ ಸದಸ್ಯ ಜಗ ದೀಶ್, ಪುರಸಭಾ ಎಸ್.ಎಸ್. ಮಂಜು ನಾಥ್, ಮಧುಸೂದನ್, ನಾಮಿನಿ ಸದಸ್ಯ ರವಿ, ಮುಖಂಡ ಮಲ್ಲೇಗೌಡ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ವಿಶ್ವ, ನಾಗ ರಾಜು ಇನ್ನು ಮುಂತಾದವರು ಹಾಜರಿದ್ದರು.

Translate »