ಶ್ರವಣಬೆಳಗೊಳ: ಫೆಬ್ರವರಿ ಯಲ್ಲಿ ಜರುಗಿದ ಮಹಾಮಸ್ತಕಾಭಿಷೇಕ ಮಹೋತ್ಸವದ ನಿಮಿತ್ತ 18 ತಿಂಗಳ ಹಿಂದೆ ಶ್ರೀಕ್ಷೇತ್ರ ಶ್ರವಣಬೆಳಗೊಳಕ್ಕೆ ಆಗ ಮಿಸಿ ಮಹೋತ್ಸವದ ನೇತೃತ್ವ ವಹಿಸಿದ್ದ ಆಚಾರ್ಯ ಶ್ರೀ ವರ್ಧಮಾನಸಾಗರ ಮಹಾ ರಾಜರು ಹಾಗೂ ಸಂಘಸ್ಥ 47 ತ್ಯಾಗಿಗಳು ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಮಂಗಲ ವಿಹಾರ ಆರಂಭಿಸಿದರು. ಅಹಿಂಸೆಯನ್ನೇ ಪರಮ ಧರ್ಮವೆಂದು ಆಚರಣೆಯಲ್ಲಿರಿಸಿಕೊಂಡು ಬಂದಿರುವ, ಆಚಾರ್ಯ ಪರಂಪರೆಯಲ್ಲಿ ಮಹತ್ವದ ಸ್ಥಾನ ಪಡೆದಿರುವ ಆಚಾರ್ಯಶ್ರೀಗಳು ಧಾರ್ಮಿಕ ಪ್ರಭಾವನೆ ಹಾಗೂ ಮೋಕ್ಷ ಸಾಧನೆಗಾಗಿ ಮುನಿದೀಕ್ಷೆ ಸ್ವೀಕರಿಸಿ ಸದಾ ಕಾಲವೂ ಜ್ಞಾನ, ಧ್ಯಾನ, ತಪಸ್ಸುಗಳನ್ನೇ…
ವೈಕುಂಠ ಏಕಾದಶಿ: ಸ್ವರ್ಗದ ಬಾಗಿಲು ಪ್ರವೇಶಕ್ಕೆ ಅವಕಾಶ
December 19, 2018ಹಾಸನ: ವೈಕುಂಠ ಏಕಾದಶಿಯ ಅಂಗವಾಗಿ ನಗರದ ಮಹಾರಾಜ ಉದ್ಯಾನವನ ಬಳಿ ಇರುವ ಶ್ರೀ ಸೀತಾ ರಾಮಾಂಜನೇಯ ದೇವಸ್ಥಾನದಲ್ಲಿ ಭಕ್ತಾದಿ ಗಳಿಗಾಗಿ ಸ್ವರ್ಗದ ಬಾಗಿಲು ಪ್ರವೇಶ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಬೆಳಗಿನಿಂದಲೇ ಶ್ರೀ ಲಕ್ಷ್ಮಿವೆಂಕಟೇಶ್ವರ ದೇವರ ದರ್ಶನಕ್ಕೆ ಸಾವಿರಾರು ಜನ ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದರು. ನಿರ್ಮಿಸಲಾಗಿದ್ದ ಸ್ವರ್ಗದ ಬಾಗಿಲನ್ನು ದಾಟಲು ಭಕ್ತರು ಒಬ್ಬೊಬ್ಬರಾಗಿ ಒಳಗೆ ಪ್ರವೇಶ ಮಾಡಿ ಪುನೀತರಾದರು. ಈ ವೇಳೆ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಈ ವೇಳೆ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳ 50ನೇ ದೀಕ್ಷಾ ಮಹೋತ್ಸವ
December 18, 2018ಶ್ರವಣಬೆಳಗೊಳ: ಜೈನ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ 50ನೇ ವರ್ಷದ ದೀಕ್ಷಾ ಮಹೋತ್ಸವ ಸಮಾರಂಭವು ಶ್ರವಣಬೆಳಗೊಳದಲ್ಲಿ ವಿಜೃಂಭಣೆಯಿಂದ ನೆರವೇರಿತು. ದೀಕ್ಷಾ ಸಮಾರಂಭದ ಸಾನಿಧ್ಯ ವಹಿ ಸಿದ್ದ ಮುನಿಶ್ರೀ ಅಮರಕೀರ್ತಿ ಮಹಾ ರಾಜರು ಮಾತನಾಡಿ, ಚಾರುಕೀರ್ತಿಯ ವರು ಕ್ಷೇತ್ರದ ಸರ್ವಾಂಗೀಣ ವಿಕಾಸ ದೊಂದಿಗೆ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ, ಸಾರ್ವಜನಿಕ ಆಸ್ಪತ್ರೆ, ಬಸದಿಗಳ ಜೀರ್ಣೋದ್ಧಾರ, ನಿರಂತರ ತ್ಯಾಗಿಗಳ ಸೇವೆ, 12 ವರ್ಷಗಳಿಗೊಮ್ಮೆ ಅಂತಾ ರಾಷ್ಷ್ರೀಯ ಮಟ್ಟದ ಮಹಾಮಸ್ತಕಾ ಭಿಷೇಕ ಮಹೋತ್ಸವಗಳ ನೇತೃತ್ವ ವಹಿಸಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು….
ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ ಹುಟ್ಟುಹಬ್ಬ ಬೇಲೂರು ಜೆಡಿಎಸ್ ಕಾರ್ಯಕರ್ತರಿಂದ ವಿಶೇಷ ಪೂಜೆ
December 18, 2018ಬೇಲೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣನವರ ಜನ್ಮ ದಿನದ ಅಂಗವಾಗಿ ಇಲ್ಲಿನ ತಾಲೂಕು ಜೆಡಿಎಸ್ ವತಿ ಯಿಂದ ವಿಶ್ವವಿಖ್ಯಾತ ಬೇಲೂರು ಚನ್ನಕೇಶವ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು-ಹಣ್ಣುಗಳನ್ನು ನೀಡುವ ಮೂಲಕ ಶುಭ ಕೋರಿದರು. ಬೆಳಿಗ್ಗೆ ಸುಮಾರು 9.30ಕ್ಕೆ ಚನ್ನಕೇಶವ ದೇಗುಲಕ್ಕೆ ತಾಲೂಕು ಜೆಡಿಎಸ್ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಹಾಸನ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ, ಹಾಸನ ಹೆಚ್‍ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಂ.ಎ.ನಾಗರಾಜು, ತಾಲೂಕು ಪಂಚಾಯಿತಿ ಅಧ್ಯಕ್ಷ ಜಿ.ಬಿ.ರಂಗೇಗೌಡ,…
ಸಂಗೀತ, ನೃತ್ಯ ಕಲೆಗೆ ಕರ್ನಾಟಕದ ಕೊಡುಗೆ ಅಪಾರ
December 18, 2018ಅರಸೀಕೆರೆ: ಕರ್ನಾಟಕವು ಸಂಗೀತ ಮತ್ತು ನೃತ್ಯ ಕಲೆಗಳಲ್ಲಿ ಮಹತ್ವ ವಾದ ಕೊಡುಗೆಗಳನ್ನು ನೀಡಿದೆ.ಅದನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಕಲಾವಿದರಿಗೆ ಮತ್ತು ನಮ್ಮ ಸಂಸ್ಕøತಿಗೆ ಶಾಶ್ವತ ಸ್ಥಾನ ಗಳನ್ನು ನೀಡಲು ಸಾದ್ಯವಾಗುತ್ತದೆ ಎಂದು ಉದ್ಯಮಿ ಅರುಣ್‍ಕುಮಾರ್ ಅವರು ಅಭಿಪ್ರಾಯಪಟ್ಟರು. ನಗರದ ಶ್ರೀ ವೆಂಕಟೇಶ್ವರ ಕಲಾ ಭವನ ದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾ ಡೆಮಿಯು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಕಾರದೊಂದಿಗೆ ಆಯೋಜಿ ಸಿದ್ದ ‘ಸಂಗೀತ ನೃತ್ಯೋತ್ಸವ’ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ…
ಮುನಿಶ್ರೀ ಅಮೋಘಕೀರ್ತಿ ಮಹಾರಾಜರ ಜನ್ಮೋತ್ಸವ
December 18, 2018ಶ್ರವಣಬೆಳಗೊಳ: ಮುನಿಶ್ರೀ ಅಮೋಘಕೀರ್ತಿ ಮಹಾರಾಜರು ವಿದ್ವತ್‍ಪೂರ್ಣ ಪ್ರವಚನ, ಸ್ವಾಧ್ಯಾಯ, ತಪಸ್ಸಿನಿಂದ ದೇಶಾದ್ಯಂತ ಅನೇಕ ವಿಕಾಸ ಕಾರ್ಯಗಳನ್ನು ಮಾಡುತ್ತಾ ಧರ್ಮ ಪ್ರಭಾವನೆ ಮಾಡುತ್ತಿದ್ದಾರೆ ಎಂದು ಶ್ರವಣಬೆಳಗೊಳ ಜೈನ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಪಟ್ಟಣದ ಚಾವುಂಡರಾಯ ಸಭಾ ಮಂಟಪದಲ್ಲಿ ಆಯೋಜಿಸಿದ್ದ ಮುನಿಶ್ರೀ ಅಮೋಘಕೀರ್ತಿ ಮಹಾರಾಜರ 38ನೇ ಜನ್ಮ ಜಯಂತಿ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಜಿನಶಾಸನ, ಜಿನಪೂಜೆ, ಜಿನಾಗಮದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಸಮ್ಯಗ್ದರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ ಚಾರಿತ್ರ್ಯ ಎಂಬ ರತ್ನತ್ರಯಗಳನ್ನು ಕಾಪಾಡಿಕೊಂಡು…
ಶಿಕ್ಷಕರ ಕೊರತೆಯಿಂದ ಕಂಗೆಟ್ಟಿರುವ ಸರ್ಕಾರಿ ಶಾಲೆ ವಿದ್ಯಾರ್ಥಿಗಳು
December 17, 2018ಅರಸೀಕೆರೆ: ಸರ್ಕಾರಿ ಪ್ರಾಥಮಿಕ ಪಾಠಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತ ರಾಗುತ್ತಿರುವ ಆತಂಕವನ್ನು ತಾಲೂಕಿನ ಪೋಷಕರು ಮತ್ತು ವಿದ್ಯಾರ್ಥಿ ಸಂಘ ಟನೆಗಳ ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದು, ಕೂಡಲೇ ಶಿಕ್ಷಕರನ್ನು ನಿಯೋಜಿಸ ಬೇಕೆಂದು ಒತ್ತಡವೂ ಕೇಳಿ ಬರುತ್ತಿದೆ. ಹೌದು, ಈ ಬೆಳವಣಿಗೆಗಳು ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಒಂದು ಸರ್ಕಾರಿ ಶಾಲೆಗೆ ಮಾತ್ರ ಸೀಮಿತವಾಗಿರದೇ ಎಲ್ಲ ಶಾಲೆಗಳಲ್ಲೂ ಈ ಬೆಳವಣಿಗೆಗಳು ಅತೀ ಹೆಚ್ಚು ಕಂಡು ಬರುತ್ತಿದೆ.ಇದರಿಂದ ಆಯಾ ಶಾಲೆ ಮಕ್ಕಳು ಸಮಯಕ್ಕೆ ಸರಿಯಾಗಿ ಪಠ್ಯಗಳ ಅಧ್ಯಾಯವನ್ನು ಪೂರೈಸಿಕೊಳ್ಳ ಲಾಗದೇ,…
ಗ್ರಾಹಕ ವಿರೋಧಿ ನಿಯಮ ಖಂಡಿಸಿ ಹೆಚ್‍ಸಿಎನ್ ಕೇಬಲ್ ವೆಲ್‍ಫೇರ್ ಯೂನಿಯನ್ ಪ್ರತಿಭಟನೆ
December 17, 2018ಹಾಸನ: ಟಿ.ವಿ ಕೇಬಲ್ ಸಂಬಂಧ ಕೇಂದ್ರ ಸರ್ಕಾರ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಮುಖಾಂತರ ನೂತನವಾಗಿ ಜಾರಿಗೆ ತಂದಿರುವ ನಿಯಮಗಳು ಗ್ರಾಹಕ ವಿರೋಧಿಯಾಗಿದೆ ಎಂದು ಆರೋಪಿಸಿ ಹೆಚ್‍ಸಿಎನ್ ಕೇಬಲ್ ವೆಲ್‍ಫೇರ್ ಯೂನಿ ಯನ್ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಈವರೆಗೆ ಕೇಬಲ್ ಆಪರೇಟರ್‍ಗಳು ಯಾವುದೇ ಶುಲ್ಕ ಪಾವತಿಸಿಕೊಳ್ಳದೇ ನೀಡುತ್ತಿದ್ದ ಕೆಲ ಚಾನಲ್‍ಗಳಿಗೂ ಕೂಡ ನೂತನ ನಿಯಮಾವಳಿ ಪ್ರಕಾರ ಶುಲ್ಕ ಪಾವತಿಸಬೇಕಿದ್ದು, ಗ್ರಾಹಕರಿಗೆ ಹೊರೆ ಯಾಗಲಿದೆ. ಅಲ್ಲದೇ ಸ್ಥಳೀಯ ಕೇಬಲ್ ಆಪರೇಟರ್‍ಗಳಿಗೂ ತೀವ್ರ ತೊಂದರೆ ಯಾಗಲಿದೆ…
ಅನಧಿಕೃತವಾಗಿ ನಿರ್ಮಿಸಿದ್ದ 9 ಅಂಗಡಿ ತೆರವು
December 17, 2018ಚನ್ನರಾಯಪಟ್ಟಣ: ಪುರಸಭೆ ಆಸ್ತಿಯಲ್ಲಿ ಗೂಡಂಗಡಿಗಳನ್ನು ನಿರ್ಮಿಸಿ ಕೊಂಡಿದ್ದು, ಮೂರನೇ ವ್ಯಕ್ತಿಗಳಿಗೆ ಬಾಡಿಗೆ ನೀಡಿದ್ದ 9 ಅಂಗಡಿಗಳನ್ನು ಪುರಸಭೆ ಸಿಬ್ಬಂದಿ ಇಂದು ಜೆಸಿಬಿ ಮೂಲಕ ತೆರವುಗೊಳಿಸಿದರು. ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿ ಅಂಚೆ ಕಚೇರಿಗೆ ಹೊಂದಿಕೊಂಡಂತೆ ನಿರ್ಮಿಸಿ ಕೊಂಡಿದ್ದು 9 ಗೂಡಂಗಡಿಗಳನ್ನು ತೆರವು ಮಾಡುವಂತೆ ನ್ಯಾಯಾಲಯ ಆದೇಶ ನೀಡಿದ ಹಿನ್ನೆಲೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಬಸವರಾಜು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅವುಗಳನ್ನು ತೆರವುಗೊಳಿಸಿ, ಅಂಚೆ ಕಚೇರಿಗೆ ಹೊಂದಿಕೊಂಡಿರುವ ಸ್ಥಳದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿಕೊಳ್ಳುವಂತೆ ತಿಳಿಸಲು ಕಳೆದ 15 ವರ್ಷದ…
ಶಾಸಕರಿಂದ ಫಲಾನುಭವಿಗಳಿಗೆ ಗ್ಯಾಸ್ ಸ್ಟೌವ್, ಸಿಲಿಂಡರ್ ವಿತರಣೆ
December 17, 2018ಅರಸೀಕೆರೆ: ಹೊಗೆ ರಹಿತ ವಾತಾವರಣವನ್ನು ನಾವು ಸೃಷ್ಟಿಬೇಕಾ ಗಿದ್ದಲ್ಲಿ ಪ್ರತಿ ಕುಟುಂಬದಲ್ಲಿ ಅನಿಲದಿಂದ ಕಾರ್ಯನಿರ್ವಹಿಸುವ ಒಲೆಗಳನ್ನು ಉಪ ಯೋಗಿಸಬೇಕು.ಇಂತಹ ಒಲೆಗಳ ಸಂಪರ್ಕ ದಿಂದ ವಂಚಿತರಾದ ಕುಟುಂಬಗಳಿಗೆ ಸರ್ಕಾರವು ಅನಿಲಭಾಗ್ಯ ಯೋಜನೆ ಯನ್ನು ಜಾರಿಗೆ ತರುವುದರ ಮೂಲಕ ಆರೋಗ್ಯ ಪೂರ್ಣ ಪರಿಸರಕ್ಕೆ ಹೆಚ್ಚು ಒತ್ತನ್ನು ನೀಡಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು. ನಗರದ ತಾಲೂಕು ಕಚೇರಿ ಆವರಣ ದಲ್ಲಿ ಹಮ್ಮಿಕೊಳ್ಳಲಾಗಿದ್ದ ಮುಖ್ಯಮಂತ್ರಿ ಗಳ ಅನಿಲ ಭಾಗ್ಯ ಯೋಜನೆಯಡಿ ಉಚಿತವಾಗಿ ನೀಡಲಾದ ಗ್ಯಾಸ್ ಸಂಪರ್ಕ, ಸ್ಟೌವ್ ಮತ್ತು ಗ್ಯಾಸ್…