ಅನಧಿಕೃತವಾಗಿ ನಿರ್ಮಿಸಿದ್ದ 9 ಅಂಗಡಿ ತೆರವು
ಹಾಸನ

ಅನಧಿಕೃತವಾಗಿ ನಿರ್ಮಿಸಿದ್ದ 9 ಅಂಗಡಿ ತೆರವು

December 17, 2018

ಚನ್ನರಾಯಪಟ್ಟಣ: ಪುರಸಭೆ ಆಸ್ತಿಯಲ್ಲಿ ಗೂಡಂಗಡಿಗಳನ್ನು ನಿರ್ಮಿಸಿ ಕೊಂಡಿದ್ದು, ಮೂರನೇ ವ್ಯಕ್ತಿಗಳಿಗೆ ಬಾಡಿಗೆ ನೀಡಿದ್ದ 9 ಅಂಗಡಿಗಳನ್ನು ಪುರಸಭೆ ಸಿಬ್ಬಂದಿ ಇಂದು ಜೆಸಿಬಿ ಮೂಲಕ ತೆರವುಗೊಳಿಸಿದರು.

ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿ ಅಂಚೆ ಕಚೇರಿಗೆ ಹೊಂದಿಕೊಂಡಂತೆ ನಿರ್ಮಿಸಿ ಕೊಂಡಿದ್ದು 9 ಗೂಡಂಗಡಿಗಳನ್ನು ತೆರವು ಮಾಡುವಂತೆ ನ್ಯಾಯಾಲಯ ಆದೇಶ ನೀಡಿದ ಹಿನ್ನೆಲೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಬಸವರಾಜು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅವುಗಳನ್ನು ತೆರವುಗೊಳಿಸಿ, ಅಂಚೆ ಕಚೇರಿಗೆ ಹೊಂದಿಕೊಂಡಿರುವ ಸ್ಥಳದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿಕೊಳ್ಳುವಂತೆ ತಿಳಿಸಲು ಕಳೆದ 15 ವರ್ಷದ ಹಿಂದೆ ಪುರಸಭಾ ಸಿಬ್ಬಂದಿ ಹೋದ ಸಂದರ್ಭದಲ್ಲಿ ಪುರಸಭಾ ಆರೋಗ್ಯ ನಿರೀಕ್ಷಕರ ಮೇಲೆ ಹಲ್ಲೆ ನಡೆಸಿದ್ದ ಅಂಗಡಿ ಮಾಲೀಕ ನ್ಯಾಯಾಲಯದ ಮೆಟ್ಟಿಲೇರಿ ತಾತ್ಕಾಲಿಕ ತಡೆ ತಂದು ಮೂರನೇ ವ್ಯಕ್ತಿಗಳಿಗೆ ಅಂಗಡಿಗಳನ್ನು ಬಾಡಿಗೆ ನೀಡಿದ್ದರು.

ಪುರಸಭೆ ಹಾಗೂ ಅಂಗಡಿ ಮಾಲೀಕರ ನಡುವೆ ನಡೆಯುತ್ತಿದ್ದ ವ್ಯಾಜ್ಯದಲ್ಲಿ ಪುರಸಭೆ ಪರವಾಗಿ ತೀರ್ಪು ಬಂದ ಹಿನ್ನೆಲೆಯಲ್ಲಿ ನ್ಯಾಯಾ ಲಯದ ಅದೇಶದಂತೆ ಅಂಗಡಿಗಳನ್ನು ಪುರಸಭೆ ಮುಖ್ಯಾಧಿಕಾರಿಗಳು, ಸಿಬ್ಬಂದಿ ಪೆÇಲೀಸ್ ಸಹಾಯದಿಂದ ಅಂಗಡಿ ತೆರವುಗೊಳಿಸಲಾಯಿತು.

Translate »