ಶಾಸಕರಿಂದ ಫಲಾನುಭವಿಗಳಿಗೆ ಗ್ಯಾಸ್ ಸ್ಟೌವ್, ಸಿಲಿಂಡರ್ ವಿತರಣೆ
ಹಾಸನ

ಶಾಸಕರಿಂದ ಫಲಾನುಭವಿಗಳಿಗೆ ಗ್ಯಾಸ್ ಸ್ಟೌವ್, ಸಿಲಿಂಡರ್ ವಿತರಣೆ

December 17, 2018

ಅರಸೀಕೆರೆ: ಹೊಗೆ ರಹಿತ ವಾತಾವರಣವನ್ನು ನಾವು ಸೃಷ್ಟಿಬೇಕಾ ಗಿದ್ದಲ್ಲಿ ಪ್ರತಿ ಕುಟುಂಬದಲ್ಲಿ ಅನಿಲದಿಂದ ಕಾರ್ಯನಿರ್ವಹಿಸುವ ಒಲೆಗಳನ್ನು ಉಪ ಯೋಗಿಸಬೇಕು.ಇಂತಹ ಒಲೆಗಳ ಸಂಪರ್ಕ ದಿಂದ ವಂಚಿತರಾದ ಕುಟುಂಬಗಳಿಗೆ ಸರ್ಕಾರವು ಅನಿಲಭಾಗ್ಯ ಯೋಜನೆ ಯನ್ನು ಜಾರಿಗೆ ತರುವುದರ ಮೂಲಕ ಆರೋಗ್ಯ ಪೂರ್ಣ ಪರಿಸರಕ್ಕೆ ಹೆಚ್ಚು ಒತ್ತನ್ನು ನೀಡಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ನಗರದ ತಾಲೂಕು ಕಚೇರಿ ಆವರಣ ದಲ್ಲಿ ಹಮ್ಮಿಕೊಳ್ಳಲಾಗಿದ್ದ ಮುಖ್ಯಮಂತ್ರಿ ಗಳ ಅನಿಲ ಭಾಗ್ಯ ಯೋಜನೆಯಡಿ ಉಚಿತವಾಗಿ ನೀಡಲಾದ ಗ್ಯಾಸ್ ಸಂಪರ್ಕ, ಸ್ಟೌವ್ ಮತ್ತು ಗ್ಯಾಸ್ ಸಿಲಿಂಡರ್ ವಿತ ರಣಾ ಸಮಾರಂಭದಲ್ಲಿ ಮಾತನಾಡಿದ ಅವರು ತಾಲೂಕಿನ ಜನತೆ ಹೊಗೆ ಮುಕ್ತ ಕುಟುಂಬ ನಿರ್ವಹಣೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲಾ ವರ್ಗದ ಜನರು ಇದರ ಪ್ರಯೋಜನವನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ ಎಂದರು.

ತಹಶೀಲ್ದಾರ್ ಎನ್.ವಿ. ನಟೇಶ್ ಮಾತ ನಾಡಿ, ತಾಲ್ಲೂಕಿನಾದ್ಯಂತ ಎಲ್ಲ ಕುಟುಂಬ ಗಳು ಹೊಗೆ ರಹಿತ ಕುಟುಂಬಗಳಾಗ ಬೇಕು ಮಹತ್ವಾಕಾಂಕ್ಷೆ ನಮ್ಮದಾಗಿದೆ. ಆ ನಿಟ್ಟಿನಲ್ಲಿ ತಾಲೂಕು ಆಡಳಿತವೂ ಕಾರ್ಯೋನ್ಮುಖವಾಗಿದೆ. ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವ ಬಡ ವರ್ಗದ ಜನರಿಗೆ ರೂ. 1940ರ ದರದಲ್ಲಿ 2 ಸಿಲಿಂಡರ್ ಮತ್ತು ಗ್ಯಾಸ್ ಸ್ಟೌವ್ ವಿತರಿಸಲಾಗುತ್ತಿದೆ. ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 17615 ಮಂದಿ ಅಡಿಗೆ ಅನಿಲ ಸೌಲಭ್ಯದಿಂದ ವಂಚಿತ ರಾಗಿದ್ದು ಇದರಲ್ಲಿ 6215 ಜನರನ್ನು ಫಲಾ ನುಭವಿಗಳೆಂದು ಗುರುತಿಸಿ ಮೊದಲನೇ ಹಂತದಲ್ಲಿ 520 ಫಲಾನುಭವಿಗಳಿಗೆ ವಿತ ರಣೆ ಮಾಡುತ್ತಿದ್ದೇವೆ. ಸೂಕ್ತ ದಾಖಲೆ ಗಳನ್ನು ನೀಡಿರುವ 397 ಫಲಾನುಭವಿ ಗಳಿಗೆ ವಿತರಿಸಿದ್ದೇವೆ. ಕಟ್ಟಡ ಕಾರ್ಮಿಕ ರಿಗೂ ಈ ಸೌಲಭ್ಯವನ್ನು ನೀಡಲಾಗುತ್ತಿದ್ದು, ಕೆಳ ಹಂತದ ಕುಟುಂಬಕ್ಕೂ ಈ ಯೋಜನೆ ತಲುಪುವ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಮಾಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ವತ್ಸಲ ಶೇಖರಪ್ಪ, ಮಾಡಾಳು ಸ್ವಾಮಿ, ತಾ.ಪಂ. ಅಧ್ಯಕ್ಷೆ ರೂಪಾ ಗುರು ಮೂರ್ತಿ, ಉಪಾಧ್ಯಕ್ಷ ಲಿಂಗರಾಜು, ಎಪಿ ಎಂಸಿ ಅಧ್ಯಕ್ಷ ಚಂದ್ರಶೇಖರ್, ಉಪ ತಹಶೀಲ್ದಾರ್ ಪಾಲಾಕ್ಷ, ಶಿರಸ್ತೇದಾರ್ ಶಿವಕುಮಾರ್, ಆಹಾರ ನಿರೀಕ್ಷಕ ಬಾಲ ಚಂದ್ರ, ಮುಖಂಡರಾದ ಧರ್ಮಶೇಖರ್, ನಾಗರಾಜು, ತಳಲುತೊರೆ ಲೋಕೇಶ್ ಹಾಜರಿದ್ದರು.

Translate »