ಗ್ರಾಹಕ ವಿರೋಧಿ ನಿಯಮ ಖಂಡಿಸಿ ಹೆಚ್‍ಸಿಎನ್ ಕೇಬಲ್ ವೆಲ್‍ಫೇರ್ ಯೂನಿಯನ್ ಪ್ರತಿಭಟನೆ
ಹಾಸನ

ಗ್ರಾಹಕ ವಿರೋಧಿ ನಿಯಮ ಖಂಡಿಸಿ ಹೆಚ್‍ಸಿಎನ್ ಕೇಬಲ್ ವೆಲ್‍ಫೇರ್ ಯೂನಿಯನ್ ಪ್ರತಿಭಟನೆ

December 17, 2018

ಹಾಸನ: ಟಿ.ವಿ ಕೇಬಲ್ ಸಂಬಂಧ ಕೇಂದ್ರ ಸರ್ಕಾರ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಮುಖಾಂತರ ನೂತನವಾಗಿ ಜಾರಿಗೆ ತಂದಿರುವ ನಿಯಮಗಳು ಗ್ರಾಹಕ ವಿರೋಧಿಯಾಗಿದೆ ಎಂದು ಆರೋಪಿಸಿ ಹೆಚ್‍ಸಿಎನ್ ಕೇಬಲ್ ವೆಲ್‍ಫೇರ್ ಯೂನಿ ಯನ್ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಈವರೆಗೆ ಕೇಬಲ್ ಆಪರೇಟರ್‍ಗಳು ಯಾವುದೇ ಶುಲ್ಕ ಪಾವತಿಸಿಕೊಳ್ಳದೇ ನೀಡುತ್ತಿದ್ದ ಕೆಲ ಚಾನಲ್‍ಗಳಿಗೂ ಕೂಡ ನೂತನ ನಿಯಮಾವಳಿ ಪ್ರಕಾರ ಶುಲ್ಕ ಪಾವತಿಸಬೇಕಿದ್ದು, ಗ್ರಾಹಕರಿಗೆ ಹೊರೆ ಯಾಗಲಿದೆ. ಅಲ್ಲದೇ ಸ್ಥಳೀಯ ಕೇಬಲ್ ಆಪರೇಟರ್‍ಗಳಿಗೂ ತೀವ್ರ ತೊಂದರೆ ಯಾಗಲಿದೆ ಎಂದು ದೂರಿದರು. ಕೇಬಲ್ ಸಂಪರ್ಕಕ್ಕಾಗಿ ತೆರಿಗೆ ಸೇರಿದಂತೆ ಕನಿಷ್ಠ 154ರೂ.ಗಳನ್ನು ಗ್ರಾಹಕರು ಪಾವತಿಸ ಬೇಕಿದ್ದು, ಗ್ರಾಹಕರ ಆಯ್ಕೆಯ ಚಾನೆಲ್ ಗಳು ಒಳಗೊಂಡರೆ ಚಾಲ್ತಿ ದರಕ್ಕಿಂತ ದುಪ್ಪಟ್ಟು ಕೇಬಲ್ ಶುಲ್ಕವನ್ನು ಅನಿವಾರ್ಯ ವಾಗಿ ಗ್ರಾಹಕರು ಪಾವತಿಸಬೇಕಾಗಿದೆ. ಇದರಿಂದ ಗ್ರಾಹಕರಿಗೆ ದೊಡ್ಡ ಹೊರೆ ಯಾಗಲಿದೆ ಎಂದು ಆರೋಪಿಸಿದರು.

ನೂತನ ನಿಯಮಾವಳಿ ಪ್ರಕಾರ ಸ್ಥಳೀಯ ಕೇಬಲ್ ಆಪರೇಟರ್‍ಗಳು ಶೇ. 10ರಷ್ಟು ಹಣ ಪಡೆದು ಪಾವತಿಸಿ ಬಳ ಸುವ ಚಾನಲ್‍ಗಳನ್ನು ನಿರ್ವಹಿಸ ಬೇಕಿದ್ದು, ನಿರ್ವಹಣೆ ತುಂಬಾ ಕಷ್ಟಕಾರಿ ಯಾಗಲಿದೆ ಆ ನಿಟ್ಟಿನಲ್ಲಿ ಟ್ರಾಯ್‍ನ ಈ ನಿರ್ಧಾರ ತೀರಾ ಅವೈಜ್ಞಾನಿಕ ಎಂದು ಪ್ರತಿ ಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಈ ನಿರ್ಧಾರದಿಂದ ಬಂಡ ವಾಳ ಶಾಹಿಗಳಿಗೆ ಲಾಭವಾಗಲಿದ್ದು, ಬಡ ಗ್ರಾಹಕರಿಗೆ ತೀವ್ರ ಆರ್ಥಿಕ ಹೊರೆ ಬೀಳಲಿದೆ. ಅಲ್ಲದೇ ಇದುವರೆಗೂ ಅನ್ಯ ಭಾಷೆಗಳು ಸೇರಿದಂತೆ, ಕ್ರೀಡೆ ಹಾಗೂ ಇತರೇ 250 ಚಾನೆಗಳನ್ನು ಕನಿಷ್ಟ ಪ್ಯಾಕೇಜ್ ನಲ್ಲಿ ಗ್ರಾಹಕರಿಗೆ ನೀಡಲಾಗುತ್ತಿತ್ತು ಆದರೆ ನೂತನ ನಿಯಮಾವಳಿ ಗ್ರಾಹಕರಿಗೆ ತೀವ್ರ ದುಬಾರಿಯಾಗಲಿದೆ. ಹಾಗಾಗಿ ಕೂಡಲೇ ನಿಯಮಾವಳಿಯನ್ನು ಮತ್ತೊಮ್ಮೆ ಪರಾ ಮರ್ಶಿಸಿ ಈ ಹಿಂದಿನಂತೆ ಉದ್ಯಮ ನಡೆ ಯಲು ಅನುಕೂಲ ಮಾಡಿಕೊಡಬೇ ಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯ ನೇತೃತ್ವವನ್ನು ಹೆಚ್‍ಸಿ ಎನ್ ಕೇಬಲ್ ವೆಲ್‍ಫೇರ್ ಯೂನಿ ಯನ್ ಅಧ್ಯಕ್ಷ ಮಂಜೇಶ್, ಕಾರ್ಯ ದರ್ಶಿ ಎಂ.ಎಸ್ ಚಂದ್ರಶೇಖರ್, ಉಪಾ ಧ್ಯಕ್ಷ ಶ್ರೀನಿವಾಸ್, ಖಜಾಂಚಿ ಗಿರೀಶ್, ಸತೀಶ್ ಪಟೇಲ್,ಮಲ್ಲಿಕ್, ಚನ್ನಕೇಶವ ಸೇರಿದಂತೆ ಹಲವರು ಹಾಜರಿದ್ದರು.

Translate »