ಶಿಕ್ಷಕರ ಕೊರತೆಯಿಂದ ಕಂಗೆಟ್ಟಿರುವ ಸರ್ಕಾರಿ ಶಾಲೆ ವಿದ್ಯಾರ್ಥಿಗಳು
ಹಾಸನ

ಶಿಕ್ಷಕರ ಕೊರತೆಯಿಂದ ಕಂಗೆಟ್ಟಿರುವ ಸರ್ಕಾರಿ ಶಾಲೆ ವಿದ್ಯಾರ್ಥಿಗಳು

December 17, 2018

ಅರಸೀಕೆರೆ: ಸರ್ಕಾರಿ ಪ್ರಾಥಮಿಕ ಪಾಠಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತ ರಾಗುತ್ತಿರುವ ಆತಂಕವನ್ನು ತಾಲೂಕಿನ ಪೋಷಕರು ಮತ್ತು ವಿದ್ಯಾರ್ಥಿ ಸಂಘ ಟನೆಗಳ ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದು, ಕೂಡಲೇ ಶಿಕ್ಷಕರನ್ನು ನಿಯೋಜಿಸ ಬೇಕೆಂದು ಒತ್ತಡವೂ ಕೇಳಿ ಬರುತ್ತಿದೆ.

ಹೌದು, ಈ ಬೆಳವಣಿಗೆಗಳು ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಒಂದು ಸರ್ಕಾರಿ ಶಾಲೆಗೆ ಮಾತ್ರ ಸೀಮಿತವಾಗಿರದೇ ಎಲ್ಲ ಶಾಲೆಗಳಲ್ಲೂ ಈ ಬೆಳವಣಿಗೆಗಳು ಅತೀ ಹೆಚ್ಚು ಕಂಡು ಬರುತ್ತಿದೆ.ಇದರಿಂದ ಆಯಾ ಶಾಲೆ ಮಕ್ಕಳು ಸಮಯಕ್ಕೆ ಸರಿಯಾಗಿ ಪಠ್ಯಗಳ ಅಧ್ಯಾಯವನ್ನು ಪೂರೈಸಿಕೊಳ್ಳ ಲಾಗದೇ, ಶಿಕ್ಷಣವನ್ನೂ ಪಡೆಯಲಾಗದೇ ಮೂಲಭೂತ ಹಕ್ಕಿನಿಂದ ವಂಚಿತರಾಗು ತ್ತಿದ್ದಾರೆ. ತಾಲೂಕಿನಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಇರುವ ಸರ್ಕಾರಿ ಶಾಲೆ ಗಳಲ್ಲಿ ಅವಶ್ಯಕತೆಗೂ ಮೀರಿದ ಶಿಕ್ಷಕರು ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.ಆದರೆ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಲಿಯುತ್ತಿರುವ ಉತ್ತಮ ಗುಣಮಟ್ಟದ ಶಾಲೆಗಳಲ್ಲಿ ಅವಶ್ಯಕತೆ ಇರುವ ಶಿಕ್ಷಕರಿ ಗಿಂತ ಕಡಿಮೆ ಶಿಕ್ಷಕರಿದ್ದು, ಈ ಪರಿಸ್ಥಿತಿ ಯಿಂದ ಮಕ್ಕಳು ಸಂಪೂರ್ಣ ವಿದ್ಯಾಭ್ಯಾಸ ವನ್ನು ಪಡೆಯದೇ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಒಂದರಿಂದ ಒಂಭತ್ತನೇ ತರಗತಿಯವ ರೆಗೂ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡಬಾರದೆಂಬ ಇಲಾಖೆಯ ಸುತ್ತೋಲೆ ಮೂಲ ಕಾರಣವಾಗಿದ್ದು, ವಿದ್ಯಾರ್ಥಿಗಳು ಶಿಕ್ಷಣವನ್ನು ಕಲಿತರೆಷ್ಟು ಬಿಟ್ಟರೆಷ್ಟು ಎಂಬ ಆಹಂನಿಂದ ಶಿಕ್ಷಕರು ಕರ್ತವ್ಯ ಲೋಪವನ್ನು ಎಸಗುತ್ತಾ ಶಾಲೆ ಗಳಿಗೆ ಬರುತ್ತಿರುವುದು ಹೊಸತೇನಲ್ಲ. ನೆಪ ಮಾತ್ರಕ್ಕೆ ಹಾಜರಾತಿ ಹಾಕಲು ಬರುವ ಕೆಲವು ಶಿಕ್ಷಕರು ಕರ್ತವ್ಯದ ವೇಳೆಯಲ್ಲಿ ಅನ್ಯ ನಿಮಿತ್ತ ಕಾರ್ಯವೆಂದು ನೆಪ ಹೇಳಿ ಶಾಲೆಗಳಲ್ಲಿ ಇರುವುದಿಲ್ಲವೆಂಬ ಆರೋಪ ಗಳು ಎಲ್ಲಾ ಶಾಲೆಗಳಲ್ಲೂ ದಿನ ನಿತ್ಯ ಕೇಳಿ ಬರುತ್ತಿದೆ.

ಇಂತಹ ಬೆಳವಣಿಗೆಗಳು ಹೆಚ್ಚಾಗಲು ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಸಿ.ಆರ್.ಪಿ ಮತ್ತು ಇಸಿಓ ಅವರುಗಳು ಆಯಾ ಶಾಲೆಗಳಿಗೆ ಅವಶ್ಯಕತೆ ಇರುವ ಶಿಕ್ಷಕರ ವರದಿ ನೀಡುವಲ್ಲಿ ಮಾಡುತ್ತಿರುವ ವಿಳಂಬ ನೀತಿ ಮತ್ತು ಮಲತಾಯಿ ಧೋರಣೆಗಳೇ ಮೂಲ ಕಾರಣವಾಗಿದೆ ಎಂಬ ದೂರು ಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ಕಾರಿ ಶಾಲೆಗಳಲ್ಲಿ ಕೇಳಿ ಬರುತ್ತಿದೆ.ಅತ್ತ ಸರ್ಕಾರಿ ಸಂಬಳವೂ ಬೇಕು ಇತ್ತಾ ಕೆಲಸ ದಲ್ಲೂ ಒತ್ತಡ ಇರಬಾರದು ಎಂಬ ಮೈಗಳ್ಳ ತನದಿಂದ ಅನೇಕ ಶಿಕ್ಷಕರು ಈ ಸಿ.ಆರ್. ಪಿ ಮತ್ತು ಇಸಿಓ ಇವರುಗಳನ್ನು ವಿವಿಧ ಆಮಿಷಗಳೊಂದಿಗೆ ತಮ್ಮ ಪರವಾಗಿ ಇರು ವಂತೆ ಮಾಡಿಕೊಂಡು ಕಡಿಮೆ ಸಂಖ್ಯೆ ಮಕ್ಕಳಿರುವ ಶಾಲೆಗಳಲ್ಲಿ ಸದ್ದಿಲ್ಲದೇ ಮೈ ಕೈ ನೋಯಿಸಿಕೊಳ್ಳದೇ ವೀರಾಜಮಾನ ರಾಗಿ ವೇತನವನ್ನು ಪಡೆಯುತ್ತಿದ್ದಾರೆ.

ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಜಾತಿ ಆಧಾರಿತ ಚಟುವಟಿಕೆಗಳು ಹೆಚ್ಚಾಗುತ್ತಿದ್ದು ಇದರ ಲಾಭವನ್ನು ಪಡೆದುಕೊಂಡ ಕೆಲವು ಅಧಿಕಾರಿಗಳು ತಮ್ಮ ಜಾತಿಗೆ ಸಂಬಂಧಿ ಸಿದ ಶಿಕ್ಷಕರನ್ನು ಅವಶ್ಯಕತೆ ಇಲ್ಲದಿದ್ದರೂ ಕಡಿಮೆ ಸಂಖ್ಯೆ ಮಕ್ಕಳಿರುವ ಶಾಲೆಗಳಲ್ಲೇ ಮುಂದುವರೆಯಲು ಮತ್ತು ನಿಯೋಜನೆ ಮಾಡಲು ಕೃಪಕಟಾಕ್ಷ ಬೀರಿದ್ದಾರೆ ಎಂಬ ಮಾತುಗಳು ಬಿಇಓ ಕಚೇರಿ ಒಳಗೆ ಗುಸು ಗುಸು ಮಾತುಗಳು ಕೇಳಿ ಬರುತ್ತಿವೆ. ಇಂತಹ ಬೆಳವಣಿಗೆಗಳಿಂದ ಪಾಠ ಪ್ರವ ಚನ ಮಾಡುವ ಒತ್ತಡವೂ ಕಡಿಮೆ ಆಗು ತ್ತದೆ ಮತ್ತು ತಮ್ಮ ದೈನಂದಿನ ಚಟು ವಟಿಕೆಗಳಿಗೂ ಅನುಕೂಲವಾಗುತ್ತದೆ ಎಂಬ ದುರಾಲೋಚನೆಯಿಂದ ಹೆಚ್ಚಿನ ಸಂಖ್ಯೆ ಮಕ್ಕಳಿರುವ ಶಾಲೆಗಳಿಗೆ ಯಾವ ಶಿಕ್ಷಕರೂ ಕರ್ತವ್ಯವನ್ನು ನಿರ್ವಹಿಸಲು ಇಷ್ಟ ಪಡುವುದಿಲ್ಲ.

ಜಿಲ್ಲೆಯ ಉಸ್ತುವಾರಿ ಸಚಿವ ಮತ್ತು ಸ್ಥಳೀಯ ಶಾಸಕರು ಸೇರಿದಂತೆ ವಿವಿಧ ಜನ ಪ್ರತಿನಿಧಿಗಳ ಶಿಫಾರಸ್ಸು, ಶಿಕ್ಷಕರ ಸಂಘಗಳ ಮೂಗು ತೂರಿಸುವಿಕೆ, ನಾಯಿ ಕೊಡೆಗಳಂತೆ ಹುಟ್ಟಿಕೊಂಡಿರುವ ಜಾತಿ ವಾರು ಮುಖಂಡರ ಬೆದರಿಕೆ, ರಾಜ ಕೀಯ ಪುಡಾರಿಗಳ ಒತ್ತಡದಿಂದಾಗಿ ಶಿಕ್ಷಣ ಕ್ಷೇತ್ರಾಧಿಕಾರಿಗಳು ಆಕ್ಷರಶಃ ಅಸ ಹಾಯಕರಾಗಿ ಕೈ ಚಲ್ಲುವುದರ ಮೂಲಕ ಆಗಿರುವ ಅವ್ಯವಸ್ಥೆಯನ್ನು ಸರಿಪಡಿಸಲು ಹರಸಾಹಸ ಪಡುತ್ತಿದ್ದಾರೆ.

ಮತ್ತೊಂದು ಹೆಜ್ಜೆ ಮುಂದೋಗಿರುವ ಶಿಕ್ಷಕರು ನಗರಕ್ಕೆ ಹತ್ತಿರವಾಗಿರುವ ಸರ್ಕಾರಿ ಶಾಲೆಗಳಲ್ಲಿ ಹತ್ತಾರು ವರ್ಷ ಗಳಿಂದ ಬೇರೂರಿದ್ದು, ಇವರನ್ನು ಯಾವ ಸರ್ಕಾರಗಳು ಬಂದರೂ ವರ್ಗಾವಣೆ ಮಾಡದಿರುವುದು ಮಾತ್ರ ವಿಪರ್ಯಾಸ ವಾಗಿದೆ.ಅನೇಕ ಶಾಲೆಗಳಲ್ಲಿ ಯಾವುದೇ ಅದೇಶಗಳಿಲ್ಲದೇ, ನಿರ್ದೇಶನವಿಲ್ಲದೇ ಮತ್ತು ಇಲಾಖೆ ಅಧಿಕಾರಿಗಳ ಗಮನಕ್ಕೂ ಬಾರದೇ ನೂರಾರು ಶಿಕ್ಷಕರು ಇಂದು ನಿಯೋಜನೆ ಎಂಬ ಅಸ್ತ್ರವನ್ನು ದುರುಪ ಯೋಗ ಮಾಡಿಕೊಂಡು ಸರ್ಕಾರಿ ಶಾಲೆ ಗಳಲ್ಲಿ ನಾಮಕಾವಸ್ಥೆ ಕರ್ತವ್ಯವನ್ನು ಮಾಡುವುದರ ಮೂಲಕ ಇಲಾಖೆಗೂ ಹಾಗೂ ಶಾಲೆ ಮಕ್ಕಳಿಗೂ ದ್ರೋಹವನ್ನು ಬಗೆಯುತ್ತಾ ದೊಡ್ಡ ಮಟ್ಟದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭಾರೀ ತಲೆ ನೋವಾಗಿ ಪರಿಣಮಿಸಿದ್ದಾರೆ.

ನಿವೃತ್ತಿಯಾಗುವ ಒಂದೆರಡು ವರ್ಷ ಗಳಿರುವ ಹಾಗೇ ತಮಗೆ ಅನುಕೂಲ ವಾದ ಸ್ಥಳಗಳಿಗೆ ನಿಯೋಜನೆ ಎಂಬ ಅಸ್ತ್ರವನ್ನು ಮೂಲವಾಗಿಟ್ಟುಕೊಂಡು ಅನಾರೋಗ್ಯ, ಕುಟುಂಬ ಅವ್ಯವಸ್ಥೆ ಮತ್ತು ವಿವಿಧ ಸುಳ್ಳು ಕಾರಣಗಳನ್ನು ನೀಡಿ ತಮಗೆ ಅನುಕೂಲವಾದ ಬೇರೆ ತಾಲೂಕು ಗಳ ಶಾಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರ ಶಿಫಾರಸ್ಸು ಪತ್ರಗಳೊಂದಿಗೆ ಹೋಗು ತ್ತಿರುವುದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನುಂಗಲೂ ಮತ್ತು ಉಗುಳಲೂ ಆಗದ ಪರಿಸ್ಥಿತಿ ಎದುರಾಗಿದೆ. ಪ್ರತಿ ಶಾಲೆಯಲ್ಲಿ ಇರುವ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಕಣ್ಣು ಮುಚ್ಚಿಕೊಂಡು ಈ ಎಲ್ಲಾ ಆಗುಹೋಗು ಗಳನ್ನು ನೋಡಿಯೂ ನೋಡದಂತೆ ಇರುವುದು ಮಾತ್ರ ವಿಪರ್ಯಾಸವಾಗಿದೆ.

ಇಂತಹ ಬೆಳವಣಿಗೆಗಳಿಂದ ನೊಂದಿ ರುವ ಪ್ರಾಮಾಣಿಕ ಶಿಕ್ಷಕರು ಸಂಘಟಿತ ರಾಗಿ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಮುಂಚೆಯೇ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಕಡಿಮೆ ಸಂಖ್ಯೆ ಮಕ್ಕಳಿರುವ ಶಾಲೆ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್ಚಿನ ಸಂಖ್ಯೆಯ ಶಿಕ್ಷಕರನ್ನು, ಕೂಡಲೇ ಹೆಚ್ಚು ಸಂಖ್ಯೆ ಮಕ್ಕಳಿರುವ ಶಾಲೆಗಳಿಗೆ ವರ್ಗಾ ವಣೆ ಅಥವಾ ನಿಯೋಜನೆ ಮಾಡುವು ದರ ಮೂಲಕ ಸರ್ಕಾರಿ ಶಾಲೆ ಮಕ್ಕಳಿಗೆ ಆಗು ತ್ತಿರುವ ಶಿಕ್ಷಣದ ವಂಚನೆಯಿಂದ ಮುಕ್ತಿಗೊಳಿಸ ಬೇಕಾಗಿದೆ. ಇಲ್ಲದಿದ್ದಲ್ಲಿ ಈಗಾಗಲೇ ಸರ್ಕಾರಿ ಶಾಲೆಗಳನ್ನು ಮುಚ್ಚ ಬೇಕೆಂಬ ಸರ್ಕಾರದ ನಿರ್ಧಾರಕ್ಕೆ ಈ ನಿಷ್ಪ್ರ ಯೋಜಕ ಶಿಕ್ಷಕರೇ ಮೂಲ ಕಾರಣವಾಗುತ್ತಾರೆ ಎಂಬುದು ನಗ್ನಸತ್ಯ.

ಕಡಿಮೆ ಶಿಕ್ಷಕರಿರುವ ಶಾಲೆಗಳಿಗೆ ಶಿಕ್ಷಕರನ್ನು ಕೂಡಲೇ ನೇಮಕ ಮಾಡಬೇಕು; ಇಲ್ಲದಿದ್ದಲ್ಲಿ ಉಗ್ರ ಹೋರಾಟ
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇ ಶಕರು ಮತ್ತು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸರ್ಕಾರಿ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆಗಳನ್ನು ಕೂಡಲೇ ಬಗೆಹರಿಸ ಬೇಕು. ಕಡಿಮೆ ಸಂಖ್ಯೆ ವಿದ್ಯಾರ್ಥಿಗಳಿರುವ ಶಾಲೆಗಳ ಹೆಚ್ಚಿನ ಶಿಕ್ಷಕರನ್ನು, ಕೂಡಲೇ ಹೆಚ್ಚು ಸಂಖ್ಯೆ ವಿದ್ಯಾರ್ಥಿಗಳಿರುವ ಶಾಲೆ ಗಳಿಗೆ ನಿಯುಕ್ತಿಗೊಳಿಸಬೇಕು. ತಾಲೂಕಿನ ಸರ್ಕಾರಿ ಶಾಲೆಗಳ ಲ್ಲಿನ ಶಿಕ್ಷಣ ಗುಣಮಟ್ಟ ಕಡಿಮೆಯಾದಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳೇ ಹೊಣೆಗಾರರಾಗಿರುತ್ತಾರೆ. ಶಾಲಾ ಮಕ್ಕಳ ಶಿಕ್ಷಣ ಗುಣಮಟ್ಟದಲ್ಲಿ ಯಾವುದೇ ರಾಜಕೀಯ ಬೇಡ. ಒಂದು ವೇಳೆ ಅನಿವಾರ್ಯವಾದರೆ ಶಿಕ್ಷಣದಿಂದ ವಂಚಿತರಾಗುತ್ತಿರುವ ಆಯಾ ಶಾಲಾ ಮಕ್ಕಳಿಗೆ ನಮ್ಮ ಸಂಘಟನೆಯಿಂದ ಬೆಂಬಲವನ್ನು ಸೂಚಿಸಿ ಅವ್ಯವಸ್ಥೆಯ ವಿರುದ್ಧ ಹೋರಾಟ ಮಾಡಲಾಗುವುದು. ಶೈಕ್ಷಣಿಕ ವರ್ಷ ಮುಗಿಯುವವರೆಗೂ ಶಿಕ್ಷಕರ ಕೊರತೆ ಇರುವ ಶಾಲೆಗಳಿಂದ ಯಾವುದೇ ಶಿಕ್ಷಕರನ್ನು ಬೇರೆ ತಾಲೂಕುಗಳ ಶಾಲೆಗಳಿಗೆ ವರ್ಗಾವಣೆ ಮಾಡುವುದಾಗಲಿ, ನಿಯೋಜನೆ ಮಾಡುವುದಾಗಲಿ ಅಧಿಕಾರಿಗಳು ಮಾಡಬಾರದು.ಅಂತಹ ಬೆಳ ವಣಿಗೆಗಳು ಕಂಡು ಬಂದಲ್ಲಿ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ಎಬಿವಿಪಿ ಮುಖಂಡ ಕಣಕಟ್ಟೆ ಮಂಜುನಾಥ್ ಎಚ್ಚರಿಸಿದರು.

Translate »