ಹಾಸನ: ದೊಡ್ಡಹುಲ್ಲೂರು ರುಕ್ಕೋಜಿ ಅವರ ರಚನೆಯ ಡಾ.ರಾಜ್ ಕುಮಾರ್ ಅವರ ಸಮಗ್ರ ಚರಿತ್ರೆ ಸಂಪುಟ ಗಳ 18ನೇ ಪುಸ್ತಕ ಲೋಕಾರ್ಪಣೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷ ರವಿನಾಕಲಗೂಡು ನೆರವೇರಿಸಿದರು. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶನಿವಾರ ಜಿಲ್ಲಾ ರಾಜ್‍ಕುಮಾರ್ ಅಭಿಮಾನಿಗಳ ಸಂಘದ, ಜಿಲ್ಲಾ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ಜಿಲ್ಲಾ ಪುನೀತ್ ರಾಜ್‍ಕುಮಾರ್ ಅಭಿಮಾನಿ ಸಂಘ, ಜಿಲ್ಲಾ ಉಪೇಂದ್ರ ಅಭಿಮಾನಿಗಳ ಸಂಘ, ಶ್ರೀವೀರಭದ್ರೇಶ್ವರ ಸ್ವಾಮಿ ಕಲಾ ಸಂಘದಿಂದ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಗೊಳಿಸಿ ಅವರು ಮಾತನಾಡಿದರು. 15…
ಸಕಾಲದಲ್ಲಿ ವಿಕಲಚೇತನರಿಗೆ ಸೌಲಭ್ಯ ತಲುಪಿಸಿ
September 27, 2018ಹಾಸನ: ವಿಕಲಚೇತನರಿಗೆ ಕಾನೂನು ಬದ್ಧವಾಗಿ ದೊರೆಯಬೇಕಿರುವ ಎಲ್ಲಾ ಸೌಲಭ್ಯ ಗಳನ್ನು ಕಾಲಮಿತಿಯೊಳಗೆ ತಲುಪಿಸಿ ಎಂದು ಅಂಗವಿಕಲರ ಅಧಿನಿಯಮದ ಆಯುಕ್ತ ವಿ.ಎಸ್. ಬಸವರಾಜು ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿಕಲಚೇತನರ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ಸರ್ಕಾರಿ ಸಿಬ್ಬಂದಿ ಕೇವಲ ಯೋಜನೆಯ ಅನುಷ್ಠಾನದ ಯಾಂತ್ರಿಕ ವ್ಯಕ್ತಿಗಳಾ ಗದೇ ಮಾನವೀಯತೆ ಹೊಂದಿದ ಮನುಷ್ಯರಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ವಿಕಲಚೇತನರಿಗೆ ಅಭಿವೃದ್ಧಿಗೆ ಶೇ.50ರಷ್ಟು ಅನುದಾನವನ್ನು ಮೀಸಲಿರಿಸಿ,…
3ನೇ ಮದುವೆಗೆ 2ನೇ ಪತ್ನಿ ಕೊಂದ ಪತಿರಾಯ
September 27, 2018ಚನ್ನರಾಯಪಟ್ಟಣ: ತಾಲೂಕಿನ ವಡ್ಡರಹಳ್ಳಿ ಜಾಕ್ವೆಲ್ ಬಳಿ ನಡೆದ ಮಹಿಳೆ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, 3ನೇ ಮದುವೆಯಾಗಲು ಪತಿಯೇ 2ನೇ ಪತ್ನಿಯನ್ನು ಸಿನೀಮಿಯ ರೀತಿಯಲ್ಲಿ ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತಾಲೂಕಿನ ನಂದಿಹಳ್ಳಿಯ ಸುಮಾ (26) ಹತ್ಯೆಗೀಡಾದ ಮಹಿಳೆ. ತುಮ ಕೂರು ಜಿಲ್ಲೆಯ ಶಿರಾ ಮೂಲದ ಶಿವಣ್ಣ (38) ಪತ್ನಿಯನ್ನು ಕೊಲೆಗೈದ ಪತಿ. ಬೆಂಗಳೂರಿನಲ್ಲಿರುವ ಪ್ರಸಿದ್ಧ ಆಟೋ ಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಣ್ಣ ಮೊದಲೇ ಒಂದು ಮದುವೆಯಾಗಿ, ಮೊದಲ ಪತ್ನಿಗೆ ಇಬ್ಬರು ಮಕ್ಕಳನ್ನು ಕರುಣಿಸಿದ್ದ. ನಂತರ…
ನಾಲೆ ಇಲ್ಲದೆ ರಸ್ತೆ-ಜಮೀನಿನಲ್ಲಿ ಹರಿಯುತ್ತಿದೆ ನೀರು
September 26, 2018ಬೇಲೂರು:ತಾಲೂಕಿನ ಹಳೇಬೀಡು ಮಾದಿಹಳ್ಳಿ ಹೋಬಳಿಗೆ ಯಗಚಿ ನೀರು ಹರಿಸುವ ಹಾಲ್ತೊರೆ ಏತ ನೀರಾವರಿ ಯೋಜನೆಯಿಂದ ರೈತರಿಗೆ ಅನುಕೂಲ ಆಗುವುದರ ಜತೆಗೆ ಹೆಚ್ಚಿನ ರೀತಿಯಲ್ಲಿ ಅನಾನುಕೂಲವೂ ಸಂಭವಿಸುತ್ತಿದೆ. ರೈತರ ಹಿತಾಸಕ್ತಿ ಮರೆತು ಯೋಜನೆ ರೂಪಿಸಿರುವುದರಿಂದ ಇಂದು ನೂರಾರು ರೈತರು ತಮ್ಮ ಭೂಮಿಯಲ್ಲಿ ಬೆಳೆದಿರುವ ಬೆಳೆಗಳನ್ನು ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದು, ನಾಲೆ ಇಲ್ಲದೆ ಹಾಲ್ತೊರೆ ಏತನೀರಾವರಿ ಯೋಜನೆಯ ನೀರು ಜಮೀನು, ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ರೈತರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. ಮಲ್ಲಿಕಾರ್ಜುನಪುರ ವರೆಗೆ ನಾಲೆ: ಹಳೇಬೀಡು ಮಾದಿಹಳ್ಳಿ…
ಬಡವರು, ರೈತ ಪರ ಸಿಎಂ ಕಾರ್ಯಕ್ರಮ; ಆಹಾರ ಮಣ್ಣುಪಾಲು, ಜಿಲ್ಲಾ ಕ್ರೀಡಾಂಗಣ ಪ್ರಾಸ್ಟಿಕ್‍ಮಯ
September 25, 2018ಹಾಸನ: ರೈತರು, ಬಡವರು, ಅಸಹಾಯಕರ ಪರ ಕಾಳಜಿ ವ್ಯಕ್ತಪಡಿ ಸುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಕಾರ್ಯಕ್ರಮದಲ್ಲೇ ಅದಕ್ಕೆ ತದ್ವಿ ರುದ್ಧವಾಗಿ ಹಸಿದವರ ಹೊಟ್ಟೆ ತಣಿಸ ಬೇಕಿದ್ದ ಆಹಾರ ಎಲ್ಲೆಂದರಲ್ಲಿ ಚೆಲ್ಲಾಡುವ ಮೂಲಕ ಮಣ್ಣುಪಾಲಾಗಿದೆ. ನಗರದಲ್ಲಿ ಏರ್ಪಡಿಸಿದ್ದ 1,650 ಕೋಟಿ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬಡವರು, ರೈತರು ಅಸಹಾಯಕರ ಪರ ಕಾಳಜಿ ವ್ಯಕ್ತಪಡಿಸಿ ದ್ದರು. ಆದರೆ ಅದೇ ಬಡವರು, ಅಸಹಾ ಯಕರು, ಹಸಿದವರ ಹೊಟ್ಟೆ ತುಂಬಿಸ ಬೇಕಿದ್ದ ಕ್ವಿಂಟಾಲ್‍ಗಟ್ಟಲೇ ಆಹಾರ ವ್ಯರ್ಥವಾಗಿದೆ….
ದೇವರು ಕೊಟ್ಟ ಅಧಿಕಾರವನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ
September 24, 2018ಹಾಸನ: ನನಗೆ ಮುಖ್ಯಮಂತ್ರಿಯಾಗಿ ದೇವರು ಕೊಟ್ಟಿರುವ ಅಧಿಕಾರವನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲೆಯ 1,650 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿಯ ನಾಲ್ಕೈದು ನಾಯಕರು ಸಮ್ಮಿಶ್ರ ಸರ್ಕಾರ ಉರುಳಿಸುವ ಚಿಂತೆಯಲ್ಲಿದ್ದಾರೆ. ಇವರಿಂದ ನನ್ನ ಸರ್ಕಾರ ಉರುಳಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು. ನನಗೆ ಎರಡನೇ ಬಾರಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿದಾಗ ಬದುಕಿದ್ದರೆ ಅದು ಜನರ ಆಶೀರ್ವಾದದಿಂದ. ಹಾಗಾಗಿ ನಿಮ್ಮ ಸಾಲಮನ್ನಾ…
ಸಮಾಜದ ಅಭಿವೃದ್ಧಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರ
September 23, 2018ಹಾಸನ: ಸಮಾಜದ ಅಭಿವೃದ್ಧಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾದದ್ದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಅಭಿಪ್ರಾಯಪಟ್ಟರು.ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಹಾಸನಾಂಬ ಕಲಾಭವನದಲ್ಲಿ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಂದು ಸಮುದಾಯಕ್ಕೂ ತನ್ನದೇ ಆದ ಮಹತ್ವ ಇದೆ. ಅದನ್ನು ಗೌರವಿಸಬೇಕು ಎಂದರು. ವಿಶ್ವಕರ್ಮ ಜನಾಂಗವಿಲ್ಲದೆ ಸಮಾಜ ಕಟ್ಟಲು ಸಾಧ್ಯವಿಲ್ಲ. ಏಕೆಂದರೆ ಅಭಿವೃದ್ಧಿಗೆ ಪೂರಕವಾದ ವಿಶ್ವಕರ್ಮ ಸಮಾಜದ ಕುಲ ಕಸುಬುಗಳಿವೆ. ಆದರೆ ಈ ಸಮುದಾಯ ತಮ್ಮ…
ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಘಟಿಸಿ: ನವೀನ್ ರಾಜ್‍ಸಿಂಗ್ ಸೂಚನೆ
September 23, 2018ಹಾಸನ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಂದ ಸೆ.23ರಂದು ವಿವಿಧ ಇಲಾಖೆಗಳ ಹತ್ತಾರು ಕಾಮಗಾರಿ ಗಳ ಶಿಲಾನ್ಯಾಸ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮ ಅಚ್ಚುಕಟ್ಟಾಗಿ ಸಂಘಟಿಸುವಂತೆ ರಾಜ್ಯ ಮಿನರಲ್ ಕಾಪೆರ್Çೀರೇಷನ್ ಲಿ. ವ್ಯವಸ್ಥಾಪಕ ನಿರ್ದೇಶಕರೂ ಆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸೆ.23ರಂದು ಜಿಲ್ಲೆಗೆ ಆಗಮಿಸು ತ್ತಿರುವ ಹಿನ್ನೆಲೆಯಲ್ಲಿ ನಗರದ ಜಿಲ್ಲಾದಿ ಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವ ಸಿದ್ಧತೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲೋಕೋಪಯೋಗಿ ಇಲಾಖೆಯ ಕಟ್ಟಡಗಳು…
ಸರಗಳ್ಳನ ಬಂಧನ
September 23, 2018ಬೇಲೂರು: ಸರಗಳ್ಳತನ ಮಾಡುತ್ತಿದ್ದ ಖದೀಮನನ್ನು ಬಂಧಿಸುವಲ್ಲಿ ಪಟ್ಟಣ ಪೋಲಿಸರು ಯಶಸ್ವಿಯಾಗಿದ್ದಾರೆ. ಪಟ್ಟಣದ ಕುಂಬಾರಬೀದಿ ನಿವಾಸಿ ಸುನೀಲ್(20) ಬಂಧಿತ. ಪಟ್ಟಣದ ವ್ಯಾಪ್ತಿಯಲ್ಲಿ ಹೊಂಚು ಹಾಕಿ ಮಹಿಳೆಯರ ಸರ ಕಸಿದು ಪರಾರಿಯಾಗುತ್ತಿದ್ದ ಈತನನ್ನು ಸಿಪಿಐ ಲೋಕೇಶ್, ಎಸ್‍ಐ ಜಗದೀಶ್ ಮತ್ತು ಸಿಬ್ಬಂದಿ ಜಮೃದ್ ಖಾನ್, ನಂದೀಶ್, ತಾಂಡವೇಶ್ವರನ್ನೊಳಗೊಂಡ ತಂಡ ಖದೀಮನನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದೆ. ಖದೀಮನಿಂದ ಅಂದಾಜು 1.80 ಲಕ್ಷ ರೂ. ಮೌಲ್ಯದ 48 ಗ್ರಾಂ. ಚಿನ್ನಾಭರಣ, ಹೀರೋ ಹೋಂಡಾ ಬೈಕ್ ವಶಪಡಿಸಿಕೊಳ್ಳಲಾಗಿದೆ.
ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು
September 23, 2018ಚನ್ನರಾಯಪಟ್ಟಣ: ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಮೃತಪಟ್ಟ ಘಟನೆ ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದೇವರಾಜು(55) ಮೃತರು. ಪತ್ನಿ ಜತೆಯಲ್ಲಿ ಮಧ್ಯಾಹ್ನ ತೋಟದ ಕೆಲಸ ಮಾಡುತ್ತಿದ್ದ ವೇಳೆ ಮರದ ರೆಂಬೆ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ವಿದ್ಯುತ್ ತಂತಿ ತುಂಡಾಗಿ ದೇವರಾಜು ಅವರ ಮೇಲೆ ಬಿದ್ದಿದೆ. ಪರಿಣಾಮ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಅಸುನೀಗಿದರು. ಹಿರೀಸಾವೆ ಠಾಣೆಯಲ್ಲಿ ದೂರು ದಾಖಲಾಗಿದೆ.