ಕೊಡಗು

ಜೆಡಿಎಸ್ ಮುಖಂಡರಿಂದ ಸಾ.ರಾ.ಮಹೇಶ್ ಭೇಟಿ
ಕೊಡಗು

ಜೆಡಿಎಸ್ ಮುಖಂಡರಿಂದ ಸಾ.ರಾ.ಮಹೇಶ್ ಭೇಟಿ

August 2, 2018

ಗೋಣಿಕೊಪ್ಪಲು: ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ರಾಜ್ಯ ಪ್ರವಾಸೋದ್ಯಮ ಮತ್ತು ರೇಷ್ಮೆ ಖಾತೆಯ ಸಚಿವ ಸಾ.ರಾ. ಮಹೇಶ್‍ಅವರನ್ನು ಜೆಡಿಎಸ್‍ನ ಮುಖಂಡ ರಾದ ಮೇರಿಯಂಡ ಸಂಕೇತ್ ಪೂವಯ್ಯ ನೇತೃತ್ವದಲ್ಲಿ ಭೇಟಿ ಮಾಡಿ ಶುಭ ಕೋರಿದರು. ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೇಮಕಗೊಳ್ಳುತ್ತಿದ್ದಂತೆ ಬೆಂಗಳೂರಿ ನಲ್ಲಿರುವ ಸಚಿವರ ಅಧಿಕೃತ ನಿವಾಸಕ್ಕೆ ತೆರಳಿದ ಕೊಡಗು ಜಿಲ್ಲಾ ಜಾತ್ಯತೀತಾ ಜನತಾದಳದ ಮುಖಂಡರ ತಂಡ ಭೇಟಿ ಮಾಡಿ ಜಿಲ್ಲೆಯ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟರು. ಮುಖ್ಯಮಂತ್ರಿ ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ 100…

ಆ.5, ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗೆ ಪರೀಕ್ಷೆ
ಕೊಡಗು

ಆ.5, ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗೆ ಪರೀಕ್ಷೆ

August 1, 2018

ಮಡಿಕೇರಿ:  ಕೊಡಗು ಜಿಲ್ಲಾ ಪೊಲೀಸ್ ಘಟಕದಲ್ಲಿ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯು ಆಗಸ್ಟ್ 5ರಂದು ನಗರದ ವಿವಿಧ ಶಾಲಾ-ಕಾಲೇಜುಗಳಲ್ಲಿ ನಡೆಯಲಿದೆ. ಅಭ್ಯರ್ಥಿಗಳು ಪ್ರವೇಶ/ಹಾಜರಾತಿ ಪತ್ರವನ್ನು ಪೊಲೀಸ್ ಅಂತರ್ಜಾಲದಲ್ಲಿ www.ksp.gov.in ಪಡೆದು ಅದರಲ್ಲಿ ನಿಗದಿ ಪಡಿಸಿರುವ ಭಾವಚಿತ್ರವಿರುವ ದಾಖಲೆಗಳೊಂದಿಗೆ ಪರೀಕ್ಷೆಗೆ ಹಾಜರಾಗುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರು ತಿಳಿಸಿದ್ದಾರೆ.

ನಿವೇಶನ, ವಸತಿ ರಹಿತರ ಪಟ್ಟಿ ಸಿದ್ದಪಡಿಸಲು ಶಾಸಕ ಅಪ್ಪಚ್ಚು ರಂಜನ್ ಸೂಚನೆ
ಕೊಡಗು

ನಿವೇಶನ, ವಸತಿ ರಹಿತರ ಪಟ್ಟಿ ಸಿದ್ದಪಡಿಸಲು ಶಾಸಕ ಅಪ್ಪಚ್ಚು ರಂಜನ್ ಸೂಚನೆ

August 1, 2018

ಸೋಮವಾರಪೇಟೆ: ಮುಂದಿನ 5 ವರ್ಷದೊಳಗೆ ತಾಲೂಕಿನ ಎಲ್ಲರಿಗೂ ನಿವೇಶನ ಮತ್ತು ಸ್ವಂತ ಮನೆ ಒದಗಿಸುವ ನಿಟ್ಟಿನಲ್ಲಿ ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ನಿವೇಶನ ರಹಿತರು ಹಾಗೂ ವಸತಿ ರಹಿತರ ಪಟ್ಟಿ ಸಿದ್ಧಗೊಳಿಸಬೇಕು ಎಂದು ಶಾಸಕ ರಂಜನ್ ಸೂಚಿಸಿದರು. ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹತ್ತಾರು ಎಕರೆ ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಪ್ರಕರಣಗಳನ್ನು ಪತ್ತೆ ಹಚ್ಚಿ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ತಹಸೀಲ್ದಾರ್ ಮಹೇಶ್…

ಸಾಧಾರಣ ಮಳೆ: ಕೃಷಿ ಚಟುವಟಿಕೆ ಚುರುಕು
ಕೊಡಗು

ಸಾಧಾರಣ ಮಳೆ: ಕೃಷಿ ಚಟುವಟಿಕೆ ಚುರುಕು

August 1, 2018

ಮಡಿಕೇರಿ:  ಜಿಲ್ಲೆಯಲ್ಲಿ ಸಾಧಾರಣ ಮಳೆ ಮುಂದುವರೆದಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ಭತ್ತ ಕೃಷಿಗೆ ನಾಟಿ ಪ್ರಕ್ರಿಯೆ ನಡೆಯುತ್ತಿದ್ದು, ಈಗಾಗಲೇ ಹಲವು ಕಡೆ ನಾಟಿ ಪ್ರಾರಂಭವಾಗಿದೆ. ಜಿಲ್ಲೆಯಾದ್ಯಂತ ಸುಮಾರು 9,800 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಆಗಿದೆ. ಹಾಗೆಯೇ ಮುಸುಕಿನ ಜೋಳ 1800 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಯಾಗಿದೆ. ಮಡಿಕೇರಿ ತಾಲೂಕಿ ನಲ್ಲಿ 6500 ಹೆಕ್ಟೇರ್ ಪ್ರದೇಶದ ಗುರಿಗೆ 850 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿಯಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ 10000 ಹೆಕ್ಟೇರ್ ಪ್ರದೇಶದ ಗುರಿಯಲ್ಲಿ 1,103 ಹೆಕ್ಟೇರ್ ಪ್ರದೇಶದಲ್ಲಿ…

ವಿರಾಜಪೇಟೆಯಲ್ಲಿ ಚಿನ್ನಬೆಳ್ಳಿ ವರ್ತಕರ ಸಂಘದ ಮಹಾಸಭೆ
ಕೊಡಗು

ವಿರಾಜಪೇಟೆಯಲ್ಲಿ ಚಿನ್ನಬೆಳ್ಳಿ ವರ್ತಕರ ಸಂಘದ ಮಹಾಸಭೆ

August 1, 2018

ವಿರಾಜಪೇಟೆ:  ಚಿನ್ನ ಬೆಳ್ಳಿ ಉದ್ಯ ಮಕ್ಕೆ ಕೆಲಸಗಾರರ ಕೊರತೆ, ಕಳ್ಳ ಕಾಕರ ಮೂಲಕ ಚಿನ್ನ ಬೆಳ್ಳಿ ವರ್ತಕರಿಗೆ ಪೊಲೀಸ್‍ರಿಂದ ಕಿರು ಕುಳಕ್ಕೊಳಗಾಗುತ್ತಿರುವುದರಿಂದ ದಶಕಗಳ ಹಿಂದಿನ ಪ್ರತಿಷ್ಠಿತ ವ್ಯವಹಾರಕ್ಕೆ ಧಕ್ಕೆ ಉಂಟಾಗಿದೆ ಎಂದು ಮಂಗಳೂರು ಕೊಂಕಣಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಅರುಣ್ ಜಿ.ಶೇಟ್ ಹೇಳಿದರು. ವಿರಾಜಪೇಟೆ ಸಮೀಪದ ಬಿಟ್ಟಂಗಾಲ ಕೊಡಗು ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ಆಯೋ ಜಿಸಲಾಗಿದ್ದ ತಾಲೂಕು ಚಿನ್ನ ಬೆಳ್ಳಿವರ್ತಕರ ಹಾಗೂ ಕೆಲಸಗಾರರ ಸಂಘದ ವಾರ್ಷಿಕ ಮಹಾ ಸಭೆಯನ್ನು ಉದ್ಘಾಟಿಸಿದ ಅವರು ಮಾತನಾಡಿ, ಚಿನ್ನ ಬೆಳ್ಳಿ ಉದ್ಯಮ…

ಜೆಡಿಎಸ್ ಮಡಿಕೇರಿ ನಗರಾಧ್ಯಕ್ಷ ರಾಜೀನಾಮೆ
ಕೊಡಗು

ಜೆಡಿಎಸ್ ಮಡಿಕೇರಿ ನಗರಾಧ್ಯಕ್ಷ ರಾಜೀನಾಮೆ

August 1, 2018

ಮಡಿಕೇರಿ: ಜೆಡಿಎಸ್ ಮಡಿಕೇರಿ ನಗರ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರು ವುದಾಗಿ ಬಿ.ವೈ.ರಾಜೇಶ್ ಯಲ್ಲಪ್ಪ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಕ್ಷದ ಮುಖಂಡರು ಹಾಗೂ ಮಾಜಿ ಸಚಿವ ಬಿ.ಎ.ಜೀವಿಜಯ ಅವರಿಗೆ ರಾಜೀನಾಮೆ ಸಲ್ಲಿಸಿರುವುದಾಗಿ ಹೇಳಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ರಾಜೀನಾಮೆ ನೀಡಿರು ವುದರಿಂದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸುಗಮವಾಗಿ ನಡೆಯಲು, ಪಕ್ಷದ ಪುನರ್ ರಚನೆ ಮತ್ತು ಪುನರ್ ಸಂಘಟನೆ ಬಲಯುತ ವಾಗಬೇಕೆನ್ನುವ ಉದ್ದೇಶದಿಂದ ನಗರಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ರಾಜೇಶ್ ಯಲ್ಲಪ್ಪ…

ಆ.8 ರಿಂದ ಕುಟುಂಬ ಕಲ್ಯಾಣ ಕಾರ್ಯಕ್ರಮದ ಶಸ್ತ್ರ ಚಿಕಿತ್ಸಾ ಶಿಬಿರ
ಕೊಡಗು

ಆ.8 ರಿಂದ ಕುಟುಂಬ ಕಲ್ಯಾಣ ಕಾರ್ಯಕ್ರಮದ ಶಸ್ತ್ರ ಚಿಕಿತ್ಸಾ ಶಿಬಿರ

August 1, 2018

ಮಡಿಕೇರಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 2018ರ ಆಗಸ್ಟ್ ಮಾಹೆಯಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮದ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಲಿದೆ. ಆಗಸ್ಟ್ 8 ರಂದು ನಾಪೋಕ್ಲು, ಆಗಸ್ಟ್ 18 ರಂದು ಸೋಮವಾರಪೇಟೆ, ಆಗಸ್ಟ್ 20ರಂದು ಕುಶಾಲನಗರ ಆ.13 ರಂದು ಗೋಣಿಕೊಪ್ಪ, ಆಗಸ್ಟ್ 25ರಂದು ಸಿದ್ದಾಪುರ, ಪಾಲಿಬೆಟ್ಟ ಮತ್ತು ಆಗಸ್ಟ್ 27 ರಂದು ಕುಟ್ಟ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲ್ಯಾಪ್ರೊಸ್ಕೋಪಿಕ್ ಎಂಬ ಚಿಕಿತ್ಸಾ ಶಿಬಿರ ನಡೆಯಲಿದೆ. ಆಗಸ್ಟ್ 14 ರಂದು ಸುಂಟಿಕೊಪ್ಪ, ಆ.16 ರಂದು…

ವಿರಾಜಪೇಟೆ ಪಟ್ಟಣ ಪಂಚಾಯಿತಿ ಸಭೆ: ರಸ್ತೆ ದುರಸ್ತಿ-ಕುಡಿಯುವ ನೀರು ಪೂರೈಕೆಗೆ ಕ್ರಮ
ಕೊಡಗು

ವಿರಾಜಪೇಟೆ ಪಟ್ಟಣ ಪಂಚಾಯಿತಿ ಸಭೆ: ರಸ್ತೆ ದುರಸ್ತಿ-ಕುಡಿಯುವ ನೀರು ಪೂರೈಕೆಗೆ ಕ್ರಮ

July 31, 2018

ವಿರಾಜಪೇಟೆ: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲ ರಸ್ತೆಗಳು ಹಾನಿಗೊಳಗಾಗಿದ್ದು, ರೂ,50 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿರುವುದ ರಿಂದ ಮಳೆ ಕಡಮೆಯಾದ ಕೂಡಲೆ ರೂ. 32 ಲಕ್ಷ ವೆಚ್ಚದಲ್ಲಿ ರಸ್ತೆಗಳ ಗುಂಡಿ ಮುಚ್ಚಿ ದುರಸ್ತಿಪಡಿಸುವುದು ಹಾಗೂ ವಿವಿಧ ವಾರ್ಡ್‍ಗಳಲ್ಲಿ ಜನಪರ ಅಗತ್ಯ ಕಾಮಗಾರಿಗಳನ್ನು ಮಳೆ ಹಾನಿ ಪರಿಹಾರ ದಲ್ಲಿ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ.ಜೀವನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಹಿರಿಯ ಸದಸ್ಯ ಎಸ್.ಎಚ್.ಮೈನುದ್ದೀನ್ ಮಾತನಾಡಿ,…

ಮಡಿಕೇರಿಯಲ್ಲಿ ಮನೆ ಮೇಲೆ ಶೂಟೌಟ್: ಇಬ್ಬರ ಬಂಧನ
ಕೊಡಗು

ಮಡಿಕೇರಿಯಲ್ಲಿ ಮನೆ ಮೇಲೆ ಶೂಟೌಟ್: ಇಬ್ಬರ ಬಂಧನ

July 31, 2018

ಮಡಿಕೇರಿ:  ಮನೆಯೊಂದರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ನಗರದ ಎಫ್.ಎಂ.ಸಿ. ಕಾಲೇಜು ಹಿಂಭಾಗ ನಡೆದಿದ್ದು, ಕೆಲವೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಅಪರಾಧ ಪತ್ತೆದಳ ಯಶಸ್ವಿಯಾಗಿದೆ. ಮಡಿಕೇರಿಯ ಜೀವ ವಿಮಾ ನಿಗಮದಲ್ಲಿ ಉದ್ಯೋಗಿಯಾಗಿರುವ ಜನಾರ್ಧನ ಎಂಬು ವರ ಮನೆಯ ಮೇಲೆ ಗುಂಡಿನ ದಾಳಿ ನಡೆದಿದ್ದು, ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಈ ಕೃತ್ಯವೆಸಗಿದ ಮಡಿಕೇರಿ ನಿವಾಸಿಗಳಾದ ಲೋಕೇಶ್, ಆಟೋ ಮೆಕ್ಯಾನಿಕ್ ಅಕ್ರಂ ಅವರನ್ನು ಜಿಲ್ಲಾ ಅಪರಾಧ ಪತ್ತೆ ದಳ ಬಂಧಿಸಿದ್ದು, ನಗರ ಠಾಣೆ…

ಕೊಡಗು ಸಮಗ್ರ ಅಭಿವೃದ್ಧಿಗೆ ಕಟಿಬದ್ಧ
ಕೊಡಗು

ಕೊಡಗು ಸಮಗ್ರ ಅಭಿವೃದ್ಧಿಗೆ ಕಟಿಬದ್ಧ

July 31, 2018

ಸೋಮವಾರಪೇಟೆ: ಕ್ಷೇತ್ರದ ಜನತೆ ತಮಗೆ ರಾಜಕೀಯ ಶಕ್ತಿ ನೀಡದಿದ್ದರೂ, ರಾಜ್ಯದಲ್ಲಿ ಜೆಡಿಎಸ್ ಸರ್ಕಾರವಿರುವುದರಿಂದ ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಟಿಬದ್ಧನಾಗಿದ್ದೇನೆ. ಈ ನಿಟ್ಟಿನಲ್ಲಿ ಜನತೆ ಆತ್ಮಸ್ಥೈರ್ಯ ತುಂಬಬೇಕೆಂದು ಮಾಜಿ ಸಚಿವ ಬಿ.ಎ. ಜೀವಿಜಯ ಹೇಳಿದರು. ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಜೆಡಿಎಸ್ ಆಯೋಜಿಸಿದ್ದ ಆತ್ಮಾವಲೋಕನ ಸಭೆಯಲ್ಲಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಹಲವಾರು ರಸ್ತೆ, ಸೇತುವೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾದ ಅನಿವಾರ್ಯತೆ ಇದೆ. ಇಂತಹ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಂಕೇತ್‍ಪೂವಯ್ಯ ರಾಜೀನಾಮೆ ನೀಡಿರುವುದು ಸಮಂಜಸವಲ್ಲ. ಹೀಗಾಗಿ…

1 147 148 149 150 151 187
Translate »