ಕೊಡಗು

ಕುಟ್ಟ ವ್ಯಾಪ್ತಿಯಲ್ಲಿ ಅಪರಿಚಿತ ಶವ ಪತ್ತೆ
ಕೊಡಗು

ಕುಟ್ಟ ವ್ಯಾಪ್ತಿಯಲ್ಲಿ ಅಪರಿಚಿತ ಶವ ಪತ್ತೆ

July 30, 2018

ಗೋಣಿಕೊಪ್ಪಲು: ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಪುರುಷ ಶವ ಪತ್ತೆಯಾಗಿದ್ದು, ವಾರಸುದಾರರು ಇದ್ದಲ್ಲಿ ಕುಟ್ಟ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಿದೆ. ಅಲ್ಲಿನ ಕೇಂಬುಕೊಲ್ಲಿ ಸಮೀಪದ ಫೈತ್ ಎಸ್ಟೇಟ್ ದಾರಿಯ ಚರಂಡಿಯಲ್ಲಿ ನಿತ್ರಾಣ ಗೊಂಡು ಬಿದ್ದಿದ್ದರು. ಇವರನ್ನು ಕುಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಥಳೀಯ ಪೊಲೀಸರು ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಜು.25 ರಂದು ಮೃತಪಟ್ಟಿದ್ದಾರೆ. ಮೃತ ದೇಹವನ್ನು ಅಲ್ಲಿನ ಶವಾಗಾರದಲ್ಲಿ ಇಡಲಾಗಿದೆ. 59 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಸುಮಾರು 5 ಅಡಿ ಎತ್ತರ ಇದ್ದಾರೆ. ನಿತ್ರಾಣಗೊಂಡು…

ವಿವಿಧ ಬೆಳೆಗಾರರ ಸಂಘಗಳ ನಿಯೋಗದಿಂದ  ಕೇಂದ್ರ ಸಚಿವರು, ಅಧಿಕಾರಿಗಳ ಭೇಟಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಮನವಿ
ಕೊಡಗು

ವಿವಿಧ ಬೆಳೆಗಾರರ ಸಂಘಗಳ ನಿಯೋಗದಿಂದ  ಕೇಂದ್ರ ಸಚಿವರು, ಅಧಿಕಾರಿಗಳ ಭೇಟಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಮನವಿ

July 29, 2018

ಮಡಿಕೇರಿ: ಕಾಫಿ ಬೆಳೆಗಾರರ ಸಮಸ್ಯೆ, ಕಾಳುಮೆಣಸು ಆಮದಿನಿಂದಾಗುತ್ತಿರುವ ತೊಂದರೆ ಹಾಗೂ ಕಾಡಾನೆ-ಮಾನವ ಸಂಘರ್ಷದ ಕುರಿತು ಕೇಂದ್ರ ಸರಕಾರಕ್ಕೆ ಮತ್ತೆ ಮನವರಿಕೆ ಮಾಡಿಕೊಡಲು ವಿವಿಧ ಬೆಳೆಗಾರರ ಸಂಘ, ಕಾಫಿ ಮಂಡಳಿ ಹಾಗೂ ಜನಪ್ರತಿನಿಧಿಗಳು ದೆಹಲಿಯಲ್ಲಿ ವಿವಿಧ ಇಲಾಖೆಗಳ ಕೇಂದ್ರ ಸಚಿವರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿದರು. ರಾಜ್ಯದ ಕಾಫಿ ಬೆಳೆಗಾರ ಜಿಲ್ಲೆಗಳ ಬೃಹತ್ ನಿಯೋಗ ದೆಹಲಿಯಲ್ಲಿ ಸರಕಾರಿ ಮಟ್ಟ ದಲ್ಲಿ ಬೆಳೆಗಾರರ ಸಮಸ್ಯೆ ಕುರಿತು ಮನವರಿಕೆ ಮಾಡುವ ಪ್ರಯತ್ನ ನಡೆಸಿತು. ರಾಜ್ಯದ ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ,…

ಮೊಣ್ಣಂಗೇರಿಯಲ್ಲಿ ಬಿರುಕು ಬಿಟ್ಟ ಭೂಮಿಯಿಂದ ಉಕ್ಕಿ ಹರಿಯುತ್ತಿದೆ ನೀರು
ಕೊಡಗು

ಮೊಣ್ಣಂಗೇರಿಯಲ್ಲಿ ಬಿರುಕು ಬಿಟ್ಟ ಭೂಮಿಯಿಂದ ಉಕ್ಕಿ ಹರಿಯುತ್ತಿದೆ ನೀರು

July 29, 2018

ಮಡಿಕೇರಿ: ಗಾಳಿಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ 2ನೇ ಮೊಣ್ಣಂಗೇರಿಯಲ್ಲಿ ಭೂಮಿ ಬಿರುಕು ಬಿಟ್ಟಿದ್ದು, ಬಿರುಕಿನಿಂದ ಅಂತರ್ಜಲ ಕೋಡಿಯಾಗಿ ಹರಿಯುತ್ತಿದೆ. ಕಳೆದ 10 ದಿನಗಳ ಹಿಂದೆ ಅಂದಾಜು 1 ಕಿ.ಮೀ. ವ್ಯಾಪ್ತಿಯುದ್ದಕ್ಕೂ ಭೂಮಿಯಲ್ಲಿ 2 ಇಂಚು ಅಗಲದ ಬಿರುಕು ಮೂಡಿತ್ತು. ದಿನದಿಂದ ದಿನಕ್ಕೆ ಬಿರುಕು ಹೆಚ್ಚುತ್ತಾ ಹೋಗಿದ್ದು, ಇದೀಗ ಬಿರುಕಿನಿಂದ ಕೆಂಪು ಬಣ್ಣದ ನೀರು ಉಕ್ಕಿ ಹರಿಯುತ್ತಿದ್ದು, ಗ್ರಾಮಸ್ಥರು ಭೀತಿಗೆ ಒಳಗಾಗಿದ್ದಾರೆ. ಭೂಮಿ ಬಿರುಕು ಬಿಟ್ಟಿರುವ ಮಾಹಿತಿ ಪಡೆದು ಈ ಹಿಂದೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ…

ಕಾಡಾನೆ ದಾಳಿ: ಆಟೋ ಸಂಪೂರ್ಣ ಜಖಂ
ಕೊಡಗು

ಕಾಡಾನೆ ದಾಳಿ: ಆಟೋ ಸಂಪೂರ್ಣ ಜಖಂ

July 29, 2018

ಸಿದ್ದಾಪುರ:  ಪ್ರಯಾಣಿಕರನ್ನು ಸಾಗಿಸುತ್ತಿದ್ದ ಆಟೋ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ಆಟೋ ಸಂಪೂರ್ಣ ಜಖಂಗೊಂಡು ಚಾಲಕ ಸೇರಿದಂತೆ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಸಿದ್ದಾಪುರ ಸಮೀಪದ ಬಜಗೊಲ್ಲಿಯಲ್ಲಿ ನಡೆದಿದೆ. ಬಜಗೊಲ್ಲಿಯಿಂದ ಮುಹಮ್ಮದ್ ಎಂಬವರು ತಮ್ಮ ಆಟೋದಲ್ಲಿ ಇಬ್ಬರು ಪ್ರಯಾಣಿಕರೊಂದಿಗೆ ಸಿದ್ದಾಪುರ ಪಟ್ಟಣಕ್ಕೆ ತೆರಳುತ್ತಿದ್ದ ಸಂದರ್ಭ ಆಲತೋಪು ಎಂಬಲ್ಲಿ ಕಾಡಾನೆ ದಿಢೀರ್ ಪ್ರತ್ಯಕ್ಷಗೊಂಡಿದೆ. ಕಾಡಾನೆಯ ಹಿಂಡನ್ನು ಕಂಡು ಗಾಬರಿಗೊಂಡ ಚಾಲಕ ಹಾಗೂ ಪ್ರಯಾಣಿಕರು ಆಟೋವನ್ನು ರಸ್ತೆಯಲ್ಲೇ ಬಿಟ್ಟು ಜೀವಭಯದಿಂದ ಓಡಿದ್ದಾರೆ. ರೋಷಗೊಂಡ ಕಾಡಾನೆಯ ಹಿಂಡು ಆಟೋ ಮೇಲೆ…

ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆ ಉದ್ಘಾಟನೆ
ಕೊಡಗು

ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆ ಉದ್ಘಾಟನೆ

July 29, 2018

ವಿರಾಜಪೇಟೆ: ವಿ.ಪೇಟೆಯ ಖಾಸಗಿ ಬಸ್ ನಿಲ್ದಾಣದ ಬಳಿಯ ಸುಣ್ಣದ ಬೀದಿ ರಸ್ತೆಗೆ ಇಂದು ಡಾ.ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಪಪಂ ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರುಗಳು ನಾಮಕರಣ ಮಾಡಿದರು. ರಸ್ತೆಯ ನಾಮಪಲಕವನ್ನು ಪಪಂ ಅಧ್ಯಕ್ಷ ಇ.ಸಿ.ಜೀವನ್ ಹಾಗೂ ಹಿರಿಯ ಸದಸ್ಯ ಎಸ್.ಹೆಚ್.ಮೈನೂದ್ದಿನ್ ಉದ್ಘಾಟಿಸಿದರು. ಈ ಸಂದರ್ಭ ಪಪಂ ಉಪಾಧ್ಯಕ್ಷೆ ತಸ್ನಿಂ ಅಕ್ತರ್, ಸ್ಥಾಯಿ ಸಮಿತಿ ಅಧ್ಯಕ್ಷ ರಚನ್ ಮೇದಪ್ಪ, ಮುಖ್ಯಾಧಿಕಾರಿ ಹೆಮ್ ಕುಮಾರ್, ಮಾಜಿ ಅಧ್ಯಕ್ಷರಾದ ಎಂ.ಕೆ.ದೇಚಮ್ಮ, ಸಚಿನ್ ಕುಟ್ಟಯ್ಯ, ಸದಸ್ಯರಾದ ಎನ್.ವಿಶ್ವನಾಥ್, ಶಿಭಾ ಪ್ರತ್ವಿನಾಥ್,…

ಪೊನ್ನಂಪೇಟೆಯಲ್ಲಿ ಗುರುಪೂರ್ಣಿಮಾ ದಿನಾಚರಣೆ: ‘ಕರುಣಾಸಿಂಧು ಶ್ರೀರಾಮಕೃಷ್ಣ ಪರಮಹಂಸ’ ಕೊಡವ ಭಾಷೆ ಪುಸ್ತಕ ಲೋಕಾರ್ಪಣೆ
ಕೊಡಗು

ಪೊನ್ನಂಪೇಟೆಯಲ್ಲಿ ಗುರುಪೂರ್ಣಿಮಾ ದಿನಾಚರಣೆ: ‘ಕರುಣಾಸಿಂಧು ಶ್ರೀರಾಮಕೃಷ್ಣ ಪರಮಹಂಸ’ ಕೊಡವ ಭಾಷೆ ಪುಸ್ತಕ ಲೋಕಾರ್ಪಣೆ

July 29, 2018

ಗೋಣಿಕೊಪ್ಪಲು:  ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಗುರುಪೂರ್ಣಿವ ದಿನಾಚರಣೆ ಯಶಸ್ವಿಯಾಗಿ ಜರುಗಿತು. ಮೈಸೂರಿನ ಬೇಲೂರು ಮಠದ ಟ್ರಸ್ಟಿ ಸ್ವಾಮಿ ಮುಕ್ತಿ ನಂದಾಜೀ ಮಹಾರಾಜ್ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಆಶ್ರಮದ ಸಭಾಂಗಣದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ನೂರಾರು ಭಕ್ತ ರನ್ನು ಉದ್ದೇಶಿಸಿ ಮಾತನಾಡಿದ ಸ್ವಾಮಿ ಮುಕ್ತಿನಂದಾಜೀ ಮಹಾರಾಜ್ ಅವರು, ಇಂದು ಆದ್ಯಾತ್ಮಿಕ ಬೆಳವಣಿಗೆ ಕಡಿಮೆಯಾಗುತ್ತಿದೆ ಭಗವಂತನಲ್ಲಿ ನಂಬಿಕೆ ಇಡಬೇಕಾಗಿದೆ. ರಾಮಕೃಷ್ಣ ಪರಮಹಂಸರ ಜೀವನ ಮತ್ತು ಸಂದೇಶವನ್ನು ಎಲ್ಲರೂ ತಿಳಿದುಕೊಳ್ಳಬೇಕು. ಎಲ್ಲಾ ಧರ್ಮದ ಸಂಸ್ಕೃತಿಗೆ ತನ್ನದೇ ಆದ…

ಜಗತ್ತಿನ ಗಮನ ಸೆಳೆದ ಕ್ಷೇತ್ರ ಮಾಧ್ಯಮ
ಕೊಡಗು

ಜಗತ್ತಿನ ಗಮನ ಸೆಳೆದ ಕ್ಷೇತ್ರ ಮಾಧ್ಯಮ

July 29, 2018

ಮಡಿಕೇರಿ: ಕತ್ತಲ ಭಾರತದ ಕಡೆ ಮಾಧ್ಯಮಗಳು ಮುಖ ಮಾಡಿದಾಗ ಮಾತ್ರ ಮಾಧ್ಯಮದ ವ್ಯಕ್ತಿತ್ವ ಹೆಚ್ಚಾಗಲು ಸಾಧ್ಯ ಎಂದು ಮೈಸೂರು ಮಾನಸ ಗಂಗೋತ್ರಿ ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ಮಹೇಶ್ಚಂದ್ರ ಗುರು ಅಭಿಪ್ರಾಯಪಟ್ಟಿದ್ದಾರೆ. ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್‍ಕ್ಲಬ್‍ನ ಸಂಯುಕ್ತಾಶ್ರಯದಲ್ಲಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾಧ್ಯಮ ಕ್ಷೇತ್ರ ಇಡೀ ಜಗತ್ತನ್ನು ಗಮನ ಸೆಳೆಯುವಂತಹ ಕ್ಷೇತ್ರವಾಗಿದ್ದು, ಜನರ ಧ್ವನಿಯಾಗಿ ಕೆಲಸ ಮಾಡಬೇಕಾಗಿದೆ. ಅಂದಿನ ಕಾಲದಲ್ಲಿ ಪತ್ರಿಕೆ…

ವಿದ್ಯುತ್ ಸ್ಪರ್ಶ; ವೃದ್ಧೆ ಸಾವು
ಕೊಡಗು

ವಿದ್ಯುತ್ ಸ್ಪರ್ಶ; ವೃದ್ಧೆ ಸಾವು

July 29, 2018

ಮಡಿಕೇರಿ:  ವಿದ್ಯುತ್ ಸ್ಪರ್ಶ ಗೊಂಡು ವೃದ್ಧೆಯೋರ್ವರು ಸ್ಥಳದಲ್ಲೇ ಮೃತ ಪಟ್ಟ ಘಟನೆ ನಗರದ ಹೊರವಲಯದ ಕೆ.ಬಾಡಗದಲ್ಲಿ ನಡೆದಿದೆ. ಕೆ.ಬಾಡಗ ಭಗವತಿ ನಗರ ನಿವಾಸಿ ಮಾಚವ್ವ (88) ಎಂಬವರೇ ಮೃತ ದುರ್ದೈವಿಯಾಗಿ ದ್ದಾರೆ. ಮಾಚವ್ವ ಗೃಹ ಬಳಕೆಗಾಗಿ ಅಳವಡಿಸಿದ್ದ ನೀರಿನ ಪಂಪ್ ದುರಸ್ಥಿಗೆ ತೆರಳಿದ ಸಂದರ್ಭ ವಿದ್ಯುತ್ ಕಂಬದಿಂದ ವಿದ್ಯುತ್ ಪ್ರವಹಿಸಿ ಈ ಘಟನೆ ಸಂಭವಿಸಿದ್ದು, ಸ್ಥಳದಲ್ಲೇ ಮೃತಪಟ್ಟಿ ದ್ದಾರೆ. ಘಟನೆಯ ಕುರಿತು ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹೊಲಿಗೆ, ವಸ್ತ್ರ ವಿನ್ಯಾಸ ತರಬೇತಿ ಪ್ರಮಾಣ ಪತ್ರ ವಿತರಣೆ
ಕೊಡಗು

ಹೊಲಿಗೆ, ವಸ್ತ್ರ ವಿನ್ಯಾಸ ತರಬೇತಿ ಪ್ರಮಾಣ ಪತ್ರ ವಿತರಣೆ

July 29, 2018

ಸಿದ್ದಾಪುರ: ಮೈಸೂರಿನ ಒಡಿಪಿ ಸಂಸ್ಥೆ ಮತ್ತು ನಬಾರ್ಡ್ ಬೆಂಗಳೂರು ಇವರ ಸಹಯೋಗದೊಂದಿಗೆ ಇಲ್ಲಿನ ಸೆಂಟನರಿ ಸಭಾಂಗಣದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಹೊಲಿಗೆ ಮತ್ತು ವಸ್ತ್ರವಿನ್ಯಾಸ ತರಬೇತಿ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಫಾದರ್ ಜೋನ್ ಹಾಗೂ ನಬಾರ್ಡ್ ಸಹಾಯಕ ಮಹಾ ಪ್ರಬಂಧಕ ಮುಂಡಂಡ ಸಿ.ನಾಣಯ್ಯ ಮಾತನಾಡಿ, ಮಹಿಳೆಯರು ವೃತ್ತಿ ಜೀವನದಲ್ಲಿ ಸ್ವ ಉದ್ಯೋಗದೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಹೇಳಿದರು. ಮಹಿಳೆಯರಿಗೆ ಹಲವು ರೀತಿಯ ಸಾಲ ಸೌಲಭ್ಯಗಳು ಹಾಗೂ ಕೌಶಲ್ಯ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳ ಬೇಕೆಂದು ಕರೆ…

ಕೊಡಗು ಮೂಲಕ ತಲಚೇರಿ-ಮೈಸೂರು ರೈಲ್ವೆ ಮಾರ್ಗದ ವಿರುದ್ಧ ಪಿಐಎಲ್: ರಾಜ್ಯ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಲು ಹೈ ಕೋರ್ಟ್ ಎರಡು ವಾರದ ಗಡುವು
ಕೊಡಗು

ಕೊಡಗು ಮೂಲಕ ತಲಚೇರಿ-ಮೈಸೂರು ರೈಲ್ವೆ ಮಾರ್ಗದ ವಿರುದ್ಧ ಪಿಐಎಲ್: ರಾಜ್ಯ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಲು ಹೈ ಕೋರ್ಟ್ ಎರಡು ವಾರದ ಗಡುವು

July 28, 2018

ಬೆಂಗಳೂರು:  ಕೊಡಗು ಮೂಲಕ ಹಾದು ಹೋಗುವ ವಿವಾದಿತ ತಲಚೇರಿ-ಮೈಸೂರು ರೈಲ್ವೆ ಮಾರ್ಗ ಕೈಗೆತ್ತಿಕೊಂಡಿಲ್ಲ ಎಂಬುದರ ಬಗ್ಗೆ ದಾಖಲೆ ಸಹಿತ ಸಾಕ್ಷ್ಯಾ ಧಾರಗಳನ್ನು ಒದಗಿಸಬೇಕೆಂದು ಹೈ ಕೋರ್ಟ್ ರಾಜ್ಯ ಸರ್ಕಾರಕ್ಕೆ ಎರಡು ವಾರಗಳ ಗಡುವು ನೀಡಲಾಗಿದೆ. ಹೈ ಕೋರ್ಟ್‍ನಲ್ಲಿ ರೈಲ್ವೆ ಮಾರ್ಗದ ವಿರುದ್ಧ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಜು.25 ರಂದು ನಡೆದು, ಸರ್ಕಾರಿ ವಕೀಲರು ರಾಜ್ಯದಲ್ಲಿ ಈ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿಲ್ಲ ಎಂದು ವಾದಿಸಿದರು. ಈ ಯೋಜನೆ ಕೈಗೆತ್ತಿಕೊಂಡಿಲ್ಲ ಎಂಬುದನ್ನು ರಾಜ್ಯ ಸರ್ಕಾರ ದಾಖಲೆ ಸಹಿತ ಸಾಕ್ಷ್ಯಾಧಾರಗಳನ್ನು…

1 149 150 151 152 153 187
Translate »