ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆ ಉದ್ಘಾಟನೆ
ಕೊಡಗು

ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆ ಉದ್ಘಾಟನೆ

July 29, 2018

ವಿರಾಜಪೇಟೆ: ವಿ.ಪೇಟೆಯ ಖಾಸಗಿ ಬಸ್ ನಿಲ್ದಾಣದ ಬಳಿಯ ಸುಣ್ಣದ ಬೀದಿ ರಸ್ತೆಗೆ ಇಂದು ಡಾ.ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಪಪಂ ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರುಗಳು ನಾಮಕರಣ ಮಾಡಿದರು.

ರಸ್ತೆಯ ನಾಮಪಲಕವನ್ನು ಪಪಂ ಅಧ್ಯಕ್ಷ ಇ.ಸಿ.ಜೀವನ್ ಹಾಗೂ ಹಿರಿಯ ಸದಸ್ಯ ಎಸ್.ಹೆಚ್.ಮೈನೂದ್ದಿನ್ ಉದ್ಘಾಟಿಸಿದರು.

ಈ ಸಂದರ್ಭ ಪಪಂ ಉಪಾಧ್ಯಕ್ಷೆ ತಸ್ನಿಂ ಅಕ್ತರ್, ಸ್ಥಾಯಿ ಸಮಿತಿ ಅಧ್ಯಕ್ಷ ರಚನ್ ಮೇದಪ್ಪ, ಮುಖ್ಯಾಧಿಕಾರಿ ಹೆಮ್ ಕುಮಾರ್, ಮಾಜಿ ಅಧ್ಯಕ್ಷರಾದ ಎಂ.ಕೆ.ದೇಚಮ್ಮ, ಸಚಿನ್ ಕುಟ್ಟಯ್ಯ, ಸದಸ್ಯರಾದ ಎನ್.ವಿಶ್ವನಾಥ್, ಶಿಭಾ ಪ್ರತ್ವಿನಾಥ್, ರತಿ ಬಿದ್ದಪ್ಪ, ಬಿ.ಡಿ.ಸುನಿತ, ಸರಿತ, ನಾಗಮ್ಮ, ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.

Translate »