ಇಂಡುವಾಳು ಒಳ ಚರಂಡಿ ಕಾಮಗಾರಿಗೆ ಚಾಲನೆ ಶಾಸಕ ಡಾ.ಯತೀಂದ್ರ ರಿಂದ ಭೂಮಿ ಪೂಜೆ
ಮೈಸೂರು

ಇಂಡುವಾಳು ಒಳ ಚರಂಡಿ ಕಾಮಗಾರಿಗೆ ಚಾಲನೆ ಶಾಸಕ ಡಾ.ಯತೀಂದ್ರ ರಿಂದ ಭೂಮಿ ಪೂಜೆ

July 29, 2018

ತಿ.ನರಸೀಪುರ: ಇಂಡವಾಳು ಗ್ರಾಮದ ನೂತನ ದಸಂಸ ಬಡಾವಣೆಗೆ ನಗರ ಪ್ರದೇಶಗಳ ಮಾದರಿಯಲ್ಲಿ ಸಮರ್ಪಕವಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಪ್ರಥಮ ಬಾರಿಗೆ ಗ್ರಾಮೀಣ ಪ್ರದೇಶಕ್ಕೂ ಒಳಚರಂಡಿ ಸೌಲಭ್ಯವನ್ನು ವಿಸ್ತರಣೆ ಮಾಡಲಾಗಿದೆ ಎಂದು ವರುಣಾ ಶಾಸಕ ಡಾ.ಎಸ್.ಯತೀಂದ್ರ ಹೇಳಿದರು.

ತಾಲೂಕಿನ ಇಂಡವಾಳು ಗ್ರಾಮದಲ್ಲಿರುವ ದಸಂಸ ಬಡಾವಣೆಯಲ್ಲಿ 67 ಲಕ್ಷ ರೂ.ಗಳ ವೆಚ್ಚದಲ್ಲಿ ಒಳಚರಂಡಿ ಹಾಗೂ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಹಳ್ಳಿಗಳಿಗೆ ಸಿಮೆಂಟ್ ರಸ್ತೆಯ ಜೊತೆಗೆ ಒಳಚಂಡಿಯ ಸೌಲಭ್ಯವನ್ನು ಕಲ್ಪಿಸುವ ಕಾರ್ಯವನ್ನು ವರುಣಾ ವಿಧಾನಸಭಾ ಕ್ಷೇತ್ರದ ಇಂಡವಾಳು ಗ್ರಾಮದಿಂದ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ ಎಂದರು.

ಅಭಿವೃದ್ಧಿಯಲ್ಲಿ ಹೆಚ್ಚಿನ ಜಬಾವ್ದಾರಿ ಇದ್ದು ಜನರು ನೇರವಾಗಿ ಭೇಟಿ ಮಾಡಿ ಸಮಸ್ಯೆಗಳನ್ನು ತಿಳಿಸಬಹುದು. ಆಗಬೇಕಾದ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ನೀಡಿದರೆ ಯೋಜನೆ ರೂಪಿಸಿ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸುತ್ತೇನೆ ಎಂದು ಡಾ.ಎಸ್.ಯತೀಂದ್ರ ಸಿದ್ದರಾಮಯ್ಯ ಭರವಸೆ ನೀಡಿದರು.

ದಸಂಸ ಮುಖಂಡ ಹಾಗೂ ಗ್ರಾ.ಪಂ ಸದಸ್ಯ ನಾಗರಾಜು ಮಾತನಾಡಿ, ದಸಂಸ ಬಡಾವಣೆಯ ರಸ್ತೆಗಳಿಗೆ ವಿದ್ಯುತ್ ಬೀದಿ ದೀಪ ಹಾಗೂ ಕುಡಿಯುವ ನೀರಿನ ಪೈಪ್‍ಲೈನ್ ಕಾಮಗಾರಿಯನ್ನು ಮಾಡಿಸಲು ಮೊದಲು ತುರ್ತು ಕ್ರಮವಹಿಸಬೇಕು. ವಿದ್ಯಾವಂತ ಯುವಕರಿಗೆ ಉದ್ಯೋಗ ಕಲ್ಪಿಸುವ ಬಗ್ಗೆ ಗಮನವನ್ನು ನೀಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

ಜಿ.ಪಂ ಮಾಜಿ ಸದಸ್ಯ ಕೆ.ಮಹದೇವ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಮಹದೇವಣ್ಣ, ತಾ.ಪಂ ಸದಸ್ಯ ಎಂ.ರಮೇಶ, ವರುಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮುದ್ದೇಗೌಡ, ಮಹಿಳಾ ಅಧ್ಯಕ್ಷೆ ಕುಪ್ಯ ಭಾಗ್ಮಮ್ಮ, ಗುತ್ತಿಗೆದಾರಾದ ವಾಟಾಳು ರಾಚೇಗೌಡ, ಬಿಲಿಗೆರೆಹುಂಡಿ ಬಸವರಾಜು, ಎಪಿಎಂಸಿ ಸದಸ್ಯ ಕೆ.ಬಿ.ಪ್ರಭಾಕರ, ಗ್ರಾ.ಪಂ ಸದಸ್ಯ ಲೋಕೇಶ, ಮಾಜಿ ಉಪಾಧ್ಯಕ್ಷ ಹೊನ್ನಯ್ಯ, ಮಾಜಿ ಸದಸ್ಯ ಆಲಗೂಡು ನಾಗರಾಜು, ಬಿಎಸ್‍ಎನ್‍ಎಲ್ ಸಲಹಾ ಸಮಿತಿ ಸದಸ್ಯ ಎನ್.ಸೋಮು, ಮಾಧ್ಯಮ ಸಂಚಾಲಕ ಸಂತೃಪ್ತಿಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಮಹೇಶ, ಆರ್‍ಡಿಪಿ ಎಇಇ ವಿ.ಎಸ್.ಸುನೀಲ್, ಜಿ.ಪಂ ಎಇಇ ಎಸ್.ಸಿದ್ದರಾಜು, ಕಿರಿಯ ಇಂಜಿನಿಯರ್ ವಿಶಾಲ್ ಪೂಜಾರಿ, ತಾ.ಪಂ ಕಾರ್ಯನಿರ್ವಹಕ ಅಧಿಕಾರಿ ಡಾ.ಬಿ.ಎಸ್.ನಂಜೇಶ್, ಸಮಾಜ ಕಲ್ಯಾಣಾಧಿಕಾರಿ ಎಸ್.ದಿವಾಕರ್, ಸಿಡಿಪಿಓ ಬಿ.ಎನ್.ಬಸವರಾಜು, ತೋಟಗಾರಿಕೆ ಸಹಾಯಕ ನಿರ್ದೇಶಕ ಫಣೀಂಧ್ರ, ರೇಷ್ಮೇ ಸಹಾಯಕ ನಿರ್ದೇಶಕ ಕೃಷ್ಣ, ಮೀನುಗಾರಿಕೆ ಸಹಾಯಕ ನಿರ್ದೇಶಕಿ ಭವಾನಿ, ಪಶುಪಾಲನೆ ಸಹಾಯಕ ನಿರ್ದೇಶಕ ಡಾ.ಚಿನ್ನಸ್ವಾಮಿ, ಮುಖಂಡರಾದ ತುಂಬಲ ಮಂಜುನಾಥ್, ಮುತ್ತುರಾಜು ಹಾಗೂ ಇನ್ನಿತರರು ಹಾಜರಿದ್ದರು.

Translate »