ಕುಟ್ಟ ವ್ಯಾಪ್ತಿಯಲ್ಲಿ ಅಪರಿಚಿತ ಶವ ಪತ್ತೆ
ಕೊಡಗು

ಕುಟ್ಟ ವ್ಯಾಪ್ತಿಯಲ್ಲಿ ಅಪರಿಚಿತ ಶವ ಪತ್ತೆ

July 30, 2018

ಗೋಣಿಕೊಪ್ಪಲು: ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಪುರುಷ ಶವ ಪತ್ತೆಯಾಗಿದ್ದು, ವಾರಸುದಾರರು ಇದ್ದಲ್ಲಿ ಕುಟ್ಟ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಿದೆ.

ಅಲ್ಲಿನ ಕೇಂಬುಕೊಲ್ಲಿ ಸಮೀಪದ ಫೈತ್ ಎಸ್ಟೇಟ್ ದಾರಿಯ ಚರಂಡಿಯಲ್ಲಿ ನಿತ್ರಾಣ ಗೊಂಡು ಬಿದ್ದಿದ್ದರು. ಇವರನ್ನು ಕುಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಥಳೀಯ ಪೊಲೀಸರು ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಜು.25 ರಂದು ಮೃತಪಟ್ಟಿದ್ದಾರೆ. ಮೃತ ದೇಹವನ್ನು ಅಲ್ಲಿನ ಶವಾಗಾರದಲ್ಲಿ ಇಡಲಾಗಿದೆ. 59 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಸುಮಾರು 5 ಅಡಿ ಎತ್ತರ ಇದ್ದಾರೆ. ನಿತ್ರಾಣಗೊಂಡು ಪತ್ತೆಯಾದ ಸಂದರ್ಭ ನೀಲಿ ಬಣ್ಣದ ಚೆಕ್ಸ್ ತುಂಬು ತೋಳಿನ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ತೊಟ್ಟಿದ್ದರು. ಹೆಚ್ಚಿನ ಮಾಹಿತಿಗೆ 08274-244100 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Translate »