ವಿದ್ಯುತ್ ಸ್ಪರ್ಶ; ವೃದ್ಧೆ ಸಾವು
ಕೊಡಗು

ವಿದ್ಯುತ್ ಸ್ಪರ್ಶ; ವೃದ್ಧೆ ಸಾವು

July 29, 2018

ಮಡಿಕೇರಿ:  ವಿದ್ಯುತ್ ಸ್ಪರ್ಶ ಗೊಂಡು ವೃದ್ಧೆಯೋರ್ವರು ಸ್ಥಳದಲ್ಲೇ ಮೃತ ಪಟ್ಟ ಘಟನೆ ನಗರದ ಹೊರವಲಯದ ಕೆ.ಬಾಡಗದಲ್ಲಿ ನಡೆದಿದೆ.

ಕೆ.ಬಾಡಗ ಭಗವತಿ ನಗರ ನಿವಾಸಿ ಮಾಚವ್ವ (88) ಎಂಬವರೇ ಮೃತ ದುರ್ದೈವಿಯಾಗಿ ದ್ದಾರೆ. ಮಾಚವ್ವ ಗೃಹ ಬಳಕೆಗಾಗಿ ಅಳವಡಿಸಿದ್ದ ನೀರಿನ ಪಂಪ್ ದುರಸ್ಥಿಗೆ ತೆರಳಿದ ಸಂದರ್ಭ ವಿದ್ಯುತ್ ಕಂಬದಿಂದ ವಿದ್ಯುತ್ ಪ್ರವಹಿಸಿ ಈ ಘಟನೆ ಸಂಭವಿಸಿದ್ದು, ಸ್ಥಳದಲ್ಲೇ ಮೃತಪಟ್ಟಿ ದ್ದಾರೆ. ಘಟನೆಯ ಕುರಿತು ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »