ಹೊಲಿಗೆ, ವಸ್ತ್ರ ವಿನ್ಯಾಸ ತರಬೇತಿ ಪ್ರಮಾಣ ಪತ್ರ ವಿತರಣೆ
ಕೊಡಗು

ಹೊಲಿಗೆ, ವಸ್ತ್ರ ವಿನ್ಯಾಸ ತರಬೇತಿ ಪ್ರಮಾಣ ಪತ್ರ ವಿತರಣೆ

July 29, 2018

ಸಿದ್ದಾಪುರ: ಮೈಸೂರಿನ ಒಡಿಪಿ ಸಂಸ್ಥೆ ಮತ್ತು ನಬಾರ್ಡ್ ಬೆಂಗಳೂರು ಇವರ ಸಹಯೋಗದೊಂದಿಗೆ ಇಲ್ಲಿನ ಸೆಂಟನರಿ ಸಭಾಂಗಣದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಹೊಲಿಗೆ ಮತ್ತು ವಸ್ತ್ರವಿನ್ಯಾಸ ತರಬೇತಿ ಪ್ರಮಾಣ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಫಾದರ್ ಜೋನ್ ಹಾಗೂ ನಬಾರ್ಡ್ ಸಹಾಯಕ ಮಹಾ ಪ್ರಬಂಧಕ ಮುಂಡಂಡ ಸಿ.ನಾಣಯ್ಯ ಮಾತನಾಡಿ, ಮಹಿಳೆಯರು ವೃತ್ತಿ ಜೀವನದಲ್ಲಿ ಸ್ವ ಉದ್ಯೋಗದೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಹೇಳಿದರು. ಮಹಿಳೆಯರಿಗೆ ಹಲವು ರೀತಿಯ ಸಾಲ ಸೌಲಭ್ಯಗಳು ಹಾಗೂ ಕೌಶಲ್ಯ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳ ಬೇಕೆಂದು ಕರೆ ನೀಡಿದರು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಮಮ್ತಾಜ್ ಮಾತನಾಡಿ, ಮಹಿಳೆಯರು ಮಕ್ಕಳನ್ನು ಉತ್ತಮ ಬೆಳವಣಿಗೆಯ ಮೂಲಕ ಶಿಕ್ಷಣದೊಂದಿಗೆ ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಹೇಳಿದ ಅವರು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಬಾಲ್ಯ ವಿವಾಹ ತಡೆಯ ಬಗ್ಗೆ ಮಹಿಳೆಯರಿಗೆ ಮಾಹಿತಿ ನೀಡಿದರು.

ಪಾಲಿಬೆಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಲಿಯಂಡ ಬೋಪಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ನೆಲ್ಯಹುದಿಕೇರಿ ಗ್ರಾಪಂ ಉಪಾಧ್ಯಕ್ಷೆ ಸಫಿಯಾ, ಮೈಸೂರಿನ ಒಡಿಪಿ ಸಂಯೋಜಕಿ ಮೋಲಿ ಫುಡ್ತಾದೊ, ಅಂಬೇಡ್ಕರ್ ಅಭಿವೃದ್ಧಿ ನಿಗ ಮದ ಅಧಿಕಾರಿ ಭಾನು, ಮಡಿಕೇರಿ ನಗರಸಭೆ ಮಾಜಿ ಅಧ್ಯಕ್ಷೆ ಜುಲೇಕಾಬಿ, ಒಡಿಪಿ ಮುಖ್ಯ ಸಂಯೋಜಕಿ ಜಾಯ್ಸ್ ಮೆನೇಜಸ್ ,ಕಾರ್ಯಕರ್ತೆಯರಾದ ವಿಜಯ ನಾರಾಯಣ, ಶರ್ಮಿಳಾ ಸೇರಿದಂತೆ ತರಬೇತುದಾರರು ಮಹಿಳೆಯರು ಹಾಜರಿದ್ದರು.

ಹೊಲಿಗೆ ಮತ್ತು ವಸ್ತ್ರವಿನ್ಯಾಸ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವನ್ನು ವಿತರಣೆ ಮಾಡಲಾಯಿತು ಮಡಿ ಕೇರಿ, ಬೆಟ್ಟದ ಕಾಡು, ಪಾಲಿಬೆಟ್ಟದಿಂದ ಸಂಘ ಟನೆಯ ಮಹಿಳೆಯರು ಪಾಲ್ಗೊಂಡಿದ್ದರು.

Translate »