ಕೊಡಗು

ಕಾಡಾನೆ ಬಲ ಗಾಲಿಗೆ ಗಂಭೀರ ಗಾಯ ಅರಣ್ಯ ಇಲಾಖೆಯಿಂದ ಆರೈಕೆ
ಕೊಡಗು

ಕಾಡಾನೆ ಬಲ ಗಾಲಿಗೆ ಗಂಭೀರ ಗಾಯ ಅರಣ್ಯ ಇಲಾಖೆಯಿಂದ ಆರೈಕೆ

July 28, 2018

ಕುಶಾಲನಗರ: ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಕಾಡು ಮೀಸಲು ಅರಣ್ಯ ಪ್ರದೇಶದಲ್ಲಿ ಗಾಯಗೊಂಡು ನರಕ ಯಾತನೆ ಅನುಭವಿಸುತ್ತಿದ್ದ ಕಾಡಾನೆಗೆ ಅರಣ್ಯ ಇಲಾಖೆ ಚಿಕಿತ್ಸೆ ನೀಡುವ ಮೂಲಕ ಆರೈಕೆಗೆ ಕ್ರಮ ಕೈಗೊಂಡಿದೆ. ಅರಣ್ಯದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಗುಂಡಿಗೆ ಬಿದ್ದು ತೀವ್ರವಾಗಿ ಗಾಯಗೊಂಡಿರುವ ಈ ಆನೆ ಜೀವನ್ಮರಣ ಹೋರಾಟ ನಡೆಸುತ್ತಿತ್ತು. ಬಲಗಾಲಿಗೆ ಪೆಟ್ಟು ಬಿದ್ದು ಊತ ಕಾಣಿಸಿ ಕೊಂಡದ್ದು, ನಡೆದಾಟಲು ಸಾಧ್ಯವಾಗದೆ ತೊಂದರೆಯಾಗಿತ್ತು. ಈ ಕಾಡಾನೆ ಕೆಲವು ದಿನಗಳಿಂದ ಆಹಾರ ನೀರು ಇಲ್ಲದೆ ಸೂರಗಿ ಹೋಗಿದೆ….

ಗೌರಿ ಲಂಕೇಶ್ ಹತ್ಯೆ ಪ್ರಕರಣ ಮಡಿಕೇರಿಯಲ್ಲಿ ಎಸ್‍ಐಟಿ ತಂಡ ಮೊಕ್ಕಾಂ
ಕೊಡಗು

ಗೌರಿ ಲಂಕೇಶ್ ಹತ್ಯೆ ಪ್ರಕರಣ ಮಡಿಕೇರಿಯಲ್ಲಿ ಎಸ್‍ಐಟಿ ತಂಡ ಮೊಕ್ಕಾಂ

July 28, 2018

ಮಡಿಕೇರಿ:  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕ ರಣದ ತನಿಖೆಯನ್ನು ಬಿರುಸುಗೊಳಿಸಿರುವ ವಿಶೇಷ ತನಿಖಾ ದಳ (ಎಸ್‍ಐಟಿ) ಮಡಿಕೇರಿಯಲ್ಲಿ ಮೊಕಾಂ ಹೂಡಿದೆ. ಜುಲೈ.22 ರಂದು ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಆಪ್ತ ಸಹಾಯಕ ರಾಜೇಶ್ ಡಿ.ಬಂಗೇರ ನೀಡಿರುವ ಕೆಲವು ಸುಳಿವುಗಳನ್ನು ಆಧರಿಸಿ ತನಿಖೆಯ ಜಾಡು ಹಿಡಿದಿದ್ದು, ಮಡಿಕೇರಿಯ ಮುಖ್ಯ ಬೀದಿಯಲ್ಲಿರುವ ಬಂದೂಕು ಮಳಿಗೆಯೊಂದಕ್ಕೆ ತೆರಳಿ ಕೆಲ ದಾಖಲೆಗಳನ್ನು ವಶಕ್ಕೆ ಪಡೆದಿರುವ ಮಾಹಿತಿ ಲಭಿಸಿದೆ. ನಾಟಿ ವೈದ್ಯ ಮೋಹನ್ ನಾಯಕ್‍ನ…

ಆದಿಚುಂಚನಗಿರಿ ಮಠಕ್ಕೆ ಭಾಗಮಂಡಲ ಕಾವೇರಿ ವಿದ್ಯಾಸಂಸ್ಥೆ ಆಸ್ತಿ ನೀಡಲು ವಿರೋಧ
ಕೊಡಗು

ಆದಿಚುಂಚನಗಿರಿ ಮಠಕ್ಕೆ ಭಾಗಮಂಡಲ ಕಾವೇರಿ ವಿದ್ಯಾಸಂಸ್ಥೆ ಆಸ್ತಿ ನೀಡಲು ವಿರೋಧ

July 28, 2018

ಮಡಿಕೇರಿ:  ಭಾಗಮಂಡಲದ ಕಾವೇರಿ ವಿದ್ಯಾಸಂಸ್ಥೆಗೆ ಸೇರಿದ ಎಲ್ಲಾ ಆಸ್ತಿಯನ್ನು ಆದಿಚುಂಚನಗಿರಿ ಮಹಾ ಸಂಸ್ಥಾನದ ಅಧೀನಕ್ಕೆ ಹಸ್ತಾಂತರಿಸುವುದಕ್ಕೆ ಸಂಸ್ಥೆಯ ಹಲವು ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾವೇರಿ ವಿದ್ಯಾ ಸಂಘದ ಸದಸ್ಯ ಕುದು ಕುಳಿ ಭರತ್, ದಾನಿಗಳು ಹಾಗೂ ಸರ್ಕಾರ ನೀಡಿದ ಜಾಗ ಸೇರಿದಂತೆ ಸಂಸ್ಥೆಯ ವಶ ದಲ್ಲಿ 16.50 ಏಕರೆ ಜಾಗವಿದೆ. ಈ ಜಾಗ ದೊಂದಿಗೆ ಶಿಕ್ಷಣ ಸಂಸ್ಥೆಯನ್ನು ಆದಿ ಚುಂಚನಗಿರಿ ಮಹಾಸಂಸ್ಥಾನಕ್ಕೆ ಹಸ್ತಾಂತರಿ ಸುವುದು ಸಮರ್ಪಕವಲ್ಲ. ಹಸ್ತಾಂತರಿಸುವ ಅಭಿಲಾಷೆ ಇದ್ದಲ್ಲಿ 6.50 ಎಕರೆ…

ಜಾತಿ, ಧರ್ಮಕ್ಕಿಂತ ಸಾಹಿತ್ಯ ಮಿಗಿಲು
ಕೊಡಗು

ಜಾತಿ, ಧರ್ಮಕ್ಕಿಂತ ಸಾಹಿತ್ಯ ಮಿಗಿಲು

July 27, 2018

ಸೋಮವಾರಪೇಟೆ:  ಕನ್ನಡ ಸಾಹಿತ್ಯಕ್ಕೆ ಜಾತಿ, ಜನಾಂಗಳೆಂಬ ಬೇಧಭಾವ ಗಳಿಲ್ಲ, ಸಾಹಿತ್ಯ ಎಂಬುದು ಜಾತಿ ಧರ್ಮಕ್ಕಿಂತ ಮಿಗಿಲಾದದ್ದು ಎಂದು ಹಿರಿಯ ಸಾಹಿತಿ ಡಾ.ಪ್ರಭಾಕರ್ ಶಿಶಿರ ಅಭಿಪ್ರಾಯಪಟ್ಟರು. ಆಲೂರುಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಜಂಗಮರ ಶರಣೆ ಲಿಂಗೈಕ್ಯ ಶಾಂತಮ್ಮ ಪ್ರಧಾನ ವೇದಿಕೆಯಲ್ಲಿ ನಡೆದ 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಹಾಕಾವ್ಯಗಳ ಸೃಷ್ಟಿಯಾದಲ್ಲಿ ಮಾತ್ರ ಕನ್ನಡ ಭಾಷೆ, ಸಂಸ್ಕøತಿ, ಭಾಷಾ ಇತಿಹಾಸದ ಪರಂಪರೆಯನ್ನು ಉಳಿಸಿಕೊಳ್ಳಲು ಸಾಧ್ಯ. ಇಂತಹ ಸಾಹಿತ್ಯ,…

ವಿವಿಧೆಡೆ ಕಾರ್ಗಿಲ್ ವಿಜಯೋತ್ಸವ ಆಚರಣೆ
ಕೊಡಗು

ವಿವಿಧೆಡೆ ಕಾರ್ಗಿಲ್ ವಿಜಯೋತ್ಸವ ಆಚರಣೆ

July 27, 2018

ವಿರಾಜಪೇಟೆ:  ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ವಿರಾಜಪೇಟೆ ಸ್ಟೇಟ್ ಬ್ಯಾಂಕ್ ಎದುರಿನಲ್ಲಿರುವ ಯೋಧರ ಸ್ಮಾರಕಕ್ಕೆ ಸ್ಥಳೀಯ ಶಾಸಕ ಕೆ.ಜಿ.ಬೋಪಯ್ಯ ಅವರು, ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ಯೋಧರಿಗೆ ಗೌರವ ವಂದನೆ ಸಲ್ಲಿಸಿದರು. ಈ ಸಂದರ್ಭ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚೇಂದ್ರಿ ಮಾಡ ಗಣೇಶ್ ನಂಜಪ್ಪ, ಜ.ತಿಮ್ಮಯ್ಯ ಹಾಗೂ ಜ.ಕಾರ್ಯಪ್ಪ, ಫೋರಮ್ ಅಧ್ಯಕ್ಷ ಕರ್ನಲ್ ಸುಬ್ಬಯ್ಯ, ಕರ್ನಲ್ ಭರತ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ.ಜೀವನ್, ತಾಲೂಕು ತಹಶೀ ಲ್ದಾರ್ ಆರ್.ಗೋವಿಂದರಾಜು, ಎಸ್‍ಬಿಐ ಬ್ಯಾಂಕ್‍ನ ವ್ಯವಸ್ಥಾಪಕ ರಮೇಶ್ ಭಟ್, ಕಾಫಿ ಮಂಡಳಿ…

ಲೋಕಸಭೆಯಲ್ಲಿ ಕೊಡಗಿನ ಮಳೆ ಹಾನಿ ಬಗ್ಗೆ ಸಂಸದ ಪ್ರತಾಪ್ ಸಿಂಹ ಪ್ರಸ್ತಾಪ: ನೆರವಿಗೆ ಬಾರದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
ಕೊಡಗು

ಲೋಕಸಭೆಯಲ್ಲಿ ಕೊಡಗಿನ ಮಳೆ ಹಾನಿ ಬಗ್ಗೆ ಸಂಸದ ಪ್ರತಾಪ್ ಸಿಂಹ ಪ್ರಸ್ತಾಪ: ನೆರವಿಗೆ ಬಾರದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

July 26, 2018

ನವದೆಹಲಿ: ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಸಂಸತ್‍ನಲ್ಲಿ ಇಂದು ಕೊಡಗಿನ ಮಳೆ ಹಾನಿಯನ್ನು ಎಳೆ-ಎಳೆಯಾಗಿ ಬಿಡಿಸಿಟ್ಟರು. ಸಂಕಷ್ಟದಲ್ಲಿರುವ ಕೊಡಗಿನ ನೆರವಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಚುಚ್ಚಿದರು. ಕೇಂದ್ರ ಸರ್ಕಾರವು ಕೊಡಗಿಗೆ ನೆರವಿನ ಹಸ್ತ ನೀಡಬೇಕೆಂದು ಮನವಿ ಮಾಡಿದರು. ಸಂಸತ್‍ನಲ್ಲಿ ಇಂದು ಸಭಾಧ್ಯಕ್ಷರ ಸ್ಥಾನದಲ್ಲಿ ಉಪ ಸಭಾಧ್ಯಕ್ಷ ತಮಿಳುನಾಡಿನ ತಂಬಿದುರೈ ಅವರು ಆಸೀನರಾಗಿದ್ದಾಗ ಪ್ರತಾಪ್ ಸಿಂಹ ಅವರಿಗೆ ಮಾತನಾಡಲು ಅವಕಾಶ ದೊರೆಯಿತು. ಕರ್ನಾಟಕದ ದಕ್ಷಿಣ ಭಾಗ ತೀವ್ರ ನೆರೆ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ವಿಚಾರವನ್ನು ಸದನದಲ್ಲಿ…

ಕೊಡಗಿಗೆ ಮತ್ತೇ ಮಳೆರಾಯನ ಆಗಮನ ಮಡಿಕೇರಿ-ಮಂಗಳೂರು ಹೆದ್ದಾರಿ ಹಲವೆಡೆ ಬಿರುಕು
ಕೊಡಗು

ಕೊಡಗಿಗೆ ಮತ್ತೇ ಮಳೆರಾಯನ ಆಗಮನ ಮಡಿಕೇರಿ-ಮಂಗಳೂರು ಹೆದ್ದಾರಿ ಹಲವೆಡೆ ಬಿರುಕು

July 26, 2018

ಮಡಿಕೇರಿ: ಪುನರ್ವಸು ಮಳೆಯನ್ನು ಹಿಂಬಾಲಿಸುವ ರೀತಿಯಲ್ಲಿ ಪುಷ್ಯ ಮಳೆಯ ಬಿರುಸು ಕೊಡಗು ಜಿಲ್ಲೆಯನ್ನು ವ್ಯಾಪಿಸಿದೆ. ಕಳೆದೊಂದು ದಿನದ ಅವಧಿ ಯಲ್ಲಿ ಭಾರೀ ಗಾಳಿ ಮಳೆಗೆ ಮತ್ತೊಮ್ಮೆ ‘ಕಾವೇರಿ’ಯ ಒಡಲು ಭರ್ತಿಯಾಗಿ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರು ರಸ್ತೆಗಳನ್ನು ಆವರಿಸಿದೆ. ಕಾವೇರಿಯ ಕ್ಷೇತ್ರ ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ನಿನ್ನೆ ಬೆಳಗ್ಗಿ ನಿಂದ ಇಂದು ಬೆಳಗ್ಗಿನವರೆಗೆ ಸಾಧಾರಣ ವಾಗಿ 3 ಇಂಚಿನಷ್ಟು ಮಳೆಯಾಗಿದ್ದು, ಮಳೆಯ ಪ್ರಮಾಣ ಹೆಚ್ಚುವುದರೊಂದಿಗೆ ಕಾವೇರಿ ನದಿ ನೀರಿನ ಮಟ್ಟ ಏರಲಾರಂಭಿಸಿದೆ. ಇದರಿಂದ ಭಾಗಮಂಡಲದ ಅಯ್ಯಂಗೇರಿ…

ಕಾಡಾನೆ ಹಾವಳಿಯಿಂದ ಜರ್ಜರಿತರಾದ ಗ್ರಾಮಸ್ಥರು
ಕೊಡಗು

ಕಾಡಾನೆ ಹಾವಳಿಯಿಂದ ಜರ್ಜರಿತರಾದ ಗ್ರಾಮಸ್ಥರು

July 26, 2018

ವಿರಾಜಪೇಟೆ:  ಕಳೆದ ಜೂನ್ ತಿಂಗಳಿಂದ ವಿರಾಜಪೇಟೆ ಸಮೀಪದ ದೇವಣಗೇರಿ, ಅಂಬಲ, ಮೈತಾಡಿ, ಚಾಮಿಯಾಲ, ಹಾಲುಗುಂದ ಗ್ರಾಮಗಳ ತೋಟಗಳಲ್ಲಿ ನಾಲ್ಕು ಕಾಡಾನೆಗಳು ಒಂದು ಮರಿಆನೆ ಬಿಡಾರ ಹೂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ಒಂದು ತೋಟದಿಂದ ಇನ್ನೊಂದು ತೋಟಕ್ಕೆ ಓಡಿಸುವುದರಲ್ಲೆ ಬೆಳೆಗಾರರ ಪಸಲು ನಷ್ಟಉಂಟಾಗುತ್ತಿದೆ ಎಂದು ಅಲ್ಲಿನ ಗ್ರಾಮಸ್ಥರು ದೂರಿದ್ದಾರೆ. ಗ್ರಾಮಸ್ಥರು ಬಸ್ಸಿಗಾಗಿ ರಸ್ತೆಯಲ್ಲಿ ನಿಂತಾಗ ಭಟ್ಟಮಕ್ಕಿಯ ರಸ್ತೆಯ ಮದ್ಯದಲ್ಲಿಯೇ ಕಾಡಾನೆಗಳು ಓಡಾಡುತ್ತಿರುವುದರಿಂದ ಆನೆಯನ್ನು ಕಂಡ ಗ್ರಾಮಸ್ಥರು ಓಡಿಹೋಗಿ ದ್ದಾರೆ. ಸಾರ್ವಜನಿಕರು ಹಾಗೂ ಗ್ರಾಮಸ್ಥರು ಜೀವ ಭಯದಿಂದ ಓಡಾಡುವಂತಾಗಿದೆ. ಬೈರಂಬಾಡ…

ಪ್ರವಾಸೋದ್ಯಮದ ಒತ್ತಡ ತಡೆದುಕೊಳ್ಳುವ ಶಕ್ತಿ ಕೊಡಗಿಗಿಲ್ಲ
ಕೊಡಗು

ಪ್ರವಾಸೋದ್ಯಮದ ಒತ್ತಡ ತಡೆದುಕೊಳ್ಳುವ ಶಕ್ತಿ ಕೊಡಗಿಗಿಲ್ಲ

July 26, 2018

ಮಡಿಕೇರಿ: ಕೊಡಗು ಅತ್ಯಂತ ಸೂಕ್ಷ್ಮ ಪರಿಸರ ವಲಯವಾ ಗಿದ್ದು, ಪ್ರವಾಸೋದ್ಯಮದ ಒತ್ತಡವನ್ನು ತಡೆದುಕೊಳ್ಳುವ ಶಕ್ತಿ ಇಲ್ಲಿನ ಪರಿಸರಕ್ಕೆ ಇಲ್ಲವೆಂದು ಅಭಿಪ್ರಾಯಪಟ್ಟಿರುವ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯ ಅಧ್ಯಕ್ಷ ಕರ್ನಲ್ ಸಿ.ಪಿ.ಮುತ್ತಣ್ಣ, ಪ್ರವಾಸೋ ದ್ಯಮವನ್ನು ಮತ್ತಷ್ಟು ಉತ್ತೇಜಿಸುವುದನ್ನು ವಿರೋಧಿಸುವುದಾಗಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಎಂದಿಗೂ ಕೊಡಗಿನ ಅಭಿವೃದ್ಧಿಯ ವಿರೋಧಿಗಳಲ್ಲ. ಆದರೆ, ಪರಿಸರ ರಕ್ಷಣೆಗೆ ಪೂರಕವಾದ ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ. ಪ್ರವಾ ಸೋದ್ಯಮದ ವೇಗವನ್ನು ತಡೆಯುವಷ್ಟು ಶಕ್ತಿ ಈ ಸೂಕ್ಷ್ಮ ಪ್ರದೇಶವಾದ ಕೊಡಗಿಗೆ ಇಲ್ಲ. ಜಿಲ್ಲೆಯ ಜನಸಂಖ್ಯೆ…

ಚೇರಂಗಾಲದ ಕಾವೇರಿ ಮೂಲ ಸ್ಥಾನದಲ್ಲಿ ದೇವಾಲಯ ನಿರ್ಮಾಣಕ್ಕೆ ನಿರ್ಧಾರ
ಕೊಡಗು

ಚೇರಂಗಾಲದ ಕಾವೇರಿ ಮೂಲ ಸ್ಥಾನದಲ್ಲಿ ದೇವಾಲಯ ನಿರ್ಮಾಣಕ್ಕೆ ನಿರ್ಧಾರ

July 25, 2018

ಮಡಿಕೇರಿ: ಭಾಗಮಂಡಲ ಸಮೀಪದ ಚೇರಂಗಾಲ ಗ್ರಾಮದಲ್ಲಿರುವ ಕಾವೇರಿಯ ಮೂಲ ಸ್ಥಾನದಲ್ಲಿ ಸುಮಾರು 12 ಕೋಟಿ ರೂ.ವೆಚ್ಚದಲ್ಲಿ ದೇವಾಲಯ ನಿರ್ಮಿಸಲು ಶ್ರೀ ಕನ್ನಿಕಾವೇರಿ ಸೇವಾ ಟ್ರಸ್ಟ್ ನಿರ್ಧರಿಸಿದೆ ಎಂದು ಟ್ರಸ್ಟ್‍ನ ಸಂಚಾಲಕ ಮುಲ್ಲೇಂಗಡ ಶಂಕರಿ ಪೊನ್ನಪ್ಪ ತಿಳಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಂಕರಿ ಪೊನ್ನಪ್ಪ, ಚೇರಂ ಗಾಲ ಗ್ರಾಮದ ಹೊಸೂರು ಎಂಬಲ್ಲಿ ಕಾವೇರಿಯ ಮೂಲ ಸ್ಥಾನವಿದ್ದು, ಈ ಕ್ಷೇತ್ರದ ಅಭಿವೃದ್ಧಿಗಾಗಿ ಕಳೆದ 7 ದಶಕ ಗಳಿಂದ ಹೊಸೂರು ನಾಣಯ್ಯ ದಂಪತಿ ಪ್ರಯತ್ನಿಸಿದ್ದರೂ, ಅದು ಕಾರ್ಯರೂಪಕ್ಕೆ ಬಂದಿಲ್ಲ. ಇದೀಗ ಈ…

1 150 151 152 153 154 187
Translate »