ವಿರಾಜಪೇಟೆ: ಕಳೆದ ಜೂನ್ ತಿಂಗಳಿಂದ ವಿರಾಜಪೇಟೆ ಸಮೀಪದ ದೇವಣಗೇರಿ, ಅಂಬಲ, ಮೈತಾಡಿ, ಚಾಮಿಯಾಲ, ಹಾಲುಗುಂದ ಗ್ರಾಮಗಳ ತೋಟಗಳಲ್ಲಿ ನಾಲ್ಕು ಕಾಡಾನೆಗಳು ಒಂದು ಮರಿಆನೆ ಬಿಡಾರ ಹೂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ಒಂದು ತೋಟದಿಂದ ಇನ್ನೊಂದು ತೋಟಕ್ಕೆ ಓಡಿಸುವುದರಲ್ಲೆ ಬೆಳೆಗಾರರ ಪಸಲು ನಷ್ಟಉಂಟಾಗುತ್ತಿದೆ ಎಂದು ಅಲ್ಲಿನ ಗ್ರಾಮಸ್ಥರು ದೂರಿದ್ದಾರೆ.
ಗ್ರಾಮಸ್ಥರು ಬಸ್ಸಿಗಾಗಿ ರಸ್ತೆಯಲ್ಲಿ ನಿಂತಾಗ ಭಟ್ಟಮಕ್ಕಿಯ ರಸ್ತೆಯ ಮದ್ಯದಲ್ಲಿಯೇ ಕಾಡಾನೆಗಳು ಓಡಾಡುತ್ತಿರುವುದರಿಂದ ಆನೆಯನ್ನು ಕಂಡ ಗ್ರಾಮಸ್ಥರು ಓಡಿಹೋಗಿ ದ್ದಾರೆ. ಸಾರ್ವಜನಿಕರು ಹಾಗೂ ಗ್ರಾಮಸ್ಥರು ಜೀವ ಭಯದಿಂದ ಓಡಾಡುವಂತಾಗಿದೆ.
ಬೈರಂಬಾಡ ಕಡೆಯಿಂದ ಸಂಜೆ ಹೊತ್ತಿಗೆ ಬಂದ ಆನೆಗಳು ಮೇವಿಗಾಗಿ ಸಿಕ್ಕ ಸಿಕ್ಕ ತೋಟಗಳಿಗೆ ನುಗ್ಗಿ ಕಾಪಿ, ಬಾಳೆ, ಅಡಿಕೆ, ಗಿಡಗಳನ್ನು ಮುರಿದು ನಷ್ಟವುಂಟು ಮಾಡುತ್ತಿರುವುದಲ್ಲದೆ ಗದ್ದೆಯಲ್ಲೆ ನಾಟಿಗೆ ಸಿದ್ದವಾದ ಪೈರನ್ನು ನಾಶಗೊಳಿಸುತ್ತಿವೆ. ಹಾಲುಗುಂದ ಗ್ರಾಮದ ದಿವಾಕರ್ ಅವರ ಗದ್ದೆಯಲಿದ್ದ ಪೈರು ನಷ್ಟ, ಮೈತಾಡಿ ಗ್ರಾಮದ ಕುಂಞರ ಸುನು, ಚೆನ್ನಪ್ಪ, ಚಪ್ಪಂಡ ಮತ್ತು ಐಚ್ಚೆಟ್ಟಿರ ಕುಟುಂಬಸ್ತರ ಸೇರಿ ದಂತೆ ಇತರ ತೋಟದಲ್ಲಿ ಓಡಾಡುತ್ತಿರುವ ಕಾಡಾನೆಗಳು ತೋಟದಲ್ಲಿ ಹಾನಿ ಮಾಡಿರುವುದಲ್ಲದೆ. ಮೈತಾಡಿಯ ಭಟ್ಟಮಕ್ಕಿ ಬಳಿ ರಸ್ತೆಗೆ ಹೊಂದಿಕೊಂಡಿರುವ ದೇವರ ಕಾಡಿನಲ್ಲಿ ಸೇರಿಕೋಂಡಿರುವುದಾಗಿ ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ.
ಕಳೆದ ಒಂದು ತಿಂಗಳಿಂದ ಮಕ್ಕಳನ್ನು ಶಾಲೆಗೆ ಕಳಿಸಲು ಹಾಗೂ ಕೂಲಿ ಕಾರ್ಮಿ ಕರು ತೋಟ ಮತ್ತು ಗದ್ದೆಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆನೆ ಓಡಿಸುವುದಾಗಿ ಸಂಜೆಯವರೆಗೆ ಪಟಾಕಿ ಸಿಡಿಸಿ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಸೇರಿಸಿ ಹೋಗುತ್ತಿದ್ದಾರೆ. ಗ್ರಾಮಸ್ಥರು ಅರಣ್ಯ ಸಿಬ್ಬಂದಿಯೊಂದಿಗೆ ಸೇರಿ ಆನೆಗಳನ್ನು ಕಾಡಿಗೆ ಅಟ್ಟಲು ಹರಸಾಹಸ ಪಡುತ್ತಿದ್ದರು. ಅರಣ್ಯ ಇಲಾಖೆಯಿಂದ ಆನೆಗಳನ್ನು ಕಾಡಿಗೆ ಅಟ್ಟುಲು ಸಾಧ್ಯವಾಗುತ್ತಿಲ್ಲ. ಪಟಾಕಿ ಸಿಡಿಸುವ ಬದಲು ಆನೆಗಳನ್ನು ಪ್ರಜ್ಞೆ ತಪ್ಪಿಸಿ ಕಾಡಿಗೆ ಬಿಡುವುದು ಉತ್ತಮ ಎಂದರಲ್ಲದೆ. ಪ್ರಾಣ ಹಾನಿಯಾಗುವ ಮುಂಚಿತವಾಗಿ ಅರಣ್ಯ ಇಲಾಖೆ ಇದರ ಬಗ್ಗೆ ಎಚ್ಚೆತ್ತು ಕೊಂಡು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.