ಕೊಡಗು

ಶಿಕ್ಷಣ ಸಂಸ್ಥೆಗಳ ಬಳಿ ಗಾಂಜಾ ನಿಷೇಧಕ್ಕೆ ಸೂಚನೆ
ಕೊಡಗು

ಶಿಕ್ಷಣ ಸಂಸ್ಥೆಗಳ ಬಳಿ ಗಾಂಜಾ ನಿಷೇಧಕ್ಕೆ ಸೂಚನೆ

July 31, 2018

ಗೋಣಿಕೊಪ್ಪಲು: ಶಿಕ್ಷಣ ಸಂಸ್ಥೆಗಳ ಸಮೀಪ ಗಾಂಜಾ ಮಾರಾಟ ಯಥೇಚ್ಚವಾಗಿ ನಡೆಯುತ್ತಿರುವುದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಮುಂದಾಗುವಂತೆ ಶಾಸಕ ಕೆ. ಜಿ. ಬೋಪಯ್ಯ ಸೂಚನೆ ನೀಡಿದರು. ಪೊನ್ನಂಪೇಟೆ ಸಾಮಥ್ರ್ಯಸೌಧದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಗಾಂಜಾ ಮಾರಾಟ ತಡೆ ಗಟ್ಟಲು ಪೊಲೀಸ್ ಇಲಾಖೆ ಮುಂದಾಗ ಬೇಕು. ಗಾಂಜಾ ಮಾರಾಟ ಹಾಗೂ ಸೇವನೆ ಬಗೆಗಿನ ಇರುವ ಕಾನೂನು ಕ್ರಮವನ್ನು ಜರುಗಿಸಬೇಕು ಎಂದರು. ವಿರಾಜಪೇಟೆ ತಹಶೀಲ್ದಾರ್ ಕಚೇರಿಯಲ್ಲಿ ಹಳೆಯ ಅಧಿಕಾರಿಗಳೇ ತಹಸೀಲ್ದಾರ್ ರೀತಿಯಲ್ಲಿ ಸಾರ್ವಜನಿಕರೊಂದಿಗೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ…

ಕಾಡಾನೆ ದಾಳಿಗೆ ಕಾರ್ಮಿಕ ಬಲಿ
ಕೊಡಗು

ಕಾಡಾನೆ ದಾಳಿಗೆ ಕಾರ್ಮಿಕ ಬಲಿ

July 31, 2018

ಗೋಣಿಕೊಪ್ಪಲು: ಕಾಡಾನೆ ದಾಳಿಗೆ ಕಾರ್ಮಿಕ ಬಲಿಯಾಗಿರುವ ಘಟನೆ ನಾಗರಹೊಳೆ ರಕ್ಷಿತಾರಣ್ಯದ ಹುಲಿ ಸಂರಕ್ಷಿತ ವಲಯದಲ್ಲಿ ನಡೆದಿದೆ. ಗೋಣಿಗದ್ದೆ ಹಾಡಿಯ ತಿಮ್ಮಯ್ಯ (30) ಮೃತ ಕಾರ್ಮಿಕ. ಭಾನುವಾರ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಆನೆ ದಾಳಿ ನಡೆಸಿದೆ. ದಾಳಿಯಿಂದ ತಿಮ್ಮಯ್ಯ ಸ್ಥಳದ ಲ್ಲಿಯೇ ಮೃತಪಟ್ಟಿದ್ದು, ಸೋಮವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ನಾಗರಹೊಳೆ ಎಸಿಎಫ್ ಪೌಲ್ ಅಂಥೋನಿ, ಆರ್‍ಎಫ್‍ಒ ಅರವಿಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಕುಟ್ಟ ಸಮುದಾಯ…

ಸೋಮವಾರಪೇಟೆ: ಯುವಕ ಆತ್ಮಹತ್ಯೆ
ಕೊಡಗು

ಸೋಮವಾರಪೇಟೆ: ಯುವಕ ಆತ್ಮಹತ್ಯೆ

July 31, 2018

ಸೋಮವಾರಪೇಟೆ: ಇಲ್ಲಿನ ಲೋಡರ್ಸ್ ಕಾಲೋನಿ ನಿವಾಸಿ ಸಚಿನ್ (15) ಇಂದು ಸಂಜೆ 6 ಘಂಟೆಗೆ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಲೋಡರ್ಸ್ ಕಾಲೋನಿಯ ಮಹದೇವ ಮತ್ತು ಮಾಧವಿ ಎಂಬುವವರ ಪುತ್ರ ಸಚಿನ್ ಮಸಗೋಡು ಚೆನ್ನಮ್ಮ ಶಾಲೆಯ 9 ನೇ ತರಗತಿ ವಿದ್ಯಾರ್ಥಿ ಆಗಿದ್ದು ಇಂದು ಸಂಜೆ ಮನೆಗೆ ಬಂದು ಮನೆಯಲ್ಲಿ ಯಾರೂ ಇಲ್ಲದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೋಮವಾರಪೇಟೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.

ಪಾರಂಪರಿಕ ತಿನಿಸು ನೆನಪಿಸಿದ ಕೊಡವ ತೀನಿ ನಮ್ಮೆ
ಕೊಡಗು

ಪಾರಂಪರಿಕ ತಿನಿಸು ನೆನಪಿಸಿದ ಕೊಡವ ತೀನಿ ನಮ್ಮೆ

July 30, 2018

ಮಡಿಕೇರಿ:  ಕೊಡವ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ನೆನಪು ಮಾಡುವ ಕೊಡವ ತೀನಿ ನಮ್ಮೆ ಕಾರ್ಯಕ್ರಮ ನಗರದ ಕೊಡವ ಸಮಾಜದಲ್ಲಿ ನಡೆಯಿತು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ವತಿಯಿಂದ ನಡೆದ ಕೊಡವ ತೀನಿ ನಮ್ಮೆ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ತಿಂಡಿ ತಿನಿಸುಗಳು ಮೇಳೈಸಿದವು. ಕೊಡವ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ನೆನಪು ಮಾಡುವ ಉದ್ದೇಶ ದಿಂದ ಹಾಗೂ ಯುವ ಪೀಳಿಗೆಗೆ ಪರಿಚಯಿಸುವ ಪ್ರಯತ್ನದ ಸಲುವಾಗಿ ಪೈಪೋಟಿ ಹಾಗೂ ಪ್ರದರ್ಶನ ಎಂಬ ಎರಡು…

ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಕ್ಕೆ ಖಂಡನೆ
ಕೊಡಗು

ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಕ್ಕೆ ಖಂಡನೆ

July 30, 2018

ಸೋಮವಾರಪೇಟೆ: ಕೊಡ್ಲಿ ಪೇಟೆ ಪೆಟ್ರೋಲ್ ಬಂಕ್ ಬಳಿ ನಡೆದ ಪತ್ರಿಭಟನೆಗೆ ಸಂಬಂಧಿಸಿದಂತೆ ಅಮಾಯಕರ ಮೇಲೆ ಜಾತಿನಿಂದನೆ ಮೊಕದ್ದಮೆ ದಾಖಲಿಸಿರುವುದು ಖಂಡನೀಯ ಎಂದು ಜಯಕರ್ನಾಟಕ ಸಂಘಟ ನೆಯ ತಾಲೂಕು ಅಧ್ಯಕ್ಷ ಸಿ.ಬಿ.ಸುರೇಶ್ ಶೆಟ್ಟಿ ಹೇಳಿದ್ದಾರೆ. ಪೊಲೀಸರು ರಾಜಕೀಯ ಪ್ರಭಾವಕ್ಕೆ ಒಳಪಡದೆ ಪ್ರಕರಣದ ನಿಷ್ಪಕ್ಷಪಾತ ತನಿಖೆ ಮಾಡಬೇಕೆಂದು ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದ್ದಾರೆ. ಜಯಕರ್ನಾಟಕ ಸಂಘಟನೆ ರಾಜ ಕೀಯ ರಹಿತವಾಗಿದ್ದು, ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಾ ಬರುತ್ತಿದೆ. ಸಾರ್ವಜನಿಕರ ಮನವಿ ಮೇರೆಗೆ ನಮ್ಮ ಸಂಘಟನೆಯ ಕೆಲ ಸದಸ್ಯರು, ಬಂಕ್‍ನಲ್ಲಿ ಪೆಟ್ರೋಲ್‍ಗೆ ನೀರು…

ಮುಂದಿನ ಪೀಳಿಗೆಗೆ ಪ್ರಕೃತಿ ಉಳಿಸುವುದು ಎಲ್ಲರ ಕರ್ತವ್ಯ
ಕೊಡಗು

ಮುಂದಿನ ಪೀಳಿಗೆಗೆ ಪ್ರಕೃತಿ ಉಳಿಸುವುದು ಎಲ್ಲರ ಕರ್ತವ್ಯ

July 30, 2018

ವಿರಾಜಪೇಟೆ:  ಪರಿಸರದಿಂದ ಗಾಳಿ ಬೆಳಕು ಅಹಾರಗಳನ್ನು ಪಡೆದು ಕೊಳ್ಳುವ ನಾವು ಮುಂದಿನ ಪೀಳಿಗೆಗೆ ಪ್ರಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿ ಯೊಬ್ಬರ ಕರ್ತವ್ಯವಾಗಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ. ಗಣೇಶ್ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿರಾಜಪೇಟೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಬೇಟೋಳಿ, ಹಾಗೂ ಬಾಳುಗೋಡು ಏಕಲವ್ಯ ವಸತಿ ಶಾಲೆಯ ಸಂಯುಕ್ತ ಆಶ್ರಯದಲ್ಲಿ ವಸತಿ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ”ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಮಾತನಾಡಿ,…

ಗೋವಾ ರ್‍ಯಾಲಿಯಲ್ಲಿ ಜಗತ್ ನಂಜಪ್ಪ ಪ್ರಥಮ
ಕೊಡಗು

ಗೋವಾ ರ್‍ಯಾಲಿಯಲ್ಲಿ ಜಗತ್ ನಂಜಪ್ಪ ಪ್ರಥಮ

July 30, 2018

ಮಡಿಕೇರಿ:  ಅಂತರಾಷ್ಟ್ರೀಯ ರ್‍ಯಾಲಿ ಪಟು ಕೊಡಗಿನ ಮಾಳೇಟಿರ ಜಗತ್ ನಂಜಪ್ಪ ಹಾಗೂ ಕೋ ಡ್ರೈವರ್ ಉದ್ದ ಪಂಡ ಚೇತನ್ ಚಂಗಪ್ಪ ಗೋವಾದಲ್ಲಿ ನಡೆದ ‘ರೈನ್ ಫಾರೆಸ್ಟ್ ಚ್ಯಾಲೆಂಜರ್ಸ್ ಇಂಡಿಯಾ-2018’ ರ್‍ಯಾಲಿಯಲ್ಲಿ ಮೊದಲ ಸ್ಥಾನವನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಗೋವಾದ ಕೆಫಿಕಂ ಹಾಗು ಡೌನಪೋಲದ ಅರಣ್ಯದ ಕಡಿದಾದ ಮಾರ್ಗ ದಲ್ಲಿ ನಡೆದ ರ್‍ಯಾಲಿಯು, ರ್‍ಯಾಲಿ ಪ್ರಿಯರಲ್ಲಿ ರೋಮಾಂಚಕತೆ ಸೃಷ್ಟಿಸಿತು. ಇಳಿಜಾರಿನಲ್ಲಿ ವಿಂಚ್‍ಗಳ ಮೂಲಕ ಕಠಿಣ ಶ್ರಮದಿಂದ ಬೆಟ್ಟವನ್ನೇರುವುದು, ಕಿರಿದಾದ ಜಾಗದಲ್ಲಿ ಇಳಿಸುವುದು, ರಿವರ್ ಕ್ರಾಸಿಂಗ್ ನಂತಹ ರೋಚಕ…

ದೇಶದಲ್ಲಿ ಗುರುವಿಗೆ ಮಹತ್ತರ ಸ್ಥಾನ
ಕೊಡಗು

ದೇಶದಲ್ಲಿ ಗುರುವಿಗೆ ಮಹತ್ತರ ಸ್ಥಾನ

July 30, 2018

ಸುಂಟಿಕೊಪ್ಪ:  ದೇಶದಲ್ಲಿ ಗುರುವಿಗೆ ಮಹತ್ತರ ಸ್ಥಾನವಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ತ್ಯಾಗ ಮನೋಭಾವನೆಯಿಂದ ಸಮಾಜ ಕಟ್ಟುವ ಕೆಲಸ ವನ್ನು ನಿರ್ವಹಿಸುತ್ತಿದ್ದು, ಯಾವುದೇ ಪ್ರತಿಫಲಾಪೇಕ್ಷೆ ನಿರೀಕ್ಷಿಸದೆ ಉತ್ತಮ ಕೆಲಸವನ್ನು ಮಾಡುತ್ತಿದೆ ಎಂದು ರಾಷ್ಟ್ರೀಯ ಸೇವಕ ಸಂಘದ ಜಿಲ್ಲಾ ಸಂಚಾಲಕ ಬೌದ್ದಿಕ್ ಅವಿನಾಶ್ ಹೇಳಿದರು. ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಗುರು ಪೂಜೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದಿನ ಕಾಲದ ಗುರುಕುಲದಲ್ಲಿ ಗುರುಗಳು ತ್ಯಾಗ ಮನೋಭಾವ ದಿಂದ ಶಿಕ್ಷಣವನ್ನು ಶಿಷ್ಯರಿಗೆ ಧಾರೆಯೆರೆಯುತ್ತಿದ್ದರು. ಶಿಷ್ಯರು ಅಷ್ಟೇ ಗೌರವವನ್ನು…

ಆ.5 ರಂದು ಆಟಿ ಹಬ್ಬ
ಕೊಡಗು

ಆ.5 ರಂದು ಆಟಿ ಹಬ್ಬ

July 30, 2018

ಮಡಿಕೇರಿ:  ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಪುತ್ತೂರಿನ ಒಕ್ಕಲಿಗ ಗೌಡ ಮಹಿಳಾ ಸಂಘ, ಒಕ್ಕಲಿಗ ಗೌಡ ಸೇವಾ ಸಂಘ, ಯುವ ಒಕ್ಕಲಿಗ ಗೌಡ ಸಂಘ, ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ಸಹಯೋಗದಲ್ಲಿ ಆಗಸ್ಟ್, 5 ರಂದು ಬೆಳಗ್ಗೆ 9 ಗಂಟೆಗೆ ಪುತ್ತೂರಿನ ತೆಂಕಿಲದ ಒಕ್ಕಲಿಗಗೌಡ ಸಮುದಾಯ ಭವನದಲ್ಲಿ ಆಟಿ ಹಬ್ಬ 2018 ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ, 9.30 ಗಂಟೆಗೆ ಆಟೋಟ ಸ್ಪರ್ಧೆ, ಮಧ್ಯಾಹ್ನ 12 ಗಂಟೆಗೆ ಸಭಾ ಕಾರ್ಯಕ್ರಮ…

ತಾಳತ್ತಮನೆ ಬಳಿ ಹೆದ್ದಾರಿಯಲ್ಲಿ ಗುಂಡಿ
ಕೊಡಗು

ತಾಳತ್ತಮನೆ ಬಳಿ ಹೆದ್ದಾರಿಯಲ್ಲಿ ಗುಂಡಿ

July 30, 2018

ಮಡಿಕೇರಿ:  ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ತಾಳತ್ತಮನೆ ಸಮೀಪ ರಸ್ತೆಯ ಮಧ್ಯದಲ್ಲಿ ಬೃಹತ್ ಗುಂಡಿ ಬಿದ್ದಿದೆ. ಅಂತರ್ಜಲದಿಂದ ಈ ಗುಂಡಿ ಉದ್ಭವವಾಗಿದ್ದು, ವಾಹನ ಸಂಚಾರ ದುಸ್ಥರವಾಗಿ ಪರಿಣಮಿಸಿದೆ. ಹೆದ್ದಾರಿಯ ತಿರುವಿನಲ್ಲೇ ಬೃಹತ್ ಹೊಂಡ ಸೃಷ್ಟಿಯಾಗಿರುವುದರಿಂದ ಮಲ್ಟಿ ಆ್ಯಕ್ಸಿಲ್ ಲಾರಿಗಳು ಮತ್ತು ಬಸ್‍ಗಳ ಸಂಚಾರಕ್ಕೆ ಸಂಚಕಾರವಾಗಿದೆ. ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಅಪಾಯದ ಸೂಚನೆ ಫಲಕ ಅಳವಡಿಸಿದ್ದಾರೆ. ಸ್ಥಳೀಯ ನಿವಾಸಿಗಳು ಹೆದ್ದಾರಿಯ ಹೊಂಡಕ್ಕೆ ಕಲ್ಲುಗಳನ್ನು ಹಾಕಿ ಮುಚ್ಚಿದ್ದರು ಕೂಡ ಅಧಿಕ ಭಾರ ಹೊತ್ತು ಸಾಗುತ್ತಿರುವ ಲಾರಿಗಳಿಂದಾಗಿ ಮತ್ತಷ್ಟು ಗುಂಡಿ ಸೃಷ್ಟಿಯಾಗುತ್ತಿದೆ. ರಾತ್ರಿ…

1 148 149 150 151 152 187
Translate »