ಚೇರಂಗಾಲದ ಕಾವೇರಿ ಮೂಲ ಸ್ಥಾನದಲ್ಲಿ ದೇವಾಲಯ ನಿರ್ಮಾಣಕ್ಕೆ ನಿರ್ಧಾರ
ಕೊಡಗು

ಚೇರಂಗಾಲದ ಕಾವೇರಿ ಮೂಲ ಸ್ಥಾನದಲ್ಲಿ ದೇವಾಲಯ ನಿರ್ಮಾಣಕ್ಕೆ ನಿರ್ಧಾರ

July 25, 2018

ಮಡಿಕೇರಿ: ಭಾಗಮಂಡಲ ಸಮೀಪದ ಚೇರಂಗಾಲ ಗ್ರಾಮದಲ್ಲಿರುವ ಕಾವೇರಿಯ ಮೂಲ ಸ್ಥಾನದಲ್ಲಿ ಸುಮಾರು 12 ಕೋಟಿ ರೂ.ವೆಚ್ಚದಲ್ಲಿ ದೇವಾಲಯ ನಿರ್ಮಿಸಲು ಶ್ರೀ ಕನ್ನಿಕಾವೇರಿ ಸೇವಾ ಟ್ರಸ್ಟ್ ನಿರ್ಧರಿಸಿದೆ ಎಂದು ಟ್ರಸ್ಟ್‍ನ ಸಂಚಾಲಕ ಮುಲ್ಲೇಂಗಡ ಶಂಕರಿ ಪೊನ್ನಪ್ಪ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಂಕರಿ ಪೊನ್ನಪ್ಪ, ಚೇರಂ ಗಾಲ ಗ್ರಾಮದ ಹೊಸೂರು ಎಂಬಲ್ಲಿ ಕಾವೇರಿಯ ಮೂಲ ಸ್ಥಾನವಿದ್ದು, ಈ ಕ್ಷೇತ್ರದ ಅಭಿವೃದ್ಧಿಗಾಗಿ ಕಳೆದ 7 ದಶಕ ಗಳಿಂದ ಹೊಸೂರು ನಾಣಯ್ಯ ದಂಪತಿ ಪ್ರಯತ್ನಿಸಿದ್ದರೂ, ಅದು ಕಾರ್ಯರೂಪಕ್ಕೆ ಬಂದಿಲ್ಲ. ಇದೀಗ ಈ ಕ್ಷೇತ್ರದ ಅಭಿವೃದ್ಧಿಗಾಗಿ ಜಿಲ್ಲೆಯ ವಿವಿಧೆಡೆಯ ಸಮಾನ ಮನಸ್ಕರನ್ನು ಸೇರಿಸಿ ಟ್ರಸ್ಟ್ ಒಂದನ್ನು ರಚಿಸಲಾಗಿದೆ ಎಂದರು.

ಚೇರಂಗಾಲದಲ್ಲಿರುವ ಕಾವೇರಿಯ ಮೂಲ ಸ್ಥಾನದಲ್ಲಿ ವಿಷ್ಣು, ಮಹೇಶ್ವರ, ಸುಬ್ರಹ್ಮಣ್ಯ, ಭದ್ರಕಾಳಿ, ಗುಳಿಗ, ವಾಯು ರಕ್ಷಕ ಪೊದ ದೇವರ ಸ್ಥಾನಗಳಿದ್ದು, ಅವು ಗಳು ಈಗ ಜೀರ್ಣಗೊಂಡಿವೆ. ಅವು ಗಳನ್ನು ಜೀರ್ಣೋದ್ಧಾರ ಮಾಡಬೇಕೆಂ ಬುದು ಹಲವಾರು ಪ್ರಶ್ನೆ, ಸುವರ್ಣ ಪ್ರಶ್ನೆ ಗಳಲ್ಲಿ ಕಂಡು ಬಂದಿದ್ದು, ಕಾವೇರಿ ನೀರನ್ನು ಕುಡಿಯುವ ಪ್ರತಿಯೊಬ್ಬರೂ ಇದರಲ್ಲಿ ಭಾಗಿಯಾಗಬೇಕೆಂದು ಗೋಚರಿಸಿದೆ. ಈ ಹಿನ್ನೆಲೆಯಲ್ಲಿ ಟ್ರಸ್ಟ್ ಕೊಡಗು ಮಾತ್ರ ವಲ್ಲದೆ, ಕೊಡಗಿನ ಹೊರಭಾಗದಲ್ಲಿರುವ ಕಾವೇರಿಯ ನೀರನ್ನು ಬಳಕೆ ಮಾಡುವವ ರಿಂದಲೂ ದೇಣಿಗೆ ಸಂಗ್ರಹಿಸಿ ಹಾಗೂ ಸರಕಾರದ ನೆರವಿನಿಂದ ಈ ದೇವಾ ಲಯವನ್ನು ಅಭಿವೃದ್ಧಿಪಡಿಸಲು ಮುಂದಾ ಗಿದೆ ಎಂದು ಹೇಳಿದರು.

ಈ ಕ್ಷೇತ್ರವು ಕಾವೇರ ಮುನಿಯ ತಪಸ್ಸನ್ನು ಮೆಚ್ಚಿ ಬ್ರಹ್ಮದೇವನು ಕಾವೇರ ಮುನಿಯನ್ನು ಸಂತೈಸುವ ಸಲುವಾಗಿ ತನ್ನ ಮಾನಸ ಪುತ್ರಿ ಲೋಪಮುದ್ರೆಯನ್ನು ಕೊಟ್ಟ ಸ್ಥಳವೆಂದು ಹೇಳಲಾಗಿದ್ದು, ಆ ಬಳಿಕ ಅಗಸ್ತ್ಯರನ್ನು ವರಿಸಿದ ಕಾವೇರಿ ಅಗಸ್ತ್ಯರೊಂದಿಗೆ ಮುನಿಸಿಕೊಂಡು ಮಾಯವಾದ ಸ್ಥಳ ಈಗಿನ ತಲಕಾವೇರಿ ಯಾಗಿದೆ ಎಂದು ಶಂಕರಿ ಪೊನ್ನಪ್ಪ ತಿಳಿಸಿದರು. ಈ ಹಿನ್ನೆಲೆಯಲ್ಲಿ ಟ್ರಸ್ಟ್ ಕ್ಷೇತ್ರದ ಅಭಿವೃದ್ಧಿಗೆ ಪಣತೊಟ್ಟಿದೆ. ಹೊಸೂರು ನಾಣಯ್ಯ ಅವರ ಅಧೀನದಲ್ಲಿದ್ದ ಈ ಕ್ಷೇತ್ರ ವನ್ನು ಅಭಿವೃದ್ಧಿಪಡಿಸಲು ಅವರು ಜಾಗ ವನ್ನು ಟ್ರಸ್ಟ್‍ಗೆ ನೀಡಿದ್ದು, ಅಲ್ಲಿ ನಾಣಯ್ಯ ಅವರ ಹೆಸರಿನಲ್ಲಿ ಸೇವಾಶ್ರಮವೊಂದನ್ನು ಆರಂಭಿಸುವ ಉದ್ದೇಶವೂ ಇದೆ ಎಂದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‍ನ ಅಧ್ಯಕ್ಷ ಚೇಂದಂಡ ಚುಮ್ಮಿ ಪೂವಯ್ಯ, ಕಾರ್ಯ ದರ್ಶಿ ಪುಚ್ಚಿಮಂಡ ಬಬ್ಲು ಅಪ್ಪಯ್ಯ, ಟ್ರಸ್ಟಿಗಳಾದ ಪಟ್ರಪಂಡ ನಾಣಯ್ಯ ಹಾಗೂ ಚೇಂದ್ರಿಮಾಡ ದರ್ಶನ್ ಹಾಜರಿದ್ದರು.

Translate »