ಪತ್ರಕರ್ತರು ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಿ
ಚಾಮರಾಜನಗರ

ಪತ್ರಕರ್ತರು ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಿ

July 25, 2018

ಗುಂಡ್ಲುಪೇಟೆ: ಪತ್ರಕರ್ತರು ಸಾಮಾಜಿಕ ಕಳಕಳಿಯಿಂದ ಸಮಾಜದಲ್ಲಿ ಜಾಗೃತಿ ಮೂಡಿಸುವಂತಾಗ ಬೇಕು ಎಂದು ಹಿರಿಯ ಸಿವಿಲ್ ನ್ಯಾಯಾ ಧೀಶ ಚಂದ್ರಶೇಖರ ಪಿ.ದಿಡ್ಡಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ಆಯೋಜಿ ಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ತಾಲೂಕಿನಲ್ಲಿ ಪತ್ರಕರ್ತರ ಸಂಘವು ಹಲವು ಸಮಾಜಮುಖಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಸಾಮಾ ಜಿಕ ಕಳಕಳಿಯನ್ನು ತೋರುತ್ತಿದೆ ಎಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಜೆ. ಯೋಗೇಶ್ ಮಾತನಾಡಿ, ಪರಿಸರ ಸಂರಕ್ಷಣೆ ಯೊಂದಿಗೆ ಕಾನೂನು ಸೇವಾ ಸಮಿತಿಯ ಸಹಯೋಗದಲ್ಲಿ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಸ್ವಚ್ಛತೆ, ವಿದ್ಯಾಭ್ಯಾಸ ಮತ್ತು ದುಶ್ಚಟಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಪತ್ರಕರ್ತರ ಸಂಘ ಹಮ್ಮಿಕೊಳ್ಳಲಿ ಎಂದು ಸಲಹೆ ನೀಡಿದರು.

ಸಿವಿಲ್ ನ್ಯಾಯಾಧೀಶ ಶರತ್‍ಚಂದ್ರ ಮಾತ ನಾಡಿ, ಪತ್ರಕರ್ತರು ಜವಾಬ್ದಾರಿಯನ್ನು ಅರಿತು ಪ್ರಾಮಾಣಿಕತೆಯಿಂದ ಸುದ್ದಿಗಳನ್ನು ಮಾಡಿದಾಗ ಸಮಾಜದ ಸುಧಾರಣೆಯಾಗು ತ್ತದೆ. ಮುಂದಿನ ದಿನಗಳಲ್ಲಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಮತ್ತು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಯನ್ನು ಕಾನೂನು ಸೇವಾ ಸಮಿತಿಯ ಸಹಯೋಗದಲ್ಲಿ ನಡೆಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಪ್ರಚಲಿತ ವಿದ್ಯಮಾನಗಳ ಅರಿ ವನ್ನು ಮೂಡಿಸಿ ಎಂದರು.
ಗಿಡ ನೆಟ್ಟು ನೀರೆರೆದರು: ಪತ್ರಿಕಾ ದಿನಾ ಚರಣೆಯ ಅಂಗವಾಗಿ ಹಮ್ಮಿ ಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ನ್ಯಾಯಾ ಧೀಶರಾದ ಚಂದ್ರಶೇಖರ ಪಿ.ದಿಡ್ಡಿ, ಜೆ. ಯೋಗೇಶ್, ಶರತ್‍ಚಂದ್ರ ಅವರು ವಿವಿಧ ಜಾತಿಯ ಗಿಡಗಳನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನೆಟ್ಟು ನೀರೆಯುವುದರೊಂದಿಗೆ ಪತ್ರಕರ್ತರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಜಿ.ಮಲ್ಲೇಶ್, ಸಹಾಯಕ ಪ್ರಾಧ್ಯಾಪಕ ರಾದ ಕೆ.ಚಾಮರಾಜು, ಡಾ.ರವಿಕುಮಾರ್, ರೂಪ. ಕೃ.ಪಾ.ಗಣೇಶ್, ನಾರಾಯಣಸ್ವಾಮಿ, ಉಮೇಶ್, ಎಚ್.ಆರ್. ರವಿಕುಮಾರ್, ಶ್ರೀನಿವಾಸನಾಯಕ್, ಚಂದ್ರಶೇಖರ್, ತುಳಸೀ ರಾಮ್, ಪ್ರಸಾದ್, ಜಯಕುಮಾರ್, ಶಾಲಿನಿ, ಗಿರೀಶ್, ಶಿವಸ್ವಾಮಿ, ಕವಿತಾ, ಎಪಿಪಿ ರಾಜಣ್ಣ, ಸಂಘದ ಅಧ್ಯಕ್ಷ ರಾ.ಬಾಬು, ನಿರ್ದೇಶಕರಾದ ಸೋಮಶೇಖರ್, ಕೆ.ಎನ್. ಮಹದೇವಸ್ವಾಮಿ, ದೇವಯ್ಯ, ವೀರೇಂದ್ರ ಪ್ರಸಾದ್, ಸತೀಶ್, ಪವನ್, ಚಂದ್ರು, ಮಹೇಂದ್ರ, ರಾಜಗೋಪಾಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Translate »