ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮೂವರ ಪೈಪೋಟಿ
ಕೊಡಗು

ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮೂವರ ಪೈಪೋಟಿ

July 25, 2018

ಮಡಿಕೇರಿ:  ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಮೂವರು ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದುಕೊಂಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಚಟ್ಟಂಡ ರವಿ ಸುಬ್ಬಯ್ಯ ಮಂಗಳವಾರ ತಮ್ಮ ನಾಮಪತ್ರ ಹಿಂಪಡೆದುಕೊಂಡರು.

ಅಂತಿಮ ಕಣದಲ್ಲಿ ಕೊಡಗು ವಾರ್ತೆ ಸಂಪಾದಕ ಚಮ್ಮಟೀರ ಪ್ರವೀಣ್ ಉತ್ತಪ್ಪ, ಕೊಡಗು ಚಾನಲ್ ಸಂಪಾದಕ ಜಿ.ವಿ. ರವಿಕುಮಾರ್, ಚಿತ್ತಾರ ಪ್ರಧಾನ ಸಂಪಾ ದಕಿ ಬಿ.ಆರ್.ಸವಿತಾ ರೈ ಇದ್ದಾರೆ. ಜಿ.ವಿ. ರವಿಕುಮಾರ್ ಕಾರ್ಯದರ್ಶಿ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರ ಹಿಂಪಡೆದುಕೊಂಡಿ ರುವುದರಿಂದ ಪಿ.ಪಿ. ಆನಂದ್, ಎಚ್.ಕೆ. ಜಗದೀಶ್, ಎ.ಎನ್. ವಾಸು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿರ್ದೇಶಕ ಸ್ಥಾನಕ್ಕೆ ಸಲ್ಲಿಸಿದ್ದ ನಾಮ ಪತ್ರವನ್ನು ಚಮ್ಮಟೀರ ಪ್ರವೀಣ್ ಉತ್ತಪ್ಪ ಹಿಂಪಡೆದುಕೊಂಡಿದ್ದಾರೆ. ಒಟ್ಟು 15 ಸ್ಥಾನಕ್ಕೆ 16 ಅಭ್ಯರ್ಥಿಗಳು ಅಂತಿಮ ಕಣ ದಲ್ಲಿ ಉಳಿದಿದ್ದಾರೆ. ಉದಯ್ ಮೊಣ್ಣಪ್ಪ, ಕುಪ್ಪಂಡ ಗಣಪತಿ ದತ್ತಾತ್ರಿ, ಕೊಡೆಕ್ಕಲ್ ಗಣೇಶ್, ಚಟ್ಟಂಗಡ ರವಿ ಸುಬ್ಬಯ್ಯ, ಎಂ.ಎನ್. ಚಂದ್ರಮೋಹನ್, ಚೆರಿಯಮನೆ ಕೆ. ಸುರೇಶ್, ನವೀನ್ ಸುವರ್ಣ, ನಾಸೀರ್ ಎಂ.ಎನ್., ಪ್ರೇಮಕುಮಾರ್ ಜಿ., ಬಿ.ಜಿ. ಮಂಜು, ಆರ್.ಆರ್. ಮನೋಜ್, ಮಲ್ಲಿ ಕಾರ್ಜುನ ಎಂ., ಎನ್.ಎಂ. ಮುಬಾರಕ್, ಯಶೋಧಾ ಎಚ್.ಬಿ., ಬಿ.ಡಿ. ರಾಜು ರೈ, ಟಿ.ಕೆ. ಸಂತೋಷ್ ಅಂತಿಮ ಕಣದಲ್ಲಿದ್ದಾರೆ.

ಉಪಾಧ್ಯಕ್ಷರಾಗಿ ಪಳೆಯಂಡ ಪಾರ್ಥ ಚಿಣ್ಣಪ್ಪ, ಎಸ್.ಮಹೇಶ್, ಪ್ರಧಾನ ಕಾರ್ಯ ದರ್ಶಿಯಾಗಿ ಬಾಚರಣಿಯಂಡ ಅನು ಕಾರ್ಯಪ್ಪ, ಖಜಾಂಚಿಯಾಗಿ ಎಂ.ಕೆ. ಅರುಣ್‍ಕುಮಾರ್, ರಾಜ್ಯ ಸಮಿತಿ ಸದಸ್ಯ ರಾಗಿ ಎ.ಆರ್. ಕುಟ್ಟಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ, ನಿರ್ದೇಶಕ ಸ್ಥಾನಕ್ಕೆ ಆಗಸ್ಟ್ 5 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 3.30 ರವರೆಗೆ ಪತ್ರಿಕಾ ಭವನದಲ್ಲಿ ಮತದಾನ ನಡೆಯಲಿದೆ. ಮತದಾನ ಮುಗಿದ ತಕ್ಷಣ ಮತ ಎಣಿಕೆ ನಡೆಯಲಿದೆ. ಮತದಾನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಜುಲೈ 29 ರಂದು ಬೆಳಗ್ಗೆ 10.30 ಗಂಟೆಗೆ ಪತ್ರಿಕಾ ಭವನದಲ್ಲಿ ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳ ಸಭೆ ಕರೆಯಲಾಗಿದೆ. ಅಭ್ಯರ್ಥಿಗಳು ಚುನಾ ವಣೆಗೆ ಸಂಬಂಧಿಸಿದ ವಿಷಯಗಳ ಮಾಹಿತಿ ಪಡೆದು ಕೊಳ್ಳಬಹುದು ಹಾಗೂ ಅನುಮಾನ ಪರಿಹರಿಸಿಕೊಳ್ಳುವಂತೆ ಚುನಾವಣಾ ಧಿಕಾರಿ ಚೆಕ್ಕೇರ ಪ್ರಮೋದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »