ವಿವಿಧ ಬೆಳೆಗಾರರ ಸಂಘಗಳ ನಿಯೋಗದಿಂದ  ಕೇಂದ್ರ ಸಚಿವರು, ಅಧಿಕಾರಿಗಳ ಭೇಟಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಮನವಿ
ಕೊಡಗು

ವಿವಿಧ ಬೆಳೆಗಾರರ ಸಂಘಗಳ ನಿಯೋಗದಿಂದ  ಕೇಂದ್ರ ಸಚಿವರು, ಅಧಿಕಾರಿಗಳ ಭೇಟಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಮನವಿ

July 29, 2018

ಮಡಿಕೇರಿ: ಕಾಫಿ ಬೆಳೆಗಾರರ ಸಮಸ್ಯೆ, ಕಾಳುಮೆಣಸು ಆಮದಿನಿಂದಾಗುತ್ತಿರುವ ತೊಂದರೆ ಹಾಗೂ ಕಾಡಾನೆ-ಮಾನವ ಸಂಘರ್ಷದ ಕುರಿತು ಕೇಂದ್ರ ಸರಕಾರಕ್ಕೆ ಮತ್ತೆ ಮನವರಿಕೆ ಮಾಡಿಕೊಡಲು ವಿವಿಧ ಬೆಳೆಗಾರರ ಸಂಘ, ಕಾಫಿ ಮಂಡಳಿ ಹಾಗೂ ಜನಪ್ರತಿನಿಧಿಗಳು ದೆಹಲಿಯಲ್ಲಿ ವಿವಿಧ ಇಲಾಖೆಗಳ ಕೇಂದ್ರ ಸಚಿವರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿದರು. ರಾಜ್ಯದ ಕಾಫಿ ಬೆಳೆಗಾರ ಜಿಲ್ಲೆಗಳ ಬೃಹತ್ ನಿಯೋಗ ದೆಹಲಿಯಲ್ಲಿ ಸರಕಾರಿ ಮಟ್ಟ ದಲ್ಲಿ ಬೆಳೆಗಾರರ ಸಮಸ್ಯೆ ಕುರಿತು ಮನವರಿಕೆ ಮಾಡುವ ಪ್ರಯತ್ನ ನಡೆಸಿತು.

ರಾಜ್ಯದ ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ಮೂಡಿಗೆರೆ-ತರೀ ಕೆರೆ-ಕಡೂರು ಕ್ಷೇತ್ರಗಳ ಶಾಸಕರುಗಳಾದ ಎಂ.ಪಿ.ಕುಮಾರಸ್ವಾಮಿ, ಸುರೇಶ್ ತರೀಕೆರೆ, ಬೆಳ್ಳಿ ಪ್ರಕಾಶ್, ಕಾಫಿ ಮಂಡಳಿಯ ಅಧ್ಯಕ್ಷ ಭೋಜೆಗೌಡ, ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷ ಪ್ರಮೋದ್ ಹಾಗೂ ಶಿರೀಶ್ ವಿಜಯೇಂದ್ರ, ಕರ್ನಾಟಕ ಬೆಳೆ ಗಾರರ ಒಕ್ಕೂಟದ ಅಧ್ಯಕ್ಷ ಜಯರಾಂ, ಎಂ.ಬಿ. ಉದಯ್ ಕುಮಾರ್, ಕಾಳು ಮೆಣಸು ಬೆಳೆಗಾರರ ಒಕ್ಕೂಟದ ಸಮ ನ್ವಯ ಸಮಿತಿಯ ಸಂಚಾಲಕ ಕೆ.ಕೆ. ವಿಶ್ವನಾಥ್ ಮತ್ತು ಪ್ರದೀಪ್ ಪೂವಯ್ಯ, ಬ್ಲ್ಯಾಕ್ ಗೋಲ್ಡ್ ಲೀಗ್ ಸಂಸ್ಥೆಯ ಅಧ್ಯಕ್ಷ ಕೆಂಜಿಗೆ ಕೇಶವ, ಡಾ.ವಿವೇಕ್, ಡಾ.ಸುನೀಲ್ ತಂಗಲೆ ಹಾಗೂ ಮೋಹನ್ ಆಳ್ವಾರೀಸ್ ನಿಯೋಗದಲ್ಲಿದ್ದರು.

ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು, ಕೃಷಿ ಸಚಿವ ರಾಧಾ ಮೋಹನ್ ಸಿಂಗ್, ಲೋಕಸಭೆಯ ಆರ್ಥಿಕ ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿ, ಸಾಂಸ್ಥಿಕ ಹಾಗೂ ಕಾರ್ಯಕ್ರಮ ನಿರ್ವಹಣೆಯ ಸಚಿವ ಸದಾನಂದ ಗೌಡ, ರೈಲ್ವೇ ಹಾಗೂ ಹಣಕಾಸು ಸಚಿವ ಪಿಯುಷ್ ಗೋಯಲ್, ಪರಿಸರ ಮತ್ತು ಅರಣ್ಯ ಸಚಿವ ಡಾ.ಹರ್ಷವರ್ಧನ್, ಸಂಸದೀಯ ಸಚಿವ ಅನಂತ್ ಕುಮಾರ್, ಕೃಷಿ ಸಹಾಯಕ ಸಚಿವ ಗಜೇಂದ್ರ ಸಿಂಗ್ ಶಿಕಾವತ್ ಇವರುಗಳನ್ನು ಭೇಟಿ ಮಾಡಿ ಸಮಸ್ಯೆಗಳು ಮತ್ತು ಪರಿಹಾರ ಮಾರ್ಗೋ ಪಾಯಗಳ ಬಗ್ಗೆ ಮನವಿ ಸಲ್ಲಿಸಿತು.

ಕಾಳುಮೆಣಸಿಗೆ ಕನಿಷ್ಟ ಬೆಂಬಲ ದರ ನಿಗದಿಪಡಿಸುವಂತೆ ಕೋರಲಾಯಿತು. ಕಾಡಾನೆ ಹಾವಳಿ ತಪ್ಪಿಸಲು ರೈಲ್ವೇ ಕಂಬಿಗಳ ಅಳವಡಿಕೆ ಉಪಯುಕ್ತವಾಗಿದ್ದು, ರೈಲ್ವೇ ಇಲಾಖೆಯು ರೈಲ್ವೇ ಹಳಿಗಳನ್ನು ಅರಣ್ಯ ಇಲಾಖೆಗೆ ಉಚಿತವಾಗಿ ನೀಡುವಂತೆ ವಿನಂತಿಸಲಾಯಿತು. ಕಾಳುಮೆಣಸು ವ್ಯವಹಾರದಲ್ಲಾಗುತ್ತಿರುವ ಕಾಳ ದಂಧೆಯನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವದೆಂದು ಸಂಬಂಧಿತ ಸಚಿವರುಗಳು ಭರವಸೆ ನೀಡಿದರು.

ಕಾಫಿ ಬೆಳೆಗಾರರ ಸಾಲವನ್ನು ವಸೂಲಿ ಮಾಡದಂತೆ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ಸೂಚಿಸಬೇಕು. 2018ರ ಮಾರ್ಚ್ 9ರಿಂದ 31ರ ವರೆಗಿನ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು. ವಾಣಿಜ್ಯ ಬ್ಯಾಂಕ್‍ಗಳಲ್ಲಿ ಪಡೆದ ಸಾಲಗಳನ್ನು ಮರು ಜೋಡಣೆ ಮಾಡಿ ಶೇ.6 ಬಡ್ಡಿಯನ್ನು ವಿಧಿ ಸಬೇಕು. ಕೃಷಿ ಸಾಲ/ಅಭಿವೃದ್ಧಿ ಸಾಲಗಳಿಗೆ ರೂ.25 ಲಕ್ಷದವರೆಗೆ ಶೇ. 3ರ ಬಡ್ಡಿ ಹಾಗೂ ಹೆಚ್ಚಿನ ಸಾಲಕ್ಕೆ 6ರ ಬಡ್ಡಿ ವಿಧಿಸಬೇಕು. ಡಾ. ಸ್ವಾಮಿನಾಥನ್ ವರದಿಯಂತೆ ಕರಿ ಮೆಣಸಿಗೆ ಕನಿಷ್ಟ ಬೆಂಬಲ ಬೆಲೆ ನೀಡಬೇಕು. ಚಿಕ್ಕಮಗಳೂರಿನಲ್ಲಿ ಕರಿಮೆಣಸು ಪಾರ್ಕ್ ಸ್ಥಾಪಿಸಬೇಕು. ವಿದೇಶದಿಂದ ಕರಿ ಮೆಣಸು ಕಳ್ಳಸಾಗಾಣೆ ಆಗುತ್ತಿರುವದನ್ನು ಗಮನ ಹರಿಸಬೇಕು. ಕಾಡಾನೆ ಹಾವಳಿ ಬಗ್ಗೆ ಸಮರ್ಥ ನಿರ್ವಹಣೆಬೇಕು. ಅಲ್ಲಲ್ಲಿ ಆನೆಗಳ ಕ್ಯಾಂಪ್ ನಿರ್ಮಾಣ, ಉಗ್ರ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳ ವಡಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಮನವಿ ಪತ್ರವನ್ನು ಕೇಂದ್ರದ ಜನಪ್ರತಿನಿಧಿ ಗಳು, ಉನ್ನತಾಧಿಕಾರಿಗಳಿಗೆ ನೀಡಲಾಯಿತು.

Translate »