ಜೆಡಿಎಸ್ ಮಡಿಕೇರಿ ನಗರಾಧ್ಯಕ್ಷ ರಾಜೀನಾಮೆ
ಕೊಡಗು

ಜೆಡಿಎಸ್ ಮಡಿಕೇರಿ ನಗರಾಧ್ಯಕ್ಷ ರಾಜೀನಾಮೆ

August 1, 2018

ಮಡಿಕೇರಿ: ಜೆಡಿಎಸ್ ಮಡಿಕೇರಿ ನಗರ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರು ವುದಾಗಿ ಬಿ.ವೈ.ರಾಜೇಶ್ ಯಲ್ಲಪ್ಪ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಕ್ಷದ ಮುಖಂಡರು ಹಾಗೂ ಮಾಜಿ ಸಚಿವ ಬಿ.ಎ.ಜೀವಿಜಯ ಅವರಿಗೆ ರಾಜೀನಾಮೆ ಸಲ್ಲಿಸಿರುವುದಾಗಿ ಹೇಳಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ರಾಜೀನಾಮೆ ನೀಡಿರು ವುದರಿಂದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸುಗಮವಾಗಿ ನಡೆಯಲು, ಪಕ್ಷದ ಪುನರ್ ರಚನೆ ಮತ್ತು ಪುನರ್ ಸಂಘಟನೆ ಬಲಯುತ ವಾಗಬೇಕೆನ್ನುವ ಉದ್ದೇಶದಿಂದ ನಗರಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ರಾಜೇಶ್ ಯಲ್ಲಪ್ಪ ಸ್ಪಷ್ಟಪಡಿಸಿದ್ದಾರೆ.

Translate »