ವಿರಾಜಪೇಟೆಯಲ್ಲಿ ಚಿನ್ನಬೆಳ್ಳಿ ವರ್ತಕರ ಸಂಘದ ಮಹಾಸಭೆ
ಕೊಡಗು

ವಿರಾಜಪೇಟೆಯಲ್ಲಿ ಚಿನ್ನಬೆಳ್ಳಿ ವರ್ತಕರ ಸಂಘದ ಮಹಾಸಭೆ

August 1, 2018

ವಿರಾಜಪೇಟೆ:  ಚಿನ್ನ ಬೆಳ್ಳಿ ಉದ್ಯ ಮಕ್ಕೆ ಕೆಲಸಗಾರರ ಕೊರತೆ, ಕಳ್ಳ ಕಾಕರ ಮೂಲಕ ಚಿನ್ನ ಬೆಳ್ಳಿ ವರ್ತಕರಿಗೆ ಪೊಲೀಸ್‍ರಿಂದ ಕಿರು ಕುಳಕ್ಕೊಳಗಾಗುತ್ತಿರುವುದರಿಂದ ದಶಕಗಳ ಹಿಂದಿನ ಪ್ರತಿಷ್ಠಿತ ವ್ಯವಹಾರಕ್ಕೆ ಧಕ್ಕೆ ಉಂಟಾಗಿದೆ ಎಂದು ಮಂಗಳೂರು ಕೊಂಕಣಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಅರುಣ್ ಜಿ.ಶೇಟ್ ಹೇಳಿದರು.

ವಿರಾಜಪೇಟೆ ಸಮೀಪದ ಬಿಟ್ಟಂಗಾಲ ಕೊಡಗು ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ಆಯೋ ಜಿಸಲಾಗಿದ್ದ ತಾಲೂಕು ಚಿನ್ನ ಬೆಳ್ಳಿವರ್ತಕರ ಹಾಗೂ ಕೆಲಸಗಾರರ ಸಂಘದ ವಾರ್ಷಿಕ ಮಹಾ ಸಭೆಯನ್ನು ಉದ್ಘಾಟಿಸಿದ ಅವರು ಮಾತನಾಡಿ, ಚಿನ್ನ ಬೆಳ್ಳಿ ಉದ್ಯಮ ಇಂದು ಅತಂಕಕಾರಿ ಬೆಳ ವಣಿಗೆಗೆ ತಲುಪಿದೆ ಹಿಂದೆ ಇದ್ದ ಮುಕ್ತ ಉದ್ಯ ಮಕ್ಕೆ ವಿವಿಧ ಹಂತಗಳಲ್ಲಿ ಸರಕಾರಗಳ ನಿರ್ಬಂಧ, ಕೆಲಸಗಾರರ ಕೊರತೆ, ಕೆಲಸಗಾ ರರು ವರ್ಷದಿಂದ ವರ್ಷಕ್ಕೆ ಕೆಲಸವನ್ನು ತ್ಯಜಿ ಸುತ್ತಿದ್ದಾರೆ, ಇದರಿಂದ ಚಿನ್ನಬೆಳ್ಳಿ ವರ್ತಕರು ಸಂಕಷ್ಟವನ್ನು ಎದುರಿಸಬೇಕಾಗಿದೆ. ಇಂದಿನ ಆಧುನಿಕ ತಂತ್ರಜ್ಞಾನದ ಕೌಶಲ್ಯದಿಂದ ಕೆಲಸ ಗಾರರ ವೃತ್ತಿಗೂ ಪೆಟ್ಟಾಗಿದೆ. ವರ್ತಕರು ತನ್ನ ನಿರ್ಧಿಷ್ಟ ಆದಾಯದೊಂದಿಗೆ ಮುನ್ನಡೆದರೆ ಮಾತ್ರ ಕೆಲಸಗಾರರ ಕಲ್ಯಾಣ ಸಾಧ್ಯ ಎಂದರು.

ಕೊಡಗು ಜಿಲ್ಲಾ ಚಿನ್ನ ಬೆಳ್ಳಿ ವರ್ತಕರ ಹಾಗೂ ಕೆಲಸಗಾರರ ಸಂಘದ ಅಧ್ಯಕ್ಷ ಕೆ.ಕೆ.ಶ್ರೀನಿವಾಸ್ ಮಾತನಾಡಿ, ತಾಲೂಕು ಸಂಘಟನೆ ಆರಂಭ ದಲ್ಲಿ ಮಂದಗತಿಯಲ್ಲಿ ಸಾಗಿದರೂ ಇಂದು ಪ್ರಗತಿಯತ್ತ ಸಾಗಿದೆ. ಸಂಘದ ಸ್ಥಾಪನೆ ಸುಲಭ. ಆದರೆ ಅದನ್ನು ಪೋಷಿಸಿ ಬೆಳೆಸುವುದು ಕಷ್ಟ. ಪ್ರಾಮಾಣಿಕತೆಯ ಆಡಳಿತ ಮಂಡಳಿ ಇದ್ದರೆ ಸಂಘಟನೆಯ ಪ್ರಗತಿ ಸಾಧ್ಯ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘ ಟನೆಯ ಅಧ್ಯಕ್ಷ ಕೆ.ಪಿ.ಪ್ರಶಾಂತ್ ಮಾತನಾಡಿ, ಸಂಘವು ಚಿನ್ನಬೆಳ್ಳಿ ವರ್ತಕರ- ಕೆಲಸಗಾರರ ಕ್ಷೇಮಾಭಿವೃದ್ಧಿ ಸೇವೆಯೊಂದಿಗೆ ಸಂಘದ ಸದಸ್ಯರುಗಳ ಸಹಕಾರದಿಂದ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದೆ. ಸದಸ್ಯರುಗಳ ಪರಸ್ಪರ ಸಹಕಾರದೊಂದಿಗೆ ಸಂಘಟನೆ ಯನ್ನು ಇನ್ನಷ್ಟು ಬಲಿಷ್ಠಗೊಳಿಸಲು ಪ್ರಾಮಾಣಿಕ ವಾಗಿ ಪ್ರಯತ್ನ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಂಘದ ಹಿರಿಯ ವರ್ತ ಕರುಗಳಾದ ಕೆ.ಕೆ.ಶ್ರೀನಿವಾಸ್, ಎ.ವಿ. ವೆಂಕಟೇಶ್, ಎಸ್.ಭಾಸ್ಕರ್, ಎನ್.ರೇಣುಕಾಚಾರ್ಯ, ಎಂ.ಜಿ.ನಾಗರಾಜು ಇತರರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷ ಉಲ್ಲಾಸ್ ಶೇಟ್, ಖಜಾಂಚಿ ಎ.ಎನ್.ದಶರಥ, ಎಂ.ಎನ್. ಉಮೇಶ್, ಎಸ್.ಎಚ್. ಮಂಜುನಾಥ್, ಬಿ.ಬಿ. ಚಂದ್ರು, ಚಲ್ಲಾರಾಂ ಶೇಟ್, ಎ.ವಿ.ಜಯರಾಂ ಮುಂತಾದವರು ಉಪಸ್ಥಿತರಿದ್ದರು. ಸಂಘ ಟನೆಯ ಪ್ರಧಾನ ಕಾರ್ಯದರ್ಶಿ ಎ.ಪಿ. ಲೋಕೇಶ್ ಲೆಕ್ಕಪತ್ರ ಮಂಡಿಸಿದರು. ಸಹ ಕಾರ್ಯದರ್ಶಿ ಎ.ವಿ.ಜಿತೇಂದ್ರ ವರದಿ ವಾಚಿ ಸಿದರೆ. ಎ.ಡಿ.ವಿಮಲಾ ದಶರಥ್ ಅವರು ನಿರೂ ಪಿಸಿದರು. ವಾರ್ಷಿಕೋತ್ಸವದಲ್ಲಿ ಗೋಣಿ ಕೊಪ್ಪ, ಸಿದ್ದಾಪುರ, ಮಡಿಕೇರಿ, ವಿರಾಜಪೇಟೆ ಸೇರಿದಂತೆ ವಿವಿಧೆಡೆಗಳಿಂದ ಸಂಘದ ಸದಸ್ಯ ರುಗಳ ಕುಟುಂಬ ಸಮೇತ ಭಾಗವಹಿಸಿದ್ದರು.

Translate »