ಕೆ.ಆರ್.ಆಸ್ಪತ್ರೆ ನರ್ಸಿಂಗ್ ಹಾಸ್ಟೆಲ್ ಸಮಸ್ಯೆ ತಕ್ಷಣ ಬಗೆಹರಿಸಿ ಇಲ್ಲ ಸದನದಲ್ಲಿ ಪ್ರಸ್ತಾಪಿಸುತ್ತೇನೆ
ಮೈಸೂರು

ಕೆ.ಆರ್.ಆಸ್ಪತ್ರೆ ನರ್ಸಿಂಗ್ ಹಾಸ್ಟೆಲ್ ಸಮಸ್ಯೆ ತಕ್ಷಣ ಬಗೆಹರಿಸಿ ಇಲ್ಲ ಸದನದಲ್ಲಿ ಪ್ರಸ್ತಾಪಿಸುತ್ತೇನೆ

August 1, 2018

ಮೈಸೂರು: ಕೆ.ಆರ್. ಆಸ್ಪತ್ರೆಯ ನರ್ಸಿಂಗ್ ಹಾಸ್ಟೆಲ್ ವಿದ್ಯಾರ್ಥಿಗಳ ಸಮಸ್ಯೆಯನ್ನು ಕೂಡಲೇ ಬಗೆಹರಿಸಲು ಸಂಬಂಧ ಪಟ್ಟ ಅಧಿಕಾರಿಗಳು ಗಮನಹರಿಸಬೇಕು. ಇಲ್ಲವಾ ದಲ್ಲಿ ಮುಂಬರುವ ಅಧಿವೇಶನದಲ್ಲಿ ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತಿ, ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವಂತೆ ಒತ್ತಾಯಿಸುವು ದಾಗಿ ಅತ್ಯಾಚಾರ ಪ್ರಕರಣಗಳ ತಡೆ ತಜ್ಞರ ಸಮಿತಿ ಮಾಜಿ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಕೆ.ಆರ್.ಆಸ್ಪತ್ರೆ ಆವರಣದಲ್ಲಿರುವ ನರ್ಸಿಂಗ್ ಹಾಸ್ಟೆಲ್‍ಗೆ ಮಂಗಳವಾರ ಭೇಟಿ ನೀಡಿ, ಅಡುಗೆ ಕೊಠಡಿ, ರೂಮ್‍ಗಳಿಗೆ ತೆರಳಿ ಅಲ್ಲಿನ ವ್ಯವಸ್ಥೆ, ನಿರ್ವಹಣೆ ಹಾಗೂ ಸೌಲಭ್ಯಗಳನ್ನು ಪರಿಶೀಲಿಸಿ, ವಿದ್ಯಾರ್ಥಿಗಳಿಂದ ಸಮಸ್ಯೆಗಳನ್ನು ಆಲಿಸಿ ದರು. ಈ ವೇಳೆ ಹಾಸ್ಟೆಲ್‍ನಲ್ಲಿ ಫ್ಯಾನ್, ಬಿಸಿ ನೀರಿನ ವ್ಯವಸ್ಥೆಯಿಲ್ಲ. ಸೊಳ್ಳೆಕಾಟ ಹೆಚ್ಚಿದ್ದು, ಕಳೆದ ಬಾರಿ ಡೆಂಗ್ಯು ಬಂದಿತ್ತು. ವಿಪರೀಪ ಮೋರಿ ವಾಸನೆ, ಲೈಬ್ರರಿ ಇಲ್ಲ ಎಂಬಿತ್ಯಾದಿ ಸಮಸ್ಯೆಗಳನ್ನು ಎಳೆ-ಎಳೆಯಾಗಿ ಹಾಸ್ಟೆಲ್ ವಾಸಿಗಳು ಬಿಚ್ಚಿಟ್ಟರು. ಇನ್ನೇನಾದರೂ ಸಮಸ್ಯೆ ಗಳಿದ್ದರೆ ನನ್ನ ವಿಳಾಸಕ್ಕೆ ಬರೆದು ಕಳುಹಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಇದೇ ವೇಳೆ ಹಾಸ್ಟೆಲ್‍ಗೆ ಅಪರಿಚಿತ ವ್ಯಕ್ತಿಯೊಬ್ಬ ನುಗ್ಗಿ ದಾಂಧಲೆ ನಡೆಸಿದ ಘಟನೆ ಬಗ್ಗೆ ಮಾಹಿತಿ ಪಡೆದ ಉಗ್ರಪ್ಪ, ವಿದ್ಯಾರ್ಥಿಗಳಿಗೆ ಸೂಕ್ತ ಭದ್ರತೆ ನೀಡದ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಂತರ ಮಾಧ್ಯಮದೊಂದಿಗೆ ಮಾತ ನಾಡಿದ ಅವರು, ಹಾಸ್ಟೆಲ್‍ನ ನಿರ್ವಹಣೆ ಮತ್ತು ಪರಿಸ್ಥಿತಿಯನ್ನು ಗಮನಿಸಿದರೆ ಆಘಾತ ವಾಗುತ್ತಿದೆ. ಆಸ್ಪತ್ರೆಗೆ ಹೊಂದಿಕೊಂಡಂತಿರುವ ಹಾಸ್ಟೆಲ್‍ನಲ್ಲಿ ಈ ರೀತಿಯ ನಿರ್ವಹಣೆ ಇರು ವುದು ನಿಜಕ್ಕೂ ಬೇಸರದ ಸಂಗತಿ.

ವಿದ್ಯಾರ್ಥಿನಿಯರ ರಕ್ಷಣೆ ದೃಷ್ಟಿಯಿಂದ ಯಾವುದೇ ಕ್ರಮ ಗಳನ್ನು ಜರುಗಿಸಿಲ್ಲ. ಕಳೆದ 3 ವರ್ಷದಿಂದ ಅಪರಿಚಿತ ವ್ಯಕ್ತಿಯೊಬ್ಬ ಬರು ತ್ತಿರುವ ಬಗ್ಗೆ ವಿದ್ಯಾರ್ಥಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ ಇದುವರೆಗೂ ಆಸ್ಪತ್ರೆ ಆಡಳಿತ ಮಂಡಳಿ, ಹಾಸ್ಟೆಲ್ ಸಿಬ್ಬಂದಿ, ಜಿಲ್ಲಾಡಳಿತ ಸೇರಿದಂತೆ ಯಾರೂ ಪರಿಣಾಮಕಾರಿ ಕ್ರಮಕೈ ಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮಕ್ಕಳಿಗೆ ರಕ್ಷಣೆ ನೀಡುವಲ್ಲಿ ವಿಫಲ: ಹಾಸ್ಟೆಲ್ ನಲ್ಲಿ ಸಿಸಿ ಟಿವಿಗಳನ್ನು ಅಳವಡಿಸಿದ್ದರೂ, ಸೂಕ್ತ ಸ್ಥಳಗಳಲ್ಲಿ ಅಳವಡಿಸದಿರುವುದು ಭದ್ರತಾ ಲೋಪಕ್ಕೆ ಕಾರಣವಾಗಿದೆ. ಇದನ್ನು ಗಮನಿಸಿದರೆ ಆಡಳಿತ ವರ್ಗ ಮಕ್ಕಳಿಗೆ ರಕ್ಷಣೆ ನೀಡುವಲ್ಲಿ ವಿಫಲ ವಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣು ತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎಳ್ದಂತೆ: ಮಕ್ಕಳಿಗೆ ರಕ್ಷಣೆ ಕೊಡುವುದನ್ನು ಬಿಟ್ಟು ಹಾಸ್ಟೆಲ್ ಬಂದ್ ಮಾಡಿ ಮನೆಗೆ ಕಳುಹಿಸಿರು ವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು ಅನಿಸುತ್ತದೆ. ಈ ರೀತಿ ವಿದ್ಯಾರ್ಥಿಗಳ ಬದುಕಿ ನೊಂದಿಗೆ ಚೆಲ್ಲಾಟವಾಡುವ ಪ್ರವೃತ್ತಿ ನಿಜಕ್ಕೂ ಒಪ್ಪುವಂಥದಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಸಚಿವರು, ಇಲಾಖೆ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.

5 ದಿನಗಳಲ್ಲಿ ಆರೋಪಿ ಬಂಧನ: ದಾಂಧಲೆ ನಡೆಸಿದ ಅಪರಿಚಿತನನ್ನು ಪೊಲೀಸರು ಇದುವರೆಗೂ ಬಂಧಿಸಿಲ್ಲ. ಕೇಳಿದರೆ, ಆತನ ಬಗ್ಗೆ ಮಾಹಿತಿ ದೊರೆತಿದ್ದು, ಮಂಗಳೂರು ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ. ಇನ್ನು 4-5 ದಿನಗಳಲ್ಲಿ ಬಂಧಿಸುತ್ತೇವೆಂದು ಹೇಳುತ್ತಿದ್ದಾರೆ. ಇದನ್ನು ಗಮನಿಸಿದರೆ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವಲ್ಲಿ ಆಡಳಿತ ಮಂಡಳಿ ವಿಫಲವಾಗಿರುವುದು ಕಾಣಿಸುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ, ನಗರ ಪಾಲಿಕೆ ಅಥವಾ ಆಸ್ಪತ್ರೆ-ಹಾಸ್ಟೆಲ್ ಆಡಳಿತ ಮಂಡಳಿ ಕೂಡಲೇ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಈ ಬಗ್ಗೆ ಸದನದಲ್ಲಿ ಚರ್ಚಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸುತ್ತೇನೆ ಎಂದರು.

ಸ್ಕಾಲರ್‍ಶಿಪ್ ಏನಾಗುತ್ತಿದೆ: ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ಆಯ್ಕೆಯಾ ದವರು ಹಾಸ್ಟೆಲ್‍ನಲ್ಲಿದ್ದು, ಸರ್ಕಾರಿ ಹಾಸ್ಟೆಲ್ ಆದರೂ ಊಟದ ವೆಚ್ಚ ಪ್ರತಿ ತಿಂಗಳು 1 ಸಾವಿರ ರೂ. ಅನ್ನು ವಿದ್ಯಾರ್ಥಿಗಳೇ ಭರಿಸಬೇಕು ಎಂಬುದು ಆಶ್ಚರ್ಯ ತಂದಿದೆ. ಆದರೆ, ಇವರಿಗೆ ಬರುತ್ತಿರುವ ಸ್ಕಾಲರ್‍ಶಿಪ್ ಏನಾಗು ತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಈ ಕುರಿತು ವಾರ್ಡನ್, ಪ್ರಾಂಶುಪಾಲರಲ್ಲೂ ಮಾಹಿತಿ ಇಲ್ಲ. ಈ ಕುರಿತು ಸಂಬಂಧಪಟ್ಟವರ ಗಮನಸೆಳೆದು ಕ್ರಮಕೈಗೊಳ್ಳುವಂತೆ ತಿಳಿಸುತ್ತೇನೆ ಎಂದರು.

ಈಗಲೂ ಭಯ ಇದೆ: ಅಪರಿಚಿತ ವ್ಯಕ್ತಿ ಯೊಬ್ಬ ಹಾಸ್ಟೆಲ್‍ಗೆ ನುಗ್ಗಿದ ಹಿನ್ನೆಲೆಯಲ್ಲಿ ಹಾಸ್ಟೆಲ್ ತೊರೆದು ಮನೆಗೆ ತೆರಳಿದ್ದ ವಿದ್ಯಾರ್ಥಿನಿಯರು ಮತ್ತೆ ಹಾಸ್ಟೆಲ್‍ಗೆ ಆಗಮಿ ಸುತ್ತಿದ್ದನ್ನು ಗಮನಿಸಿದ ಎಸ್.ಉಗ್ರಪ್ಪ, ಹಾಸ್ಟೆಲ್ ಖಾಲಿ ಮಾಡಿದ್ದ ನೀವು ಇದೀಗ ಮತ್ತೆ ಬಂದಿದ್ದೀರಾ, ನಿಮಗೆ ಭದ್ರತೆ ದೊರೆತಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯಾರ್ಥಿಗಳು, ಪರೀಕ್ಷೆ ಆರಂಭವಾಗುತ್ತಿರುವುದರಿಂದ ಹಾಸ್ಟೆಲ್‍ಗೆ ಬಂದಿದ್ದೇವೆ. ಆದರೆ ಈಗಲೂ ನಮಗೆ ಭಯವಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾ ಧಿಕಾರಿ ಟಿ.ಯೋಗೇಶ್, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಕೆ.ಆರ್. ಆಸ್ಪತ್ರೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಫಿರ್ದೋಸ್ ಫಾತಿಮಾ ಮತ್ತಿತರರು ಉಪಸ್ಥಿತರಿದ್ದರು.

Translate »