ಆ.8 ರಿಂದ ಕುಟುಂಬ ಕಲ್ಯಾಣ ಕಾರ್ಯಕ್ರಮದ ಶಸ್ತ್ರ ಚಿಕಿತ್ಸಾ ಶಿಬಿರ
ಕೊಡಗು

ಆ.8 ರಿಂದ ಕುಟುಂಬ ಕಲ್ಯಾಣ ಕಾರ್ಯಕ್ರಮದ ಶಸ್ತ್ರ ಚಿಕಿತ್ಸಾ ಶಿಬಿರ

August 1, 2018

ಮಡಿಕೇರಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ 2018ರ ಆಗಸ್ಟ್ ಮಾಹೆಯಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮದ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಲಿದೆ.

ಆಗಸ್ಟ್ 8 ರಂದು ನಾಪೋಕ್ಲು, ಆಗಸ್ಟ್ 18 ರಂದು ಸೋಮವಾರಪೇಟೆ, ಆಗಸ್ಟ್ 20ರಂದು ಕುಶಾಲನಗರ ಆ.13 ರಂದು ಗೋಣಿಕೊಪ್ಪ, ಆಗಸ್ಟ್ 25ರಂದು ಸಿದ್ದಾಪುರ, ಪಾಲಿಬೆಟ್ಟ ಮತ್ತು ಆಗಸ್ಟ್ 27 ರಂದು ಕುಟ್ಟ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲ್ಯಾಪ್ರೊಸ್ಕೋಪಿಕ್ ಎಂಬ ಚಿಕಿತ್ಸಾ ಶಿಬಿರ ನಡೆಯಲಿದೆ.

ಆಗಸ್ಟ್ 14 ರಂದು ಸುಂಟಿಕೊಪ್ಪ, ಆ.16 ರಂದು ಕೊಡ್ಲಿಪೇಟೆ, ಆ.17ರಂದು ಚೆಟ್ಟಳ್ಳಿ ಮತ್ತು ಮಾದಪುರ, ಆಗಸ್ಟ್, 24 ರಂದು ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಆಗಸ್ಟ್, 21 ರಂದು ಸಿದ್ದಾಪುರ ಮತ್ತು ಪಾಲಿಬೆಟ್ಟ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಟ್ಯುಬೆಕ್ಟಮಿ ಚಿಕಿತ್ಸಾ ಶಿಬಿರ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಅವರು ತಿಳಿಸಿದ್ದಾರೆ.

Translate »