ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು
ಮೈಸೂರು

ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

August 1, 2018

ಸಾಲಿಗ್ರಾಮ:  ಬೈಕ್‍ಗೆ ಹಿಂದಿನಿಂದ ಬರುತ್ತಿದ್ದ ಬೈಕೊಂದು ಡಿಕ್ಕಿ ಹೊಡೆದು ತೀವ್ರವಾಗಿ ಪೆಟ್ಟು ಬಿದ್ದ ಪರಿಣಾಮ ಮೈಸೂರಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಡೆದಿದೆ.

ಕೆ.ಆರ್.ನಗರ ದೊಡ್ಡಕೊಪ್ಪಲು ಗ್ರಾಮದ ವೆಂಕಟಯ್ಯ ಅವರ ಮಗ ಚಂದ್ರಶೇಖರ್(26) ಮೃತಪಟ್ಟ ವ್ಯಕ್ತಿ. ಚಂದ್ರಶೇಖರ್ ಸಾಲಿಗ್ರಾಮದ ನಾಡಕಚೇರಿ ವ್ಯಾಪ್ತಿಯಲ್ಲಿ ಗ್ರಾಮ ಸೇವಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸೋಮವಾರ ತಾಲೂಕು ಕಚೇರಿ ಕೆಲಸದ ಮೇಲೆ ತಮ್ಮ ಬೈಕ್‍ನಲ್ಲಿ ಕೆ.ಆರ್.ನಗರಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಬೈಕೊಂದು ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಂದ್ರಶೇಖರ್ ಮೃತಪಟ್ಟಿದ್ದಾರೆ. ಸ್ವಗ್ರಾಮ ದೊಡ್ಡಕೊಪ್ಪಲಿನಲ್ಲಿ ಅಂತ್ಯಕ್ರಿಯೆ ನಡೆಯಿತು. ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಪಂ ಸದಸ್ಯ ನಂದೀಶ್, ತಹಶೀಲ್ದಾರ್ ನಿಖಿತಾ ಸೇರಿದಂತೆ ಇಲಾಖೆ ಅಧಿಕಾರಿಗಳು ಮೃತರ ಕುಟುಂಬಕ್ಕೆ ತೆರಳಿ ಸಾಂತ್ವನ ಹೇಳಿದರು.ಮೃತರು ಪತ್ನಿ ಬಿಂದುಶ್ರೀ ಹಾಗೂ 6 ತಿಂಗಳ ಮಗು ಸೋನುವನ್ನು ಬಿಟ್ಟು ಅಗಲಿದ್ದಾರೆ.

Translate »