ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಸಮನ್ವಯ ಸಮಿತಿಯ ಅಧ್ಯಕ್ಷರು ಆಗಿರುವ ಸಿದ್ದರಾಮಯ್ಯನವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನೇಮಕಗೊಂಡಿರುವುದಕ್ಕೆ ವರುಣಾ ಕ್ಷೇತ್ರದ ವೀರಶೈವ ಲಿಂಗಾಯತ ಮುಖಂಡರು ಬೆಂಗಳೂರಿನ ಅವರ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ, ಅಭಿನಂದನೆ ಸಲ್ಲಿಸಿದರು.
ಇದೇ ವೇಳೆ ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಹುಳಿಮಾವು ಗ್ರಾಮದ ಪರ ಶಿವಮೂರ್ತಿ, ಹಳ್ಳಿಕೆರೆ ಹುಂಡಿ ಗ್ರಾಮದ ಶಿವಕುಮಾರ್, ಕಾರ್ಯ ಗ್ರಾಮದ ನಾಗರಾಜು, ದಾಸನೂರು ಗ್ರಾಮದ ವೀರಭದ್ರಸ್ವಾಮಿ, ನಾಗೇಶ, ಹದಿನಾರು ಗ್ರಾಮದ ಡಿ.ಕೆ.ಶಿವಕುಮಾರ್, ಕಲ್ಕುಂದ ಗ್ರಾಮದ ರತ್ನಶೇಖರ್, ತಾಯೂರು ಗ್ರಾಮದ ನಟರಾಜು, ಬೊಮ್ಮ ನಹಳ್ಳಿ ಗುರುಸ್ವಾಮಿ, ಈ 8 ಜನರಲ್ಲಿ ಯಾರ ನ್ನಾದರೂ ತಗಡೂರು ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಬೇಕೆಂದು ವೀರಶೈವ ಮುಖಂಡರುಗಳು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಳಿಗೆರೆ ಗ್ರಾ.ಪಂ ಅಧ್ಯಕ್ಷರಾದ ಕೆ.ಎಸ್. ನಿಂಗಣ್ಣ, ಗಿರೀಶ್, ಹೊಸೂರು ಗ್ರಾ.ಪಂ ಅಧ್ಯಕ್ಷ ನಂದೀಶ, ಬಿದರ ಗೂಡು ತಾ.ಪಂ ಸದಸ್ಯೆ ಸುಂದ್ರಮ್ಮಬಸವಣ್ಣ, ಹಾಗೂ ಗ್ರಾಮದ ಮುಖಂಡರಾದ ದಾಸನೂರು ನಂಜುಂಡಸ್ವಾಮಿ, ತೊರವಳ್ಳಿ ಶಿವನಂಜಪ್ಪ, ರಾಂಪುರ ಪಟೇಲ್, ಡಿ.ಮಹದೇವಪ್ಪ, ಹಾಗೂ ಡಿ.ಸಿ.ಸಿ ಕಾರ್ಯದರ್ಶಿ ಅಹಲ್ಯ ಪ್ರಭು ಸ್ವಾಮಿ, ಗೌಡರಹುಂಡಿ ಗ್ರಾಮದ ಮಾಜಿ ಛೇರ್ಮನ್ ಕಾಳಿಂಗಪ್ಪರವರ ಮಗ ಕೆ.ಮಹೇಶ್, ಹಾಗೂ ಎಲ್ಲಾ ಕಾಂಗ್ರೆಸ್ ಮುಖಂಡರುಗಳು ಹಾಜರಿದ್ದರು.