ವಿರಾಜಪೇಟೆ ಪಟ್ಟಣ ಪಂಚಾಯಿತಿ ಸಭೆ: ರಸ್ತೆ ದುರಸ್ತಿ-ಕುಡಿಯುವ ನೀರು ಪೂರೈಕೆಗೆ ಕ್ರಮ
ಕೊಡಗು

ವಿರಾಜಪೇಟೆ ಪಟ್ಟಣ ಪಂಚಾಯಿತಿ ಸಭೆ: ರಸ್ತೆ ದುರಸ್ತಿ-ಕುಡಿಯುವ ನೀರು ಪೂರೈಕೆಗೆ ಕ್ರಮ

July 31, 2018

ವಿರಾಜಪೇಟೆ: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲ ರಸ್ತೆಗಳು ಹಾನಿಗೊಳಗಾಗಿದ್ದು, ರೂ,50 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿರುವುದ ರಿಂದ ಮಳೆ ಕಡಮೆಯಾದ ಕೂಡಲೆ ರೂ. 32 ಲಕ್ಷ ವೆಚ್ಚದಲ್ಲಿ ರಸ್ತೆಗಳ ಗುಂಡಿ ಮುಚ್ಚಿ ದುರಸ್ತಿಪಡಿಸುವುದು ಹಾಗೂ ವಿವಿಧ ವಾರ್ಡ್‍ಗಳಲ್ಲಿ ಜನಪರ ಅಗತ್ಯ ಕಾಮಗಾರಿಗಳನ್ನು ಮಳೆ ಹಾನಿ ಪರಿಹಾರ ದಲ್ಲಿ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ.ಜೀವನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಹಿರಿಯ ಸದಸ್ಯ ಎಸ್.ಎಚ್.ಮೈನುದ್ದೀನ್ ಮಾತನಾಡಿ, ಜನತಾದಳ ಸಮ್ಮಿಶ್ರ ಸರಕಾರಕ್ಕೆ ಪಟ್ಟಣದ ಅಭಿವೃದ್ಧಿಗಾಗಿ ರೂ.10 ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ಹಣ ಮಂಜೂರಾತಿಯಾಗಿ ಬಿಡುಗಡೆಗೊಳ್ಳಲಿದೆ ಎಂದು ಸಭೆಗೆ ತಿಳಿಸಿದರು.

ಮಾಜಿ ಅಧ್ಯಕ್ಷೆ ಎಂ.ಕೆ.ದೇಚಮ್ಮ ಮಾತನಾಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಶೌಚಾಲಯಗಳೆಲ್ಲ ಗಬ್ಬೆದ್ದು ನಾರುತ್ತಿದ್ದು, ತಕ್ಷಣ ಶುಚಿಗೊಳಿಸಿ ನಿರಂತರ ನೀರು ಪೂರೈಕೆ ಕಲ್ಪಿಸುವಂತೆ ಒತ್ತಾಯಿಸಿದರು.

ಸದಸ್ಯ ಎಸ್.ಎಚ್.ಮತೀನ್ ಮಾತ ನಾಡಿ, ವಿರಾಜಪೇಟೆ ಪಟ್ಟಣ ಪಂಚಾಯಿತಿಗೆ ಅನುದಾನವಿಲ್ಲದೆ ಕಾಮಗಾರಿಗಳಿಗೆ ಹಿನ್ನಡೆ ಉಂಟಾಗಿದ್ದು, ಪಟ್ಟಣದ ಅಭಿವೃದ್ಧಿ ಕಾಮಗಾರಿಗಳ ಕುರಿತು ಕ್ರಿಯಾ ಯೋಜನೆ ಯನ್ನು ತಯಾರಿಸಲಾಗಿದೆ. ಮುಖ್ಯಮಂತ್ರಿ ಕೊಡಗಿಗೆ ಭೇಟಿ ನೀಡಿದ್ದಾಗ ವಿರಾಜ ಪೇಟೆ ಪಟ್ಟಣ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಅವರಿಗೆ ಖುದ್ದು ಮನವರಿಕೆ ಮಾಡಲಾಗಿದ್ದು, ಪ್ರಥಮ ಹಂತದಲ್ಲಿ ತಕ್ಷಣ ರೂ. 5 ಕೋಟಿ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ನೀಡಿದ್ದು, ಅನುದಾನದ ಪ್ರಕ್ರಿಯೆ ಮುಂದುವರೆದಿರುವುದಾಗಿ ಹೇಳಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ರಚನ್ ಮೇದಪ್ಪ ಮಾತನಾಡಿ, ವಿರಾಜಪೇಟೆ ಲೋಕೋಪ ಯೋಗಿ ಇಲಾಖೆ ರಸ್ತೆ ದುರಸ್ತಿ ಬಗ್ಗೆ ನಿರ್ಲಕ್ಷ್ಯ ತಾಳಿದೆ. ವ್ಯವಸ್ಥಿತವಾಗಿ ರಸ್ತೆಗೆ ಚರಂಡಿ ಇಲ್ಲದಿರುವುದರಿಂದ ರಸ್ತೆಯ ಎಲ್ಲ ಕಡೆ ಗಳಲ್ಲಿ ಗುಂಡಿ ಬಿದ್ದಿದೆ. ಆದರು ಲೋಕೋ ಪಯೋಗಿ ಇಲಾಖೆ ಮೌನ ವಹಿಸಿದೆ ಎಂದು ದೂರಿದರಲ್ಲದೆ, ವಿರಾಜಪೇಟೆ ನಗರ ಪೊಲೀಸ್ ಅಧಿಕಾರಿಗಳು ಪಟ್ಟಣದಲ್ಲಿ ಏಕ ಮುಖ ಸಂಚಾರದ ವ್ಯವಸ್ಥೆಗೊಳಿಸುವಾಗ ಪಟ್ಟಣ ಪಂಚಾಯಿತಿಯ ಆಡಳಿತವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ.

ಅಧಿಕಾರಿಗಳು ಮನಬಂದಂತೆ ಏಕ ಮುಖ ಸಂಚಾರ ವನ್ನು ಗೊತ್ತುಪಡಿಸುತ್ತಿದ್ದಾರೆ. ಪಟ್ಟಣ ಪಂಚಾಯಿತಿಯ ಸದಸ್ಯರು ಅಧ್ಯಕ್ಷರು ಹಾಗೂ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳ ಬೇಕು. ಈಗಿನ ಏಕಪಕ್ಷೀಯವಾದ ಏಕ ಮುಖ ರಸ್ತೆ ಸಂಚಾರ ವ್ಯವಸ್ಥೆಗೊಳಿಸಿರು ವುದನ್ನು ಪುನರ್ ಪರಿಶೀಲಿಸಬೇಕು ಎಂದು ರಚನ್ ಮೇದಪ್ಪ ಆಗ್ರಹಿಸಿದರು.

ಮುಖ್ಯಾಧಿಕಾರಿ ಎನ್.ಪಿ.ಹೇಮ್‍ಕುಮಾರ್ ಮಾತನಾಡಿ, ಹಿಂದಿನ ಸರಕಾರದಿಂದ ರೂ. ಒಂದು ಕೋಟಿ ಎಪ್ಪತ್ತು ಲಕ್ಷ ಅನು ದಾನ ಬಂದಿದ್ದು, ಈ ಪೈಕಿ ರಸ್ತೆ ಅಭಿವೃದ್ಧಿ ಗಾಗಿ ರೂ, ಒಂದು ಕೋಟಿ ಹತ್ತುಲಕ್ಷಕ್ಕೆ ಟೆಂಡರ್ ಕರೆದು ಗುತ್ತಿಗೆದಾರರನ್ನು ಆಯ್ಕೆ ಮಾಡಲಾಗಿದೆ. ಉಳಿದ ಹಣ ರೂ 60 ಲಕ್ಷ ಹಣವನ್ನು ಕುಡಿಯುವ ನೀರಿನ ಯೋಜನೆಗೆ ಬಳಸಲಾಗುವುದು ಎಂದರು.

ಕಾಂಗ್ರೇಸ್ ಸದಸ್ಯೆ ಶೀಬಾ ಪೃಥ್ವಿನಾಥ್ ಮಾತನಾಡಿ, ಪಟ್ಟಣ ಪಂಚಾಯಿತಿಯ ಬಿಜೆಪಿ ಆಡಳಿತದಲ್ಲಿ ಕಾಲಹರಣ ಮಾಡುವುದು ಬಿಟ್ಟರೆ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಈಗಿನ ಆಡಳಿತದ ಅವಧಿಯೂ ಮುಗಿದಿದ್ದು, ಇದರಲ್ಲಿಯೇ ಸದಸ್ಯರುಗಳು ತೃಪ್ತಿಪಟ್ಟುಕೊಳ್ಳಬೇಕಿದೆ. ಇದು ಕೊನೆಯ ಸಭೆಯಾದುದರಿಂದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರಲ್ಲದೆ, ಜೆಸಿಬಿ ಹಾಗೂ ಟ್ರಾಕ್ಟರ್ ವಾಹನಗಳ ಟಯರುಗಳನ್ನು ಗೋಣಿಕೊಪ್ಪದಲ್ಲಿ ರೀಟ್ರೇಡಿಂಗ್ ಮಾಡಿರುವ ಪ್ರಕರಣವನ್ನು ತನಿಖೆ ಮಾಡಬೇಕೆಂದು ಆಗ್ರಹಿಸಿದರು.

ಇದಕ್ಕೆ ಕುಪಿತಗೊಂಡ ಇ.ಸಿ.ಜೀವನ್ ನಿಮ್ಮದೇ ಕಾಂಗ್ರೆಸ್ ಸರಕಾರ ಇದ್ದಾಗ ಕಿಂಚಿತ್ತು ಅನುದಾನ ನೀಡಲಿಲ್ಲ, ಅನುದಾನ ನೀಡುತ್ತೇವೆ ಎಂದು ಹೇಳಿ ಬರೀ ಕೈಯ್ಯಲ್ಲಿ ನುಣುಚಿಕೊಂಡ ಸರಕಾರ ಎಂದರು. ಪಟ್ಟಣದ ಜನತೆಗೆ ಸಮರ್ಪಕವಾಗಿ ಕುಡಿ ಯುವ ನೀರು ಪೊರೈಸಲು 60 ಎಚ್.ಪಿ. ಮೋಟಾರ್ ಖರೀದಿಸಿದ್ದು ಮುಂದಿನ ವಾರ ಇದಕ್ಕೆ ಚಾಲನೆ ನೀಡಲಾಗುವುದು. ಹೊಸ ರಸ್ತೆ ಹಾಗೂ ಹಳೇ ರಸ್ತೆ ದುರಸ್ತಿಗೂ ಯೋಜನೆಯನ್ನು ರೂಪಿಸಲಾಗಿದೆ ಎಂದರು.

ಸಭೆಯಲ್ಲಿ ಉಪಾಧ್ಯಕ್ಷೆ ತಸ್ನಿಂ ಅಕ್ತರ್, ಕೆ.ಸಚಿನ್, ಟಿ.ಜೆ.ಶಂಕರ್ ಶೆಟ್ಟಿ, ಕೆ.ಎನ್. ವಿಶ್ವನಾಥ್, ಹಾಗೂ 16ಮಂದಿ ಸದಸ್ಯರುಗಳು ಹಾಜರಿದ್ದರು. ಮುಂದಿನ ವಾರ ಪಟ್ಟಣ ಪಂಚಾಯಿತಿ ಚುನಾ ವಣೆಯ ನೀತಿ ಸಂಹಿತೆ ಜಾರಿಗೆ ಬರುವು ದರಿಂದ ಐದು ವರ್ಷ ಆಡಳಿತದ ಅವಧಿಯ ಇದು ಕೊನೆ ಸಭೆಯಾಗಿತ್ತು.

Translate »