ಕೊಡಗು

ಕಾಡಾನೆ-ಮಾನವ ಸಂಘರ್ಷ ನಿಯಂತ್ರಣ ಸಲಹಾ ಸಭೆ
ಕೊಡಗು

ಕಾಡಾನೆ-ಮಾನವ ಸಂಘರ್ಷ ನಿಯಂತ್ರಣ ಸಲಹಾ ಸಭೆ

June 13, 2018

ಗೋಣಿಕೊಪ್ಪಲು:  ಅರಣ್ಯ ದಿಂದ ಕಾಡಾನೆಗಳು ನಾಡಿಗೆ ಬಾರದಂತೆ ತಡೆಗಟ್ಟಲು ಸಂಪೂರ್ಣವಾಗಿ ಅರಣ್ಯ ದಂಚಿನಲ್ಲಿ ರೈಲ್ವೆ ಕಂಬಿಗಳನ್ನು ಅಳ ವಡಿಸಬೇಕು ಎಂದು ಮಾಯಮುಡಿ, ಬಾಳೆಲೆ, ಪೊನ್ನಪ್ಪಸಂತೆ ಹಾಗೂ ನಿಟ್ಟೂರು ಗ್ರಾಮಸ್ಥರು ಆಗ್ರಹಿಸಿದರು. ಮಾಯಮುಡಿ ಕಂಗಳತ್‍ನಾಡ್ ಮಹಿಳಾ ಸಮಾಜ ಸಭಾಂಗಣದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಬಾನಂಡ ಪ್ರತ್ಯು ಅಧ್ಯಕ್ಷತೆಯಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ತಹಶೀ ಲ್ದಾರ್ ಸಮ್ಮುಖದಲ್ಲಿ ನಡೆದ ಕಾಡಾನೆ-ಮಾನವ ಸಂಘರ್ಷದ ಸಲಹಾ ಸಭೆ ಯಲ್ಲಿ ಆಗ್ರಹಿಸಲಾಯಿತು. ರೈಲ್ವೆ ಕಂಬಿ ನಿರ್ಮಾಣ ಯೋಜನೆ ಯಶಸ್ಸು ಕಾಣುತ್ತಿರುವುದರಿಂದ ಅರಣ್ಯ ಇಲಾಖೆ ಅರಣ್ಯ…

ಜಲಮಯ… ಕೊಡಗೆಲ್ಲಾ ಜಲಮಯಾ…!
ಕೊಡಗು

ಜಲಮಯ… ಕೊಡಗೆಲ್ಲಾ ಜಲಮಯಾ…!

June 12, 2018

ನಾಪೋಕ್ಲು : ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಹಳ್ಳಕೊಳ್ಳ, ತೋಡು, ಹೊಳೆ, ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.ಕಾವೇರಿ ನದಿ ಹರಿಯುತ್ತಿರುವ ಚೆರಿಯ ಪರಂಬು, ಕೊಟ್ಟಮುಡಿ ಹಾಗೂ ಬೊಳಿ ಬಾಣೆಗಳಲ್ಲಿ ನೀರಿನ ಮಟ್ಟ ಏರಿಕೆಯಾ ಗಿದ್ದು, ರಸ್ತೆಯ ಮೇಲೆ ಉಕ್ಕಿ ಹರಿಯು ತ್ತಿದೆ. ಚೆರಿಯಪರಂಬು, ನಾಪೋಕ್ಲು -ಮೂರ್ನಾಡು ರಸ್ತೆಯ ಬೊಳಿಬಾಣೆಯ ಲ್ಲಿಯೂ ಕಾವೇರಿ ನದಿ ಪ್ರವಾಹ ಜೋರಾ ಗಿದ್ದು, ವಾಹನಗಳು ನೀರಿನಲ್ಲಿಯೇ ಸಾಗು ತ್ತಿವೆ. ಇದೇ ರೀತಿ ಮಳೆ ಮುಂದುವರಿ ದರೆ. ನಾಪೋಕ್ಲು -ಮೂರ್ನಾಡು ರಸ್ತೆಯ ಸಂಪರ್ಕ…

ಮಳೆಯ ಅಬ್ಬರಕ್ಕೆ ಅಪಾರ ಹಾನಿ
ಕೊಡಗು

ಮಳೆಯ ಅಬ್ಬರಕ್ಕೆ ಅಪಾರ ಹಾನಿ

June 12, 2018

ಸೋಮವಾರಪೇಟೆ: ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಕಳೆದ 24ಗಂಟೆಯಲ್ಲಿ ಬಿರುಗಾಳಿ ಸಹಿತ ಮಳೆ ಸುರಿದ ಪರಿಣಾಮ ಹಾನಿ ಮುಂದುವರಿದಿದೆ. ಮರಗಳು ವಿದ್ಯುತ್ ಕಂಬಗಳು ಮುರಿದು ಬೀಳುತ್ತಿರು ವುದರಿಂದ ಸೆಸ್ಕ್ ಸಿಬ್ಬಂದಿಗಳಿಗೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಅತಿಹೆಚ್ಚು ಮಳೆ ಬೀಳುವ ಶಾಂತಳ್ಳಿ ಹೋಬಳಿಯಲ್ಲಿ, ದುರಸ್ತಿ ಕೆಲಸ ಭರದಿಂದ ಸಾಗುತ್ತಿದ್ದರೂ, ಮಳೆ ಅರ್ಭಟ ದಿಂದ ಕೆಲಸಕ್ಕೆ ಹಿನ್ನಡೆಯಾಗಿದೆ. ಪುಷ್ಪಗಿರಿ ತಪ್ಪಲು ಗ್ರಾಮ ಗಳಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಅಲ್ಲಿ ದುರಸ್ತಿ ಕೆಲಸಕ್ಕೆ ತೆರಳಲು ಸೆಸ್ಕ್ ಸಿಬ್ಬಂದಿಗಳಿಗೆ ಸಾಧ್ಯವಾಗುತ್ತಿಲ್ಲ. ಗೌಡಳ್ಳಿ ಗ್ರಾಮ…

ಹೈಟೆಕ್ ಮಾರುಕಟ್ಟೆಯಲ್ಲಿ ಮಳೆ ರಗಳೆ
ಕೊಡಗು

ಹೈಟೆಕ್ ಮಾರುಕಟ್ಟೆಯಲ್ಲಿ ಮಳೆ ರಗಳೆ

June 12, 2018

ಸೋಮವಾರಪೇಟೆ: ಇಲ್ಲಿನ ಮಾರುಕಟ್ಟೆ ಪ್ರಾಂಗಣದಲ್ಲಿ ಮಳೆ ನೀರು ಸಂಗ್ರಹವಾದ ಕಾರಣ ಸಂತೆ ದಿನವಾದ ಸೋಮವಾರ ವ್ಯಾಪಾರಸ್ಥರು, ಗ್ರಾಹಕರು ಸಮಸ್ಯೆ ಎದುರಿಸಿದರು. ಮೇಲ್ಚಾವಣಿ ಯಿಂದ ನೀರು ಸೋರುತ್ತಿರು ವುದರಿಂದ ಕೆಲ ವ್ಯಾಪಾರಸ್ಥರು ಪ್ಲಾಸ್ಟಿಕ್ ಹೊದಿಕೆಗಳನ್ನು ಕಟ್ಟಿಕೊಂಡು ದಿನಸಿ ಸಾಮಾಗ್ರಿಗಳನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಿದರು. ತರಕಾರಿ ಮಾರುವವರು ನೀರಿನಲ್ಲಿ ಗುಡ್ಡೆ ಹಾಕಿ ಮಾರಾಟ ಮಾಡಿದರು. ಪ್ರಾಂಗಣ ಪೂರ್ತಿ ಮಳೆ ನೀರಿನಿಂದ ಆವೃತವಾದಂತೆ, ಮಹಿಳೆಯರು, ಮಕ್ಕಳು ಮಾರುಕಟ್ಟೆ ಪ್ರವೇಶಿಸಲು ಭಯ ಪಟ್ಟರು. ಗ್ರಾಮೀಣ ಭಾಗದಿಂದ ಬಂದ ರೈತರು ನೀರಿ ನೊಳಗೆ ನಡೆದಾಡಿ,…

ಬೊಳ್ಳೂರಿನಲ್ಲಿ ವ್ಯಕ್ತಿಯ ಬರ್ಬರ ಹತ್ಯೆ
ಕೊಡಗು

ಬೊಳ್ಳೂರಿನಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

June 12, 2018

ಕುಶಾಲನಗರ: ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಳ್ಳೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಎಚ್.ಡಿ.ಕೋಟೆ ನಿವಾಸಿ ಚನ್ನಪ್ಪ ಹತ್ಯೆ ಆಗಿರುವ ವ್ಯಕ್ತಿ. ಚನ್ನಪ್ಪನ ಸ್ನೇಹಿತ ನಾಗರಾಜು ಎಂಬಾತನೆ ಹತ್ಯೆ ಮಾಡಿರುವ ಆರೋಪಿಯಾಗಿದ್ದು, ಇದೀಗ ತಲೆಮರೆಸಿ ಕೊಂಡಿದ್ದಾನೆ. ಬೊಳ್ಳೂರಿನ ಪರ್ಪಲ್ ಫಾರ್ಮ್ ರೆಸಾರ್ಟ್‍ನಲ್ಲಿ ಚನ್ನಪ್ಪ ಹಾಗೂ ನಾಗರಾಜು ಎಂಬವರು ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದರು. ಇವರಿಗೆ ವಾಸ್ತವ್ಯಕ್ಕಾಗಿ ರೇಸಾರ್ಟ್ ಮುಂಭಾಗದ ಹಳೇ ಡೈರಿ ಜಾಗದಲ್ಲಿ ರೂಂ ನೀಡಲಾಗಿತ್ತು. ಈ ರೂಂನಲ್ಲಿ ಇಬ್ಬರು ಒಟ್ಟಿಗೆ…

ಕೊಡಗಿನಾದ್ಯಂತ ಮುಂದುವರೆದ ಮಳೆಯ ಅಬ್ಬರ: ಭಾಗಮಂಡಲ ತ್ರಿವೇಣ ಸಂಗಮ ಜಲಾವೃತ
ಕೊಡಗು

ಕೊಡಗಿನಾದ್ಯಂತ ಮುಂದುವರೆದ ಮಳೆಯ ಅಬ್ಬರ: ಭಾಗಮಂಡಲ ತ್ರಿವೇಣ ಸಂಗಮ ಜಲಾವೃತ

June 11, 2018

ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಡಿಕೇರಿ:  ಕೊಡಗು ಜಿಲ್ಲೆಯಾದ್ಯಂತ ಗಾಳಿ, ಮಳೆಯ ಆರ್ಭಟ ಮುಂದುವರೆದಿದೆ. ಭಾಗಮಂಡಲದ ತ್ರಿವೇಣ ಸಂಗಮದಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ನದಿ ನೀರು ರಸ್ತೆಯನ್ನು ಆವರಿಸಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯ ತೀವ್ರತೆ ಜಿಲ್ಲೆಯಾದ್ಯಂತ ಹೆÉಚ್ಚಿದ್ದು, ಕಾವೇರಿಯ ಉಗಮಸ್ಥಾನ ವಾದ ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಗಾಳಿ ಮಳೆಯಾಗು ತ್ತಿದೆ. ಭಾಗಮಂಡಲ ಮತ್ತು ಅಯ್ಯಂಗೇರಿ ರಸ್ತೆಗಳ ಮೇಲೆ ನದಿ ನೀರು ಹರಿಯಲಾರಂಭಿಸಿದ್ದು, ಕಾವೇರಿಯ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ…

ಮರ ಬಿದ್ದು ಡಿಸಿ ಬಂಗಲೆಗೆ ಹಾನಿ
ಕೊಡಗು

ಮರ ಬಿದ್ದು ಡಿಸಿ ಬಂಗಲೆಗೆ ಹಾನಿ

June 11, 2018

ಮಡಿಕೇರಿ: ಕೊಡಗು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರ ಬಂಗಲೆ ಮೇಲೆ ಮರ ಬಿದ್ದಿದ್ದು, ಬಂಗಲೆಗೆ ಹಾನಿ ಸಂಭವಿಸಿದೆ. ಕಳೆದ ರಾತ್ರಿ ಸುರಿದ ಭಾರೀ ಮಳೆ ಗಾಳಿಗೆ ಬಂಗಲೇ ಆವರಣದಲ್ಲಿದ್ದ ಮರ ಮುರಿದು ಬಿದ್ದ ಪರಿಣಾಮ ಕಾವಲು ಸಿಬ್ಬಂದಿ ಕೊಠಡಿ ಸಂಪೂರ್ಣ ಧ್ವಂಸಗೊಂಡಿದೆ. ಕಾವಲುಗಾರ ಕೊಠಡಿಯಲ್ಲಿ ಇಲ್ಲದ ಸಂದರ್ಭ ಮರ ಬಿದ್ದಿದ್ದರಿಂದ ಪ್ರಾಣಹಾನಿ ತಪ್ಪಿದ್ದು, ಜಿಲ್ಲಾಧಿಕಾರಿ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಿಸಿ ಬಂಗಲೆ ಸಮೀಪ ಒಟ್ಟು 4 ಮರಗಳು ಉರುಳಿ ಬಿದ್ದಿದ್ದು, ಮಾಹಿತಿ ಅರಿತ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ…

ಮಳೆ ಪರಿಹಾರ ಕಾರ್ಯಕ್ಕೆ ತಾಲೂಕುವಾರು ತಂಡ ರಚನೆ
ಕೊಡಗು

ಮಳೆ ಪರಿಹಾರ ಕಾರ್ಯಕ್ಕೆ ತಾಲೂಕುವಾರು ತಂಡ ರಚನೆ

June 11, 2018

ಮಡಿಕೇರಿ:  ಮುಂಗಾರು ಮಳೆ ಸಂದರ್ಭದಲ್ಲಿ ಪ್ರಕೃತಿ ವಿಕೋಪದಿಂದ ಉಂಟಾ ಗಬಹುದಾದ ಭೂಕುಸಿತ, ಸಂಚಾರಕ್ಕೆ ಅಡ್ಡಿ, ಸಿವಿಲ್ ಕಾರ್ಯಗಳು ಮತ್ತು ಸಂತ್ರಸ್ಥ ರನ್ನು ಸ್ಥಳಾಂತರ ಮಾಡುವುದು, ಮತ್ತಿತರ ಕಾರ್ಯಗಳನ್ನು ಸಮರ್ಪಕವಾಗಿ ನಿಭಾ ಯಿಸಲು ತಹಶೀಲ್ದಾರರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ಮಡಿಕೇರಿ ತಾಲೂಕು ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಬೊಳಿಬಾಣೆ ಮತ್ತು ಅಯ್ಯಂಗೇರಿ ವ್ಯಾಪ್ತಿಗೆ ತಹಶೀಲ್ದಾ ರರು(ತಂಡದ ಮುಖ್ಯಸ್ಥರು), ಸಹಾಯಕ ಕಾರ್ಯ ಎಂಜಿನಿಯರ್ ಜಿಪಂ, ಸೆಸ್ಕ್ ಸಹಾಯಕ ಎಂಜಿನಿಯರ್, ಹೋಬಳಿ ಕೇಂದ್ರದ ಪರಿವೀಕ್ಷಕರು, ಗ್ರಾಪಂ ಅಭಿ ವೃದ್ಧಿ ಅಧಿಕಾರಿಗಳು, ವಲಯ…

ವಿರೋಧ ನಡುವೆಯೂ ತಲಚೇರಿ ರೈಲು ಮಾರ್ಗ; ಖಂಡನೆ
ಕೊಡಗು

ವಿರೋಧ ನಡುವೆಯೂ ತಲಚೇರಿ ರೈಲು ಮಾರ್ಗ; ಖಂಡನೆ

June 11, 2018

ಮಡಿಕೇರಿ: ಕೊಡಗಿನ ಜನರ ವಿರೋಧದ ನಡುವೆಯೂ ಕೊಡಗು ಜಿಲ್ಲೆಯ ಮೂಲಕ ಸಾಗುವ ಮೈಸೂರು-ತಲಚೇರಿ ರೈಲು ಮಾರ್ಗಕ್ಕೆ ದಕ್ಷಿಣ ಕೊಡಗಿನಲ್ಲಿ ಸರ್ವೆ ಕಾರ್ಯ ನಡೆಸಿ ರುವ ಕ್ರಮವನ್ನು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರುಗಳು, ದಕ್ಷಿಣ ಕೊಡಗಿನಲ್ಲಿ ರೈಲು ಮಾರ್ಗ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆಂದು ತಿಳಿಸಿದ್ದಾರೆ. ಕೊಡಗಿನ ಜನರ ಭಾವನೆಗೆ ವಿರುದ್ಧವಾಗಿ ರೈಲು ಮಾರ್ಗ ನಿರ್ಮಾಣ ಮಾಡಲು…

ಗುಡ್ಡೆಹೊಸೂರಿನಲ್ಲಿ ಪರಿಸರ ಮಾಲಿನ್ಯ ತಡೆ ಜಾಥಾ
ಕೊಡಗು

ಗುಡ್ಡೆಹೊಸೂರಿನಲ್ಲಿ ಪರಿಸರ ಮಾಲಿನ್ಯ ತಡೆ ಜಾಥಾ

June 11, 2018

ಗುಡ್ಡೆಹೊಸೂರು:  ಕಾವೇರಿ ನದಿ ದಡದಲ್ಲಿ ಮತ್ತು ಆನೆಕಾಡು ಮಿಸಲು ಅರಣ್ಯವ್ಯಾಪ್ತಿಯಲ್ಲಿ ಗಿಡ ನೆಡುವುದರೊಂದಿಗೆ ಪರಿಸರವನ್ನು ಕಾಪಾಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ಎರಡು ದಿನಗಳಿಂದ ವಿವಿಧ ಭಾಗಗಳಲ್ಲಿ ಗಿಡಗಳನ್ನು ನೆಟ್ಟು ಸಭೆ ಸಮಾರಂಭ ನಡೆಸಲಾಯಿತು. ಜೂ.10ರಂದು ಗುಡ್ಡೆಹೊಸೂರಿಗೆ ಜಾಥಾ ಆಗಮಿಸಿ ಗುಡ್ಡೆಹೊಸೂರು ವೃತ್ತದ ಬಳಿ ಸಮಾರಂಭ ನಡೆಯಿತು. ಕಾಲು ನಡಿಗೆಯಲ್ಲಿ ಮತ್ತು ದ್ವಿಚಕ್ರ ವಾಹನದ ಮೂಲಕ ಜಾಥಾ ಆಗಮಿಸಿತು. ಭಾರೀ ಮಳೆಯ ನಡೆವೆಯು ಜಾಥಾ ಮುಂದುವರಿಯಿತು. ಜಾಥಾದಲ್ಲಿ ಕಾವೇರಿ ನದಿ ಸ್ವಚ್ಚತಾ ಆಂದೋಲನದ ಅಧ್ಯಕ್ಷ…

1 173 174 175 176 177 187
Translate »