ಕೊಡಗು

ವಾರದ ಮಹಾಮಳೆಗೆ ತತ್ತರಿಸಿದ ದಕ್ಷಿಣ ಕೊಡಗು
ಕೊಡಗು

ವಾರದ ಮಹಾಮಳೆಗೆ ತತ್ತರಿಸಿದ ದಕ್ಷಿಣ ಕೊಡಗು

June 14, 2018

30ಕ್ಕೂ ಹೆಚ್ಚು ಕಡೆ ಬರೆ ಕುಸಿತ ಕೇರಳಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಬಂದ್ ಬರೆ ಕುಸಿತಕ್ಕೆ ಕೇರಳ ಕ್ಲೀನರ್ ಬಲಿ ಜಿಲ್ಲಾಡಳಿತದಿಂದ ಪರಿಶೀಲನೆ; ಪರಿಹಾರ ಕಾರ್ಯ ಆರಂಭ ಮಡಿಕೇರಿ: ಕಳೆದ ಒಂದು ವಾರಗಳಿಂದ ಸುರಿದ ಮಳೆಗೆ ದಕ್ಷಿಣ ಕೊಡಗು ಸಂಪೂರ್ಣ ತತ್ತರಿಸಿ ಹೋಗಿದೆ. ಮಾಕುಟ್ಟ ವಿರಾಜಪೇಟೆ ಮೂಲಕ ಕೇರಳ ಮತ್ತು ಮೈಸೂರಿಗೆ ಸಂಪರ್ಕ ಕಲ್ಪಿಸುವ ಅಂತರರಾಜ್ಯ ಹೆದ್ದಾರಿ ಸಂಚಾರ ದುಸ್ತರ ಗೊಂಡಿದೆ.ಇದರಿಂದಾಗಿ ವಾಹನ ಮತ್ತು ಪ್ರಯಣಿಕರಿಗೆ ಸಮಸ್ಯೆಯಾಗಿ ಪರಿಣಮಿ ಸಿದೆ. ಮಂಗಳವಾರ ರಾತ್ರಿ ಸುರಿದ ಬಾರಿ…

ಕಾರು-ಮಿನಿ ಲಾರಿ ಡಿಕ್ಕಿ; ಮಹಿಳೆ ಸಾವು
ಕೊಡಗು

ಕಾರು-ಮಿನಿ ಲಾರಿ ಡಿಕ್ಕಿ; ಮಹಿಳೆ ಸಾವು

June 14, 2018

ಕುಶಾಲನಗರ:  ಸಮೀಪದ ಆನೆಕಾಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬೆಳಗ್ಗೆ ಕಾರು ಮತ್ತು ಮಿನಿ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿದೆ. ಚಿಕ್ಕ ಅಳುವಾರದಲ್ಲಿರುವ ಮಂಗಳೂರು ವಿವಿ ಸ್ನಾತಕೋತ್ತರ ಕೇಂದ್ರ ಉಪನ್ಯಾಸಕ ರಾಬಿನ್ ಎಂಬವರು ತಮ್ಮ ತಾಯಿ ಫಿಲೋಮಿನಾ ಮತ್ತು ಸಹೋದರ ಪ್ರದೀಪ್ ಡೇನಿಯಲ್ ಮತ್ತು ಅತ್ತಿಗೆ ಜೊತೆ ಮಡಿಕೇರಿಯಿಂದ ಕೆ.ಆರ್.ನಗರಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಆನೆಕಾಡು ಬಳಿ ಕುಶಾಲನಗರ ಕಡೆಯಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಮಿನಿ ಲಾರಿ ಕಾರಿಗೆ…

ರೈಲ್ವೆ ಮಾರ್ಗ ಸರ್ವೇ ಕೇರಳದ ಕುತಂತ್ರ: ಕೊಡಗು ಏಕೀಕರಣ ರಂಗ ಆರೋಪ
ಕೊಡಗು

ರೈಲ್ವೆ ಮಾರ್ಗ ಸರ್ವೇ ಕೇರಳದ ಕುತಂತ್ರ: ಕೊಡಗು ಏಕೀಕರಣ ರಂಗ ಆರೋಪ

June 14, 2018

ಮಡಿಕೇರಿ: ಮೈಸೂರು-ಕೊಡಗು-ಕೇರಳ ರೈಲು ಮಾರ್ಗದ ಸರ್ವೆ ಕಾರ್ಯ ಕೇರಳ ರಾಜ್ಯದ ಕುತಂತ್ರ ವಾಗಿದ್ದು, ಈ ಯೋಜನೆಯಲ್ಲಿ ಯಾವುದೇ ಜೀವಂತಿಕೆ ಇಲ್ಲ ಎಂದು ಕೊಡಗು ಏಕೀಕರಣ ರಂಗ ಅಭಿಪ್ರಾಯಪಟ್ಟಿದೆ. ಅಂದಾಜು 6 ಸಾವಿರ ಕೋಟಿ ವೆಚ್ಚದ ಯೋಜನೆ ಇದಾಗಿದೆಯಾದರೂ, ಕೊಂಕಣ ರೈಲ್ವೆ ಕಾರ್ಪೊರೇಷನ್ ವೆಬ್‍ಸೈಟ್‍ನಲ್ಲೂ ಈ ಕುರಿತು ಯಾವುದೇ ಮಾಹಿತಿ ಪ್ರಕ ಟಗೊಂಡಿಲ್ಲ. ರಾಜ್ಯ ಸರಕಾರದಿಂದಲೂ ಯಾವುದೇ ಪ್ರಸ್ತಾಪಗಳು ಕೇಂದ್ರ ಸರ ಕಾರಕ್ಕೆ ಇಂದಿಗೂ ಸಲ್ಲಿಕೆಯಾಗದೇ ಇರುವ ಸಂದರ್ಭ ಕೊಂಕಣ ರೈಲ್ವೆ ಕಾರ್ಪೊ ರೇಷನ್ ಹೆಸರಲ್ಲಿ ಕೆಲವು ಸಿಬ್ಬಂದಿ…

ಮೈಸೂರು-ತಲಚೇರಿ ರೈಲ್ವೆ ಮಾರ್ಗ ಅಕ್ರಮ ಸರ್ವೇ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ
ಕೊಡಗು

ಮೈಸೂರು-ತಲಚೇರಿ ರೈಲ್ವೆ ಮಾರ್ಗ ಅಕ್ರಮ ಸರ್ವೇ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ

June 14, 2018

ಗೋಣಿಕೊಪ್ಪ: ದಕ್ಷಿಣ ಕೊಡಗಿನ ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸಲು ನಡೆಸುತ್ತಿರುವ ರೈಲ್ವೆ ಮಾರ್ಗಕ್ಕೆ ಅಕ್ರಮವಾಗಿ ಸರ್ವೇ ನಡೆಸುತ್ತಿರುವ ಕಾರ್ಯದ ವಿರುದ್ಧ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ವಿರಾಜಪೇಟೆ ಕ್ಷೇತ್ರ ಬಿಜೆಪಿ ಎಚ್ಚರಿಕೆ ನೀಡಿದೆ. ಕಾನೂರು, ಕೋತೂರು ಸುತ್ತಮುತ್ತ ಈಗಾಗಲೇ ಅನಧಿಕೃತ ವಾಗಿ ಸರ್ವೇ ನಡೆಸಲಾಗುತ್ತಿದ್ದು, ಬೆಳೆಗಾರರು ಕೃಷಿ ಭೂಮಿ ಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದು ವಿರಾಜಪೇಟೆ ಕ್ಷೇತ್ರ ಬಿಜೆಪಿ ಅಧ್ಯಕ್ಷ ಕುಞಂಗಡ ಅರುಣ್ ಭೀಮಯ್ಯ ಸುದ್ದಿ ಗೋಷ್ಟಿಯಲ್ಲಿ ಆರೋಪಿಸಿದರು. ಮೈಸೂರು-ತಲಚೇರಿ ರೈಲ್ವೆ ಮಾರ್ಗ ಯೋಜನೆ…

25 ಕೋಟಿ ಬಿಡುಗಡೆಗೆ ಶಾಸಕ ಕೆ.ಜಿ.ಬೋಪಯ್ಯ ಮನವಿ
ಕೊಡಗು

25 ಕೋಟಿ ಬಿಡುಗಡೆಗೆ ಶಾಸಕ ಕೆ.ಜಿ.ಬೋಪಯ್ಯ ಮನವಿ

June 14, 2018

ಮಡಿಕೇರಿ: ಕಳೆದ ಒಂದು ವಾರ ದಿಂದ ಜಿಲ್ಲೆಯಾದ್ಯಂತ ಮಹಾಮಳೆಗೆ ರಸ್ತೆ ಹಾಗೂ ಸೇತುವೆಗಳು ಕುಸಿದಿವೆ. ಬೆಳೆ ಹಾನಿ ಯಾಗಿದೆ, ಹಲವು ಕಡೆ ಬರೆ ಕುಸಿದಿದೆ. ಇದ ರಿಂದ ಕೊಟ್ಯಾಂತರ ರೂ. ನಷ್ಟ ಉಂಟಾಗಿದ್ದು, ಸರ್ಕಾರ ಕೂಡಲೇ ಕನಿಷ್ಠ 25 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಮನವಿ ಮಾಡಿದ್ದಾರೆ.

ಕೆಸರಲ್ಲಿ ಹೂತುಕೊಂಡ ಲಾರಿ-ಬಸ್
ಕೊಡಗು

ಕೆಸರಲ್ಲಿ ಹೂತುಕೊಂಡ ಲಾರಿ-ಬಸ್

June 14, 2018

ಲಾರಿ ಹಾಗೂ ಬಸ್ ಮುಖಾಮುಖಿಯಾದ ಸಂದರ್ಭ ಏಕಕಾಲದಲ್ಲಿ ರಸ್ತೆಗೆ ಅಡ್ಡಲಾಗಿ ಟಯರ್‍ಗಳು ಕೆಸರಿನಲ್ಲಿ ಸಿಲುಕಿದ ಪರಿಣಾಮ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ವಿರಾಜಪೇಟೆ ತಾಲೂಕಿನ ಬೇಗೂರು ಗ್ರಾಮದ ಬಳಿ ಮಂಗಳವಾರ ರಾತ್ರಿ ಸಂಭವಿಸಿದ್ದು, ಬುಧವಾರ ಬೆಳಿಗ್ಗೆವರೆವಿಗೂ ವಾಹನ ಸಂಚಾರ ಸ್ಥಗತಿಗೊಂಡಿತ್ತು.

ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ
ಕೊಡಗು

ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

June 14, 2018

ಮಡಿಕೇರಿ: ಮಾನಸಿಕ ಖಿನ್ನ ತೆಗೆ ಒಳಗಾಗಿದ್ದ ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಹಚ್ಚಿನಾಡು ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಚಿಟ್ಟಿಚ್ಚ ಎಂಬವರ ಪತ್ನಿ ಸಿ.ರೂಪ ಅವರೇ ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಈ ಸಂಬಂಧ ಮೃತರ ತಾಯಿ ಚೊಟ್ಟೆಕಾಳಪಂಡ ಎಂ. ಅಕ್ಕಮ್ಮ ಅವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆ ಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀ ಸರು ತನಿಖೆ ಕೈಗೊಂಡಿದ್ದಾರೆ.

ಕೊಡಗಲ್ಲಿ ಮಳೆರಾಯ ಬಿಡುವು ನೀಡಿದರೂ ಮುಂದುವರೆದ ಹಾನಿ ಭಾಗಮಂಡಲ-ಅಯ್ಯಂಗೇರಿ ರಸ್ತೆ ಸಂಚಾರಕ್ಕೆ ಮುಕ್ತ
ಕೊಡಗು

ಕೊಡಗಲ್ಲಿ ಮಳೆರಾಯ ಬಿಡುವು ನೀಡಿದರೂ ಮುಂದುವರೆದ ಹಾನಿ ಭಾಗಮಂಡಲ-ಅಯ್ಯಂಗೇರಿ ರಸ್ತೆ ಸಂಚಾರಕ್ಕೆ ಮುಕ್ತ

June 13, 2018

ಮಡಿಕೇರಿ: ಜಿಲ್ಲೆಯಲ್ಲಿ ಮಳೆ ಬಿಡುವು ನೀಡಿದರೂ ಹಾನಿ ಯಂತೂ ಮುಂದುವರೆದಿದೆ. ಸೋಮ ವಾರಪೇಟೆ ಮತ್ತು ವಿರಾಜಪೇಟೆ ತಾಲೂ ಕಿನಲ್ಲಿ ಉತ್ತಮ ಮಳೆ ಕಂಡು ಬಂದಿದೆ. ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿ, ಬಾಳೆಲೆ ಮತ್ತು ಮಡಿಕೇರಿ ತಾಲೂಕಿನ ನಾಪ್ಲೋಕು, ಕಕ್ಕಬ್ಬೆ ಕ್ಲಸ್ಟರ್ ವ್ಯಾಪ್ತಿಯಲ್ಲಿ ಶಾಲೆ ಮತ್ತು ಕಾಲೇಜುಗಳಿಗೆ ಸೀಮಿತವಾಗಿ ಜೂ.12 ರಂದು ರಜೆ ಘೋಷಿಸಲಾಗಿತ್ತು. ಭಾಗಮಂಡಲ, ಚೆಟ್ಟಿಮಾನಿ, ಕೋರಂಗಾಲ ವ್ಯಾಪ್ತಿಯಲ್ಲಿ ಮಳೆಯ ರಭಸ ಕಡಿ ಮೆಯಾದ ಹಿನ್ನಲೆಯಲ್ಲಿ ತ್ರಿವೇಣಿ ಸಂಗಮ ದಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ. ಅದ ರೊಂದಿಗೆ ಭಾಗಮಂಡಲ-ಅಯ್ಯಂಗೇರಿ…

ಕೊಡಗಿನ ಸ್ಥಳೀಯ ಸಂಸ್ಥೆಗಳ ವಾರ್ಡ್‍ವಾರು ಮೀಸಲಾತಿ ಪ್ರಕಟ
ಕೊಡಗು

ಕೊಡಗಿನ ಸ್ಥಳೀಯ ಸಂಸ್ಥೆಗಳ ವಾರ್ಡ್‍ವಾರು ಮೀಸಲಾತಿ ಪ್ರಕಟ

June 13, 2018

ಮಡಿಕೇರಿ: 2011ರ ಜನ ಗಣತಿ ಅನ್ವಯ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ 2018-19ನೇ ಸಾಲಿನಲ್ಲಿ ಚುನಾವಣೆ ನಡೆಸಲು ಸರ್ಕಾರವು ವಾರ್ಡ್‍ವಾರು ಮೀಸಲಾತಿ ನಿಗದಿಪಡಿಸಿ ಕರಡು ಅಧಿಸೂಚನೆ ಪ್ರಕಟಿಸಿದೆ. ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ವಾರು ಮೀಸಲಾತಿಯನ್ನು ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಕಚೇರಿಗಳಲ್ಲಿ, ತಾಲೂಕು ಕಚೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ ಕಚೇರಿ ಮತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತ್ತು ಕೊಡಗು ಜಿಲ್ಲೆಯ ವೆಬ್‍ಸೈಟ್ http://kodagu.nic.in/election ಟಿನಲ್ಲಿ ಜೂನ್ 21 ರವರೆಗೆ ಪರಿಶೀಲಿಸಿಕೊಳ್ಳಬಹು ದಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಐ….

ಗುಂಡು ಹೊಡೆದುಕೊಂಡು ಬೆಳೆಗಾರ ಆತ್ಮಹತ್ಯೆ
ಕೊಡಗು

ಗುಂಡು ಹೊಡೆದುಕೊಂಡು ಬೆಳೆಗಾರ ಆತ್ಮಹತ್ಯೆ

June 13, 2018

ಮಡಿಕೇರಿ:  ಸಾಲಬಾಧೆಯಿಂದ ಮನನೊಂದ ಕಾಫಿ ಬೆಳೆಗಾರ ರೋರ್ವರು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಪೋಕ್ಲು ಪೇರೂರು ಗ್ರಾಮದಲ್ಲಿ ನಡೆದಿದೆ. ನಾಪೋಕ್ಲು ಸಮೀಪದ ಪೇರೂರು ಗ್ರಾಮದ ನಿವಾಸಿ ಮಚ್ಚೂರ ಪವನ್ ಮಂದಣ್ಣ(67) ಎಂಬವರೆ ಆತ್ಮಹತ್ಯೆಗೆ ಶರಣಾದ ಬೆಳೆಗಾರರಾಗಿದ್ದಾರೆ. ಕೃಷಿಗಾಗಿ ಸಾಲ ಮಾಡಿದ್ದ ಮಚ್ಚೂರ ಪವನ್ ಮಂದಣ್ಣ ಸಾಲ ತೀರಿಸಲಾಗದೆ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇಂದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ತಕ್ಷಣವೇ ನೆರೆಹೊರೆಯವರು ಮಂದಣ್ಣ ಅವರನ್ನು ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ…

1 172 173 174 175 176 187
Translate »