ಕೊಡಗು

ಯೋಗವಾಕ್ ಜಾಗೃತಿ ಜಾಥಾಗೆ ಎಡಿಸಿ ಡಿ.ಎಂ.ಸತೀಶ್ ಕುಮಾರ್ ಚಾಲನೆ
ಕೊಡಗು

ಯೋಗವಾಕ್ ಜಾಗೃತಿ ಜಾಥಾಗೆ ಎಡಿಸಿ ಡಿ.ಎಂ.ಸತೀಶ್ ಕುಮಾರ್ ಚಾಲನೆ

June 18, 2018

ಮಡಿಕೇರಿ: ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಪೂರ್ವ ಭಾವಿಯಾಗಿ ಭಾನುವಾರ ನಗರದಲ್ಲಿ ಯೋಗವಾಕ್ ಜರುಗಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಡೆದ ಯೋಗಥಾನ್ ಜಾಗೃತಿ ಜಾಥಾಗೆ ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್ ಕುಮಾರ್, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರ ರಾಜ್ ಅವರು ಚಾಲನೆ ನೀಡಿದರು. ನಗರದ ಗಾಂಧಿ ಮೈದಾನದಲ್ಲಿ ಚಾಲನೆ ನೀಡಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್ ಕುಮಾರ್ ಅವರು, ಯೋಗವು ಜೀವನದ ಅವಿಭಾಜ್ಯ ಅಂಗವಾಗಿದ್ದು, ಪ್ರತಿನಿತ್ಯ ಯೋಗದಲ್ಲಿ ತೊಡಗಿಸಿಕೊಳ್ಳುವುದರಿಂದ…

ತೋರ ಗ್ರಾಮದಲ್ಲಿ ಭಾರೀ ಗಾತ್ರದ ಕಾಳಿಂಗ ಸೆರೆ
ಕೊಡಗು

ತೋರ ಗ್ರಾಮದಲ್ಲಿ ಭಾರೀ ಗಾತ್ರದ ಕಾಳಿಂಗ ಸೆರೆ

June 18, 2018

ವಿರಾಜಪೇಟೆ: ವಿರಾಜ ಪೇಟೆ ಬಳಿಯ ತೋರ ಗ್ರಾಮದ ಮನೆ ಯಲ್ಲಿ ಸೇರಿಕೊಂಡಿದ್ದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಅದೇ ಗ್ರಾಮದ ಮಹೇಶ್ ಎಂಬುವರು ಹಿಡಿದು ಅದನ್ನು ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದ್ದಾರೆ. ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆಯ ಸಹಾಯಕ ಅಧಿಕಾರಿ ಸುಬ್ರಾಯ ಹಾಗೂ ಸಿಬ್ಬಂದಿಗಳು ಮಾಕುಟ್ಟ ಅರಣ್ಯಕ್ಕೆ ಬಿಟ್ಟಿದ್ದಾರೆ.

ನಿಟ್ಟೂರು ಹೊಸ ಸೇತುವೆಯಲ್ಲಿ ಬಿರುಕು: ಕಳಪೆ ಕಾಮಗಾರಿ ಬಣ್ಣ ಬಯಲು ಮಾಡಿದ ವರುಣ
ಕೊಡಗು

ನಿಟ್ಟೂರು ಹೊಸ ಸೇತುವೆಯಲ್ಲಿ ಬಿರುಕು: ಕಳಪೆ ಕಾಮಗಾರಿ ಬಣ್ಣ ಬಯಲು ಮಾಡಿದ ವರುಣ

June 18, 2018

ಗೋಣಿಕೊಪ್ಪಲು: ಬಾಳೆಲೆ-ನಿಟ್ಟೂರು ಮಾರ್ಗದ ಲಕ್ಷ್ಮಣತೀರ್ಥ ನದಿಗೆ ನೂತನವಾಗಿ ನಿರ್ಮಿಸಿರುವ ನಿಟ್ಟೂರು ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಳಪೆ ಕಾಮಗಾರಿಯಾಗಿರುವುದರಿಂದ ಬಿರುಕು ಬಂದಿದೆ ಎಂದು ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪ್ರತ್ಯು ಆರೋಪಿಸಿದ್ದಾರೆ. ಸೇತುವೆಯ ಮೇಲೆ ಸಂಚರಿಸಲು ಭಯದ ವಾತಾವರಣ ನಿರ್ಮಾಣವಾಗಿದೆ. ಸುಮಾರು 5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸೇತುವೆಯ ಮದ್ಯಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಸೇತುವೆ ನಿರ್ಮಾಣವಾಗಿ ಇದೇ ಮೊದಲ ವರ್ಷದ ಮುಂಗಾರು ಆರಂಭಗೊಂಡಿದೆ. ಈ ಸಂದರ್ಭದಲ್ಲಿಯೇ ಬಿರುಕು ಬಿಟ್ಟಿರುವುದು ಆ ಭಾಗದ ಜನರಲ್ಲಿ ಭಯದ ವಾತಾವರಣ ಮೂಡಿಸಿದೆ….

ರೋಟರಿ ಸಂಸ್ಥೆ ಜೀವನದ ಪಾಠ ಕಲಿಸುವ ವಿವಿ
ಕೊಡಗು

ರೋಟರಿ ಸಂಸ್ಥೆ ಜೀವನದ ಪಾಠ ಕಲಿಸುವ ವಿವಿ

June 17, 2018

ಮಡಿಕೇರಿ: ಜಗತ್ತಿನ ಪ್ರಮುಖ ಸಾಮಾಜಿಕ ಸೇವಾ ಸಂಸ್ಥೆಯಾಗಿರುವ ರೋಟರಿ ಜೀವನದ ಹಲವು ಪಾಠಗಳನ್ನು ಕಲಿಸುವ ಅಪೂರ್ವ ವಿಶ್ವವಿದ್ಯಾನಿಲಯ ದಂತಿದೆ ಎಂದು ರೋಟರಿ ಜಿಲ್ಲೆ 3181ನ ಗವರ್ನರ್ ಮಾತಂಡ ಸುರೇಶ್ ಚಂಗಪ್ಪ ಹೇಳಿದ್ದಾರೆ. ಮಡಿಕೇರಿ ರೋಟರಿ ಕ್ಲಬ್‍ಗೆ ಅಧಿಕೃತ ಭೇಟಿ ನೀಡಿದ ಸಂದರ್ಭ ಮಾತನಾಡಿದ ಸುರೇಶ್ ಚಂಗಪ್ಪ, ಜೀವನದ ಆಗುಹೋಗು ಗಳೊಂದಿಗೆ ಬದುಕಿನ ದೃಷ್ಟಿಕೋನವನ್ನೇ ಬದಲಾಯಿಸಬಲ್ಲ ಶಕ್ತಿ ರೋಟರಿ ಸಂಸ್ಥೆಗಿದೆ ಎಂದು ಶ್ಲಾಘಿಸಿದರು. ಯಾವುದೇ ಕ್ಷೇತ್ರ ದಲ್ಲಿಯೂ ಅಧಿಕಾರ ದೊರಕಿದಾಗ ಅಂಥ ವ್ಯಕ್ತಿಯ ನೈಜ ವ್ಯಕ್ತಿತ್ವ ಬೆಳಕಿಗೆ ಬರುತ್ತದೆ….

ಮುಸ್ಲಿಂ ಬಾಂಧವರಿಂದ ರಂಜಾನ್ ಆಚರಣೆ
ಕೊಡಗು

ಮುಸ್ಲಿಂ ಬಾಂಧವರಿಂದ ರಂಜಾನ್ ಆಚರಣೆ

June 17, 2018

ಮಡಿಕೇರಿ: ನಗರದ ಮಹದೇವಪೇಟೆಯಲ್ಲಿರುವ ಜಾಮಿಯಾ ಮಸೀದಿಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ನೆರವೇರಿತು. ಬಳಿಕ ರಾಣಿಪೇಟೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಹಬ್ಬದ ವೃತದಾರಿಗಳು ಪ್ರಾರ್ಥನೆಯ ಬಳಿಕ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಮಡಿಕೇರಿಯ ಹಿಲ್‍ರಸ್ತೆಯ ಅಹ್ಮದಿಯಾ ಮುಸ್ಲಿಂ ಜಮಾಅತ್ ಮಸೀದಿಯಲ್ಲಿ ‘ಈದುಲ್ ಫಿತರ್’ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಸೀದಿಯ ಧರ್ಮ ಗುರುಗಳಾದ ಹಾಫಿಝ್ ರಫೀಕ್ ಉಜ್ಜಮಾ ಅವರ ನೇತೃತ್ವದಲ್ಲಿ ತಕ್ಬೀರ್, ವಿಶೇಷ ನಮಾಝ್ ನಿರ್ವಹಿಸಿದ ಬಳಿಕ ಧಾರ್ಮಿಕ…

ಶಾಲೆಗಳಿಗೆ ಪಠ್ಯ ಪುಸ್ತಕ ಸರಬರಾಜು
ಕೊಡಗು

ಶಾಲೆಗಳಿಗೆ ಪಠ್ಯ ಪುಸ್ತಕ ಸರಬರಾಜು

June 17, 2018

ವಿರಾಜಪೇಟೆ: ವಿರಾಜಪೇಟೆ ತಾಲೂಕಿನ ಎಲ್ಲಾ ಸರಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಉಚಿತ ಪಠ್ಯಪುಸ್ತಕಗಳನ್ನು ಹಾಗೂ ಅನುದಾನ ರಹಿತ ಶಾಲೆಗಳಿಗೆ ಮಾರಾಟ ಪಠ್ಯಪುಸ್ತಕ ಗಳನ್ನು ಶಾಲೆಗಳ ಆರಂಭದಲ್ಲಿಯೇ ಶೇ,91ರಷ್ಟು ವಿತರಿಸ ಲಾಗಿದ್ದು ಉಳಿದ ಪಠ್ಯಪುಸ್ತಕಗಳು ಈಗಾಗಲೇ ದಾಸ್ತಾನು ಮಳಿಗೆಗೆ ಸರಬರಾಜು ಆಗಿದ್ದು ಶಾಲೆಗಳಿಗೆ ವಿತರಿಸಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಮಾರಾಟ ಪಠ್ಯಪುಸ್ತಕಗಳನ್ನು ಕೂಡ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಯವರು ಶಾಲಾ ಪ್ರಾರಂಭಕ್ಕೂ ಮೊದಲು ಪಡೆದುಕೊಂಡಿರುತ್ತಾರೆ. ಈವರೆಗೆ ಶೇ,98 ರಷ್ಟು ಪಠ್ಯಪುಸ್ತಕಗಳು ಎಲ್ಲಾ ಶಾಲೆಗಳಿಗೆ ವಿತರಣೆಯಾಗಿದ್ದು…

ಭೂ ಕುಸಿತ; ಅಪಾಯದ ಅಂಚಿನಲ್ಲಿ ಸೆಸ್ಕ್ ಕಚೇರಿ
ಕೊಡಗು

ಭೂ ಕುಸಿತ; ಅಪಾಯದ ಅಂಚಿನಲ್ಲಿ ಸೆಸ್ಕ್ ಕಚೇರಿ

June 17, 2018

ಸೋಮವಾರಪೇಟೆ: ಭಾರಿ ಮಳೆ ಯಿಂದ ಭೂ ಕುಸಿತ ಉಂಟಾಗಿದ್ದು, ಸೆಸ್ಕ್ ಕಛೇರಿ ಅಪಾಯದ ಸ್ಥಿತಿಯಲ್ಲಿದೆ. ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ನಿಗಮದ ಕಛೇರಿಯ ಹಿಂಬಾಗದಲ್ಲಿ ಭಾರಿ ಭೂ ಕುಸಿತವಾಗು ತ್ತಿದ್ದು, ಕಛೇರಿಯ ಕಟ್ಟಡವೇ ಕುಸಿಯುವ ಹಂತ ದಲ್ಲಿದೆ. ಕಛೇರಿ ಕಟ್ಟಡದ ಹಿಂಬಾಗದಲ್ಲಿ ತಡೆಗೋಡೆ ನಿರ್ಮಿಸಲೆಂದು ಸ್ವಲ್ಪ ಮಣ್ಣನ್ನು ಅಗೆದು ತೆಗೆಯಲಾ ಗಿತ್ತು. ಆದರೆ ಮಳೆ ಆರಂಭವಾದ ಹಿನ್ನಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಮಳೆಯ ರಭಸಕ್ಕೆ ಮಣ್ಣು ಕುಸಿಯಲಾರಂಭಿಸಿದ್ದು, ಶೌಚಾಲಯದ ಗುಂಡಿ ಬೀಳಲಾರಂಭಿಸಿದೆ. ಕಛೇರಿ ಕಟ್ಟಡ ಕೇವಲ 2 ಅಡಿ ಅಂತರದಲ್ಲಿದ್ದು…

ಎಂಎಲ್‍ಸಿ ಸುನೀಲ್ ಸುಬ್ರಮಣಿಯಿಂದ ಮಾಕುಟ್ಟ ರಸ್ತೆ ಪರಿಶೀಲನೆ
ಕೊಡಗು

ಎಂಎಲ್‍ಸಿ ಸುನೀಲ್ ಸುಬ್ರಮಣಿಯಿಂದ ಮಾಕುಟ್ಟ ರಸ್ತೆ ಪರಿಶೀಲನೆ

June 17, 2018

ವಿರಾಜಪೇಟೆ:  ಕೊಡಗು- ಕೇರಳ ಅಂತರಾಜ್ಯ ಹೆದ್ದಾರಿ ಬಾರಿ ಮಳೆಯಿಂದ ಮಾಕುಟ್ಟದ ರಸ್ತೆ ಉದ್ದಕ್ಕೂ ಬರೆ ಕುಸಿದು ನುರಾರೂ ಮರಗಳು ರಸ್ತೆಗೆ ಉರುಳಿ ವಾಹನ ಗಳ ಸಂಚಾರಕ್ಕೆ ಅಡಚಣೆ ಹಾಗೂ ಅಪಾರ ನಷ್ಟ ಸಂಭವಿಸಿರುವ ಹಿನ್ನಲೆ ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಅವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ್ದ ಕೇರಳದ ಇರಿಟಿಯ ಪಟ್ಟಣ ಪಂಚಾಯಿತಿ ಅಧಿಕಾರಿ ಮತ್ತು ಸದಸ್ಯರು ಗಳೊಂದಿಗೆ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಅವರು, ಕಳೆದ 55…

ಮಡಿಕೇರಿಯಲ್ಲಿ ಲಾರಿ ಚಕ್ರ ಕಳವು
ಕೊಡಗು

ಮಡಿಕೇರಿಯಲ್ಲಿ ಲಾರಿ ಚಕ್ರ ಕಳವು

June 17, 2018

ಮಡಿಕೇರಿ: ರಸ್ತೆ ಬದಿ ನಿಲ್ಲಿಸಿದ್ದ ಲಾರಿ ಯೊಂದರ 3 ಚಕ್ರಗಳನ್ನು ಕಳವು ಮಾಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ನಗರದ ಉದ್ಯಮಿಯೊಬ್ಬರು ತಮ್ಮ ಟಿಪ್ಪರ್ ಲಾರಿಗಳನ್ನು ಮಂಗಳೂರು ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದರು. ಕಳೆದ 4 ದಿನಗಳು ಹಿಂದೆ ಈ ಲಾರಿಯ 2 ಬ್ಯಾಟರಿಗಳನ್ನು ಕಳ್ಳರು ಕಳವು ಮಾಡಿದ್ದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಲಾಗಿತ್ತು. ಆದರೆ ರಾತ್ರಿ ಸುರಿಯುವ ಭಾರಿ ಮಳೆಯ ಲಾಭ ಪಡೆದ ಕಳ್ಳರು, ಸಿ.ಸಿ.ಕ್ಯಾಮರಾವನ್ನು ಕಿತ್ತೆಸೆದು ಲಾರಿಯ ಚಕ್ರಗಳನ್ನು ಕಳವು ಮಾಡಿರುವುದು ಕಂಡು ಬಂದಿದೆ. ಮಾತ್ರವಲ್ಲದೆ ಸ್ಥಳದಲ್ಲಿದ್ದ…

ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ
ಕೊಡಗು

ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

June 17, 2018

ವಿರಾಜಪೇಟೆ: ಬಂದೂಕಿನಿಂದ ಗುಂಡು ಹೊಡೆದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಕುಕ್ಲೂರು ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ಬಳಿಯ ಕುಕ್ಲೂರು ಗ್ರಾಮದ ಮಾಳೇಟಿರ ಎಸ್.ಕರುಂಬಯ್ಯ (38) ಶನಿವಾರ ಬೆಳಿಗ್ಗೆ 5.30 ಗಂಟೆಗೆ ಮನೆಯಲ್ಲಿ ತಾಯಿಯ ಬಳಿ ನೀರು ಕೇಳಿ ಕುಡಿದು ಬಳಿಕ ತಮ್ಮ ಬಂದೂಕಿನಿಂದ ಕುತ್ತಿಗೆ ಭಾಗಕ್ಕೆ ಗುಂಡು ಹೊಡೆದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಮೃತ ಕರುಂಬಯ್ಯ ಅವರು ಅವಿವಾಹಿತ ರಾಗಿದ್ದು ಕೆಲವು ದಿನಗಳಿಂದ ಅನಾರೋಗ್ಯ ದಿಂದ ಬಳಲುತ್ತಿದ್ದರೆಂದು ಮೃತರ ತಾಯಿ ನಗರ ಠಾಣೆಗೆ…

1 170 171 172 173 174 187
Translate »