ಭೂ ಕುಸಿತ; ಅಪಾಯದ ಅಂಚಿನಲ್ಲಿ ಸೆಸ್ಕ್ ಕಚೇರಿ
ಕೊಡಗು

ಭೂ ಕುಸಿತ; ಅಪಾಯದ ಅಂಚಿನಲ್ಲಿ ಸೆಸ್ಕ್ ಕಚೇರಿ

June 17, 2018

ಸೋಮವಾರಪೇಟೆ: ಭಾರಿ ಮಳೆ ಯಿಂದ ಭೂ ಕುಸಿತ ಉಂಟಾಗಿದ್ದು, ಸೆಸ್ಕ್ ಕಛೇರಿ ಅಪಾಯದ ಸ್ಥಿತಿಯಲ್ಲಿದೆ. ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ನಿಗಮದ ಕಛೇರಿಯ ಹಿಂಬಾಗದಲ್ಲಿ ಭಾರಿ ಭೂ ಕುಸಿತವಾಗು ತ್ತಿದ್ದು, ಕಛೇರಿಯ ಕಟ್ಟಡವೇ ಕುಸಿಯುವ ಹಂತ ದಲ್ಲಿದೆ. ಕಛೇರಿ ಕಟ್ಟಡದ ಹಿಂಬಾಗದಲ್ಲಿ ತಡೆಗೋಡೆ ನಿರ್ಮಿಸಲೆಂದು ಸ್ವಲ್ಪ ಮಣ್ಣನ್ನು ಅಗೆದು ತೆಗೆಯಲಾ ಗಿತ್ತು. ಆದರೆ ಮಳೆ ಆರಂಭವಾದ ಹಿನ್ನಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು.

ಮಳೆಯ ರಭಸಕ್ಕೆ ಮಣ್ಣು ಕುಸಿಯಲಾರಂಭಿಸಿದ್ದು, ಶೌಚಾಲಯದ ಗುಂಡಿ ಬೀಳಲಾರಂಭಿಸಿದೆ. ಕಛೇರಿ ಕಟ್ಟಡ ಕೇವಲ 2 ಅಡಿ ಅಂತರದಲ್ಲಿದ್ದು ಮುಂದಿನ ಎರಡು ದಿನಗಳಲ್ಲಿ ಧಾರಾಕಾರ ಮಳೆ ಸುರಿದರೆ ಕಟ್ಟಡ ಕುಸಿಯುವುದು ಖಚಿತ. ಇದರಿಂದಾಗಿ ಭಾರಿ ಅನಾಹುತವಾಗಲಿದ್ದು, ವಿದ್ಯುತ್ ಸಂಪರ್ಕ ವ್ಯತ್ಯಯ ವಾಗುವುದರೊಂದಿಗೆ ಜನಜೀವನದ ಮೇಲೆ ಪರಿಣಾಮ ಬೀರಲಿದೆ. ಒಂದೆಡೆ ಭೂ ಕುಸಿತವಾಗು ತ್ತಿದ್ದರೆ, ಮತ್ತೊಂದೆಡೆ ವಿದ್ಯುತ್ ವಿತರಣ ಕೇಂದ್ರ ಗಳಿಗೂ ನೀರು ನುಗ್ಗುತ್ತಿದ್ದು, ಸಿಬ್ಬಂಧಿಗಳು ಭಯ ಭೀತ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ಸಂಬಂದಿಸಿದ ಇಲಾಖೆ ತಕ್ಷಣ ತುರ್ತು ಕ್ರಮ ಕೈಗೊಳ್ಳದಿದ್ದಿಲ್ಲಿ ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ.

Translate »