ಕೊಡಗು

ಭಾರೀ ಮಳೆಗೆ ಮನೆ ಕುಸಿತ
ಕೊಡಗು

ಭಾರೀ ಮಳೆಗೆ ಮನೆ ಕುಸಿತ

June 22, 2018

ವಿರಾಜಪೇಟೆ: ಬುಧವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಪಟ್ಟಣದ ಅರಸು ನಗರದ ಶಶಿಕಲಾ ಎಂಬವರ ಮನೆ ರಾತ್ರಿ 12 ಗಂಟೆಗೆ ಕುಸಿದು ಬಿದ್ದಿದೆ. ರೂ.3 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ. ಮನೆ ಬೀಳುವ ಸಂದರ್ಭ ಶಶಿಕಲಾ ಅವರು ಸಂಭಂದಿಕರ ಮದುವೆಗೆ ತೆರಳಿದ್ದರೆಂದು ತಿಳಿದು ಬಂದಿದೆ. ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹೇಮಕುಮಾರ್, ಸದಸ್ಯ ರಾಜೇಶ್ ಪಧ್ಮನಾಭ, ಕಂದಾಯ ಇಲಾಖೆಯ ಅಧಿಕಾರಿ ಪಳಂಗಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆ ಕುಸಿದಿರುವಬಗ್ಗೆ ತಹಶಿಲ್ದಾರ್‍ಗೆ ದೂರು ನೀಡಿದ್ದಾರೆ.

ಪೆರುಂಬಾಡಿ-ಮಾಕುಟ್ಟ ರಸ್ತೆ ಕಾಮಗಾರಿ ತ್ವರಿತ ಆರಂಭಕ್ಕೆ ಹೆಚ್.ಡಿ.ರೇವಣ್ಣ ಸೂಚನೆ
ಕೊಡಗು

ಪೆರುಂಬಾಡಿ-ಮಾಕುಟ್ಟ ರಸ್ತೆ ಕಾಮಗಾರಿ ತ್ವರಿತ ಆರಂಭಕ್ಕೆ ಹೆಚ್.ಡಿ.ರೇವಣ್ಣ ಸೂಚನೆ

June 21, 2018

ಮಡಿಕೇರಿ: ಕೊಣನೂರು-ಮಾಕುಟ್ಟ ರಸ್ತೆ ದುರಸ್ಥಿಗೆ ಅಗತ್ಯವಿರುವ ಹಣ ಬಿಡುಗಡೆ ಮಾಡಲು ಲೋಕೋ ಪಯೋಗಿ ಇಲಾಖೆ ಸಿದ್ದವಿದ್ದು ಹಣಕ್ಕಾಗಿ ಕಾಯದೆ ತುರ್ತು ಕೆಲಸ ನಿರ್ವಹಿಸು ವಂತೆ ಜಿಲ್ಲಾಡಳಿತಕ್ಕೆ ಲೋಕೋಪಯೋಗಿ ಇಲಾಖೆ ಸಚಿವ ಹೆಚ್.ಡಿ.ರೇವಣ್ಣ ಸೂಚಿಸಿದ್ದಾರೆ. ಮಡಿಕೇರಿ ಜಿಲ್ಲಾಡಳಿತ ಭವನದಲ್ಲಿ ಮಳೆ ಹಾನಿಗೆ ಸಂಭಂಧಿಸಿದಂತೆ ಸಭೆ ನಡೆಸಿದ ಸಚಿವ ರೇವಣ್ಣ ಮಾಕುಟ್ಟ ವ್ಯಾಪ್ತಿ ಯಲ್ಲಿ ಮಳೆಯಿಂದ ಹಾನಿಗೀಡಾದ ರಸ್ತೆಯ ಮಾಹಿತಿ ಪಡೆದರು. ಒಂದು ಸೇತುವೆ ಮತ್ತು ನಾಲ್ಕು ಕಡೆ ರಸ್ತೆಗೆ ಭಾರಿ ಹಾನಿಯಾದ ಕುರಿತು ಅಧಿಕಾರಿಗಳು ಸಚಿವರ ಗಮನ ಸೆಳೆದರು….

ದಕ್ಷಿಣ ಕೊಡಗಲ್ಲಿ ಮತ್ತೆ ಹುಲಿ ದಾಳಿ; ಹಸು ಬಲಿ
ಕೊಡಗು

ದಕ್ಷಿಣ ಕೊಡಗಲ್ಲಿ ಮತ್ತೆ ಹುಲಿ ದಾಳಿ; ಹಸು ಬಲಿ

June 21, 2018

ಗೋಣಿಕೊಪ್ಪಲು:  ಶ್ರೀಮಂಗಲ ಗ್ರಾಪಂ ವ್ಯಾಪ್ತಿಯ ಬೀರುಗ ಗ್ರಾಮದ ನಿವಾಸಿ ಅಜ್ಜಮಾಡ ವಿಜು ಕಾರ್ಯಪ್ಪನವರ ಎರಡು ಹಾಲು ಕರೆಯುವ ಹಸು ವಿನ ಮೇಲೆ ದಾಳಿ ನಡೆಸಿರುವ ಹುಲಿಯು ಎರಡು ಹಸುಗಳನ್ನು ಕೊಂದು ಹಾಕಿದೆ. ಮನೆಯ ಅನತಿ ದೂರದಲ್ಲಿರುವ ಕೊಟ್ಟಿಗೆ ಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ದಾಳಿ ನಡೆಸಿ ಒಂದು ಹಸುವನ್ನು ಕೊಟ್ಟಿಗೆಯಲ್ಲಿ ಕೊಂದು ಹಾಕಿದೆ. ಮತ್ತೊಂದು ಹಾಲು ಕರೆಯುವ ಹಸುವನ್ನು ಕೊಟ್ಟಿಗೆಯಿಂದ ಎಳೆದೊಯ್ದು ಸಮೀಪದ ಗದ್ದೆ ಬಯ ಲಿನ ಪೊದೆಯಲ್ಲಿ ಅರ್ಧ ಭಾಗವನ್ನು ತಿಂದು ಹಾಕಿದೆ. ಮುಂಜಾನೆ ಕೊಟ್ಟಿಗೆಗೆ…

ಶಾರ್ಟ್ ಸಕ್ರ್ಯೂಟ್; ಮನೆಗೆ ಹಾನಿ
ಕೊಡಗು

ಶಾರ್ಟ್ ಸಕ್ರ್ಯೂಟ್; ಮನೆಗೆ ಹಾನಿ

June 21, 2018

ಮಡಿಕೇರಿ: ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಮನೆಯೊಂದು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಮಡಿಕೇರಿ ಚಾಮುಂಡೇಶ್ವರಿ ನಗರದಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಈ ಘಟನೆ ನಡೆದಿದ್ದರಿಂದ ಭಾರೀ ಅನಾ ಹುತವೊಂದು ತಪ್ಪಿದಂತಾಗಿದೆ. ಚಾಮುಂ ಡೇಶ್ವರಿ ನಗರದ ನಿವಾಸಿ ಪ್ರಮೀಳಾ ಎಂಬು ವರಿಗೆ ಸೇರಿದ ಮನೆಯೇ ಬೆಂಕಿಗೆ ಆಹುತಿ ಯಾಗಿದ್ದು, ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಯೊಳಗಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅಂದಾಜು 2 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ಮನೆ ಮಾಲಕಿ…

ರೈತರೊಂದಿಗೆ ಪ್ರಧಾನಿ ಸಂವಾದ ಪ್ರಸಾರ
ಕೊಡಗು

ರೈತರೊಂದಿಗೆ ಪ್ರಧಾನಿ ಸಂವಾದ ಪ್ರಸಾರ

June 21, 2018

ಗೋಣಿಕೊಪ್ಪಲು:  ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ರೈತರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮವನ್ನು ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪರದೆ ಮುಖಾಂತರ ಬಿತ್ತರಿಸಲಾಯಿತು. ಪ್ರೊಜೆಕ್ಟರ್ ಮೂಲಕ ಎಲ್‍ಸಿಡಿ ಪರದೆ ಯಲ್ಲಿ ನೇರ ಪ್ರಸಾರವನ್ನು ನೀಡಲಾಯಿತು. ಕೊಡಗಿನ ಸುಮಾರು 113 ಬೆಳೆಗಾರರು ವೀಕ್ಷಿಸಿದರು. ವಿರಾಜಪೇಟೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ತಜ್ಞ ರುಗಳು ಪಾಲ್ಗೊಂಡಿದ್ದರು. ಕೆವಿಕೆ ಮುಖ್ಯಸ್ಥ ಸಾಜು ಜಾರ್ಜ್, ರೈತ ಸಂಘ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ, ಕೃಷಿ ಪಂಡಿತ ಪ್ರಶಸಸ್ತಿ ಪುರಸ್ಕøತ ಸೋಮೇಂಗಡ…

ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಕಾರ್ಯಗಾರಕ್ಕೆ ಚಾಲನೆ
ಕೊಡಗು

ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಕಾರ್ಯಗಾರಕ್ಕೆ ಚಾಲನೆ

June 21, 2018

ವಿರಾಜಪೇಟೆ: ಕಠಿಣ ಪ್ರರಿಶ್ರಮ ಹಾಗೂ ಏಕಾಗ್ರತೆಯಿಂದ ವಿದ್ಯಾರ್ಥಿಗಳು ತಮ್ಮ ಬದುಕಿನ ಗುರಿಯನ್ನು ಮುಟ್ಟಲು ಸಾಧ್ಯ ಎಂದು ಹುಣಸೂರಿನ ತಹಶೀಲ್ದಾರ್ ಅಹಮದ್ ಕುಂಞ ಅಭಿಪ್ರಾಯಪಟ್ಟರು. ಪಟ್ಟಣದ ಜೈನರ ಬೀದಿಯಲ್ಲಿನ ಚಾಣಕ್ಯ ಕೋಚಿಂಗ್ ಸೆಂಟರ್ ಭಾನು ವಾರ ಆಯೋಜಿಸಿದ್ದ ಸಿಇಟಿ, ಜೆಇಇ ಹಾಗೂ ನೀಟ್ ಪರೀಕ್ಷೆ ಉಚಿತ ಕಾರ್ಯಾ ಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಶ್ರದ್ಧೆ ಯಿಂದ ತಮ್ಮ ಹೆಚ್ಚಿನ ಅವಧಿಯಲ್ಲಿ ಗುರಿಯ ಕಡೆ ಗಮನಹರಿಸಬೇಕು. ಛಲ ದಿಂದ ಗುರಿಯೆಡೆ ಮುನ್ನಡೆದರೆ ಅಸಾಧ್ಯವಾದುದು ಯಾವುದು ಇಲ್ಲ. ನಗರ ಪ್ರದೇಶದ…

ನಿಯಮ ಬಾಹಿರವಾಗಿ ಕರಿಮೆಣಸು ಆಮದು ಬೆಂಗಳೂರಲ್ಲಿ ನಾಳೆ ಬೆಳೆಗಾರರ ಪ್ರತಿಭಟನೆ
ಕೊಡಗು

ನಿಯಮ ಬಾಹಿರವಾಗಿ ಕರಿಮೆಣಸು ಆಮದು ಬೆಂಗಳೂರಲ್ಲಿ ನಾಳೆ ಬೆಳೆಗಾರರ ಪ್ರತಿಭಟನೆ

June 20, 2018

ಬೆಂಗಳೂರು:  ಕೇಂದ್ರ ವಾಣಿಜ್ಯ ಸಚಿವಾಲಯ ಭಾರತಕ್ಕೆ ಆಮದು ಕರಿ ಮೆಣಸಿನ ಸಾಗಾಣೆಗೆ ಕೆಲವು ನಿಯಮ ಗಳ ಮೂಲಕ ಸಾಕಷ್ಟು ನಿರ್ಬಂಧ ವಿದಿ ಸಿದ್ದರೂ, ಕೆಲವು ವರ್ತಕರು ನಿಯಮ ಗಾಳಿಗೆ ತೂರಿ ಕರಿಮೆಣಸನ್ನು ದೇಶಕ್ಕೆ ಆಮದು ಮಾಡಿಕೊಳ್ಳುವ ಮೂಲಕ ವಾಣ ಜ್ಯ ಸಚಿವಾಲಯಕ್ಕೆ ವಂಚಿಸುತ್ತಿದ್ದಾರೆ. ಇಂತಹ ಉದ್ಯಮಿಗಳ ವಿರುದ್ಧ ಜೂನ್ 21 ರಂದು ಬೆಂಗಳೂರಿನಲ್ಲಿ ಕರ್ನಾಟಕದ ಕರಿಮೆಣಸು ಬೆಳೆಗಾರ ಜಿಲ್ಲೆಗಳ ಬೆಳೆ ಗಾರರಿಂದ ಪ್ರತಿಭಟನೆ ಆಯೋಜಿಸಲಾ ಗಿದೆ ಎಂದು ಕರಿಮೆಣಸು ಬೆಳೆಗಾರರ ಸಮನ್ವಯ ಸಮಿತಿ ತಿಳಿಸಿದೆ. ಸಮನ್ವಯ ಸಮಿತಿಯ…

ಬಸ್‍ನಲ್ಲೇ ಹೃದಯಾಘಾತ; ಯುವಕ ಸಾವು
ಕೊಡಗು

ಬಸ್‍ನಲ್ಲೇ ಹೃದಯಾಘಾತ; ಯುವಕ ಸಾವು

June 20, 2018

ಸೋಮವಾರಪೇಟೆ:  ಖಾಸಗಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಬಜೆಗುಂಡಿ ಗ್ರಾಮದ ಸುರೇಶ್ ಎಂಬವರ ಮನೆ ಯಲ್ಲಿ ನೆಲೆಸಿದ್ದ ಪ್ರಕಾಶ್ (28) ಸಾವನ್ನಪ್ಪಿದವನಾಗಿದ್ದು, ಈತ ಇಂದು ಬೆಳಗ್ಗೆ 8.30ಕ್ಕೆ ಕುಂಬೂರು ಗ್ರಾಮದ ಕಾಫಿ ತೋಟಕ್ಕೆ ಕೆಲಸಕ್ಕೆಂದು ತೆರಳಿದ್ದ ಎದೆನೋವು ಕಾಣಿಸಿಕೊಂಡಿದ್ದರಿಂದ ವಾಪಸ್ ಮನೆಗೆ ಬರಲೆಂದು ಮಧ್ಯಾಹ್ನ ಖಾಸಗಿ ಬಸ್ ಹತ್ತಿದ್ದು, ಸ್ವಲ್ಪ ದೂರ ಸಂಚರಿಸು ವಷ್ಟರಲ್ಲೇ ಹೃದಯಾಘಾತ ಸಂಭವಿಸಿದೆ. ತಕ್ಷಣ ಸಹ ಪ್ರಯಾಣಿಕರು ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದು, ಪ್ರಕಾಶ್ ಅವರನ್ನು ಸೋಮವಾರಪೇಟೆ…

ಮೈಸೂರು-ತಲಚೇರಿ ರೈಲ್ವೆ ಮಾರ್ಗದ ವಿರುದ್ಧ ಹೋರಾಟಕ್ಕೆ ಯೋಜನೆ ರೂಪಿಸಲಾಗುವುದು :  ಸಂಸದ ಪ್ರತಾಪ್ ಸಿಂಹ
ಕೊಡಗು

ಮೈಸೂರು-ತಲಚೇರಿ ರೈಲ್ವೆ ಮಾರ್ಗದ ವಿರುದ್ಧ ಹೋರಾಟಕ್ಕೆ ಯೋಜನೆ ರೂಪಿಸಲಾಗುವುದು : ಸಂಸದ ಪ್ರತಾಪ್ ಸಿಂಹ

June 20, 2018

ಗೋಣಿಕೊಪ್ಪಲು:  ಕೊಡಗಿನ ಶಾಸಕರುಗಳು, ಸಂಸದರರು ಹಾಗೂ ಜನರ ವಿರೋಧದ ನಡುವೆ ದಕ್ಷಿಣ ಕೊಡಗು ಮೂಲಕ ಕೇರಳಕ್ಕೆ ಸಂಪ ರ್ಕಿಸಲು ಉದ್ದೇಶಿಸಿರುವ ಮೈಸೂರು-ತಲಚೇರಿ ರೈಲ್ವೆ ಮಾರ್ಗದ ವಿರುದ್ದ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಲಾಗುವುದು ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದರು. ಪರಿಮಳ ಮಂಗಳ ವಿಹಾರದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ತಲಚೇರಿ ರೈಲ್ವೆ ಮಾರ್ಗಕ್ಕೆ ಕೊಡಗಿನಲ್ಲಿ ಕೇರಳದ ಕೆಆರ್‍ಡಿಸಿಎಲ್ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯ ದರ್ಶಿಯಿಂದ ಅನುಮತಿ ಪಡೆದು ಸರ್ವೇ…

ಟಾಟಾ ಏಸ್ ಮೇಲೆ ಮರ ಬಿದ್ದು ಕಾರ್ಮಿಕ ಸಾವು
ಕೊಡಗು

ಟಾಟಾ ಏಸ್ ಮೇಲೆ ಮರ ಬಿದ್ದು ಕಾರ್ಮಿಕ ಸಾವು

June 20, 2018

ಗೋಣಿಕೊಪ್ಪಲು:  ಕಾರ್ಮಿ ಕರನ್ನು ಕರೆದೊಯ್ಯುತ್ತಿದ್ದ ಟಾಟಾ ಏಸ್ ವಾಹನದ ಮೇಲೆ ಮರ ಬಿದ್ದು ಓರ್ವ ಕಾರ್ಮಿಕ ಸಾವನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಪಾಲಿಬೆಟ್ಟ ಸಮೀಪದ ಹೊಸಳ್ಳಿ ಎಂಬಲ್ಲಿ ನಡೆದಿದೆ. ಸಿದ್ದಾಪುರ ಪೊಲೀಸರು ಕ್ರಮಕೈಗೊಂಡಿದ್ದಾರೆ. ಹುಣಸೂರು ತಾಲೂಕಿನ ಹನುಗೋಡು ಗ್ರಾಮದ ರಾಜು (35) ಮೃತ ಕಾರ್ಮಿಕ. ಹನುಗೋಡುವಿನ ಸುನಿಲ್ (28), ಸ್ವಾಮಿ (35) ಗಾಯಾಳುಗಳು. ಸುನಿಲ್ ಅವ ರನ್ನು ಮೈಸೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸ್ವಾಮಿ ಅವರಿಗೆ ಪಾಲಿಬೆಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ. ಪಾಲಿಬೆಟ್ಟ ತೋಟದಲ್ಲಿ…

1 168 169 170 171 172 187
Translate »